• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Thursday, April 30, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home ಇದೀಗ

ಸೂರ್ಯನತ್ತ ಜಿಗಿದ ʼಆದಿತ್ಯʼ | ಇಸ್ರೊ ಮತ್ತೊಂದು ಮೈಲಿಗಲ್ಲು ; ಆದಿತ್ಯ-ಎಲ್‌1 ಉಡಾವಣೆ ಯಶಸ್ವಿ

ಪ್ರತಿಧ್ವನಿ by ಪ್ರತಿಧ್ವನಿ
September 2, 2023
in ಇದೀಗ, ದೇಶ
0
ಆದಿತ್ಯ-ಎಲ್‌1

ಆದಿತ್ಯ-ಎಲ್‌1 ಉಡಾವಣೆ

Share on WhatsAppShare on FacebookShare on Telegram

ನೈಸರ್ಗಿಕ ವಿಕೋಪ, ಪ್ರಳಯ ಮೊದಲಾದವುಗಳಿಗೂ ಸೂರ್ಯನಿಗೂ ಸಂಬಂಧವಿದೆಯೇ? ಇಂತಹ ಪ್ರಶ್ನೆಯನ್ನು ಶೋಧಿಸಲು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೊ) ಮುಂದಾಗಿದ್ದು ಚಂದ್ರಯಾನ 3ರ ಯಶಸ್ಸಿನ ನಂತರ ಸೂರ್ಯನತ್ತ ಆದಿತ್ಯ-ಎಲ್‌1 ಉಪಗ್ರಹ ಹಾರಿಸುವ ಮೂಲಕ ಶನಿವಾರ (ಸೆಪ್ಟೆಂಬರ್‌ 2) ಹೊಸ ದಾಖಲೆ ಬರೆದಿದೆ.

ADVERTISEMENT

ನಿಗದಿಪಡಿಸಿದ ಸಮಯದಲ್ಲಿ ಬೆಳಿಗ್ಗೆ 11.50ಕ್ಕೆ ಆದಿತ್ಯ ಎಲ್‌1 ಅಂತರಿಕ್ಷ ವೀಕ್ಷಣಾಲಯವು ಶ್ರೀಹರಿಕೋಟಾ ಬಾಹ್ಯಾಕಾಶ ಕೇಂದ್ರದಿಂದ ಪಿಎಸ್‌ಎಲ್‌ವಿ-ಸಿ 57 ರಾಕೆಟ್‌ ಮೂಲಕ ಯಶಸ್ವಿಯಾಗಿ ನಭಕ್ಕೆ ಚಿಮ್ಮಿದೆ.

ಚಂದ್ರಯಾನ 3 ಯಶಸ್ವಿಯಾಗಿ ಚಂದ್ರನ ದಕ್ಷಿಣ ಧ್ರುವದಲ್ಲಿ ಲ್ಯಾಂಡರ್ ಇಳಿಸಿ, ರೋವರ್ ಕಾರ್ಯ ನಿರ್ವಹಿಸುತ್ತಿರುವ ಬೆನ್ನಲ್ಲೇ ಇಡೀ ಪ್ರಪಂಚ ಈಗ ಆದಿತ್ಯ ಉಡಾವಣೆ ನಂತರ ಭಾರತದತ್ತ ಹೊರಳಿ ನೋಡುತ್ತಿದೆ.

ಶನಿವಾರವೇ ಆದಿತ್ಯ-ಎಲ್1 ಅನ್ನು ಕೆಳಸ್ತರದ ಭೂಕಕ್ಷೆಯೊಂದಕ್ಕೆ ಸೇರಿಸಲಾಗುವುದು. ಕ್ರಮೇಣ ಭೂಕಕ್ಷೆಯ ಎತ್ತರವನ್ನು ಹೆಚ್ಚಿಸಲಾಗುತ್ತದೆ. ಬಳಿಕ ನಿಗದಿತ ದಿನವೊಂದರಲ್ಲಿ ಅದಿತ್ಯ ಲಗ್ರಾಂಜಿಯನ್ ಬಿಂದುವಿನತ್ತ ಯಾನ ಬೆಳೆಸಲಿದೆ. 125 ದಿನಗಳಲ್ಲಿ ಎಲ್-1 ಬಿಂದುವಿಗೆ ಸೇರಿಸಲಾಗುತ್ತದೆ. ಇದು ಸ್ಥಿರತೆ ಹೊಂದಿದ ವಿಶೇಷ ಕಕ್ಷೆಯಾಗಿದೆ. ಈ ವೀಕ್ಷಣಾಲಯಕ್ಕೆ ಯಾವ ಗ್ರಹಣವೂ ಬಾಧಿಸುವುದಿಲ್ಲ. ನಿರಂತರವಾಗಿ ಮತ್ತು ದೀರ್ಘವಾಗಿ ಅಡ್ಡಿ ಇಲ್ಲದೇ ಸೂರ್ಯನನ್ನು ಗಮನಿಸಲು ಸಹಾಯಕವಾಗುತ್ತದೆ.

ಆದಿತ್ಯ-ಎಲ್1 ಉಪಗ್ರಹದಲ್ಲಿ ಒಟ್ಟು ಏಳು ಉಪಕರಣಗಳಿದ್ದು, ನಾಲ್ಕು ಉಪಕರಣಗಳು ಸೂರ್ಯನನ್ನು ವೀಕ್ಷಣೆ ಮಾಡಿದರೆ ಉಳಿದ ಮೂರು ಉಪಕರಣಗಳು ಕಣಗಳು, ಪ್ಲಾಸ್ಮಾ, ಕಾಂತಕ್ಷೇತ್ರಗಳ ಅಧ್ಯಯನ ಮಾಡುತ್ತವೆ. ಇದು ಕೇವಲ ಇಸ್ರೋಯೋಜನೆಯಲ್ಲ, ಖಭೌತ ವಿಜ್ಞಾನಕ್ಕೆ ಸಂಬಂಧಿಸಿದ ದೇಶದ ಏಳು ಪ್ರಮುಖ ಸಂಸ್ಥೆಗಳು ಕೈಜೋಡಿಸಿರುವುದರಿಂದ ಇದು ರಾಷ್ಟ್ರೀಯ ಅಭಿಯಾನವಾಗಿದೆ ಎಂದು ಇಸ್ರೋ ವಿಜ್ಞಾನಿಯೊಬ್ಬರು ಹೇಳಿದ್ದಾರೆ.

#WATCH | India's first solar mission, #AdityaL1 is all set to be launched from Satish Dhawan Space Centre in Sriharikota, at 11:50 am. pic.twitter.com/k12Doj0wCR

— ANI (@ANI) September 2, 2023

ಗೋಲ ಬಿಂಬ ಸೆರೆ ಹಿಡಿಯುವ ಕ್ಯಾಮೆರಾ

ಸೂರ್ಯನ ಗೋಲದ ಬಿಂಬವನ್ನು ಅತಿ ಹೆಚ್ಚು ಸ್ಪುಟವಾಗಿ ಸೆರೆ ಹಿಡಿಯುವ ಮತ್ತು ಕೃತಕವಾಗಿ ಗ್ರಹಣವನ್ನು ಸೃಷ್ಟಿಸಿ ಅಧ್ಯಯನ ಮಾಡುವ ಉಪಕರಣಗಳು ವಿಶಿಷ್ಟವಾದವು ಎಂದು ಅವರು ಹೇಳಿದರು.

“ಸೂರ್ಯನನ್ನು ಕೂಲಂಕಷವಾಗಿ ಅರ್ಥ ಮಾಡಿಕೊಳ್ಳುವುದು ನಮ್ಮ ಮುಖ್ಯ ಉದ್ದೇಶ. ಅಲ್ಲದೇ, ಸೂರ್ಯನ ಹೊರ ಆವರಣ ಮತ್ತು ಒಳಗೆ ಚಿಮ್ಮುವ ಪ್ರಚಂಡ ಕಣ ಪ್ರವಾಹ, ಸೌರ ಜ್ವಾಲೆ, ವಿಕಿರಣಗಳು ಭೂಮಿಯತ್ತ ನುಗ್ಗುವಾಗ ಮುನ್ಸೂಚನೆ ನೀಡಿ ಆಗಬಹುದಾದ ಅನಾಹುತಗಳನ್ನು ತಪ್ಪಿಸಬಹುದಾಗಿದೆ. ಇಲ್ಲವಾದಲ್ಲಿ, ಭೂಮಿಯನ್ನು ಸುತ್ತುತ್ತಿರುವ ಉಪಗ್ರಹಗಳು, ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ ಹಾನಿ ಉಂಟು ಮಾಡಬಲ್ಲವು. 1989 ರಲ್ಲಿ ಕೆನಡಾದಲ್ಲಿ ಸೌರ ಕಣ ಪ್ರವಾಹದಿಂದ ದೊಡ್ಡ ಅವಘಡ ಸಂಭವಿಸಿತ್ತು” ಎಂದು ಅವರು ತಿಳಿಸಿದರು.

ನಾಸಾ, ಯೂರೋಪಿಯನ್ ಸ್ಪೇಸ್ ಏಜೆನ್ಸಿ ಮತ್ತು ಜಾಕ್ಸಾ ಮಾತ್ರ ದೊಡ್ಡ ಪ್ರಮಾಣದ ನೌಕೆಗಳನ್ನು ಸೂರ್ಯನ ಅಧ್ಯಯನಕ್ಕೆ ಕಳುಹಿಸಿದ್ದು, ಇಸ್ರೋ ನಾಲ್ಕನೆಯದು ಎಂದು ಅವರು ಹೇಳಿದರು.

Tags: Aditya-L1Chandrayaan 3ISROಆದಿತ್ಯ-ಎಲ್‌1ಇಸ್ರೊಚಂದ್ರಯಾನ 3
Previous Post

ರಾಜಸ್ಥಾನ | ಪತ್ನಿಯನ್ನು ಬೆತ್ತಲುಗೊಳಿಸಿ ಮೆರವಣಿಗೆ ನಡೆಸಿದ ಪತಿ ; ವ್ಯಾಪಕ ಟೀಕೆ

Next Post

ರಾಜಸ್ಥಾನ | ಮಹಿಳೆಯನ್ನು ಬೆತ್ತಲುಗೊಳಿಸಿ ಮೆರವಣಿಗೆ ಪ್ರಕರಣ ; ಮೂವರ ಬಂಧನ

Related Posts

ಬೌರಿಂಗ್ ಆಸ್ಪತ್ರೆ ಕಾಂಪೌಂಡ್ ಗೋಡೆ ಅವಘಡ ; ಕಾರ್ಯಪಾಲಕ ಇಂಜಿನಿಯರ್ ಅಮಾನತಿಗೆ ಸಿಎಂ ಸಿದ್ದರಾಮಯ್ಯ ಸೂಚನೆ
Top Story

ಬೌರಿಂಗ್ ಆಸ್ಪತ್ರೆ ಕಾಂಪೌಂಡ್ ಗೋಡೆ ಅವಘಡ ; ಕಾರ್ಯಪಾಲಕ ಇಂಜಿನಿಯರ್ ಅಮಾನತಿಗೆ ಸಿಎಂ ಸಿದ್ದರಾಮಯ್ಯ ಸೂಚನೆ

by ಪ್ರತಿಧ್ವನಿ
April 30, 2026
0

ಬೆಂಗಳೂರು : ಬೌರಿಂಗ್ ಆಸ್ಪತ್ರೆ ಕಾಂಪೌಂಡ್ ಗೋಡೆ ಕುಸಿದು ಏಳು ಜನರ ಸಾವಿಗೆ ಕಾರಣವಾಗಿರುವ ಹಿನ್ನೆಲೆಯಲ್ಲಿ ಸಂಬಂಧಪಟ್ಟ ಕಾರ್ಯಪಾಲಕ ಇಂಜಿನಿಯರ್ ಅವರನ್ನು ಅಮಾನತುಗೊಳಿಸಿ, ನೋಟೀಸು ನೀಡುವಂತೆ ಮುಖ್ಯಮಂತ್ರಿ...

Read moreDetails
ಬೌರಿಂಗ್ ಆಸ್ಪತ್ರೆ ಗೋಡೆ ಕುಸಿತ ದುರಂತ: 7 ಮಂದಿ ಸಾವು!

ಬೌರಿಂಗ್ ಆಸ್ಪತ್ರೆ ಗೋಡೆ ಕುಸಿತ ದುರಂತ: 7 ಮಂದಿ ಸಾವು!

April 29, 2026
ಬಿಸಿಲಿನ ಬೇಗೆಗೆ ತಂಪೆರೆದ ವರುಣ : ಬೆಂಗಳೂರಲ್ಲಿ ಗುಡುಗು ಮಿಂಚು ಸಹಿತ ಭಾರಿ ಮಳೆ..

ಬಿಸಿಲಿನ ಬೇಗೆಗೆ ತಂಪೆರೆದ ವರುಣ : ಬೆಂಗಳೂರಲ್ಲಿ ಗುಡುಗು ಮಿಂಚು ಸಹಿತ ಭಾರಿ ಮಳೆ..

April 29, 2026
ರಾಜಕೀಯವನ್ನೂ ಮೀರಿದ್ಧು ಮಾನವೀಯತೆ : ಮುಖ ಸುಟ್ಟುಕೊಂಡಿದ್ದ ಬಿಜೆಪಿ ಶಾಸಕಿ ಭೇಟಿಯಾಗಿ ಎಸ್‌ಪಿ ನಾಯಕ ಹೇಳಿದ್ದೇನು..?

ರಾಜಕೀಯವನ್ನೂ ಮೀರಿದ್ಧು ಮಾನವೀಯತೆ : ಮುಖ ಸುಟ್ಟುಕೊಂಡಿದ್ದ ಬಿಜೆಪಿ ಶಾಸಕಿ ಭೇಟಿಯಾಗಿ ಎಸ್‌ಪಿ ನಾಯಕ ಹೇಳಿದ್ದೇನು..?

April 29, 2026
“ಖರ್ಗೆ AICC ಅಧ್ಯಕ್ಷರಾಗಿರೋದೆ ನಮ್ಮ ಸೌಭಾಗ್ಯ, ಅವ್ರು ರಾಜ್ಯದ ಸಿಎಂ ಆಗಲಿ”

“ಖರ್ಗೆ AICC ಅಧ್ಯಕ್ಷರಾಗಿರೋದೆ ನಮ್ಮ ಸೌಭಾಗ್ಯ, ಅವ್ರು ರಾಜ್ಯದ ಸಿಎಂ ಆಗಲಿ”

April 29, 2026
Next Post
ರಾಜಸ್ಥಾನ

ರಾಜಸ್ಥಾನ | ಮಹಿಳೆಯನ್ನು ಬೆತ್ತಲುಗೊಳಿಸಿ ಮೆರವಣಿಗೆ ಪ್ರಕರಣ ; ಮೂವರ ಬಂಧನ

Please login to join discussion
https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada