• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Saturday, April 25, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home ರಾಜಕೀಯ

ವೀರಭದ್ರಪ್ಪ ಬಿಸ್ಲಳ್ಳಿ ಬರೆದ ಪುಸ್ತಕದಲ್ಲಿ ಏನೇನಿದೆ..?

ಕೃಷ್ಣ ಮಣಿ by ಕೃಷ್ಣ ಮಣಿ
March 16, 2023
in ರಾಜಕೀಯ
0
ವೀರಭದ್ರಪ್ಪ ಬಿಸ್ಲಳ್ಳಿ ಬರೆದ ಪುಸ್ತಕದಲ್ಲಿ ಏನೇನಿದೆ..?
Share on WhatsAppShare on FacebookShare on Telegram

2014 ರಲ್ಲಿ ಬಿಜೆಪಿ ಶಾಸಕ ಎಸ್​ ಎ ರಾಮದಾಸ್​ ‘ಪ್ರೇಮ’ ಪ್ರಕರಣವನ್ನು ಉಲ್ಲೇಖಿಸಿರುವ ಲೇಖಕ ವೀರಭದ್ರಪ್ಪ ಬಿಸ್ಲಳ್ಳಿ, 2016ರಲ್ಲಿ ಕಾಂಗ್ರೆಸ್​ ಶಾಸಕ ತನ್ವೀರ್​ ಸೇಠ್​ ಅರೆ ಹೊದಿಕೆ ಮಹಿಳೆಯರ ಚಿತ್ರ ವೀಕ್ಷಣೆ ಬಗ್ಗೆಯೂ ಪ್ರಸ್ತಾಪ ಮಾಡಿದ್ದಾರೆ. ಇನ್ನುಳಿದಂತೆ 2016 ರಲ್ಲಿ ಸಚಿವರಾಗಿದ್ದ ಹೆಚ್​ ವೈ ಮೇಟಿ ರಾಸಲೀಲೆ ಸಿಸಿಟಿವಿ ದೃಶ್ಯ, 2019 ರ ಸೆಕ್ಸ್ ಸಿಡಿಯಿಂದ ನಡುಗಿದ ವಿಧಾನಸಭೆ. 2019 ರಲ್ಲಿ ಬಿಜೆಪಿ ಶಾಸಕ ಅರವಿಂದ ಲಿಂಬಾವಳಿ ಸಲಿಂಗ ಕಾಮದ ವೀಡಿಯೋ, 2021 ರಲ್ಲಿ ಕಾಂಗ್ರೆಸ್ MLC ಪ್ರಕಾಶ್​ ರಾಥೋಡ್​​ರಿಂದ ಅಶ್ಲೀಲ ಫೋಟೋಗಳ ವೀಕ್ಷಣೆ, 2021ರಲ್ಲಿ ರಮೇಶ್ ಜಾರಕಿಹೊಳಿ ರಾಸಲೀಲೆ ವಿಡಿಯೋ, 2007ರಲ್ಲಿ ಬಿಜೆಪಿ ಶಾಸಕ ರೇಣುಕಾಚಾರ್ಯಗೆ ಚುಂಬಿಸಿದ ನರ್ಸ್​ ಜಯಲಕ್ಷ್ಮಿ ವಿಚಾರ, 2009ರಲ್ಲಿ ಸಚಿವರಾಗಿ ಹರತಾಳು ಹಾಲಪ್ಪರಿಂದ ಸ್ನೇಹಿತನ ಪತ್ನಿ ಮೇಲೆ ಅತ್ಯಾಚಾರ, 2012ರಲ್ಲಿ ಅಧಿವೇಶನದಲ್ಲೇ ನೀಲಿಚಿತ್ರ ವೀಕ್ಷಿಸಿದ ಬಿಜೆಪಿ ಮೂವರು ಸಚಿವರುಗಳು, 2013ರಲ್ಲಿ ಬಿಜೆಪಿ ಶಾಸಕ ರಘುಪತಿ ಭಟ್​ ಲೈಂಗಿಕ ಸಿಡಿ ಪ್ರಕರಣ, 2019 ರಾಜಭವನದಲ್ಲೇ 26 ತಿಂಗಳ ಕಾಲ ಏನೇನೋ ನಡೆಯಿತು ಎನ್ನುವ ಸಂಗತಿಗಳನ್ನೂ ವಿಸ್ತಾರವಾಗಿ ಬರೆಯಲಾಗಿದೆ.

ADVERTISEMENT

ಬಾಂಬೆಯಲ್ಲಿ ಚೆಂದುಟಿಯ ಚೆಲುವೆಯ ಮೋಹಜಾಲ

ಚೆನ್ನೈ ಮೂಲದ ಚಂದುಟಿಯ ಚೆಲುವೆಯಿಂದ ಮೋಹಜಾಲ ಹೆಣೆದಿದ್ದ ಬಗ್ಗೆ ಪುಸ್ತಕದಲ್ಲಿ ಉಲ್ಲೇಖವಿದೆ. ಚಲುವೆಯ ಮೋಹಜಾಲಕ್ಕೆ ಸಾತ್ ನೀಡಿದವರು ಹೈದರಾಬಾದ್​ನ ರಮಣ್​, ಬೆಂಗಳೂರಿನ ಶೇಖರ್​ಗೂ, ಹೈದರಾಬಾದ್​ನ ರಮಣ್​ಗೂ ಸ್ನೇಹ ಸಂಬಂಧವಿತ್ತು. ಚಂದಾವರದ ಚಲುವೆಯನ್ನು ಬಾಂಬೆಗೆ ಕಳುಹಿಸಲು ಪ್ಲಾನ್​ ಮಾಡಿದ್ದರು. ಮೆಜೆಸ್ಟಿಕ್​ನ ಲಾಡ್ಜ್​ವೊಂದರಲ್ಲಿ ಪ್ಲಾನ್ ಮಾಡಿದ ಬಳಿಕ ಕಾರಿನ ಮೂಲಕ ಕಳುಹಿಸಲಾಯ್ತು. ಮುಂಬೈಗೂ 20 ಕಿಲೋ ಮೀಟರ್ ದೂರದಲ್ಲಿ ಮಹಾರಾಷ್ಟ್ರ ಕಾರಿಗೆ ಶಿಫ್ಟ್ ಮಾಡಿದ್ದರು. ಬಾಂಬೆ ಪಂಚತಾರ ಹೊಟೇಲ್​ ಸೇರಿಕೊಂಡು ರಾಜಕಾರಣಿಗಳಿಗೆ ಮನರಂಜನೆ ನೀಡುವ ಕೆಲಸ ಮಾಡಲಾಯ್ತು ಎಂದು ಪುಸ್ತಕದಲ್ಲಿ ಸತ್ಯ ಸಂಗತಿಗಳನ್ನು ಬೆತ್ತಲೆ ಮಾಡಿದ್ದಾರೆ. ಮಂಚದಲ್ಲಿ ಹೊರಳಾಡಿದ ದೃಶ್ಯ ಕಾವ್ಯವನ್ನು ಪುಸ್ತಕ ಪಡೆದುಕೊಂಡಿದೆ.

‘ಬಾಂಬೆ ರಿಟರ್ನ್ ಡೇಸ್​’ ಪುಸ್ತಕದಲ್ಲಿ ಏನೆಲ್ಲಾ ಸೀಕ್ರೆಟ್​ ಇದೆ ಗೊತ್ತಾ..?

ಪುಸ್ತಕದಲ್ಲಿ ಬಂದು ಹೋದಳು ಚನ್ನಪಟ್ಟಣದ ನವ್ಯಶ್ರೀ..

ಅತೃಪ್ತ ಶಾಸಕರ ಮೇಲೆ ನಿಗಾ ಇಡಲು ನವ್ಯಶ್ರೀ ನಿಯೋಜನೆ ಆಗಿತ್ತು ಎನ್ನುವುದನ್ನು ಈ ಪುಸ್ತಕ ಬಯಲು ಮಾಡಿದೆ. ಈ ಹಿಂದೆ ನವ್ಯಶ್ರೀಯೇ ಹೇಳಿದಂತೆ ಬಾಂಬೆಯಲ್ಲಿದ್ದ ಶಾಸಕರ ಮೇಲೆ ಕಣ್ಣಿಡಲು ನವ್ಯಶ್ರೀಯನ್ನು ನಿಯೋಜನೆ ಮಾಡಲಾಗಿತ್ತು ಎಂದು ಪುಸ್ತಕದಲ್ಲಿ ಬರೆಯಲಾಗಿದೆ. ನವ್ಯಶ್ರೀ ಬಗ್ಗೆ ರಾಜಕಾರಣಿಗಳು ನಿಗಾ ಇಟ್ಟಿದ್ದರ ಬಗ್ಗೆ ಚನ್ನಪಟ್ಟಣದ ಪತ್ರಕರ್ತನಿಂದಲೇ ಮಾಹಿತಿ ಬಂದಿದ್ದು, ನವ್ಯಶ್ರೀ ಸೇರಿ ಮೂವರು ನಿಯೋಜಿತ ಮಹಿಳೆಯರಿಂದ ಬೇಹುಗಾರಿಕೆ ಮಾಡಲಾಗಿದೆಯಂತೆ. ಇನ್ನು ಕುಮಾರಕೃಪಾ ಗೆಸ್ಟ್​ಹೌಸ್​ನ ಗುಮಾಸ್ತ ಪಿಕಳೆಗೂ, ನವ್ಯಶ್ರೀಗೂ ಸಂಬಂಧವಿತ್ತು. ಮೊದಲಿಗೆ ಸ್ನೇಹಿತರಂತೆ ಇದ್ದವರು, ನಂತರ ದಂಪತಿಯಂತೆ ಓಡಾಡಿದ್ದರು. ಮದುವೆಯಾಗುವಂತೆ ಪಿಕಳೆಯನ್ನು ನವ್ಯಶ್ರೀ ಒತ್ತಾಯಿಸುತ್ತಿದ್ದಳು, ನವ್ಯಶ್ರೀ ಕಾಟ ತಡೆಯದೆ, ಪಿಕಳೆ ರೂಂನಲ್ಲಿ ಹೊಡೆದಿದ್ದ ಎಂದಿರುವ ಲೇಖಕರು, ಕುಮಾರಕೃಪಾದ ಎಲ್ಲಾ ಅಡ್ಡ ಕಸುಬುಗಳಿಗೆ ಪಿಕಳೆ ಹೆಡ್​ ಮಾಸ್ಟರ್​ ಎಂದಿದ್ದಾರೆ.

‘ಬಾಂಬೆ ರಿಟರ್ನ್​ ಡೇಸ್​’ ಡು ಆರ್​ ಡೈ ವಿಚಾರಗಳು..

ಬಾಂಬೆ ರಿಟರ್ನ್​ ಡೇಸ್​​ ಪುಸ್ತಕದಲ್ಲಿ ಬಾಂಬೆಯಲ್ಲಿ ನಡೆದಿರುವ ರಾಸಲೀಲೆಗಳ ಜೊತೆಗೆ ಹಲವಾರು ವಿಚಾರಗಳನ್ನು ಲೇಖಕ ಬೀರಭದ್ರಪ್ಪ ಬಿಸ್ಲಳ್ಳಿ ಉಲ್ಲೇಖಿಸಿದ್ದಾರೆ. ವಿವಾದ ಹುಟ್ಟು ಹಾಕೋಕೆ ಯಾವ ಸಾಚಾ ಲೇಖಕರು ಪುಸ್ತಕ ಬರೆಯೋದಿಲ್ಲ, ಲೇಖಕನಿಗೆ ಡು ಆರ್ ಡೈ ಪ್ರಸಂಗ ಪುಸ್ತಕ ಬರೆಯೋವಾಗ ಬರುತ್ತೆ. ಆರೋಗ್ಯಕರ ಸಮಾಜ ಲಕ್ಷಣ ಅಂದ್ರೆ ವ್ಯಂಗ್ಯಕ್ಕೆ, ಕಟುವಾಗಿರೋ ಅಂಶಗಳು ಬಂದಾಗ ಅದನ್ನ ಎದುರಿಸುವಂತಿರಬೇಕು. ಕೃತಿ ಬಂದಾಗ ಅಲ್ಲೊಲ್ಲ ಕಲ್ಲೋಲವಾದ್ರೆ ಅದು ಗಟ್ಟಿ ಸಮಾಜವಾಗಿರಲ್ಲ. ಸೃಜನಶೀಲ ಬರಹಗಾರನ ಶಕ್ತಿ ಹೆಚ್ವಿನಾದಾಗಿದೆ. ಸಮಕಾಲೀನವಾಗಿರೋ ರಾಜಕೀಯ ಏರಿಳಿತಗಳನ್ನ ಇಲ್ಲಿ‌ ಉಲ್ಲೇಖ ಮಾಡಿದ್ದಾರೆ ಎಂದಿದ್ದಾರೆ ಪ್ರೋ. ಜಯಪ್ರಕಾಶ್​. ಇನ್ನು ನಾಗರಾಜ್ ಬಾಬು ಮಾತನಾಡಿ, ವೀರಭದ್ರಪ್ಪ ಬಿಸ್ಲಳ್ಳಿ ಅವ್ರಿಗೆ ಅಭಿನಂದನೆಗಳು, ಇದು ಅವ್ರ 12 ನೇ ಕೃತಿಯಾಗಿದೆ. ಯಾವುದೇ ವಿಷಯದಲ್ಲಿ ಆಳವಾಗಿ ಹೋಗ್ತಾರೆ. ವಕೀಲರು ಹಾಗೂ ಪತ್ರಕರ್ತರು ಸಮಾಜದ ಮುಖಗಳಾಗಿವೆ. ಒಂದು ನಾಣ್ಯದ ಎರಡು ಮುಖದಂತೆ ಪತ್ರಕರ್ತರು ಹಾಗೂ ವಕೀಲರು ಎಂದು ಬಣ್ಣಿಸಿದ್ದಾರೆ.

ಮುಂದುವರಿಯುತ್ತದೆ…

Tags: BJPಬಿಜೆಪಿ
Previous Post

‘ಬಾಂಬೆ ರಿಟರ್ನ್ ಡೇಸ್​’ ಪುಸ್ತಕದಲ್ಲಿ ಏನೆಲ್ಲಾ ಸೀಕ್ರೆಟ್​ ಇದೆ ಗೊತ್ತಾ..?

Next Post

ನನ್ನ ಹಾಗೂ ಪುತ್ರನ ರಾಜಕೀಯಕ್ಕೆ ಬಿಎಸ್‌ವೈ, ವಿಜಯೇಂದ್ರ ತೊಡಕು: ಅಮಿತ್‌ ಶಾಗೆ ಸೋಮಣ್ಣ ದೂರು

Related Posts

ಒಳ ಮೀಸಲಾತಿ ಹಂಚಿಕೆ: ಸಂಪುಟ ಸಭೆಯಲ್ಲಿ ಮಹತ್ವದ ತೀರ್ಮಾನ
ರಾಜಕೀಯ

ಒಳ ಮೀಸಲಾತಿ ಹಂಚಿಕೆ: ಸಂಪುಟ ಸಭೆಯಲ್ಲಿ ಮಹತ್ವದ ತೀರ್ಮಾನ

by ಪ್ರತಿಧ್ವನಿ
April 24, 2026
0

ಬೆಂಗಳೂರು: ಒಳ ಮೀಸಲಾತಿ ಹಂಚಿಕೆ ಕುರಿತಂತೆ ರಾಜ್ಯ ಸರ್ಕಾರ ಮಹತ್ವದ ನಿರ್ಧಾರ ಕೈಗೊಂಡಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ನಡೆದ ವಿಶೇಷ ಸಂಪುಟ ಸಭೆಯಲ್ಲಿ ಪರಿಶಿಷ್ಟ ಜಾತಿಗಳ...

Read moreDetails
ದೆಹಲಿ ಭೇಟಿ ಕುರಿತು ಡಿಕೆ ಶಿವಕುಮಾರ್ ಗುಟ್ಟು ಮಾತು: ಹೈಕಮಾಂಡ್ ಭೇಟಿ ಸುಳಿವು

ದೆಹಲಿ ಭೇಟಿ ಕುರಿತು ಡಿಕೆ ಶಿವಕುಮಾರ್ ಗುಟ್ಟು ಮಾತು: ಹೈಕಮಾಂಡ್ ಭೇಟಿ ಸುಳಿವು

April 24, 2026
ಬೆಸ್ಕಾಂನ ‘ಹೆಚ್‌ಟಿ ಮಿತ್ರ’  ಪೋರ್ಟಲ್‌ಗೆ ಚಾಲನೆ ನೀಡಿದ ಇಂಧನ ಸಚಿವ ಕೆ.ಜೆ. ಜಾರ್ಜ್

ಬೆಸ್ಕಾಂನ ‘ಹೆಚ್‌ಟಿ ಮಿತ್ರ’ ಪೋರ್ಟಲ್‌ಗೆ ಚಾಲನೆ ನೀಡಿದ ಇಂಧನ ಸಚಿವ ಕೆ.ಜೆ. ಜಾರ್ಜ್

April 23, 2026
ಇನ್ನು ಮುಂದೆ ಬೆಂಗಳೂರು ಒನ್ ಕೇಂದ್ರಗಳಲ್ಲೂ ಇ-ಸ್ವತ್ತು ಅರ್ಜಿ ಸಲ್ಲಿಸಬಹುದು. ಸಚಿವ ಪ್ರಿಯಾಂಕ ಖರ್ಗೆ

ಇನ್ನು ಮುಂದೆ ಬೆಂಗಳೂರು ಒನ್ ಕೇಂದ್ರಗಳಲ್ಲೂ ಇ-ಸ್ವತ್ತು ಅರ್ಜಿ ಸಲ್ಲಿಸಬಹುದು. ಸಚಿವ ಪ್ರಿಯಾಂಕ ಖರ್ಗೆ

April 23, 2026
ಮಹಿಳಾ ಮೀಸಲಾತಿ ಡಿಎಂಕೆ ರಾಜಕೀಯ ಹುನ್ನಾರಕ್ಕೆ ರಾಜ್ಯದ ಹಿತ ಬಲಿ:ಬಸವರಾಜ ಬೊಮ್ಮಾಯಿ

ಮಹಿಳಾ ಮೀಸಲಾತಿ ಡಿಎಂಕೆ ರಾಜಕೀಯ ಹುನ್ನಾರಕ್ಕೆ ರಾಜ್ಯದ ಹಿತ ಬಲಿ:ಬಸವರಾಜ ಬೊಮ್ಮಾಯಿ

April 23, 2026
Next Post
ನನ್ನ ಹಾಗೂ ಪುತ್ರನ ರಾಜಕೀಯಕ್ಕೆ ಬಿಎಸ್‌ವೈ, ವಿಜಯೇಂದ್ರ ತೊಡಕು: ಅಮಿತ್‌ ಶಾಗೆ ಸೋಮಣ್ಣ ದೂರು

ನನ್ನ ಹಾಗೂ ಪುತ್ರನ ರಾಜಕೀಯಕ್ಕೆ ಬಿಎಸ್‌ವೈ, ವಿಜಯೇಂದ್ರ ತೊಡಕು: ಅಮಿತ್‌ ಶಾಗೆ ಸೋಮಣ್ಣ ದೂರು

Please login to join discussion
https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada