• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Wednesday, April 22, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home Top Story

ಭಾರತದ ಚಂದ್ರಯಾನ 3 ಮತ್ತು ಕಡೆಯ 5 ನಿಮಿಷಗಳ ಕಠಿಣ ಪರಿಶ್ರಮ.. !

ಕೃಷ್ಣ ಮಣಿ by ಕೃಷ್ಣ ಮಣಿ
August 23, 2023
in Top Story, ದೇಶ
0
ಭಾರತದ ಚಂದ್ರಯಾನ 3 ಮತ್ತು ಕಡೆಯ 5 ನಿಮಿಷಗಳ ಕಠಿಣ ಪರಿಶ್ರಮ.. !
Share on WhatsAppShare on FacebookShare on Telegram

ADVERTISEMENT

ಇಂದು ಚಂದ್ರನ ಅಂಗಳದಲ್ಲಿ ಭಾರತದ ಸಾಧನೆ ಇತಿಹಾಸ ಸೃಷ್ಟಿಸಲಿ ಅನ್ನೋ ಆಶಯದಲ್ಲಿ ಭಾರತದ ಎಲ್ಲೆಡೆ ಪೂಜೆ ಪುನಸ್ಕಾರ, ಹೋಮ ಹವನ ಮಾಡಲಾಗ್ತಿದೆ. ಜುಲೈ 14 ರಂದು ಭೂಮಿಯಿಂದ ಆಗಸಕ್ಕೆ ಚಿಮ್ಮಿದ ಚಂದ್ರಯಾನ 3 ರಾಕೆಟ್​ ಭೂಮಿಯ ಸುತ್ತ​ ಚಲಿಸಿ ವೇಗ ಹೆಚ್ಚಿಸಿಕೊಂಡು ಅಂತಿಮವಾಗಿ ಚಂದ್ರನ ಕಕ್ಷೆ ಸೇರಿಕೊಂಡಿತ್ತು. ಇದೀಗ ಚಂದ್ರ ಗ್ರಹವನ್ನು ಸುತ್ತು ಹಾಕುತ್ತಿರುವ ಚಂದ್ರಯಾನ 3ರ ಲ್ಯಾಂಡರ್​ ಇಳಿಯಲು ವೇಗ ನಿಯಂತ್ರಣ ಮಾಡಲಾಗಿದೆ. ಇಂದು ಸಂಜೆ 6 ಗಂಟೆ 4 ನಿಮಿಷಕ್ಕೆ ಚಂದ್ರನ ಮೇಲೆ ಸ್ಮೂತ್​​ ಲ್ಯಾಂಡಿಂಗ್ ಮಾಡಲು ಇಸ್ರೋ ವಿಜ್ಞಾನಿಗಳು ಸಕಲ ತಯಾರಿ ಮಾಡಿಕೊಳ್ತಿದ್ದಾರೆ. ದೂರದರ್ಶನದಲ್ಲಿ ನೇರ ಪ್ರಸಾರ ಮಾಡುವುದಕ್ಕೂ ಇಸ್ರೋ ಯೋಜನೆ ಮಾಡಿಕೊಂಡಿದೆ.

ಸದ್ಯ ಗಂಟೆಗೆ 6 ಸಾವಿರ ವೇಗದಲ್ಲಿ ಚಂದ್ರಯಾನ ಸಂಚಾರ..!

ಚಂದ್ರನ ದಕ್ಷಿಣ ಧ್ರುವದಲ್ಲಿ ಚಂದ್ರಯಾನ 3ರ ಮಾಡ್ಯೂಲ್ ಇಳಿಯುತ್ತದೆ ಎಂದು ಇಸ್ರೋ ವಿಜ್ಞಾನಿಗಳು ಹೇಳಿದ್ದಾರೆ. ಪರಿಸ್ಥಿತಿಯನ್ನು ಈಗಾಗಲೇ ಅವಲೋಕನೆ ಮಾಡಿದ್ದು, ಇಂದು ಸಂಜೆ ಲ್ಯಾಂಡಿಂಗ್ ಮಾಡಲು ನಿರ್ಧಾರ ಮಾಡಲಾಗಿದೆ. ಚಂದ್ರನಿಂದ 25 ರಿಂದ 30 ಕಿ.ಮೀ. ಎತ್ತರದಲ್ಲಿ ಇದ್ದಾಗ ಲ್ಯಾಂಡಿಂಗ್ ಕಾರ್ಯ ಶುರು ಮಾಡಲಿದ್ದಾರೆ ವಿಜ್ಣಾನಿಗಳು. ಪ್ರತಿ ಸೆಕೆಂಡ್‌ಗೆ 1.68 ಕಿ.ಮೀ. ವೇಗದಲ್ಲಿ ವಿಕ್ರಂ ಲ್ಯಾಂಡರ್ ಇಳಿಸಲು ವಿಜ್ಞಾನಿಗಳು ಲೆಕ್ಕಾಚಾರ ಹಾಕಿದ್ದಾರೆ. ಚಂದ್ರನಿಂದ ಕೇವಲ 800 ಮೀಟರ್​ ದೂರದಲ್ಲಿದ್ದಾಗ ವೇಗವನ್ನು ಶೂನ್ಯ ಮಾಡಲಾಗುತ್ತದೆ. ಆ ಬಳಿಕ 150 ಮೀಟರ್‌ ತನಕ ಹತ್ತಿರಕ್ಕೆ ಹೋಗಲಿರುವ ಲ್ಯಾಂಡರ್ ಇಳಿಯಲು ಸೂಕ್ತವಾಗಿಯೇ ಎಂದು ಪರಿಶೀಲನೆ ನಡೆಸಲಿದೆ. ಒಂದು ವೇಳೆ ಚಂದ್ರನ ಮೇಲೆ ಕುಳಿಗಳು, ಬೆಟ್ಟ ಗುಡ್ಡಗಳು ಇದ್ದರೆ ಲ್ಯಾಂಡರ್​ ತನ್ನ ಜಾಗವನ್ನು ಬದಲಾವಣೆ ಮಾಡಿಕೊಂಡು ಸಮತಟ್ಟು ಆಗಿರುವ ಜಾಗದಲ್ಲಿಯೇ ಇಳಿಯಲಿದೆ.

ವಿಕ್ರಮನಿಂದ 14 ದಿನಗಳ ಕಾಲ ಚಂದ್ರನ ಮೇಲೆ ಅಧ್ಯಯನ..!

ಚಂದ್ರನ ಮೇಲೆ ವಿಕ್ರಮ್ ಲ್ಯಾಂಡರ್‌ ಇಳಿದ ಬಳಿಕ ಮೊದಲಿಗೆ ಬಾಗಿಲು ತೆರೆದುಕೊಂಡು ಅದರ ಒಳಗಿರುವ ಪ್ರಗ್ಯಾನ್ ರೋವರ್‌ ಹೊರಬರಲಿದೆ. 6 ಚಕ್ರಗಳನ್ನು ಹೊಂದಿರುವ ಪ್ರಗ್ಯಾನ್​ ರೋವರ್, ರಾಷ್ಟ್ರಧ್ವಜ, ಇಸ್ರೋ ಲಾಂಛನದ ಜೊತೆಗೆ ಇಳಿಯುತ್ತತ್ತೆ. ಚಂದ್ರನ ಮೇಲೆ ತ್ರಿವರ್ಣ ಧ್ವಜ ಹಾಗು ಇಸ್ರೋ ಲಾಂಛನ ಇರಿಸಲಿದೆ. ಆ ಬಳಿಕ ಅಲ್ಲಿಂದ ಫೋಟೋ ರವಾನೆ ಮಾಡಲಿದೆ. ಚಂದ್ರನ ಮೇಲೆ ಪ್ರತಿ ಸೆಕೆಂಡಿಗೆ 1 ಸೆಂ.ಮೀ ವೇಗದಲ್ಲಿ ಚಲಿಸುವ ರೋವರ್, ಸೂರ್ಯ ಶಕ್ತಿ ಬಳಸಿಕೊಂಡು 14 ದಿನಗಳ ಕಾಲ ಚಂದ್ರ ಮೇಲೆ ಸುತ್ತಾಡುತ್ತ ವಿಜ್ಞಾನಿಗಳಿಗೆ ಮಾಹಿತಿ ರವಾನೆ ಮಾಡಲಿದೆ. ಚಂದ್ರನ ಮೇಲೆ ಸೂರ್ಯನ ಕಿರಣಗಳು ಬೀಳದೆ ಕತ್ತಲಾಗಿರುವ ಭಾಗದ ಅನ್ವೇಷಣೆ ನಡೆಸಲಿದೆ. ಚಂದ್ರನ ವಾತಾವರಣ ಮತ್ತು ಇತರ ಅಂಶಗಳ ಬಗ್ಗೆ ಅಧ್ಯಯನ ನಡೆಸಲಿದ್ದು, ಚಂದ್ರನ ಮೇಲೆ ನೀರು ಇದೆಯೋ ಇಲ್ಲವೋ ಅನ್ನೋ ಬಗ್ಗೆಯೂ ಅಧ್ಯಯನ ನಡೆಯಲಿದೆ. ಭೂಮಿ ಮೇಲಿನ 14 ದಿನಗಳು ಚಂದ್ರನ ಮೇಲೆ 1 ದಿನಕ್ಕೆ ಸಮಾನ.

ಅಂದುಕೊಂಡಷ್ಟು ಸುಲಭ ಅಲ್ಲ.. ವಿಜ್ಞಾನಿಗಳ ಶ್ರಮ ವ್ಯರ್ಥ ಆಗದಿರಲಿ..

ಚಂದ್ರನ ಮೇಲ್ಮೈ ಮೇಲೆ ವಿಕ್ರಮ್ ಲ್ಯಾಂಡರ್‌ ಇಳಿಸುವುದು ವಿಜ್ಞಾನಿಗಳಿಗೆ ಸವಾಲಿನ ಕೆಲಸವೇ ಸರಿ. ವೇಗ ನಿಯಂತ್ರಣದ ಬಳಿಕ ಗಂಟೆಗೆ 6 ಸಾವಿರ ಕಿಲೋ ಮೀಟರ್​ ವೇಗವಾಗಿ ಸುತ್ತುತ್ತಿರುವ ವಿಕ್ರಮ್ ಲ್ಯಾಂಡರ್‌ನನ್ನು ವೇಗ ನಿಯಂತ್ರಣ ಮಾಡುತ್ತ ಚಂದ್ರನ ಕಡೆಗೆ ತೆಗೆದುಕೊಂಡು ಹೋಗುವುದು ಕೊನೆಯ 5 ನಿಮಿಷ ತುಂಬಾ ಸವಾಲಿನಿಂದ ಕೂಡಿದೆ ಎನ್ನುವುದು ವಿಜ್ಞಾನಿಗಳ ಮಾತು. 3 ಲಕ್ಷ 84 ಸಾವಿರ ಕಿಲೋ ಮೀಟರ್​ ದೂರದಲ್ಲಿರುವ ಚಂದ್ರನ ಮೇಲೆ ವಿಜ್ಞಾನಿಗಳ ಪ್ರಯೋಗ ಯಶಸ್ವಿಯಾಗಲಿ ಎನ್ನುವುದು ಪ್ರತಿಧ್ವನಿ ಸೇರಿದಂತೆ ಕೋಟಿ ಕೋಟಿ ಜನರ ಪ್ರಾರ್ಥನೆ ಆಗಿದೆ. ಸಂಜೆ 5 ಗಂಟೆ 15 ನಿಮಿಷದಿಂದ 6 ಗಂಟೆ 4 ನಿಮಿಷದ ಅವಧಿಯೊಳಗೆ ವಿಜ್ಞಾನಿಗಳು ಸೂಕ್ತ ಸಮಯದಲ್ಲಿ ಚಂದ್ರ ಮೇಲೆ ಇಳಿಸಲಿದ್ದಾರೆ. ಕೊನೆಯ 15 ನಿಮಿಷದಿಂದ ತಳಮಳ ಶುರುವಾಗಲಿದ್ದು, ಕ್ಷಣ ಕ್ಷಣಕ್ಕೂ ವಿಜ್ಞಾನಿಗಳು ಕೊನೆಯ 2 ನಿಮಿಷದಲ್ಲಿ ಜಗಮೆಚ್ಚುವ ಕೆಲಸ ಮಾಡುವ ಪ್ರಯತ್ನ ಮಾಡುತ್ತಿದ್ದಾರೆ.

Tags: Chandrayaan 3ISROmoon
Previous Post

ಕಾವೇರಿ ನದಿ ನೀರಿಗೆ ತಮಿಳುನಾಡು ಕ್ಯಾತೆ.. ಮತ್ತೆ ಸುಪ್ರೀಂನಲ್ಲಿ ಫೈಟ್

Next Post

ಯಶವಂತಪುರ ಉಪಚುನಾವಣೆ ಫಿಕ್ಸ್​.. ತಯಾರಿ ಶುರು ಮಾಡಿದ ಕಾಂಗ್ರೆಸ್​-ಜೆಡಿಎಸ್​..!

