• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Saturday, April 25, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home Top Story

RCB vs LSG‌ | ಐಪಿಎಲ್ ರೋಚಕ ಹಣಾಹಣಿ : ಒಂದು ವಿಕೆಟ್‌ನಿಂದ ಗೆದ್ದ ಲಖನೌ

Any Mind by Any Mind
April 11, 2023
in Top Story, ಕರ್ನಾಟಕ, ಕ್ರೀಡೆ
0
RCB vs LSG‌ | ಐಪಿಎಲ್ ರೋಚಕ ಹಣಾಹಣಿ : ಒಂದು ವಿಕೆಟ್‌ನಿಂದ ಗೆದ್ದ ಲಖನೌ
Share on WhatsAppShare on FacebookShare on Telegram

ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಆರ್ ಸಿಬಿ- ಲಖನೌ ಸೂಪರ್ ಜೈಂಟ್ಸ್ ಹೈವೋಲ್ಟೇಜ್ ಪಂದ್ಯದಲ್ಲಿ ಎಲ್ ಎಸ್ ಜಿಗೆ ಕೊನೆಯ ಎಸೆತದಲ್ಲಿ 1 ವಿಕೆಟ್ ಅಂತರದ ಗೆಲುವು ದಕ್ಕಿದೆ.

ADVERTISEMENT

ಮೊದಲು ಬ್ಯಾಟಿಂಗ್‌ ಮಾಡಿದ ಆರ್‌ಸಿಬಿ 2 ವಿಕೆಟ್‌ ಕಳೆದುಕೊಂಡು 212 ರನ್‌ ಗಳಿಸಿತು. ಚೇಸಿಂಗ್‌ ನಡೆಸಿದ ಲಖನೌ, ಪೂರನ್‌ ಮತ್ತು ಸ್ಟೋಯ್ನಿಸ್‌ ದಾಖಲೆಯ ಅರ್ಧಶತಕದ ನೆರವಿನಿಂದ 9 ವಿಕೆಟ್‌ ಕಳೆದುಕೊಂಡು 213 ರನ್‌ ಗಳಿಸಿ ಗೆದ್ದು ಬೀಗಿತು.

ಒಂದು ಹಂತದಲ್ಲಿ ಲಖನೌ ಸುಲಭವಾಗಿ ಗುರಿ ತಲುಪುವ ಹಂತಕ್ಕೆ ಬಂದಿತ್ತು. ಅಂತಿಮ ಓವರ್‌ನಲ್ಲಿ ಪಂದ್ಯ ರೋಚಕ ಹಂತ ತಲುಪಿತು. ಆದರೆ, ಕೊನೆಯ ಎಸೆತದಲ್ಲಿ ರವಿ ಬಿಷ್ಣೋಯ್‌ ಮತ್ತು ಆವೇಶ ಖಾನ್‌ ಒಂದು ರನ್‌ ರನ್‌ ಗಳಿಸಿ ತಂಡವನ್ನು ಗೆಲುವಿನ ದಡ ಸೇರಿಸಿದರು.

ಆರ್‌ಸಿಬಿ ನೀಡಿದ ಬೃಹತ್‌ ಗುರಿ ಬೆನ್ನತ್ತಿದ ಲಖನೌ ಆರಂಭ ಉತ್ತಮವಾಗಿರಲಿಲ್ಲ. ಆರೇಂಜ್ ಕ್ಯಾಪ್ ರೇಸ್‌ನಲ್ಲಿದ್ದ ಕೈಲ್ ಮೇಯರ್ಸ್, ಮೊದಲ ಓವರ್‌ನಲ್ಲೇ ಮೊಹಮ್ಮದ್‌ ಸಿರಾಜ್ ಎಸೆತಕ್ಕೆ ಕ್ಲೀನ್‌ ಬೌಲ್ಡ್ ಆದರು. ಅವರ ಬೆನ್ನಲ್ಲೇ 9 ರನ್‌ ಗಳಿಸಿದ್ದ ದೀಪಕ್ ಹೂಡಾ ಕೂಡಾ ಔಟಾದರು. ಕ್ರುನಾಲ್ ಪಾಂಡ್ಯ ಡಕೌಟ್ ಆದರು. ಇವರಿಬ್ಬರಿಗೂ ಆರ್‌ಸಿಬಿ ಬಳಗ ಸೇರಿಕೊಂಡ ಹೊಸ ಆಟಗಾರ ಪರ್ನೆಲ್‌ ಡಕೌಟ್ ದಾರಿ ತೋರಿಸಿದರು.

ಈ ವೇಳೆ ನಾಯಕ ರಾಹುಲ್‌ ಜೊತೆ ಸೇರಿಕೊಂಡು ಸ್ಫೋಟಕ ಆಟವಾಡಿದ ಸ್ಟೋಯ್ನಿಸ್‌, ಆರ್‌ಸಿಬಿ ಬೌಲರ್‌ಗಳ ಬೆವರಿಳಿಸಿದರು. 30 ಎಸೆತಗಳಲ್ಲಿ 6 ಬೌಂಡರಿ ಮತ್ತು 5 ಸಿಕ್ಸರ್‌ಗಳ ನೆರವಿನಿಂದ 65 ರನ್‌ ಸಿಡಿಸಿದರು. ತಂಡವನ್ನು ಗೆಲುವಿನತ್ತ ಕೊಂಡೊಯ್ಯುತ್ತಿದ್ದ ಅವರನ್ನು ಕರ್ಣ್‌ ಶರ್ಮಾ ಔಟ್‌ ಮಾಡಿ ನಿರ್ಣಾಯಕ ವಿಕೆಟ್‌ ಪಡೆದರು. ಅವರ ಬೆನ್ನಲ್ಲೇ ನಾಯಕ ಕೆಎಲ್‌ ರಾಹುಲ್‌ ಅವರನ್ನು ಮೊಹಮ್ಮದ್‌ ಸಿರಾಜ್‌ ಔಟ್‌ ಮಾಡಿದರು.

Tags: dinesh karthikGlenn MaxwellIPL -2023kl rahulKyle MayersLucknow Super GiantsLucknow winLucknowIPLM Chinnaswamy StadiumMahipal LomrorMarcus StoinisNicholas PooranOrange CapPurple Cap​RCBrcbfansRCBvLSGresultsRoyal Challengers bangaloreShahbaz AhmedTATAIPL 2023Virat Kohli
Previous Post

ಹುಲಿ ಕಾಣದಿದ್ದರೇನಾಯ್ತು ಮೋದಿನೇ ಹುಲಿ : ಕೆ.ಎಸ್.ಈಶ್ವರಪ್ಪ

Next Post

ಬಿಜೆಪಿ ಹಾಲಿ ಶಾಸಕನಿಗೆ ಪತ್ನಿಯಿಂದಲೇ ಸಂಕಷ್ಟ : ಪತಿಯ ಬದಲು ತನಗೆ ಟಿಕೆಟ್​ ನೀಡುವಂತೆ ಲಾಬಿ

Related Posts

ಗುಜರಾತ್ ವಿರುದ್ಧ ಆರ್‌ಸಿಬಿೆ ಭರ್ಜರಿ ಗೆಲುವು: ಪ್ಲೇಆಫ್‌ಗೆ ಇನ್ನಷ್ಟು ಬಾರಿ ಗೆಲ್ಲಬೇಕು ?
ಕ್ರೀಡೆ

ಗುಜರಾತ್ ವಿರುದ್ಧ ಆರ್‌ಸಿಬಿೆ ಭರ್ಜರಿ ಗೆಲುವು: ಪ್ಲೇಆಫ್‌ಗೆ ಇನ್ನಷ್ಟು ಬಾರಿ ಗೆಲ್ಲಬೇಕು ?

by ಪ್ರತಿಧ್ವನಿ
April 25, 2026
0

ಬೆಂಗಳೂರು: ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಗುಜರಾತ್ ಟೈಟನ್ಸ್ ವಿರುದ್ಧದ ರೋಚಕ ಪಂದ್ಯದಲ್ಲಿ 5 ವಿಕೆಟ್‌ಗಳ ಗೆಲುವು ಸಾಧಿಸಿ ಅಂಕಪಟ್ಟಿಯಲ್ಲಿ ಎರಡನೇ ಸ್ಥಾನಕ್ಕೇರಿದೆ. ಈ ಗೆಲುವಿನಿಂದ ಆರ್‌ಸಿಬಿಯ...

Read moreDetails
ಡಾ. ರಾಜ್‌ಕುಮಾರ್ ಜಯಂತಿ ಸಂಭ್ರಮದ ನಡುವೆ ಚೇತನ್ ಅಹಿಂಸ ಹೇಳಿಕೆಗೆ ವಿವಾದ

ಲಕ್ಷ್ಮಣ ಸವದಿ ಎದುರೇ ಅವರ ಆಪ್ತನ ಅಕಾಲಿಕ ನಿಧನ

April 24, 2026
ಸಚಿವ ಡಿ. ಸುಧಾಕರ್ ಆರೋಗ್ಯ ಸ್ಥಿತಿ ಬಗ್ಗೆ ಕಿಮ್ಸ್ ಆಸ್ಪತ್ರೆಯಿಂದ ಹೆಲ್ತ್ ಬುಲೆಟಿನ್ ಬಿಡುಗಡೆ

ಸಚಿವ ಡಿ. ಸುಧಾಕರ್ ಆರೋಗ್ಯ ಸ್ಥಿತಿ ಬಗ್ಗೆ ಕಿಮ್ಸ್ ಆಸ್ಪತ್ರೆಯಿಂದ ಹೆಲ್ತ್ ಬುಲೆಟಿನ್ ಬಿಡುಗಡೆ

April 24, 2026
ಆಯುಕ್ತರ ಹೆಸರಿನಲ್ಲಿ ವಾಟ್ಸ್‌ಆಪ್ ವಂಚನೆ ಯತ್ನ: ಬೆಂಗಳೂರು ಪಾಲಿಕೆಗಳಿಂದ ಸಾರ್ವಜನಿಕರಿಗೆ ಎಚ್ಚರಿಕೆ

ಆಯುಕ್ತರ ಹೆಸರಿನಲ್ಲಿ ವಾಟ್ಸ್‌ಆಪ್ ವಂಚನೆ ಯತ್ನ: ಬೆಂಗಳೂರು ಪಾಲಿಕೆಗಳಿಂದ ಸಾರ್ವಜನಿಕರಿಗೆ ಎಚ್ಚರಿಕೆ

April 24, 2026
ಬ್ಯಾಂಕ್‌ನಲ್ಲೇ ಚಿನ್ನ ಕಳ್ಳತನ: ಅಸಿಸ್ಟೆಂಟ್ ಮ್ಯಾನೇಜರ್ ಕೃತ್ಯದಿಂದ ಗ್ರಾಹಕರಲ್ಲಿ ಆತಂಕ

ಬ್ಯಾಂಕ್‌ನಲ್ಲೇ ಚಿನ್ನ ಕಳ್ಳತನ: ಅಸಿಸ್ಟೆಂಟ್ ಮ್ಯಾನೇಜರ್ ಕೃತ್ಯದಿಂದ ಗ್ರಾಹಕರಲ್ಲಿ ಆತಂಕ

April 24, 2026
Next Post
ಬಿಜೆಪಿ ಹಾಲಿ ಶಾಸಕನಿಗೆ ಪತ್ನಿಯಿಂದಲೇ ಸಂಕಷ್ಟ : ಪತಿಯ ಬದಲು ತನಗೆ ಟಿಕೆಟ್​ ನೀಡುವಂತೆ ಲಾಬಿ

ಬಿಜೆಪಿ ಹಾಲಿ ಶಾಸಕನಿಗೆ ಪತ್ನಿಯಿಂದಲೇ ಸಂಕಷ್ಟ : ಪತಿಯ ಬದಲು ತನಗೆ ಟಿಕೆಟ್​ ನೀಡುವಂತೆ ಲಾಬಿ

Please login to join discussion
https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada