ಸ್ಯಾಂಡಲ್ವುಡ್ನ ಮ್ಯೂಸಿಕ್ ಮಾಂತ್ರಿಕ ಅರ್ಜುನ್ ಜನ್ಯಾ, ಆಕ್ಷನ್ ಕಟ್ ಹೇಳಲು ರೆಡಿಯಾಗಿದ್ದಾರೆ. ಹ್ಯಾಟ್ರಿಕ್ ಹೀರೋ ಶಿವರಾಜ್ಕುಮಾರ್ ನಟನೆಯ ʻ45ʼ ಸಿನಿಮಾವನ್ನ ಅರ್ಜುನ್ ಜನ್ಯಾ ನಿರ್ದೇಶನ ಮಾಡಲಿದ್ದಾರೆ. ʻ45ʼ ಸಿನಿಮಾ ಪ್ಯಾನ್ ಇಂಡಿಯಾ ಮಟ್ಟದಲ್ಲಿ ತಯಾರಾಗ್ತಿದ್ದು, ಈ ಚಿತ್ರದಲ್ಲಿ ಶಿವಣ್ಣ ಜೊತೆ ರಿಯಲ್ ಸ್ಟಾರ್ ಉಪೇಂದ್ರ ಕೂಡ ನಟಿಸಲಿದ್ದಾರೆ. ಹಾಗೆಯೇ ನಟ ರಾಜ್.ಬಿ.ಶೆಟ್ಟಿ ಕೂಡ ಈ ಚಿತ್ರದಲ್ಲಿ ಅಭಿನಯಿಸಲಿದ್ದಾರೆ. ಅರ್ಜುನ್ ಜನ್ಯಾ ಮೊದಲ ಪ್ರಯತ್ನದಲ್ಲೇ ದೊಡ್ಡ ಸ್ಟಾರ್ಗಳ ಸಿನಿಮಾವನ್ನ ನಿರ್ದೇಶಿಸುವ ಅವಕಾಶ ಪಡೆದುಕೊಂಡಿದ್ದಾರೆ. ʻ45ʼ ಸಿನಿಮಾಗೆ ಆಕ್ಷನ್ ಕಟ್ ಹೇಳುವುದರ ಜೊತೆಗೆ, ಅವರೇ ಸಂಗೀತ ನಿರ್ದೇಶನವನ್ನೂ ಸಹ ಮಾಡಲಿದ್ದಾರೆ.
ಸದ್ಯ ʻ45ʼ ಚಿತ್ರತಂಡ ನಾಯಕಿಯ ಹುಡುಕಾಟದಲ್ಲಿದ್ದು, ಅರ್ಜುನ್ ಜನ್ಯಾ ತಮ್ಮ ಸಿನಿಮಾಗೆ ಚೆನ್ನಾಗಿ ಕನ್ನಡ ಮಾತ್ನಾಡೋಕೆ ಬರೋ ಹುಡುಗಿಯನ್ನೇ ಹುಡುಕುತ್ತಿದ್ದಾರೆ. ಅರ್ಜುನ್ ಜನ್ಯಾ ತಮ್ಮ ಸಿನಿಮಾದ ಆಡಿಷನ್ಗೆ ಬರೋ ಯುವತಿಯನ್ನ ಅವರ ಅಭಿನಯದ ವಿಡಿಯೋ ಮತ್ತ ರೀಲ್ಸ್ ವಿಡಿಯೋ ಮೇಲ್ ಮಾಡ್ಬೇಕು ಅಂತ ಹೇಳಿದ್ದಾರೆ. ಯುವತಿಯರು ಆಡಿಷನ್ಗೆ ಬರೋ ಮೊದಲು ವಿಡಿಯೋವನ್ನ ಐಡಿಗೆ ಮೇಲ್ ಮಾಡ್ಬೇಕು ಅಂತ ತಿಳಿಸಿದ್ದಾರೆ. 45KannadaMovie@gmail.com ಐಡಿಗೆ ಮೇಲ್ ಮಾಡ್ಬೇಕು ಅಂತ ತಿಳಿಸಿದ್ದಾರೆ. ಇದರ ಹೊರತಾಗಿ ಅವರಿಗೆ ಕನ್ನಡ ಬರಲೇ ಬೇಕು ಅಂತಲೂ ಸೋಶಿಯಲ್ ಮೀಡಿಯಾ ಮೂಲಕ ತಿಳಿಸಿದ್ದಾರೆ.