2023ರ ರಾಜ್ಯ ವಿಧಾನಸಭಾ ಚುನಾವಣೆಗೆ(karnataka assembly election) ದಿನಗಣನೆ ಶುರುವಾಗಿದ್ದು, ರಾಜ್ಯದಲ್ಲಿ ಚುನಾವಣಾ ರಣಕಹಳೆ ಮೊಳಗಿದೆ. ಚುನಾವಣೆಗೆ ಬೆರಳೆನಿಕೆ ದಿನಗಳಷ್ಟೇ ಬಾಕಿ ಇದ್ದು, ನಾಳೆಯಿಂದ ಸ್ಯಾಂಡಲ್‌ವುಡ್ ನಟಿ, ಮೋಹಕ ತಾರೆ ರಮ್ಯಾ (Ramya) ಕಾಂಗ್ರೆಸ್ ಪರ ಅಖಾಡಕ್ಕಿಳಿದು ಮತಬೇಟೆ ನಡೆಸಲಿದ್ದಾರೆ. ರಾಜಕೀಯದಿಂದ ಮೂರು ವರ್ಷಗಳಿಂದ ಅಂತರ ಕಾಯ್ದುಕೊಂಡಿದ್ದ ಮಾಜಿ ಸಂಸದೆಯೂ ಆಗಿರುವ ನಟಿ ರಮ್ಯಾ ಅವರು ಪ್ರಸಕ್ತ ಚುನಾವಣೆಯಲ್ಲಿ(election) ಕಾಂಗ್ರೆಸ್ ಸ್ಟಾರ್ ಪ್ರಚಾರಕಿಯಾಗಿ ರಾಜ್ಯ ರಾಜಕಾರಣಕ್ಕೆ ಮರು ಎಂಟ್ರಿ ಕೊಡುತ್ತಿದ್ದಾರೆ.
ನಾಳೆಯಿಂದ ವಿಜಯಪುರ, ಮಂಡ್ಯ, ರಾಮನಗರ, ಹಾಸನ ಹಾಗೂ ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳ ಪರ ಪ್ರಚಾರ ನಡೆಸಿ ಮತಯಾಚನೆ ನಡೆಸಲಿದ್ದಾರೆ. ಈ ಹಿಂದೆ ಸಂಸದೆಯಾಗಿ ಆ ನಂತರ ರಾಷ್ಟ್ರೀಯ ಕಾಂಗ್ರೆಸ್ ಸಾಮಾಜಿಕ ಜಾಲತಾಣ(social media) ವಿಭಾಗದ ಮುಖ್ಯಸ್ಥೆಯಾಗಿ ಕೆಲಸ ಮಾಡಿದ ರಮ್ಯಾ 2019 ರ ಚುನಾವಣೆ(2019 election) ಬಳಿಕ ಕಾಂಗ್ರೆಸ್ ಹಾಗೂ ಒಟ್ಟಾರೆ ರಾಜಕೀಯದಿಂದ ದೂರ ಉಳಿದಿದ್ದರು. ಆದರೆ ಇದೀಗ ಮತ್ತೆ ಕಾಂಗ್ರೆಸ್ ಜೊತೆ ಕೈ ಜೋಡಿಸಿದ್ದು, ಈ ವಿಧಾನಸಭೆ ಚುನಾವಣೆಯಲ್ಲಿ(assembly election) ತಾರಾ ಪ್ರಚಾರಕಿಯಾಗಿ ಕಾಂಗ್ರೆಸ್ ಅಭ್ಯರ್ಥಿಗಳ ಪರವಾಗಿ ರಮ್ಯಾ ಪ್ರಚಾರ ಮಾಡಲಿದ್ದಾರೆ.