ಬೆಂಗಳೂರು : ಏ.೦೮: ಇಲ್ಲಿನ ಬ್ಯಾಂಕುಗಳು ಮಣ್ಣು ಮುಕ್ಕಿಯಾಯಿತು. ಈಗ ನಮ್ಮ ರೈತರಿಗೆ, ಹೈನು ಉದ್ಯಮಕ್ಕೆ ವ್ಯವಸ್ಥಿತವಾಗಿ ಮಣ್ಣು ಹಾಕುವ ಅಜೆಂಡಾ ರೆಡಿಯಾಗಿದೆ. ಅದೆಷ್ಟೊ ಮನೆಗಳು ಇವತ್ತು ಹೈನುಗಾರಿಕೆಯಿಂದಲೇ ಸದೃಢವಾಗಿವೆ. ಸುಮಾರು 798 ಬಿಲಿಯನ್ ರೂಪಾಯಿಗಳಷ್ಟು ವ್ಯವಹಾರ 2021ರಲ್ಲೇ ದಾಖಲಿಸಿದೆ. 2027ರಷ್ಟರಲ್ಲಿ 1866.7 ಬಿಲಿಯನ್ ರೂಗಳಷ್ಟು ವಹಿವಾಟಿನ ನಿರೀಕ್ಷೆ ಇದೆಯಂತೆ.ಇದರಲ್ಲಿ ಸಿಂಹ ಪಾಲು ನಮ್ಮ ಕರ್ನಾಟಕ ಮಿಲ್ಕ್ ಫೆಡರೇಶನ್ ಆದ KMF ದು. ಸಾವಿರಾರು ಕನ್ನಡಿಗರಿಗೆ ಉದ್ಯೋಗದ ಮೂಲಕ ಬದುಕು ಕಟ್ಟಿಕೊಟ್ಟಿದೆ ಕೆಎಮ್ ಎಫ್. ಅಲ್ಲದೆ ಅನೇಕರಿಗೆ ಸ್ವಉದ್ಯೋಗಕ್ಕೊಂದು ದಾರಿಯಾಗಿಸಿದೆ. ಅದೆಷ್ಟೊ ಮನೆಯ ಮಕ್ಕಳ ಓದಿಗೆ ಆ ಮೂಲಕ ಬದುಕಿಗೆ ಬೆಳಕಾಗಿದೆ.
ನಾಳೆ ಕೆಎಮ್ ಎಫ್ ಕಳೆದುಕೊಂಡರೆ ಉದ್ಯೋಗ ಕಳೆದುಕೊಳ್ಳುವುದು ಕನ್ನಡಿಗರು. ಈಗೇನೊ ಅಮೂಲ್ ಅದೇ ಬೆಲೆಗೆ ಹಾಲು ಪ್ರಾಡಕ್ಟ್ ಗಳನ್ನ ಕೊಟ್ಟು ನಾಳೆ ಕೆಎಮ್ ಎಫ್ ಇಲ್ಲವಾದರೆ ದುಪ್ಪಟ್ಟು ಸುಲಿಯಲು ನಿಲ್ಲುವುದು ನಮ್ಮಿಂದಲೇ. ಜಿಯೊ ಮೋಡಿ ಮಾಡಿದ್ದು ಈಗ ಹೇಗಿದೆ ಯೋಚಿಸಿ!
ಮೊದಲು ನಮ್ಮ ಕೋಟೆ ಬಾಗಿಲು ಭದ್ರ ಪಡಿಸಿಕೊಳ್ಳೋಣ. ಮಾರುಕಟ್ಟೆಯಲ್ಲಿ ನಂದಿನಿ ಪ್ರಾಡಕ್ಟ್ ಗಳು ಮತ್ತೆ ಬರುತ್ತವೆನ್ನುತ್ತಾರೆ. ಅದಾಗಬೇಕಾದರೆ ಅಮೂಲ್ ನಂತಹ ದಾಳಿಕೋರರನ್ನು ಹೊರಗಿಡಲೇಬೇಕು. ನಾನಂತೂ ಅಮೂಲ್ ತೆಗೆದುಕೊಳ್ಳುವುದಿಲ್ಲ. ಈ ಮೂಲಕ ಕನ್ನಡಿಗರಾಗಿ ನಮ್ಮ ಕರ್ತವ್ಯ ನಾವು ಮಾಡೋಣ. ನೀವೂ ಕೈ ಜೋಡಿಸಿ. ಅಮೂಲ್ ಅನ್ನು ಹೊರಗೆ ಕಳುಹಿಸಿ ನಮ್ಮ ನಂದಿನಿಯನ್ನು ಉಳಿಸೋಣ.






