ಪ್ರತಾಪ್ ಸಿಂಹ ಡೋಂಗಿ ರಾಜಕಾರಣಿ, ಎದುರುಗಡೆ ನಿಂತು ಮಾತಾಡುವ ತಾಕತ್ ಇಲ್ಲ, ಆತನೊಬ್ಬ ಹೇಡಿ ಅಂತ ಕಾಂಗ್ರೆಸ್ ವಕ್ತಾರ ಎಂ.ಲಕ್ಷ್ಮಣ್ ವಾಗ್ದಾಳಿ ನಡೆಸಿದ್ದಾರೆ. ಮೈಸೂರಲ್ಲಿ ಮಾತಾಡಿದ ಎಂ. ಲಕ್ಷ್ಮಣ್, ಸುಳ್ಳು ಹೇಳೋದೇ ಪ್ರತಾಪ್ ಸಿಂಹ ಚಾಳಿ, ಪ್ರತಾಪ್ ಸಿಂಹ ಒಬ್ಬ ಪುಕುಲ, ಸಿಎಂ ಸಿದ್ದರಾಮಯ್ಯನ ಸೂಚನೆ ಮೇರೆಗೆ ನಿಮ್ಮ ಬಳಿ ಚರ್ಚಿಸಲು ನಮಗೆ ಸೂಚಿಸಿದ್ದಾರೆ, ಮೈಸೂರಲ್ಲಿಯೇ ಇದ್ದು ಓಡೋಗಿದ್ದೀರಾ? ಕಚೇರಿ ಮುಂದೇನೆ ಕಾಯುತ್ತೇನೆ, ಹಿಟ್ ಅಂಡ್ ರನ್ ಬೇಡ,
2024 ಎಲೆಕ್ಶನ್ ದೃಷ್ಟಿಯಿಂದ ಏನೇನೋ ಮಾತಾಡುತ್ತೀರಿ, ನಿಮ್ಮನ್ನ ಖಂಡಿತ ಮನೆಗೆ ಕಳುಹಿಸುತ್ತಾರೆ ಅಂತ ವಾಗ್ದಾಳಿ ನಡೆಸಿದ್ರು, ಪ್ರತಾಪ್ ಸಿಂಹ ಹಿಟ್ ಅಂಡ್ ರನ್ ರಾಜಕಾರಣಿ, ಮೈಸೂರಿಗೆ ಸಿದ್ದರಾಮಯ್ಯ ಕೊಡುಗೆ ಏನು ಅಂತ ಕೇಳಿದ್ರು, ಮೈಸೂರು ನಗರಕ್ಕೆ ಸಿದ್ದರಾಮಯ್ಯ 3,800 ಕೋಟಿ ರೂಪಾಯಿ ಕೊಟ್ಟಿದ್ದಾರೆ, ಮೈಸೂರು ಜಿಲ್ಲೆಗೆ 22,000 ಕೋಟಿ ರೂಪಾಯಿ ಕೊಟ್ಟಿದ್ದಾರೆ, ಇಷ್ಟು ಅನುದಾನ ಯಾರೂ ಕೊಟ್ಟಿಲ್ಲ ಎಂದು ಸಂಸದ ಪ್ರತಾಪ್ ಸಿಂಹ ವಿರುದ್ಧ ಕೆಪಿಸಿಸಿ ವಕ್ತಾರ ಎಂ ಲಕ್ಷ್ಮಣ್ ವಾಗ್ದಾಳಿ ನಡೆಸಿದ್ರು.
ಮೈಸೂರಿಗೆ ಪ್ರತಾಪ್ ಸಿಂಹ ನಯಾಪೈಸೆ ಕೆಲಸ ಮಾಡಿಲ್ಲ, ಅವರದ್ದೇ ಬಿಜೆಪಿ ಸರ್ಕಾರ ಇತ್ತು, ಅವರ ವಿಶ್ವಗುರು ಪ್ರಧಾನಿ ಆಗಿದ್ದರು, ಸಂಸದರಾಗಿ ಪ್ರತಾಪ್ ಸಿಂಹ ನೀವೇನು ಕೊಟ್ಟಿದ್ದೀರಿ?, ರಿಂಗ್ ರೋಡ್ ಆಗಿದ್ದು ಎಡಿಬಿ ಸಾಲದಲ್ಲಿ, ಕಾರ್ಪೊರೇಟರ್ ಮಾಡಿದ್ದನ್ನು ನಾನು ಮಾಡಿದ್ದೇನೆ ಅಂತ ಹೇಳಿಕೊಳ್ಳುತ್ತಾರೆ ಎಂದು ಕಿಡಿಕಾರಿದರು.
ಮೈಸೂರಿನ ಜಲದರ್ಶಿನಿ ಅತಿಥಿ ಗೃಹದ ಬಳಿ ಪೊಲಿಟಿಕಲ್ ಹೈಡ್ರಾಮಾ ನಡೆದಿದ್ದು, ಸಿದ್ದರಾಮಯ್ಯ ಕೊಡುಗೆಗಳ ಬಗ್ಗೆ ಪ್ರಶ್ನಿಸಿದ್ದ ಸಂಸದ ಪ್ರತಾಪ್ ಸಿಂಹಗೆ ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್ ಸವಾಲ್ ಹಾಕಿ ತಿರುಗೇಟು ನೀಡಿದ್ದಾರೆ. ಪ್ರತಾಪ್ ಸಿಂಹ ಕಚೇರಿ ಮುಂಭಾಗ ದಾಖಲೆ ಬಿಡುಗಡೆ ಮಾಡ್ತೇವೆ ಎಂದಿದ್ದ ಕಾಂಗ್ರೆಸ್ ವಕ್ತಾರ ಎಂ.ಲಕ್ಷ್ಮಣ್ ಪ್ರತಾಪ್ ಸಿಂಹ ಕಚೇರಿಗೆ ದಾಖಲೆಗಳ ಸಮೇತ ಆಗಮಿಸಿದ್ರು. ಇದೇ ವೇಳೆ ಕಾಂಗ್ರೆಸ್ ವಕ್ತಾರ ಎಂ.ಲಕ್ಷ್ಮಣ್‌ಗೆ ಸ್ಥಳೀಯ ಕಾಂಗ್ರೆಸ್ ನಾಯಕರು ಸಾಥ್ ನೀಡಿದ್ರು. ಇನ್ನು ಸಂಸದ ಪ್ರತಾಪ್ ಸಿಂಹ ಕಚೇರಿ ಬಳಿ ಪೊಲೀಸ್ ಬಿಗಿ ಬಂದೋಬಸ್ತ್ ಕೈಗೊಳ್ಳಲಾಗಿತ್ತು.