• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Tuesday, May 26, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home Top Story

KR ನಲ್ಲಿ ಟಿಕೆಟ್ ಫೈಟ್.. ಬಿಜೆಪಿ – ಕಾಂಗ್ರೆಸ್ ನಲ್ಲಿ ಟಿಕೆಟ್ ಕನ್ಫ್ಯೂಷನ್..!

Any Mind by Any Mind
April 13, 2023
in Top Story, ಕರ್ನಾಟಕ, ದೇಶ, ರಾಜಕೀಯ
0
KR ನಲ್ಲಿ ಟಿಕೆಟ್ ಫೈಟ್.. ಬಿಜೆಪಿ – ಕಾಂಗ್ರೆಸ್ ನಲ್ಲಿ ಟಿಕೆಟ್ ಕನ್ಫ್ಯೂಷನ್..!
Share on WhatsAppShare on FacebookShare on Telegram

ಬೆಂಗಳೂರು: ಏ.13: ವಿಧಾನಸಭಾ ಚುನಾವಣೆಗೆ ಬಿಜೆಪಿ ಅಭ್ಯರ್ಥಿಗಳ 2ನೇ ಪಟ್ಟಿ ಬಿಡುಗಡೆ ಮಾಡಲಾಗಿದೆ. ಎರಡನೇ ಪಟ್ಟಿಯಲ್ಲಿ 23 ಅಭ್ಯರ್ಥಿಗಳ ಹೆಸರು ಪ್ರಕಟವಾಗಿದ್ದು, H.D.ಕೋಟೆ ST ಮೀಸಲು ಕ್ಷೇತ್ರದಿಂದ ಕೃಷ್ಣನಾಯಕ್ ಕಣಕ್ಕೆ ಇಳಿಯಲಿದ್ದಾರೆ. ಇತ್ತ ಬಿಜೆಪಿ ನಾಯಕರಿಗೆ K.R.ಕ್ಷೇತ್ರದ ಅಭ್ಯರ್ಥಿ ಆಯ್ಕೆ ಕಗ್ಗಂಟಾಗಿದ್ದು, 2ನೇ ಪಟ್ಟಿಯಲ್ಲೂ K.R ಕ್ಷೇತ್ರಕ್ಕೆ ಟಿಕೆಟ್ ಪ್ರಕಟವಾಗಿಲ್ಲ. ಮೈಸೂರು ಜಿಲ್ಲೆಯ 11 ಕ್ಷೇತ್ರಗಳ ಪೈಕಿ 10 ಕ್ಷೇತ್ರಕ್ಕೆ ಟಿಕೆಟ್ ಘೋಷಣೆಯಾಗಿದ್ದು, K.R ಕ್ಷೇತ್ರಕ್ಕೆ ಅಭ್ಯರ್ಥಿ ಘೋಷಿಸದೇ ಬಿಜೆಪಿ ಅಚ್ಚರಿ ಮೂಡಿಸಿದೆ.

ADVERTISEMENT

ರಾಮದಾಸ್ ಗೆ ಅದೃಷ್ಟ..?

ರಾಮದಾಸ್ಗೆ ಈ ಬಾರಿ ಟಿಕೆಟ್ ತಪ್ಪಿಸಬೇಕೆಂದು ಸಾಕಷ್ಟು ಕಸರತ್ತು ನಡೀತಾಯಿದೆ . ದೆಹಲಿಮಟ್ಟದಲ್ಲಿ ರಾಜಕೀಯ ಜೋರಿದ್ದು , ಮಾಜಿ ಮುಡಾ ಅಧ್ಯಕ್ಷ ಹೆಚ್.ವಿ,ರಾಜೀವ್ ತೀವ್ರ ಪೈಪೋಟಿ ತೋರಿದ್ದಾರೆ . ಬಿಜೆಪಿ ನಗರಾಧ್ಯಕ್ಷ ಶ್ರೀವತ್ಸ ಹೆಸರು ತೆರೆಮರೆಯಲ್ಲಿ ಓಡಾಡ್ತಿದ್ದು , ಅಂತಿಮವಾಗಿ ಹೈಕಮಾಂಡ್ ಯಾರಿಗೆ ಬಹುಪರಾಕ್ ಹೇಳಲಿದೆ ಅನ್ನೋದು ಸದ್ಯದ ಕೌತುಕವಾಗಿದೆ.

ಬಿಜೆಪಿ ಭದ್ರಕೋಟೆ..


ಕೆಆರ್ ಕ್ಷೇತ್ರ ಕಳೆದ 30 ವರ್ಷದಿಂದ ಬಿಜೆಪಿ ಭದ್ರಕೋಟೆ. ಬಹುಪಾಲು ಇಲ್ಲಿನ ಜನ ಬಿಜೆಪಿಗೆ ಜೈ ಅಂದಿದ್ದಾರೆ . ಆದ್ರೆ ಹಾಲಿ ಶಾಸಕ ರಾಮದಾಸ್ಗೆ ಟಿಕೆಟ್ ನೀಡದಂತೆ ಬ್ರಾಹ್ಮಣ ಹಾಗೂ ಲಿಂಗಾಯತ ಸಮುದಾಯದ ಮುಖಂಡರು ಹೈ ಕಮಾಂಡ್ಗೆ ಮನವಿ ಮಾಡಿದ್ದಾರೆ . ಈ ಕಾರಣದಿಂದಲೇ ಸಾಕಷ್ಟು ಅಳೆದು ತೂಗಿ ಟಿಕೆಟ್ ಘೋಷಣೆಗೆ ಹೈ ಕಮಾಂಡ್ ಮುಂದಾಗಿದೆ . ಈಗಾಗಲೇ ಶಾಸಕ ರಾಮದಾಸ್ ವಿರುದ್ಧ ಸಾಕಷ್ಟು ದೂರುಗಳು ಕೇಳಿಬಂದಿದೆ ಎನ್ನಲಾಗಿದೆ

ಬುಧವಾರ ರಾತ್ರಿ ಹೈ ಡ್ರಾಮಾ..!

ಕೃಷ್ಣರಾಜ ಕ್ಷೇತ್ರದ ಬಿಜೆಪಿ ಟಿಕೆಟ್ ಘೋಷಣೆ ಮಾಡದ ಹಿನ್ನೆಲೆ ಶಾಸಕ ರಾಮದಾಸ್ ಕಚೇರಿ ಮುಂದೆ ಬುಧವಾರ ಕಾರ್ಯಕರ್ತರು ಜಮಾಯಿಸಿದ್ರು .ಮೈಸೂರಿನ ಚಾಮುಂಡಿಪುರಂ ನಿವಾಸದ ಬಳಿ ಇರುವ ಕಚೇರಿ‌ ಮುಂದೆ ಹೈಡ್ರಾಮಾ ನಡೆಯಿತು. ಶಾಸಕ ರಾಮದಾಸ್ಗೆ ಟಿಕೆಟ್ ಘೋಷಣೆ ಮಾಡದ್ದಕ್ಕೆ ಆಕ್ರೋಶ ವ್ಯಕ್ತವಾಯ್ತು. ಟಿಕೆಟ್ ನೀಡದಿರುವುದಕ್ಕೆ ಕಣ್ಣೀರಿಟ್ಟ ಮಹಿಳಾ ಕಾರ್ಯಕರ್ತೆಯರು , ಖಂಡಿತವಾಗಿಯೂ ರಾಮದಾಸ್ ಅವ್ರಿಗೆ ಟಕೆಟ್ ಕೊಡ್ಬೇಕು ಅಂತ ಆಗ್ರಹಿಸಿದ್ರು. ಈ ವೇಳೆ ಬಿಜೆಪಿ ಕಾರ್ಯಕರ್ತ ವಿಷ ಕುಡಿಯಲು ಯತ್ನಿಸಿದ ಎಂಬ ಮಾಹಿತಿ ಲಭ್ಯವಾಗಿದೆ.

ಕಾಂಗ್ರೆಸ್ನಲ್ಲೂ ಪೈಪೋಟಿ..
ಬಿಜೆಪಿಯಂತೆ ಕಾಂಗ್ರೆಸ್ನಲ್ಲೂ ಕೆಆರ್ ಕ್ಷೇತ್ರದ ರಣಕಲಿ ಆಯ್ಕೆ ಕಗ್ಗಂಟಾಗಿಯೇ ಉಳಿದಿದೆ. ಮಾಜಿ ಶಾಸಕ ಎಂ.ಕೆ. ಸೋಮಶೇಖರ್ , ಯುವ ಮುಖಂಡರಾದ ಪ್ರದೀಪ್ ಕುಮಾರ್ , ನವೀನ್ ಕುಮಾರ್ ನಡುವೆ ತೀವ್ರ ಪೈಪೋಟಿ ಏರ್ಪಟ್ಟಿದೆ . ಬಹುತೇಕ ಮುಂದಿನ 2 ದಿನಗಳಲ್ಲಿ ಎಲ್ಲಾ ಕೌತುಕಕ್ಕೂ ತೆರೆಬೀಳುವ ಸಾಧ್ಯತೆ ಇದೆ.

Tags: 2023 election2023 Election Resultassembly electionBJPBJP GovernmentBOMMAIBSYCMCmIbrahimCongress PartyctraviDKShivakumarElection Commissionelection resultHDDHDKJanasankalpa YatreJDSKannadaKarnataka ElectionKarnataka PoliticskumaraswamylatestnewsNalin Kumar KateelNewsPancharatna YatrePoliticsPratidhvaniramdassiddaramaiahState ElectionVijayasankalpaಎಚ್ ಡಿ ಕುಮಾರಸ್ವಾಮಿ
Previous Post

ಬಿಜೆಪಿಗೆ ನೆಹರು ಓಲೇಕಾರ್​ ರಾಜೀನಾಮೆ : ಸಿಎಂ ವಿರುದ್ಧ ಏಕವಚನದಲ್ಲಿ ವಾಗ್ದಾಳಿ

Next Post

ಅಥರ್ವ್ ಪಿಕ್ಚರ್ಸ್ ನಿರ್ಮಾಣದ ಹೊಸ ಸಿನಿಮಾ ಟೈಟಲ್‌ ಲಾಂಚ್‌

Related Posts

ದೆಹಲಿಯಲ್ಲಿ ಹೈ ವೋಲ್ಟೇಜ್‌ ಸಭೆಯಲ್ಲಿ ಡಿಕೆ, ಸಿದ್ದು ಚರ್ಚಿಸಿದ್ದೇನು..?
Top Story

ದೆಹಲಿಯಲ್ಲಿ ಹೈ ವೋಲ್ಟೇಜ್‌ ಸಭೆಯಲ್ಲಿ ಡಿಕೆ, ಸಿದ್ದು ಚರ್ಚಿಸಿದ್ದೇನು..?

by ಪ್ರತಿಧ್ವನಿ
May 26, 2026
0

ಬೆಂಗಳೂರು : ರಾಜ್ಯ ರಾಜಕಾರಣ ದೆಹಲಿಗೆ ಶಿಫ್ಟ್‌ ಆಗಿದ್ದು, ಕಾಂಗ್ರೆಸ್‌ ಪಾಳಯದಲ್ಲಿನ ನಾಯಕತ್ವ ಬದಲಾವಣೆಗೆ ಸಂಬಂಧಿಸಿದಂತೆ ಚರ್ಚೆಗಳು ಮುನ್ನೆಲೆಗೆ ಬಂದಿವೆ. ಈ ಕುರಿತು ಈಗಾಗಲೇ ದೆಹಲಿಯಲ್ಲಿರುವ ಸಿದ್ದರಾಮಯ್ಯ ಹಾಗೂ...

Read moreDetails
ಕುರ್ಚಿ ಕ್ಲೈಮ್ಯಾಕ್ಸ್‌ನಲ್ಲಿ ಸಿದ್ದರಾಮಯ್ಯ ಟೀಂ ಪ್ಲ್ಯಾನ್‌ ಏನು..? : ಹೈ ವೋಲ್ಟೇಜ್‌ ಸಭೆಯಲ್ಲಿ ಏನಾಗಬಹುದು..?

ಕುರ್ಚಿ ಕ್ಲೈಮ್ಯಾಕ್ಸ್‌ನಲ್ಲಿ ಸಿದ್ದರಾಮಯ್ಯ ಟೀಂ ಪ್ಲ್ಯಾನ್‌ ಏನು..? : ಹೈ ವೋಲ್ಟೇಜ್‌ ಸಭೆಯಲ್ಲಿ ಏನಾಗಬಹುದು..?

May 26, 2026
ಗುರುಗ್ರಾಮದಲ್ಲಿ ಕುಳಿತು ‘ಡಿಜಿಟಲ್ ಅರೆಸ್ಟ್’ ನಾಟಕ;  ಮಹಿಳೆ ಟಾರ್ಗೆಟ್

ಗುರುಗ್ರಾಮದಲ್ಲಿ ಕುಳಿತು ‘ಡಿಜಿಟಲ್ ಅರೆಸ್ಟ್’ ನಾಟಕ;  ಮಹಿಳೆ ಟಾರ್ಗೆಟ್

May 26, 2026
ಒಂದೆಡೆ ಸಿದ್ದರಾಮಯ್ಯ ಬಣ, ಮತ್ತೊಂದೆಡೆ ಡಿಕೆಶಿ ಕಸರತ್ತು; ದೆಹಲಿ ದಂಗಲ್ ಶುರು!

ಒಂದೆಡೆ ಸಿದ್ದರಾಮಯ್ಯ ಬಣ, ಮತ್ತೊಂದೆಡೆ ಡಿಕೆಶಿ ಕಸರತ್ತು; ದೆಹಲಿ ದಂಗಲ್ ಶುರು!

May 26, 2026
ಬೆಂಗಳೂರು ರಾಜಕೀಯಕ್ಕೆ ವಿಜಯ್ ಎಂಟ್ರಿ? ಗ್ರೇಟರ್ ಬೆಂಗಳೂರು ಚುನಾವಣೆಗೆ ಟಿವಿಕೆ ಮಾಸ್ಟರ್ ಪ್ಲಾನ್!

ಬೆಂಗಳೂರು ರಾಜಕೀಯಕ್ಕೆ ವಿಜಯ್ ಎಂಟ್ರಿ? ಗ್ರೇಟರ್ ಬೆಂಗಳೂರು ಚುನಾವಣೆಗೆ ಟಿವಿಕೆ ಮಾಸ್ಟರ್ ಪ್ಲಾನ್!

May 26, 2026
Next Post
ಅಥರ್ವ್ ಪಿಕ್ಚರ್ಸ್ ನಿರ್ಮಾಣದ ಹೊಸ ಸಿನಿಮಾ ಟೈಟಲ್‌ ಲಾಂಚ್‌

ಅಥರ್ವ್ ಪಿಕ್ಚರ್ಸ್ ನಿರ್ಮಾಣದ ಹೊಸ ಸಿನಿಮಾ ಟೈಟಲ್‌ ಲಾಂಚ್‌

Please login to join discussion
https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada