ಬೀದರ್ : ಮೇ :26 : ಹುಡುಗಿ ಶಿವಾರದಲ್ಲಿ ಪ್ರತಿಷ್ಠಿತ ಬ್ರಾಂಡ್ ನ ಪಾನ್ ಮಸಾಲಗಳಲ್ಲಿ ವಿಷಪೂರಿತ ಪದ್ದಾರ್ಥಗಳಿಂದ ಕಲಬೆರೆಕೆ ಮಾಡಿ ತಯಾರಿಸಿ ಸರಬರಾಜು ಮಾಡುತ್ತಿರುವ ಗೋಡೌನ್ ಮೇಲೆ ಪೊಲೀಸರು ದಾಳಿ ನಡೆಸಿ 3 ಜನ ಆರೋಪಿಗಳನ್ನು ಬಂಧಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಆರೋಪಿಗಳಿಂದ 11 ಪಾನ್ ಮಸಾಲಾ ಪ್ಯಾಕೇಟ್ ಮಾಡುವ ಯಂತ್ರಗಳು, ಐದು ಲಾರಿಗಳು, ಪಾನ್ ಮಸಾಲ ತಯಾರಿಸುವ 4890 ಕೆಜಿ ಕಚ್ಚಾ ಮೆಟೆರಿಯಲ್, 15 ಪಾಕೇಟ್ ಗೋವಾ ಪಾನ ಮಸಾಲ, 08 ಸಣ್ಣ ಪಾಕೇಟಗಳು ಸೇರಿದಂತೆ ಒಟ್ಟು 63 ಲಕ್ಷದ 22 ಸಾವಿರ 200 ರೂ. ಬೆಲೆಬಾಳುವ ಸಾಮಗ್ರಿಗಳನ್ನು ಪೊಲೀಸರು ಜಪ್ತಿ ಮಾಡಿಕೊಂಡಿದ್ದಾರೆ. ಹುಮನಾಬಾದ್ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿದೆ.

ಬೀದರ್ ಪೊಲೀಸ್ ಅಧೀಕ್ಷಕ ಚನ್ನಬಸವಣ್ಣ, ಹೆಚ್ಚುವರಿ ಪೊಲೀಸ್ ಅಧೀಕ್ಷಕ ಮಹೇಶ ಮೇಘಣ್ಣನವರ ಹಾಗೂ ಹುಮನಾಬಾದ ಹಿರಿಯ ಸಹಾಯಕ ಪೊಲೀಸ್ ಅಧೀಕ್ಷಕ ಶಿವಾಂಶು ರಜಪೂತ ಅವರ ಮಾರ್ಗದರ್ಶನದಲ್ಲಿ ಮಹೇಂದ್ರಕುಮಾರ ಪಿ.ಎಸ್.ಐ. (ಕಾಸು) ಚಿಟಗುಪ್ಪಾ, ಶಾಮರಾವ ಎಎಸ್‌ಐ, ಪಾಡುರಂಗ ಸಿಹೆಚ್‌ಸಿ 591, ಪ್ರಾಣೇಶ ಸಿಪಿಸಿ 1397, ಪ್ರೇಮಕುಮಾರ ಸಿಪಿಸಿ 1896, ಸಂಗಣ್ಣ ಸಿಪಿಸಿ 1460, ದುಂಡಪ್ಪಾ 1406 ಹಾಗೂ ಮಲ್ಲಿಕಾರ್ಜುನ ಸಿಪಿಸಿ 1896 ಅವರೊಂದಿಗೆ ಈ ದಾಳಿ ನಡೆಸಿದ್ರು.. ಬೀದರ್ ಪೊಲೀಸರ ಕಾರ್ಯಾಚರಣೆಯನ್ನು ಜಿಲ್ಲಾ ಪೊಲೀಸ್ ಅಧೀಕ್ಷಕರು ಶ್ಲಾಘಿಸಿದ್ದಾರೆ.









