ಬೆಂಗಳೂರು : ಬೆಂಗಳೂರು ಜಿಲ್ಲಾ ಸಹಕಾರ ಹಾಲು ಒಕ್ಕೂಟ ತನ್ನ ವ್ಯಾಪ್ತಿಗೆ ಒಳಪಡುವ ಹಾಲು ಉತ್ಪಾದಕರಿಗೆ ಮಹತ್ವದ ಮಾಹಿತಿಯೊಂದನ್ನು ನೀಡಿದ್ದು ಹಾಲು ಉತ್ಪಾದಕರಿಗೆ ನೀಡುತ್ತಿದ್ದ ಪ್ರೋತ್ಸಾಹಧನದಲ್ಲಿ 1.50 ರೂಪಾಯಿಗಳಿಗೆ ಕತ್ತರಿ ಬಿದ್ದಿದೆ.
ಈ ಹಿಂದೆ ಹಾಲು ಉತ್ಪಾದನೆ ಉದ್ಯಮಕ್ಕೆ ಚೈತನ್ಯ ನೀಡುವ ಸಲುವಾಗಿ ಲೀಟರ್ಗೆ 2.85 ರೂಪಾಯಿ ಪ್ರೋತ್ಸಾಹ ಧನವನ್ನು ನೀಡಲಾಗುವುದು ಎಂದು ಬೆಂಗಳೂರು ಜಿಲ್ಲಾ ಸಹಕಾರ ಹಾಲು ಉತ್ಪಾದಕರ ಒಕ್ಕೂಟ ತಿಳಿಸಿತ್ತು .
ಬೆಂಗಳೂರು ಜಿಲ್ಲಾ ಸಹಕಾರ ಹಾಲು ಒಕ್ಕೂಟದ ಈ ಪ್ರೋತ್ಸಾಹ ಧನ ಏಪ್ರಿಲ್ ತಿಂಗಳ 1 ರಿಂದ ಮೇ ತಿಂಗಳ 31ರವರೆಗೆ ಇತ್ತು .