2023ರ ಕರ್ನಾಟಕ ವಿಧಾನಸಭಾ ಚುನಾವಣೆಗೆ(karnataka assembly election) ಕೌಂಟ್‌ಡೌನ್ ಶುರುವಾಗಿದ್ದು, ಈಗಾಗಲೇ ಪಕ್ಷದ ನಾಯಕರು, ಮುಖಂಡರು ಅಖಾಡಕ್ಕಿಳಿದು ಭರ್ಜರಿ ಮತಬೇಟೆ(campaign) ನಡೆಸುತ್ತಿದ್ದಾರೆ. ವಿಧಾನಸಭೆ ಚುನಾವಣೆ ಹತ್ತಿರ ಬರ್ತಿದ್ದಂತೆ ಇಂದು ಬೆಂಗಳೂರಿನನ ಜೆ.ಪಿ.ಭವನದಲ್ಲಿ ಜೆಡಿಎಸ್ ಪ್ರಣಾಳಿಕೆ ಬಿಡುಗಡೆ ಮಾಡಿದೆ. ಮಾಜಿ ಸಿಎಂ H.D.ಕುಮಾರಸ್ವಾಮಿ,(HD kumaraswamy) ರಾಜ್ಯಾಧ್ಯಕ್ಷ ಸಿ.ಎಂ.ಇಬ್ರಾಹಿಂ,(CM ibrahim) ಪರಿಷತ್ ಸದಸ್ಯ ಬಿ.ಎಂ.ಫಾರೂಕ್‌ರಿಂದ JDS ಪ್ರಣಾಳಿಕೆ ಬಿಡುಗಡೆ ಮಾಡಲಾಯಿತು. ಪ್ರಣಾಳಿಕೆಯಲ್ಲಿ ಜಾತ್ಯತೀತ ಜನತಾದಳ ಹಲವು ಭರವಸೆ ನೀಡಿದೆ. ಸಾಮಾಜಿಕ ಭದ್ರತೆಗಳಾದ ಮಾತೃಶ್ರೀ ಯೋಜನೆ, ರೈತಬಂಧು ಯೋಜನೆ, ಅಂಗನವಾಡಿ ಕಾರ್ಯಕರ್ತೆಯರ ಸಮಸ್ಯೆ ಪರಿಹಾರ, ಹಿರಿಸಿರಿ ಯೋಜನೆ, ಸಾರಥಿಗೆ ಸೈ ಯೋಜನೆ, ರಕ್ಷಕ ಬಂಧು ಯೋಜನೆ, ಚೈತನ್ಯ ಯೋಜನೆಗಳಾದ ಸಾರಿಗೆ ನೌಕರರ ಬೇಡಿಕೆ ಈಡೇರಿಕೆಗೆ ಭರವಸೆ ನೀಡಲಾಗಿದೆ.

ಕುಮಾರಸ್ವಾಮಿ ಮಹಿಳೆಯರಿಗಾಗಿ ವಿಶೇಷ ಯೋಜನೆಯನ್ನು ಘೋಷಿಸಿದ್ದಾರೆ. ಗರ್ಭಿಣಿಯರಿಗೆ ಆರು ತಿಂಗಳವರೆಗೆ ತಿಂಗಳಿಗೆ 6,000 ರೂ. ಮತ್ತು ಪ್ರಾದೇಶಿಕ ಪಕ್ಷವು ಮಹಿಳಾ ಸ್ವಸಹಾಯ ಗುಂಪುಗಳ ಸಾಲವನ್ನು ಮನ್ನಾ ಮಾಡುವುದಾಗಿ ಘೋಷಿಸಿದೆ. ವಿಧವೆಯರ ಪಿಂಚಣಿಯನ್ನು 900 ರೂ.ಗಳಿಂದ 2,500 ರೂ.ಗೆ ಹೆಚ್ಚಿಸಲಾಗುವುದು ಎಂದು ಹೇಳಿದೆ. ಮಾಜಿ ಪ್ರಧಾನಿ ಹೆಚ್ಡಿ. ದೇವೇಗೌಡ(HD devegowda) ಅವರ ನೇತೃತ್ವದ ಪಕ್ಷವು ಅಂಗನವಾಡಿ ಕಾರ್ಯಕರ್ತರ ಉದ್ಯೋಗವನ್ನು ಖಾಯಂಗೊಳಿಸುವುದಾಗಿ ಮತ್ತು ಅವರ ವೇತನವನ್ನು 5,000 ರೂ.ಗಳಷ್ಟು ಹೆಚ್ಚಿಸುವುದಾಗಿ ಪ್ರಣಾಳಿಕೆಯಲ್ಲಿ ಭರವಸೆ ನೀಡಿದೆ. ವೃತ್ತಿನಿರತ ವಕೀಲರ ರಕ್ಷಣೆಗೆ ಕಾಯ್ದೆ, ಮೀಸಲಾತಿ ಗೊಂದಲ ನಿವಾರಣೆ, ಧಾರ್ಮಿಕ ಅಲ್ಪಸಂಖ್ಯಾತ ಏಳಿಗೆ ಸಾಮಾಜಿಕ ನ್ಯಾಯ ಮತ್ತು ಮೀಸಲಾತಿ, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಏಳಿಗೆ ಮತ್ತು ಅಭಿವೃದ್ಧಿ, ಬಗರ್ ಹುಕುಂ ಸಾಗುವಳಿ, ಋತು ಯೋಜನೆಗೆ ಕಾಯಕಲ್ಪ, ರಾಷ್ಟ್ರೀಯ ಪಿಂಚಣಿ ಯೋಜನೆ, ಹಳೇ ಪಿಂಚಣೆ ಯೋಜನೆ ಜಾರಿಗೆ ಭರವಸೆ ನೀಡಲಾಗಿದೆ.