Related Posts

ಸಂವಿಧಾನದ ಅಶಯಗಳು -ಬಾಬು ಜಗಜೀವನ್ ರಾಮ್-
Top Story

ಸಂವಿಧಾನದ ಅಶಯಗಳು -ಬಾಬು ಜಗಜೀವನ್ ರಾಮ್-

by ಪ್ರತಿಧ್ವನಿ
April 21, 2026
0

ವಿಶೇಷ ಲೇಖನ : ನಾ. ದಿವಾಕರ್‌.. (ಡಾ ಬಾಬು ಜಗಜೀವನ್ರಾಮ್ ಅಧ್ಯಯನ, ಸಂಶೋಧನೆ ಮತ್ತು ವಿಸ್ತರಣ ಕೇಂದ್ರ ಹಾಗೂ ಪರಿಶಿಷ್ಟ ಜಾತಿ/ಪಂಗಡ ವಿಶೇಷ ಘಟಕ ಮೈಸೂರು ವಿಶ್ವವಿದ್ಯಾನಿಲಯ...

Read moreDetails
“ನನ್ನ ಚುನಾವಣೆಯ ವೇಳೆ ಮನೆ ಸುತ್ತ ಹಳದಿ ನೀರು, ಏನೇನೋ ಹಾಕಿ ಹೋಗ್ತಿದ್ರು, ಸಿಎಂಗೂ ಮಾಟ ಮಂತ್ರ ಮಾಡಿಸಿದ್ದಾರೆ ಅನ್ಸುತ್ತೆ”

“ನನ್ನ ಚುನಾವಣೆಯ ವೇಳೆ ಮನೆ ಸುತ್ತ ಹಳದಿ ನೀರು, ಏನೇನೋ ಹಾಕಿ ಹೋಗ್ತಿದ್ರು, ಸಿಎಂಗೂ ಮಾಟ ಮಂತ್ರ ಮಾಡಿಸಿದ್ದಾರೆ ಅನ್ಸುತ್ತೆ”

April 21, 2026
ರಾಜ್ಯ ಸರ್ಕಾರಕ್ಕೆ ಚಾಟಿ ಬೀಸಿದ ಹೈಕೋರ್ಟ್‌ : SSLC ಹಿಂದಿ ಗ್ರೇಡ್‌ ವಿವಾದಕ್ಕೆ ನ್ಯಾಯಾಲಯ ಹೇಳಿದ್ದೇನು..?

ರಾಜ್ಯ ಸರ್ಕಾರಕ್ಕೆ ಚಾಟಿ ಬೀಸಿದ ಹೈಕೋರ್ಟ್‌ : SSLC ಹಿಂದಿ ಗ್ರೇಡ್‌ ವಿವಾದಕ್ಕೆ ನ್ಯಾಯಾಲಯ ಹೇಳಿದ್ದೇನು..?

April 21, 2026
ತಮಿಳುನಾಡಿಗೆ ಡಿಎಂಕೆ ಮೈತ್ರಿಕೂಟದಿಂದಲೇ ಭವಿಷ್ಯ: ಡಿಸಿಎಂ ಡಿ.ಕೆ. ಶಿವಕುಮಾರ್‌

ತಮಿಳುನಾಡಿಗೆ ಡಿಎಂಕೆ ಮೈತ್ರಿಕೂಟದಿಂದಲೇ ಭವಿಷ್ಯ: ಡಿಸಿಎಂ ಡಿ.ಕೆ. ಶಿವಕುಮಾರ್‌

April 21, 2026
ಕುಮಾರಸ್ವಾಮಿ ದೊಡ್ಡ ವ್ಯಕ್ತಿ ಇರಬಹುದು, ಆದ್ರೆ ನನಗೂ ಸಣ್ಣ ಅನುಭವವಿದೆ : ಹೆಚ್‌ಡಿಕೆಗೆ ಡಿಕೆಶಿ ಡಿಚ್ಚಿ..

ಕುಮಾರಸ್ವಾಮಿ ದೊಡ್ಡ ವ್ಯಕ್ತಿ ಇರಬಹುದು, ಆದ್ರೆ ನನಗೂ ಸಣ್ಣ ಅನುಭವವಿದೆ : ಹೆಚ್‌ಡಿಕೆಗೆ ಡಿಕೆಶಿ ಡಿಚ್ಚಿ..

April 21, 2026
Next Post
ಕಾಗಿನೆಲೆ ಮಹಾಸಂಸ್ಥಾನ ಎಲ್ಲಾ ಶೋಷಿತ ಸಮುದಾಯಗಳಿಗೆ ಸೇರಿದ್ದು: ಮುಖ್ಯಮಂತ್ರಿ ಸಿದ್ದರಾಮಯ್ಯ ಅಭಿಮತ

ಯಶವಂತಪುರ ಉಪಚುನಾವಣೆ ಫಿಕ್ಸ್​.. ತಯಾರಿ ಶುರು ಮಾಡಿದ ಕಾಂಗ್ರೆಸ್​-ಜೆಡಿಎಸ್​..!

Please login to join discussion
https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada