• Home
  • About Us
  • ಕರ್ನಾಟಕ
Wednesday, December 17, 2025
  • Login
Pratidhvani
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
Pratidhvani
No Result
View All Result
Home ಅಂಕಣ

ಉಚಿತ ಬಸ್ ಸರ್ಕಾರದ ಭಿಕ್ಷೆಯಲ್ಲ..ನೀವಷ್ಟೇ ಅಲ್ಲ, ನಾವು ಕಟ್ತೇವೆ ಟ್ಯಾಕ್ಸ್​..

ಕೃಷ್ಣ ಮಣಿ by ಕೃಷ್ಣ ಮಣಿ
June 11, 2023
in ಅಂಕಣ
0
ಉಚಿತ ಬಸ್ ಸರ್ಕಾರದ ಭಿಕ್ಷೆಯಲ್ಲ..ನೀವಷ್ಟೇ ಅಲ್ಲ, ನಾವು ಕಟ್ತೇವೆ ಟ್ಯಾಕ್ಸ್​..
Share on WhatsAppShare on FacebookShare on Telegram

ರಾಜ್ಯದಲ್ಲಿ ಉಚಿತ ಯೋಜನೆಗಳ ಘಮಲು ಜನರ ಮೂಗಿಗೆ ಬಡಿಯುತ್ತಿದೆ. ಬಡವರು, ಮಧ್ಯಮ ವರ್ಗದ ಜನರು ರಾಜ್ಯ ಸರ್ಕಾರದ ಕಾರ್ಯಕ್ರಮಗಳ ಬಗ್ಗೆ ಮೆಚ್ಚುಗೆಯ ಮಾತನಾಡುತ್ತಿದ್ದಾರೆ. ಅದರಲ್ಲೂ ಜೂನ್‌ 11, ಭಾನುವಾರ ಜಾರಿಯಾಗ್ತಿರೋ ಶಕ್ತಿ ಯೋಜನೆಗೆ ಭಾರೀ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಹೆಣ್ಣು ಎಂದು ಮೂದಲಿಕೆಗೆ ಒಳಗಾಗಿದ್ದ ಸ್ತ್ರೀ ಕುಲಕ್ಕೆ ಸಿದ್ದರಾಮಯ್ಯ ಸರ್ಕಾರ ಬಸ್​ನಲ್ಲಿ ಉಚಿತ ಸಂಚಾರದ ವ್ಯವಸ್ಥೆ ಮಾಡಿದೆ. ಐಶಾರಾಮಿ ಬಸ್​ ಹೊರತುಪಡಿಸಿ ಎಲ್ಲಾ ಬಸ್​ಗಳಲ್ಲೂ ಉಚಿತವಾಗಿ ರಾಜ್ಯದ ಒಳಗೆ ಸಂಚಾರ ಮಾಡಲು ಅವಕಾಶ ಸಿಗುತ್ತಿದೆ. ಕೆಲವೊಂದಿಷ್ಟು ಮಹಿಳೆಯರು ಸರ್ಕಾರ ಯೋಜನೆಯನ್ನು ಟೀಕಿಸುತ್ತಿದ್ದಾರೆ. ಆದರೆ ನಾನು ದಿನನಿತ್ಯವೂ ಟಿಕೆಟ್​ ಕೊಂಡು ಸಂಚಾರ ಮಾಡ್ತೇವೆ ಎನ್ನುವ ಮಾತು ಬರುತ್ತಿಲ್ಲ.

ADVERTISEMENT

ಕಾಂಗ್ರೆಸ್​ ಸರ್ಕಾರವನ್ನು ವಿರೋಧ ಮಾಡುವ ವೈದಿಕರ ಗುಂಪೊಂದು ಸಾಮಾಜಿಲ ಜಾಲತಾಣದಲ್ಲಿ ಕೆಲಸ ಮಾಡುತ್ತಿದೆ. ದೇವಸ್ಥಾನಗಳ ಗರ್ಭಗುಡಿಯಿಂದ ಬಡವರನ್ನು ಹೊರಗಿಟ್ಟು ಪೂಜಾಧಿ ಕಾರ್ಯಗಳನ್ನು ಮಾಡುತ್ತ, ನಾವೇ ಶ್ರೇಷ್ಟ ಎಂದು ಬದುಕುತ್ತಿದ್ದವರು ಸಿದ್ದರಾಮಯ್ಯ ಸರ್ಕಾರದ ಸಾಮಾಜಿಕ ಕಾರ್ಯಗಳ ಬಗ್ಗೆ ಲಘುವಾಗಿ ಟೀಕೆಗಳನ್ನು ಮಾಡುತ್ತಿದ್ದಾರೆ. ನಾವು ಕಟ್ಟುವ ಟ್ಯಾಕ್ಸ್​ ದೇಶದ ಅಭಿವೃದ್ಧಿಗೇ ಹೊರತು, ಸರ್ಕಾರದ ಬಿಟ್ಟಿ ಕಾರ್ಯಕ್ರಮಗಳಿಗೆ ಅಲ್ಲ ಎನ್ನುವ ಪೋಸ್ಟ್​ ಅನ್ನು ವೈರಲ್​ ಮಾಡ್ತಿದ್ದಾರೆ. ಆದರೆ ನಾವು ದೇವಸ್ಥಾನಕ್ಕೆ ಬಂದ ಬಡವರಿಂದ ಚಿಲ್ಲರೆ ಕಾಸಿಗೆ ಕೈ ಒಡ್ಡುವುದಿಲ್ಲ ಎಂದು ಹೇಳುವ ಧೈರ್ಯ ಮಾತ್ರ ತೋರಿಸುತ್ತಿಲ್ಲ.

ಇಂಕಮ್​ ಟ್ಯಾಕ್ಸ್​ ರಿಟರ್ನ್ಸ್ ಸಲ್ಲಿಕೆ ಮಾಡುವ ಹಣವಂತರು ಮಾತ್ರ ಆದಾಯ ತೆರಿಗೆ ಪಾವತಿ ಮಾಡುತ್ತಾರೆ. ಆದರೆ ಓರ್ವ ಕೂಲಿ ಕಾರ್ಮಿಕನೂ ಪರೋಕ್ಷವಾಗಿ ತೆರಿಗೆ ಕಟ್ಟುತ್ತಾನೆ. ನೇರವಾಗಿ ತೆರಿಗೆ ಕಟ್ಟದ ಮಧ್ಯಮ ವರ್ಗ ಹಾಗು ಬಡ ಜನರು ದೇಶದ ಅಭಿವೃದ್ಧಿಗೆ ಕೊಡುಗೆಯನ್ನೇ ಕೊಡುವುದಿಲ್ಲ. ಕೇವಲ ಟ್ಯಾಕ್ಸ್​ ಪೇಯರ್ಸ್​ ಕೊಡುಗೆ ಎನ್ನುವ ಪೆದ್ದುತನ ಕೆಲವರಲ್ಲಿ ಮನೆ ಮಾಡಿದೆ. ಬೆಳಗ್ಗೆ ಎದ್ದು ಹಾಲು, ಪೇಪರ್​ ಕೊಳ್ಳುವವರು ಪರೋಕ್ಷವಾಗಿ ತೆರಿಗೆ ಪಾವತಿ ಮಾಡ್ತಾರೆ. ಒಂದು ಚಾಕೊಲೆಟ್​ ಖರೀದಿ ಮಾಡಿದಾಗಲೂ ಇಂತಿಷ್ಟು ಟ್ಯಾಕ್ಸ್​ ಸರ್ಕಾರಕ್ಕೆ ಹೋಗುತ್ತದೆ. ಡೈರೆಕ್ಟ್​ ಟ್ಯಾಕ್ಸ್​ ಹಾಗು ಇಂಡೈರೆಕ್ಟ್​ ಟ್ಯಾಕ್ಸ್​ ಬಗ್ಗೆ ಗೊತ್ತಿಲ್ಲದ ಮೂರ್ಖರು ಬಡವರಿಗೆ ಕೊಡುತ್ತಿರುವ ಯೋಜನೆಗಳನ್ನು ಸರ್ಕಾರದ ಭಿಕ್ಷೆ ಎನ್ನುವಂತೆ ಬಿಂಬಿಸುತ್ತಿದ್ದಾರೆ.

ಒಂದು ರಾಜ್ಯ ಎಂದ ಮೇಲೆ ಸರ್ಕಾರ ಹಾಗು ವಿರೋಧ ಪಕ್ಷ ಇರಬೇಕು. ಸಮರ್ಥ ವಿರೋಧ ಪಕ್ಷ ಸರ್ಕಾರದ ಅಂಕು ಡೊಂಕುಗಳನ್ನು ತಿದ್ದಬೇಕು. ಆದರೆ ವಿರೋಧ ಪಕ್ಷದ ನಾಯಕನನ್ನು ಆಯ್ಕೆ ಮಾಡಲು ಒದ್ದಾಡುತ್ತಿರುವ ಬಿಜೆಪಿ, ಸರ್ಕಾರದ ಗ್ಯಾರಂಟಿಗಳ ಬಗ್ಗೆ ಟೀಕೆ ಮಾಡುತ್ತಿದೆ. ಮೊದಲಿಗೆ ಗ್ಯಾರಂಟಿಗಳನ್ನು ಜಾರಿ ಮಾಡುವುದೇ ಕಷ್ಟ ಎಂದು ಬೊಬ್ಬೆ ಹೊಡೆಯುತ್ತಿದ್ದ ಬಿಜೆಪಿ ನಾಯಕರು, ಇದೀಗ ಸರ್ಕಾರ ಜಾರಿ ಮಾಡಿರುವ ಯೋಜನೆಗಳಿಂದ ರಾಜ್ಯದ ಆರ್ಥಿಕತೆ ಕುಸಿತ ಕಾಣುತ್ತದೆ ಎಂದು ವರಸೆ ತೆಗೆದಿದ್ದಾರೆ. ದೇಶದ ಆರ್ಥಿಕತೆ ಬಗ್ಗೆ ಚರ್ಚೆ ಮಾಡುವ ಜನರು, ಭಾರತ ದೇಶದಲ್ಲಿ ಕಳೆದ 9 ವರ್ಷದಲ್ಲಿ ನರೇಂದ್ರ ಮೋದಿ ಸರ್ಕಾರ ಮಾಡಿರುವ 1 ಲಕ್ಷ ಕೋಟಿ ಸಾಲದ ಬಗ್ಗೆ ಚಕಾರ ಎತ್ತುವುದಿಲ್ಲ. ಪ್ರಧಾನಿ ನರೇಂದ್ರ ಮೋದಿ ಕಳೆದ 9 ವರ್ಷದಲ್ಲಿ ವಿದೇಶಿ ಪ್ರವಾಸಕ್ಕೆ ವೆಚ್ಚ ಮಾಡಿರುವ 2021 ಕೋಟಿ ವೆಚ್ಚದ ಬಗ್ಗೆ ತುಟಿಕ್ ಪಿಟಿಕ್ ಅನ್ನಲ್ಲ.. ಇದನ್ನೇ ಅಲ್ವಾ ಬಡವರಿಗೆ ಒಂದು ನ್ಯಾಯ ಶ್ರೀಮಂತರಿಗೆ ಒಂದು ನ್ಯಾಯ ಎನ್ನುವುದು. ಮನುವಾದವನ್ನು ಸಮರ್ಥವಾಗಿ ಜಾರಿ ಮಾಡಲು ಕರ್ನಾಟಕದಲ್ಲಿ ಸಾಧ್ಯವಾಗಲಿಲ್ಲ ಎನ್ನುವ ನೋವು ಮೇಲ್ವರ್ಗವನ್ನು ಕಾಡುತ್ತಿದೆ ಎನ್ನುವುದಕ್ಕೆ ಕಾಂಗ್ರೆಸ್​ ಸರ್ಕಾರದ ಗ್ಯಾರಂಟಿಗಳನ್ನು ವಿರೋಧ ಮಾಡುತ್ತಿರುವವರ ಮಾತೇ ಸಾಕ್ಷಿ ಎನ್ನಬಹುದು.

ಕೃಷ್ಣಮಣಿ

Tags: Free Bus TravelGSTguarantee cardincome taxShakti Yojana
Previous Post

ನಾಳೆ ಹಿರಿಯ ಅಧಿಕಾರಿಗಳೊಂದಿಗೆ ಸಭೆ : ನೀರಿನ ಸಮಸ್ಯೆ, ಇಂದಿರಾ ಕ್ಯಾಂಟೀನ್​ ಚರ್ಚೆ

Next Post

ಮಹಿಳೆಯರ ಉಚಿತ ಬಸ್ ಪ್ರಯಾಣದ ಶಕ್ತಿ ಯೋಜನೆಗೆ ಅಧಿಕೃತ ಚಾಲನೆ

Related Posts

Health Care

ಹೆಣ್ಣು ಭ್ರೂಣ ಹತ್ಯೆ ಸಾಮಾಜಿಕ ಪಿಡುಗು, ತಡೆಗಟ್ಟಲು ಕಟ್ಟುನಿಟ್ಟಿನ ಕ್ರಮ: ದಿನೇಶ್ ಗುಂಡೂರಾವ್

by ಪ್ರತಿಧ್ವನಿ
December 16, 2025
0

ಸರ್ಕಾರ ಭ್ರೂಣ ಹತ್ಯೆ ತಡೆಗೆ ಎಷ್ಟೇ ಬಿಗಿಯಾದ ಕಾನೂನು ಕ್ರಮ ಕೈಗೊಂಡರೂ ಅಲ್ಲಲ್ಲಿ ಪ್ರಕರಣ ನಡೆಯುತ್ತಿದೆ. ಆದರೆ ಗಣನೀಯ ಪ್ರಮಾಣದಲ್ಲಿ ಇಳಿಕೆ ಕಂಡಿದೆ. ಇದು ಕೇವಲ ಕಾನೂನು...

Read moreDetails

ಎರಡನೇ ವಾರದಲ್ಲೂ ಮುಂದುವರೆದಿದೆ‌ “ದಿ ಡೆವಿಲ್” ಚಿತ್ರದ ಯಶಸ್ಸಿನ ಓಟ..!!

December 16, 2025

ಬಹು ನಿರೀಕ್ಷಿತ ಮಲ್ಟಿಸ್ಟಾರರ್ “45” ಚಿತ್ರದ ಟ್ರೇಲರ್ ಗೆ ಮೆಚ್ಚುಗೆಯ ಮಹಾಪೂರ. .

December 16, 2025
25 ದಿನ ಪೂರೈಸಿದ ಸಂಭ್ರಮದಲ್ಲಿ ‘ಫುಲ್ ಮೀಲ್ಸ್’ ಚಿತ್ರತಂಡ

25 ದಿನ ಪೂರೈಸಿದ ಸಂಭ್ರಮದಲ್ಲಿ ‘ಫುಲ್ ಮೀಲ್ಸ್’ ಚಿತ್ರತಂಡ

December 15, 2025

ಶಾಮನೂರು ಶಿವಶಂಕರಪ್ಪ ಅವರ ನಿಧನಕ್ಕೆ ಸದನದಲ್ಲಿ ಸಂತಾಪ ಸೂಚಿಸಿದ ಸಿಎಂ ಸಿದ್ದರಾಮಯ್ಯ..!!

December 15, 2025
Next Post
ಮಹಿಳೆಯರ ಉಚಿತ ಬಸ್ ಪ್ರಯಾಣದ ಶಕ್ತಿ ಯೋಜನೆಗೆ ಅಧಿಕೃತ ಚಾಲನೆ

ಮಹಿಳೆಯರ ಉಚಿತ ಬಸ್ ಪ್ರಯಾಣದ ಶಕ್ತಿ ಯೋಜನೆಗೆ ಅಧಿಕೃತ ಚಾಲನೆ

Please login to join discussion

Recent News

Health Care

ಹೆಣ್ಣು ಭ್ರೂಣ ಹತ್ಯೆ ಸಾಮಾಜಿಕ ಪಿಡುಗು, ತಡೆಗಟ್ಟಲು ಕಟ್ಟುನಿಟ್ಟಿನ ಕ್ರಮ: ದಿನೇಶ್ ಗುಂಡೂರಾವ್

by ಪ್ರತಿಧ್ವನಿ
December 16, 2025
Top Story

ಎರಡನೇ ವಾರದಲ್ಲೂ ಮುಂದುವರೆದಿದೆ‌ “ದಿ ಡೆವಿಲ್” ಚಿತ್ರದ ಯಶಸ್ಸಿನ ಓಟ..!!

by ಪ್ರತಿಧ್ವನಿ
December 16, 2025
Winter Session 2025: ಗ್ರೇಟರ್ ಬೆಂಗಳೂರು ಆಡಳಿತ 2ನೇ ತಿದ್ದುಪಡಿ ವಿಧೇಯಕಕ್ಕೆ ಅನುಮೋದನೆ
Top Story

Winter Session 2025: ಗ್ರೇಟರ್ ಬೆಂಗಳೂರು ಆಡಳಿತ 2ನೇ ತಿದ್ದುಪಡಿ ವಿಧೇಯಕಕ್ಕೆ ಅನುಮೋದನೆ

by ಪ್ರತಿಧ್ವನಿ
December 16, 2025
Winter Session 2025: ಅಧಿವೇಶನ ಕರೆದಿರುವುದೇ ಉ.ಕರ್ನಾಟಕ ಸಮಸ್ಯೆಗಳ ಬಗ್ಗೆ ಚರ್ಚಿಸಲು-ಡಿ.ಕೆ ಶಿವಕುಮಾರ್‌
Top Story

Winter Session 2025: ಅಧಿವೇಶನ ಕರೆದಿರುವುದೇ ಉ.ಕರ್ನಾಟಕ ಸಮಸ್ಯೆಗಳ ಬಗ್ಗೆ ಚರ್ಚಿಸಲು-ಡಿ.ಕೆ ಶಿವಕುಮಾರ್‌

by ಪ್ರತಿಧ್ವನಿ
December 16, 2025
Top Story

ಬಹು ನಿರೀಕ್ಷಿತ ಮಲ್ಟಿಸ್ಟಾರರ್ “45” ಚಿತ್ರದ ಟ್ರೇಲರ್ ಗೆ ಮೆಚ್ಚುಗೆಯ ಮಹಾಪೂರ. .

by ಪ್ರತಿಧ್ವನಿ
December 16, 2025
https://www.youtube.com/watch?v=1mlC4BzAl-w
Pratidhvai.com

We bring you the best Analytical News, Opinions, Investigative Stories and Videos in Kannada

Follow Us

Browse by Category

Recent News

ಹೆಣ್ಣು ಭ್ರೂಣ ಹತ್ಯೆ ಸಾಮಾಜಿಕ ಪಿಡುಗು, ತಡೆಗಟ್ಟಲು ಕಟ್ಟುನಿಟ್ಟಿನ ಕ್ರಮ: ದಿನೇಶ್ ಗುಂಡೂರಾವ್

December 16, 2025

ಎರಡನೇ ವಾರದಲ್ಲೂ ಮುಂದುವರೆದಿದೆ‌ “ದಿ ಡೆವಿಲ್” ಚಿತ್ರದ ಯಶಸ್ಸಿನ ಓಟ..!!

December 16, 2025
  • About
  • Advertise
  • Privacy & Policy
  • Contact

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ

© 2024 www.pratidhvani.com - Analytical News, Opinions, Investigative Stories and Videos in Kannada