ಹಾಸನ : ಜೆಡಿಎಸ್ ಪಕ್ಷಕ್ಕೆ ಮತ ಹಾಕಿದರೆ ನೀವು ನಮ್ಮ ಪಕ್ಷಕ್ಕೆ ಮತ ಹಾಕಿದಂತೆ ಎಂದು ಹೇಳಿವ ಮೂಲಕ ಬಿಜೆಪಿ ಶಾಸಕ ಪ್ರೀತಂ ಗೌಡ ಹೊಸ ಬಾಂಬ್ ಸಿಡಿಸಿದ್ದಾರೆ. ಹಾಸನದಲ್ಲಿ ಚುನಾವಣಾ ಪ್ರಚಾರದ ಸಂದರ್ಭದಲ್ಲಿ ಮುಸ್ಲಿಂ ಸಮುದಾಯದವರನ್ನು ಗುರಿಯಾಗಿಸಿ ಅವರು ಈ ಹೇಳಿಕೆ ನೀಡಿದ್ದಾರೆ.

ಬೆಂಗಳೂರಿಗೆ ಹೋಗಬೇಕು ಅಂದರೆ ಮೈಸೂರಿಗೆ ಹೋಗಿ ಹೋಗಬೇಡಿ, ಹಾಸನದಿಂದ ಬೆಳ್ಳೂರು ಕ್ರಾಸ್ ಮೇಲೆ ಹೋಗಿ ಎಂದು ನಾನು ಹೇಳುತ್ತೇನೆ. ಮೈಸೂರಿಗೇ ಹೋಗಿ ಬೆಂಗಳೂರಿಗೆ ಬರುತ್ತೇನೆ ಎಂದರೆ ಸುತ್ತಿ ಬಳಸಿ ನನ್ನ ಬಳಿಗೆ ಬಂದಂತೆ. ಎಲ್ಲಾ ನದಿಯ ನೀರು ಹರಿಯೋದು ಸಮುದ್ರಕ್ಕೇನೆ. ಈ ಬಾರಿ ಅಧಿಕಾರಿಕ್ಕೆ ಬರುವುದು ಬಿಜೆಪಿ ಪಕ್ಷಕ್ಕೇನೆ ಎಂದು ಹೇಳಿದ್ದಾರೆ.
ಮೋದಿ ಹಾಗೂ ಹೆಚ್ಡಿಡಿ ಈಗಾಗಲೇ ಮಾತನಾಡಿಕೊಂಡಿದ್ದಾರೆ. ಈ ಬಾರಿ ಜೆಡಿಎಸ್ 20 -25 ಸೀಟು ಗೆಲ್ಲಲಿದೆ. ಹೀಗಾಗಿ ನೀವು ಜೆಡಿಎಸ್ ವೋಟ್ ಹಾಕಿದರೂ ಬಿಜೆಪಿಗೆ ಮತ ಹಾಕಿದಂತೆ ಎಂದು ಹೇಳಿದ್ದಾರೆ.