• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Thursday, May 28, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home Top Story

ಒಂದು ಕೋಟಿ ಮೌಲ್ಯದ 100 ಕೆ.ಜಿ ಗಾಂಜಾ ಪೊಲೀಸರ ವಶಕ್ಕೆ..!

Any Mind by Any Mind
April 8, 2023
in Top Story, ಇದೀಗ, ಕರ್ನಾಟಕ, ದೇಶ, ರಾಜಕೀಯ
0
ಒಂದು ಕೋಟಿ ಮೌಲ್ಯದ 100 ಕೆ.ಜಿ ಗಾಂಜಾ ಪೊಲೀಸರ ವಶಕ್ಕೆ..!
Share on WhatsAppShare on FacebookShare on Telegram

ಬೀದರ್, ಏ.08 : ಅಕ್ರಮವಾಗಿ ಸಾಗಿಸುತ್ತಿದ್ದ ಸುಮಾರು ಒಂದು ಕೋಟಿ ಮೌಲ್ಯದ 100 ಕೆ.ಜಿ. ಗಾಂಜವನ್ನು ರಾಷ್ಟ್ರೀಯ ಹೆದ್ದಾರಿ 65ರ ನಿಂಬೂರ ಕ್ರಾಸ್ ಬಳಿ ವಶಪಡಿಸಿಕೊಂಡಿದ್ದು, ನಾಲ್ವರು ಆರೋಪಿಗಳನ್ನು ಬಂಧಿಸಿಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಚನ್ನಬಸವಣ್ಣ ಎಸ್.ಎಲ್ ಅವರು ಹೇಳಿದ್ದಾರೆ. ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿಗಳ ಕಚೇರಿ ಆವರಣದಲ್ಲಿ ಪತ್ರಕರ್ತರ ಜೊತೆ ಮಾತನಾಡಿದ ಅವರು, ಜಹೀರಾಬಾದ್ ಕಡೆಯಿಂದ ಟಾಟಾ ಸುಮೋ ವಾಹನದಲ್ಲಿ ಅನಧಿಕೃತವಾಗಿ ಗಾಂಜಾ‌ ಸೊಪ್ಪು ಸಾಗಾಣಿಕೆ ಮಾಡುತ್ತಿರುವ ಬಗ್ಗೆ ಖಚಿತ ಮಾಹಿತಿ ಮೇರೆಗೆ ‌ ಪೊಲೀಸರು ಕಾರ್ಯಚರಣೆ ನಡೆಸಿದೆ ಆರೋಪಿಗಳನ್ನ ಬಂಧಿಸಿದ್ದಾರೆ.

ADVERTISEMENT

ಹುಮನ್ನಾಬಾದ ತಾಲೂಕಿ ತಾಳಮಡಗಿಯ ನಿಬ್ಬೂರ ಕ್ರಾಸ್ ಬಳಿ ದಾಳಿ ನಡೆಸಿದಾಗ ಟಾಟಾ ಸುಮೊ ವಾಹನದಲ್ಲಿ ಅಂದಾಜು 1.00.38.500 ಮೌಲ್ಯದ 2.ಕೆಜಿ ತೂಕದ 50 ಪ್ಯಾಕೆಟ್‌ನಲ್ಲಿ ಸಾಗಿಸುತ್ತಿದ್ದ ಒಟ್ಟು 100 ಕೆ.ಜಿ ಗಾಂಜಾ ಪತ್ತೆಯಾಗಿದೆ. ವಿಚಾರಣೆಯಲ್ಲಿ ಇವರು ಆಂಧ್ರಪ್ರದೇಶ ಜಹೀರಾಬಾದ ನಿಂದ ಮಹಾರಾಷ್ಟ್ರಕ್ಕೆ ಗಾಂಜಾ ಸಾಗಿಸುತ್ತಿದ್ದರು ಎಂದು ತಿಳಿದುಬಂದಿದ್ದೆ. ಇವರಿಂದ 100 ಕೆ.ಜಿ 385 ಗ್ರಾಂ ಗಾಂಜಾ, ನಾಲ್ಕು ಮೊಬೈಲ್ ಫೋನ್, 800 ರೂಪಾಯಿ ನಗದು ಹಾಗೂ 3 ಲಕ್ಷ ರೂಪಾಯಿ ಮೌಲ್ಯದ ಟಾಟಾ ಸುಮೊ ವಾಹನ ವಶಪಡಿಸಿಕೊಳ್ಳಲಾಗಿದೆ ಎಂದು ಅವರು ಮಾಹಿತಿ ನೀಡಿದರು.

ಆರೋಪಿಗಳು ಮೂಲತಃ ಮಹಾರಾಷ್ಟ್ರದ ಉಸ್ಮಾನಾಬಾದ ಜಿಲ್ಲೆಯವರಾಗಿದ್ದಾರೆ. ಇವರ ವಿರುದ್ದ ಈ ಹಿಂದೆ ಕರ್ನಾಟಕದಲ್ಲಿ ಯಾವುದೇ ಪ್ರಕಣಗಳು ದಾಖಲಾಗಿಲ್ಲ, ಆದರೆ ಬೀದರ್ ಗಡಿಯ ಬೇರೆ ರಾಜ್ಯಗಳಲ್ಲಿ ಪ್ರಕಣ ದಾಖಲಾಗಿರುವ ಶಂಕೆ ಇದ್ದು ಇನ್ನು ಹೆಚ್ಚಿನ ವಿಚಾರಣೆ ನಡೆಸಲಾಗುತ್ತಿದೆ ಎಂದರು. ಮುಂದುವೆರೆದು ಮಾತನಾಡಿ, ಆರೋಪಿಗಳ ವಿರುದ್ದ ಈಗಾಗಲೇ ಮನ್ನಾಎಖೇಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕಣ ದಾಖಲಿಸಲಾಗಿದೆ.

ಈ ಪ್ರಕರಣದ ಕಾರ್ಯಚರಣೆಯಲ್ಲಿ ಭಾಗವಹಿಸಿದ ಅಧಿಕಾರಿ ಹಾಗೂ ಸಿಬ್ಬಂದಿಗಳಿಗೆ ತಲಾ ಒಂದು ಲಕ್ಷ ರೂಪಾಯಿಗಳ ಬಹುಮಾನ ಘೋಷಿಸಲಾಗಿದೆ ಎಂದರು.
ಏಪ್ರಿಲ್ 10ರಂದು ನಡೆಯುವ ಸಾರ್ವತ್ರಿಕ ವಿಧಾನಸಭೆ ಚುನಾವಣೆ-2023ನ್ನು ಶಾಂತಿಯುತವಾಗಿ ಹಾಗೂ ಯಾವುದೇ ಅಕ್ರಮ ನಡೆಯದಂತೆ ನೆರೆಯ ರಾಜ್ಯಗಳ ಪೊಲೀಸ್ ಇಲಾಖೆಯ ಸಹಕಾರ ಪಡೆಯಲಾಗುವುದು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಮಾಹಿತಿ ನೀಡಿದರು.

ಈ ಸಂದರ್ಭದಲ್ಲಿ ಹೆಚ್ಚುವರಿ ವರಿಷ್ಠಾಧಿಕಾರಿ ಚನ್ನಬಸವಣ್ಣ ಎಸ್.ಎಲ್, ಹೆಚ್ಚುವರಿ ಪೊಲೀಸ್ ಅಧಿಕ್ಷಕ ಮಹೇಶ ಮೇಘಣ್ಣನವರ, ಹುಮನಾಬಾದ ಸಹಾಯಕ ಪೊಲೀಸ್ ಅಧಿಕ್ಷಕ ಶಿವಾಂಶು ರಜಪುತ, ಚಿಟಗುಪ್ಪಾ ವೃತ್ತ ಸಿ.ಪಿ.ಐ ಮಹೇಶಗೌಡ ಪಾಟೀಲ್ ರವರ ಮಾರ್ಗದರ್ಶದಲ್ಲಿ ಮನ್ನಾಎಖೇಳ್ಳಿ ಪಿ.ಎಸ್.ಐ ಬಸವರಾಜ, ಚಿಟಗುಪ್ಪಾ ಪಿ.ಎಸ್.ಐ ಮಹೇಂದ್ರಕುಮಾರ, ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ಹಾಗೂ ಎಫ್.ಎಸ್.ಟಿ ತಂಡದ ಅಧಿಕಾರಿ ಧೂಳಪ್ಪಾ ಹೊಸಳ್ಳಿ ಹಾಗೂ ಸಿಬ್ಬಂದಿ ಸೇರಿದಂತೆ ಹಲವರು ಕಾರ್ಯಚರಣೆಯಲ್ಲಿ ಭಾಗಿಯಾಗಿದ್ದರು.

Tags: 100 kg ganjawasfound100kgganjaseizedAndhra PradeshBidarBidar UrbanbidarpoliceDistrict Superintendentillegal transportation of ganjaJahirabadMaharashtraNational Highway 65Tata Sumo vehicletransporting ganja
Previous Post

ಸುದೀಪ್‌, ಪ್ರಕಾಶ್‌ ರಾಜ್‌ ಇಬ್ಬರೂ ಜೂಜಿನ ಜಾಹೀರಾತಿನಿಂದ ಹಣ ಗಳಿಸಿದ್ದಾರೆ: ಚೇತನ್‌ ಅಹಿಂಸಾ

Next Post

ಎಸ್‌ ಡಿಪಿಐ ಮತ್ತು ಪಿಎಫ್‌ಐ ಕಾಂಗ್ರೆಸ್ ನ ಬಿ-ಟೀಂ ; ಸಂಸದ ತೇಜಸ್ವಿ ಸೂರ್ಯ ಆರೋಪ

Related Posts

“ಮುಂದಿನ 8 ವರ್ಷ ಡಿಕೆಶಿಯನ್ನು ಅಲ್ಲಾಡಿಸಲು ಆಗಲ್ಲ”: ರಾಜಗುರು ದ್ವಾರಕನಾಥ್ ಗುರೂಜಿ ಭವಿಷ್ಯ ವೈರಲ್! 
ಕರ್ನಾಟಕ

