ಶಿವಮೊಗ್ಗ: ನಕ್ಸಲರ ಬೆನ್ನುಮೂಳೆ ಮುರಿದಿದ್ದು ಬಿಜೆಪಿ ಎಂದು ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿವೈ ವಿಜಯೇಂದ್ರ ಶಿವಮೊಗ್ಗದಲ್ಲಿಂದು ಹೇಳಿದರು.
ಯುವಮೋರ್ಚಾ ಸಮಾವೇಶದಲ್ಲಿ ಮಾತನಾಡಿ, ಭಾರತೀಯ ಜನತಾ ಪಕ್ಷ ಬರುವ ಮುನ್ನ ನಕ್ಸಲ್ ಸಂಬಂಧಿಸಿದ ಸುದ್ದಿಗಳು ರಾರಾಜಿಸುತ್ತಿದ್ದವು. ನಕ್ಸಲರು ದಾಳಿ ಮಾಡಿದರು, ನಕ್ಷಲರು ಹತ್ಯೆ ಮಾಡಿದರು, ಅಧಿಕಾರಿಗಳನ್ನು ಕಿಡ್ನಾಪ್ ಮಾಡಿದರು, ದರೋಡೆ ಮಾಡಿದರು ಎಂಬ ಸುದ್ದಿಗಳು ಬರುತ್ತಿದ್ದವು. ಆದರೆ ಕಳೆದ ಒಂಭತ್ತು ವರ್ಷಗಳಲ್ಲಿ ಯಾವುದೇ ಸುದ್ದಿ ಬರುತ್ತಿಲ್ಲ. ಕಾರಣ ಏನೆಂದರೆ ಭಾರತೀಯ ಜನತಾ ಪಾರ್ಟಿ ಸರ್ಕಾರ ನಕ್ಸಲಿಸಂ, ಬೆನ್ನು ಮೂಳೆ ಮುರಿದಿದ್ದು ಬಿಜೆಪಿ ಸರ್ಕಾರ ಅವರ ಸ್ಥಾನ ಏನು ಎಂದು ತೋರಿಸಿದ್ದು ನರೇಂದ್ರ ಮೋದಿ ಎಂದರು.
ಕಾಂಗ್ರೆಸ್ ಸರ್ಕಾರದಲ್ಲಿ ಪ್ರತಿದಿನ ಆದ್ದರಿಂದ 15km ರಸ್ತೆ ಅಭಿವೃದ್ಧಿ ಆಗುತ್ತಿತ್ತು. ನಮ್ಮ ಸರ್ಕಾರ ಬಂದ ಮೇಲೆ ದಿನಕ್ಕೆ 35 ರಿಂದ 36km ಅತ್ತೆ ಅಭಿವೃದ್ಧಿ ಆಗುತ್ತಿವೆ. ಭಾರತೀಯ ಜನತಾ ಪಾರ್ಟಿ ಗುರಿ ಮುಂದಿನ ಎರಡು ಮೂರು ವರ್ಷಗಳಲ್ಲಿ ಇಡೀ ದೇಶದಲ್ಲಿ 3 ಲಕ್ಷ ಕಿಲೋಮೀಟರ್ ರಸ್ತೆ ಅಭಿವೃದ್ಧಿ ಆಗಬೇಕು. ಶಿವಮೊಗ್ಗ ವಿಮಾನ ನಿಲ್ದಾಣ ಉದ್ಘಾಟನೆ ಸಮಯದಲ್ಲಿ ನಾಲ್ಕರಿಂದ ಐದು ಲಕ್ಷ ಜನ ಸೇರಿದ್ರು. ನರೇಂದ್ರ ಮೋದಿ ನೋಡಬೇಕು ಯಡಿಯೂರಪ್ಪ ಹುಟ್ಟು ಹಬ್ಬಕ್ಕೆ ಶುಭಾಶಯ ಕೋರಬೇಕು ಎಂದು ನೆರೆದಿದ್ದರು. ಕಾರಣ ಮೋದಿ ದೇಶವನ್ನು ಯಾವ ದಿಕ್ಕಿನಲ್ಲಿ ತೆಗೆದುಕೊಂಡು ಹೋಗುತ್ತಾರೆ. ರಾಜ್ಯ ಸರ್ಕಾರ ಯಾವ ರೀತಿ ಅಭಿವೃದ್ಧಿ ಕೆಲಸಗಳನ್ನು ಮಾಡುತ್ತಿದೆ..? ಅದಕ್ಕೆ ಇದು ಉತ್ತಮ ಉದಾಹರಣೆ. ರಾಜ್ಯದಲ್ಲಿ ಅತೀ ಹೆಚ್ಚು ಅಭಿವೃದ್ಧಿ ಜಿಲ್ಲೆ ಎಂದರೆ ಅದು ಶಿವಮೊಗ್ಗ. ಕಾಂಗ್ರೆಸ್ ಪಕ್ಷದ ಬಗ್ಗೆ ಯೋಚನೆ ಮಾಡಬೇಡಿ ಕಾಂಗ್ರೆಸ್ ಪಕ್ಷದ ಬಗ್ಗೆ ತಲೆಕೆಡಿಸಿಕೊಳ್ಳುವ ಅವಶ್ಯಕತೆ ಇಲ್ಲ. ಕಾಂಗ್ರೆಸ್ ಪಕ್ಷ ಆರುವ ದೀಪ ಇದ್ದಂಗೆ. ಆರುವ ಮೊದಲು ಜೋರಾಗಿ ಉರಿಯುತ್ತದೆ. ಇಡೀ ದೇಶದಲ್ಲಿ ಕಾಂಗ್ರೆಸ್ ಬುಡ ಸಮೇತ ಕಿತ್ತು ಬಿಸಾಡುವ ಕೆಲಸ ಜನರು ಮಾಡುತ್ತಿದ್ದಾರೆ ಎಂದರು.

ರಾಹುಲ್ ಗಾಂಧಿ ಪರಿಸ್ಥಿತಿ ಏನಾಗಿದೆ..? ಉತ್ತರಪ್ರದೇಶದ ಅಮೇಥಿಯಲ್ಲಿ ನಿಂತು ಗೆಲ್ಲುತ್ತಿದ್ದರು. ಅಂತಹ ರಾಹುಲ್ ಗಾಂಧಿಗೆ ಇವತ್ತಿನ ಪರಿಸ್ಥಿತಿ ಹೇಗಿದೆ..? ಪ್ರಧಾನಿ ಆಗಬೇಕು ಎಂದು ಕನಸು ಕಾಣುವ ರಾಹುಲ್ ಗಾಂಧಿ ಕೇರಳದ ವಯನಾಡು ಎಂಬ ಲೋಕಸಭಾ ಕ್ಷೇತ್ರದಲ್ಲಿ ಸ್ಪರ್ಧಿಸಿ ಗೆದ್ದಿದ್ದಾರೆ. ವಯನಾಡು ಕ್ಷೇತ್ರದ ವಿಶೇಷ ಏನು ಗೊತ್ತಾ..? ಅಲ್ಲಿ ಶೇಕಡ 50ರಷ್ಟು ಮುಸ್ಲಿಂ ಮತದಾರರು ಇದ್ದಾರೆ. ಶೇಕಡ 15ರಷ್ಟು ಕ್ರಿಶ್ಚಿಯನ್. ಇಲ್ಲಿನ ಅಲ್ಪಸಂಖ್ಯಾತರ, ಅಲ್ಲಿ ಬಹು ಸಂಖ್ಯಾತರಾಗಿದ್ದಾರೆ. ರಾಹುಲ್ ಗಾಂಧಿಯನ್ನು ಗೆಲ್ಲಿಸಿದ್ದಾರೆ. ಯಾವ ರೀತಿ ಉಗ್ರರು ಆಕ್ರಮಿತ ಕಾಶ್ಮೀರದಲ್ಲಿ ಅಡಗಿಕೊಳ್ಳುತ್ತಿದ್ದರು. ಹಾಗೆ ರಾಹುಲ್ ಗಾಂಧಿ ವಯನಾಡು ಕ್ಷೇತ್ರದಲ್ಲಿ ಬಂದು ಗೆಲ್ಲುತ್ತಿದ್ದಾರೆ. ಇದು ಕಾಂಗ್ರೆಸ್ ನ ಸಾಧಾರಣ ಪರಿಸ್ಥಿತಿ ಯಲ್ಲ. ತ್ರಿವಳಿ ತಲಾಕ್ ಪಡೆದದ್ದು ಬಿಜೆಪಿ. ಈ ಮೂಲಕ ಕಾಂಗ್ರೆಸ್ ನಿಂದ ಪಾಠ ಕಲಿಯುವ ಅವಶ್ಯಕತೆ ಇಲ್ಲ. ಕಾಂಗ್ರೆಸ್ ಪಕ್ಷ ಭ್ರಷ್ಟಾಚಾರದ ವಿರುದ್ಧ ಮಾತನಾಡುತ್ತಿದ್ದಾರೆ. ತಲೆಮಾರು ಗಳಷ್ಟು ಮಾಡಿಟ್ಟುಕೊಂಡು ಆರಾಮಾಗಿ ಓಡಾಡುತ್ತಿದ್ದಾರೆ. ಅವರಿಂದ ಭ್ರಷ್ಟಾಚಾರದ ಪಾಠ ಕಲಿಯುವ ಅವಶ್ಯಕತೆ ನಮಗಿಲ್ಲ.
ಸ್ವತಂತ್ರ ಬಂದಮೇಲೆ ಐವತ್ತು ಅರವತ್ತು ವರ್ಷಗಳ ಕಾಲ ಆಡಳಿತ ನಡೆಸಿದ್ರಲ್ಲ, ಯುವಜನತೆಗೆ ಶಕ್ತಿಯನ್ನು ಕೊಡುವ ಆಲೋಚನೆಯನ್ನು ಯಾಕೆ ಅಧಿಕಾರದಲ್ಲಿದ್ದಾಗ ಮಾಡಿಲ್ಲ ಎಂದು ವಿಜಯೇಂದ್ರ ಪ್ರಶ್ನಿಸಿದರು.
ಚುನಾವಣೆ ಎರಡು ತಿಂಗಳು ಮಾತ್ರ ಬಾಕಿ ಉಳಿದಿದೆ. 204 ಕ್ಷೇತ್ರಗಳಲ್ಲಿ ವಿವಿಧ ಮೋರ್ಚಾಗಳ ಸಮಾವೇಶ ಆಯೋಜನೆಯಾಗಿದೆ ಎಂದು ವಿಜಯೇಂದ್ರ ಹೇಳಿದರು.