ರಾಜೀನಾಮೆ ಬಳಿಕ ಸಿದ್ದರಾಮಯ್ಯ ಭಾವುಕ ವಿದಾಯ ಭಾಷಣ: ಮಾತಾಡಿದ್ದೇನು

by ಪ್ರತಿಧ್ವನಿ
May 28, 2026
0

ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರಾಜ್ಯಪಾಲರ ಅನುಪಸ್ಥಿತಿಯಲ್ಲಿ ತಮ್ಮ ರಾಜೀನಾಮೆ ಪತ್ರವನ್ನು ರಾಜ್ಯಪಾಲರ ಕಾರ್ಯದರ್ಶಿಗೆ ಸಲ್ಲಿಸಿದ ಬಳಿಕ ನಡೆಸಿದ ಸುದ್ದಿಗೋಷ್ಠಿಯಲ್ಲಿ ಭಾವುಕ ವಿದಾಯ ಭಾಷಣ ಮಾಡಿದರು. ತಮ್ಮ...

Read moreDetails
“ಮುಂದಿನ 8 ವರ್ಷ ಡಿಕೆಶಿಯನ್ನು ಅಲ್ಲಾಡಿಸಲು ಆಗಲ್ಲ”: ರಾಜಗುರು ದ್ವಾರಕನಾಥ್ ಗುರೂಜಿ ಭವಿಷ್ಯ ವೈರಲ್! 

“ಮುಂದಿನ 8 ವರ್ಷ ಡಿಕೆಶಿಯನ್ನು ಅಲ್ಲಾಡಿಸಲು ಆಗಲ್ಲ”: ರಾಜಗುರು ದ್ವಾರಕನಾಥ್ ಗುರೂಜಿ ಭವಿಷ್ಯ ವೈರಲ್! 

May 28, 2026
ಕರ್ನಾಟಕ ರಾಜಕೀಯದಲ್ಲಿ ಮಹಾಪಲ್ಲಟ: ಸಿದ್ದರಾಮಯ್ಯ ರಾಜೀನಾಮೆ, ಡಿಕೆ ಶಿವಕುಮಾರ್ ನೂತನ ಸಿಎಂ?

ಕರ್ನಾಟಕ ರಾಜಕೀಯದಲ್ಲಿ ಮಹಾಪಲ್ಲಟ: ಸಿದ್ದರಾಮಯ್ಯ ರಾಜೀನಾಮೆ, ಡಿಕೆ ಶಿವಕುಮಾರ್ ನೂತನ ಸಿಎಂ?

May 28, 2026
ಸಿಎಂ ನಿವಾಸದಲ್ಲಿ ಉಪಹಾರ ರಾಜಕೀಯ: ಡಿಕೆಶಿ-ಸಿದ್ದರಾಮಯ್ಯ ಭೇಟಿ ಕುತೂಹಲ

ಮಧ್ಯಾಹ್ನ ಸಿದ್ದರಾಮಯ್ಯ ರಾಜೀನಾಮೆ ಘೋಷಣೆ: ಡಿಕೆಶಿ ಮುಂದಿನ ಸಿಎಂ ಬಹುತೇಕ ಖಚಿತ?

May 28, 2026
ಮೇ 28ರಂದೇ ಸಿಎಂ ಸ್ಥಾನ ತ್ಯಜಿಸುತ್ತಾರಾ ಸಿದ್ದರಾಮಯ್ಯ..? : ನೂತನ ಸಂಪುಟ ಹೇಗಿರಲಿದೆ..?

ರಾಜ್ಯಸಭೆ ಸ್ಥಾನಕ್ಕೆ ಸಿದ್ದರಾಮಯ್ಯ ನಿರಾಸಕ್ತಿ? ರಾಜ್ಯ ರಾಜಕೀಯದಲ್ಲೇ ಮುಂದುವರಿಯಲು ಸಿಎಂ ಮನಸ್ಸು!

May 28, 2026
Next Post
ಎಸ್‌ ಡಿಪಿಐ ಮತ್ತು ಪಿಎಫ್‌ಐ ಕಾಂಗ್ರೆಸ್ ನ ಬಿ-ಟೀಂ ; ಸಂಸದ ತೇಜಸ್ವಿ ಸೂರ್ಯ ಆರೋಪ

ಎಸ್‌ ಡಿಪಿಐ ಮತ್ತು ಪಿಎಫ್‌ಐ ಕಾಂಗ್ರೆಸ್ ನ ಬಿ-ಟೀಂ ; ಸಂಸದ ತೇಜಸ್ವಿ ಸೂರ್ಯ ಆರೋಪ

Please login to join discussion
https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada