• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Monday, April 27, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home Top Story

ನಕ್ಸಲರ ಬೆ‌ನ್ನುಮೂಳೆ ಮುರಿದಿದ್ದೇವೆ: ವಿಜಯೇಂದ್ರ

ಪ್ರತಿಧ್ವನಿ by ಪ್ರತಿಧ್ವನಿ
March 11, 2023
in Top Story
0
‘ನಿಮ್ಮ ಹೆಸರಿಗೆ ಜೈಕಾರ ಹಾಕಿಸಿಕೊಳ್ಳಬೇಡಿ, ಪಕ್ಷಕ್ಕೆ ಜೈಕಾರ ಹಾಕಿಸಿ’ : ಸ್ವಪಕ್ಷೀಯರಿಗೆ ವಿಜಯೇಂದ್ರ ಟಾಂಗ್​
Share on WhatsAppShare on FacebookShare on Telegram

ADVERTISEMENT

ಶಿವಮೊಗ್ಗ: ನಕ್ಸಲರ ಬೆನ್ನುಮೂಳೆ‌ ಮುರಿದಿದ್ದು ಬಿಜೆಪಿ ಎಂದು ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿವೈ ವಿಜಯೇಂದ್ರ ಶಿವಮೊಗ್ಗದಲ್ಲಿಂದು ಹೇಳಿದರು.

ಯುವಮೋರ್ಚಾ ಸಮಾವೇಶದಲ್ಲಿ ಮಾತನಾಡಿ, ಭಾರತೀಯ ಜನತಾ ಪಕ್ಷ ಬರುವ ಮುನ್ನ ನಕ್ಸಲ್ ಸಂಬಂಧಿಸಿದ ಸುದ್ದಿಗಳು ರಾರಾಜಿಸುತ್ತಿದ್ದವು. ನಕ್ಸಲರು ದಾಳಿ ಮಾಡಿದರು, ನಕ್ಷಲರು ಹತ್ಯೆ ಮಾಡಿದರು, ಅಧಿಕಾರಿಗಳನ್ನು ಕಿಡ್ನಾಪ್ ಮಾಡಿದರು, ದರೋಡೆ ಮಾಡಿದರು ಎಂಬ ಸುದ್ದಿಗಳು ಬರುತ್ತಿದ್ದವು. ಆದರೆ ಕಳೆದ ಒಂಭತ್ತು ವರ್ಷಗಳಲ್ಲಿ ಯಾವುದೇ ಸುದ್ದಿ ಬರುತ್ತಿಲ್ಲ. ಕಾರಣ ಏನೆಂದರೆ ಭಾರತೀಯ ಜನತಾ ಪಾರ್ಟಿ ಸರ್ಕಾರ ನಕ್ಸಲಿಸಂ, ಬೆನ್ನು ಮೂಳೆ ಮುರಿದಿದ್ದು ಬಿಜೆಪಿ ಸರ್ಕಾರ ಅವರ ಸ್ಥಾನ ಏನು ಎಂದು ತೋರಿಸಿದ್ದು ನರೇಂದ್ರ ಮೋದಿ ಎಂದರು.

ಕಾಂಗ್ರೆಸ್ ಸರ್ಕಾರದಲ್ಲಿ ಪ್ರತಿದಿನ ಆದ್ದರಿಂದ 15km ರಸ್ತೆ ಅಭಿವೃದ್ಧಿ ಆಗುತ್ತಿತ್ತು. ನಮ್ಮ ಸರ್ಕಾರ ಬಂದ ಮೇಲೆ ದಿನಕ್ಕೆ 35 ರಿಂದ 36km ಅತ್ತೆ ಅಭಿವೃದ್ಧಿ ಆಗುತ್ತಿವೆ. ಭಾರತೀಯ ಜನತಾ ಪಾರ್ಟಿ ಗುರಿ ಮುಂದಿನ ಎರಡು ಮೂರು ವರ್ಷಗಳಲ್ಲಿ ಇಡೀ ದೇಶದಲ್ಲಿ 3 ಲಕ್ಷ ಕಿಲೋಮೀಟರ್ ರಸ್ತೆ ಅಭಿವೃದ್ಧಿ ಆಗಬೇಕು.‌ ಶಿವಮೊಗ್ಗ ವಿಮಾನ ನಿಲ್ದಾಣ ಉದ್ಘಾಟನೆ ಸಮಯದಲ್ಲಿ ನಾಲ್ಕರಿಂದ ಐದು ಲಕ್ಷ ಜನ ಸೇರಿದ್ರು. ನರೇಂದ್ರ ಮೋದಿ ನೋಡಬೇಕು ಯಡಿಯೂರಪ್ಪ ಹುಟ್ಟು ಹಬ್ಬಕ್ಕೆ ಶುಭಾಶಯ ಕೋರಬೇಕು ಎಂದು ನೆರೆದಿದ್ದರು. ಕಾರಣ ಮೋದಿ ದೇಶವನ್ನು ಯಾವ ದಿಕ್ಕಿನಲ್ಲಿ ತೆಗೆದುಕೊಂಡು ಹೋಗುತ್ತಾರೆ. ರಾಜ್ಯ ಸರ್ಕಾರ ಯಾವ ರೀತಿ ಅಭಿವೃದ್ಧಿ ಕೆಲಸಗಳನ್ನು ಮಾಡುತ್ತಿದೆ..? ಅದಕ್ಕೆ ಇದು ಉತ್ತಮ ಉದಾಹರಣೆ. ರಾಜ್ಯದಲ್ಲಿ ಅತೀ ಹೆಚ್ಚು ಅಭಿವೃದ್ಧಿ ಜಿಲ್ಲೆ ಎಂದರೆ ಅದು ಶಿವಮೊಗ್ಗ. ಕಾಂಗ್ರೆಸ್ ಪಕ್ಷದ ಬಗ್ಗೆ ಯೋಚನೆ ಮಾಡಬೇಡಿ ಕಾಂಗ್ರೆಸ್ ಪಕ್ಷದ ಬಗ್ಗೆ ತಲೆಕೆಡಿಸಿಕೊಳ್ಳುವ ಅವಶ್ಯಕತೆ ಇಲ್ಲ. ಕಾಂಗ್ರೆಸ್ ಪಕ್ಷ ಆರುವ ದೀಪ ಇದ್ದಂಗೆ. ಆರುವ ಮೊದಲು ಜೋರಾಗಿ ಉರಿಯುತ್ತದೆ. ಇಡೀ ದೇಶದಲ್ಲಿ ಕಾಂಗ್ರೆಸ್ ಬುಡ ಸಮೇತ ಕಿತ್ತು ಬಿಸಾಡುವ ಕೆಲಸ ಜನರು ಮಾಡುತ್ತಿದ್ದಾರೆ ಎಂದರು.

ರಾಹುಲ್ ಗಾಂಧಿ ಪರಿಸ್ಥಿತಿ ಏನಾಗಿದೆ..? ಉತ್ತರಪ್ರದೇಶದ ಅಮೇಥಿಯಲ್ಲಿ ನಿಂತು ಗೆಲ್ಲುತ್ತಿದ್ದರು.‌ ಅಂತಹ ರಾಹುಲ್ ಗಾಂಧಿಗೆ ಇವತ್ತಿನ ಪರಿಸ್ಥಿತಿ ಹೇಗಿದೆ..? ಪ್ರಧಾನಿ ಆಗಬೇಕು ಎಂದು ಕನಸು ಕಾಣುವ ರಾಹುಲ್ ಗಾಂಧಿ ಕೇರಳದ ವಯನಾಡು ಎಂಬ ಲೋಕಸಭಾ ಕ್ಷೇತ್ರದಲ್ಲಿ ಸ್ಪರ್ಧಿಸಿ ಗೆದ್ದಿದ್ದಾರೆ. ವಯನಾಡು ಕ್ಷೇತ್ರದ ವಿಶೇಷ ಏನು ಗೊತ್ತಾ..? ಅಲ್ಲಿ ಶೇಕಡ 50ರಷ್ಟು ಮುಸ್ಲಿಂ ಮತದಾರರು ಇದ್ದಾರೆ. ಶೇಕಡ 15ರಷ್ಟು ಕ್ರಿಶ್ಚಿಯನ್. ಇಲ್ಲಿನ ಅಲ್ಪಸಂಖ್ಯಾತರ, ಅಲ್ಲಿ ಬಹು ಸಂಖ್ಯಾತರಾಗಿದ್ದಾರೆ. ರಾಹುಲ್ ಗಾಂಧಿಯನ್ನು ಗೆಲ್ಲಿಸಿದ್ದಾರೆ. ಯಾವ ರೀತಿ ಉಗ್ರರು ಆಕ್ರಮಿತ ಕಾಶ್ಮೀರದಲ್ಲಿ ಅಡಗಿಕೊಳ್ಳುತ್ತಿದ್ದರು. ಹಾಗೆ ರಾಹುಲ್ ಗಾಂಧಿ ವಯನಾಡು ಕ್ಷೇತ್ರದಲ್ಲಿ ಬಂದು ಗೆಲ್ಲುತ್ತಿದ್ದಾರೆ. ಇದು ಕಾಂಗ್ರೆಸ್ ನ ಸಾಧಾರಣ ಪರಿಸ್ಥಿತಿ ಯಲ್ಲ. ತ್ರಿವಳಿ ತಲಾಕ್ ಪಡೆದದ್ದು ಬಿಜೆಪಿ. ಈ ಮೂಲಕ ಕಾಂಗ್ರೆಸ್ ನಿಂದ ಪಾಠ ಕಲಿಯುವ ಅವಶ್ಯಕತೆ ಇಲ್ಲ.‌ ಕಾಂಗ್ರೆಸ್ ಪಕ್ಷ ಭ್ರಷ್ಟಾಚಾರದ ವಿರುದ್ಧ ಮಾತನಾಡುತ್ತಿದ್ದಾರೆ. ತಲೆಮಾರು ಗಳಷ್ಟು ಮಾಡಿಟ್ಟುಕೊಂಡು ಆರಾಮಾಗಿ ಓಡಾಡುತ್ತಿದ್ದಾರೆ. ಅವರಿಂದ ಭ್ರಷ್ಟಾಚಾರದ ಪಾಠ ಕಲಿಯುವ ಅವಶ್ಯಕತೆ ನಮಗಿಲ್ಲ.

ಸ್ವತಂತ್ರ ಬಂದಮೇಲೆ ಐವತ್ತು ಅರವತ್ತು ವರ್ಷಗಳ ಕಾಲ ಆಡಳಿತ ನಡೆಸಿದ್ರಲ್ಲ, ಯುವಜನತೆಗೆ ಶಕ್ತಿಯನ್ನು ಕೊಡುವ ಆಲೋಚನೆಯನ್ನು ಯಾಕೆ ಅಧಿಕಾರದಲ್ಲಿದ್ದಾಗ ಮಾಡಿಲ್ಲ ಎಂದು ವಿಜಯೇಂದ್ರ ಪ್ರಶ್ನಿಸಿದರು.

ಚುನಾವಣೆ ಎರಡು ತಿಂಗಳು ಮಾತ್ರ ಬಾಕಿ ಉಳಿದಿದೆ. 204 ಕ್ಷೇತ್ರಗಳಲ್ಲಿ‌ ‌ ವಿವಿಧ ಮೋರ್ಚಾಗಳ ಸಮಾವೇಶ ಆಯೋಜನೆಯಾಗಿದೆ ಎಂದು ವಿಜಯೇಂದ್ರ ಹೇಳಿದರು.

Tags: ಬಿ.ವೈ.ವಿಜಯೇಂದ್ರಬಿಜೆಪಿ
Previous Post

ಆರ್.ಧ್ರುವನಾರಾಯಣ್ ಧಿಡೀರ್ ಸಾವು: ಕಾಂಗ್ರೆಸ್ ಪಾಳಯದಲ್ಲಿ ಶೋಕ

Next Post

ಬಿಜೆಪಿ ವಿಷಕಾರಿ ಸರ್ಪ, ಕಾರ್ಯಕರ್ತರನ್ನೇ ಕೊಲ್ಲುತ್ತೆ: ಸುರ್ಜೇವಾಲ

Related Posts

AI ಚಾಟ್‌ಬಾಟ್ ‘Grok’ ಆಯ್ಕೆ ಮಾಡಿದ ಪ್ರಧಾನಿ ಯಾರು?
Top Story

AI ಚಾಟ್‌ಬಾಟ್ ‘Grok’ ಆಯ್ಕೆ ಮಾಡಿದ ಪ್ರಧಾನಿ ಯಾರು?

by ಪ್ರತಿಧ್ವನಿ
April 27, 2026
0

ಕೃತಕ ಬುದ್ಧಿಮತ್ತೆ (AI) ಕ್ಷೇತ್ರದಲ್ಲಿ ಹೊಸ ಚರ್ಚೆಗೆ ಕಾರಣವಾಗಿರುವ ಬೆಳವಣಿಗೆಯೊಂದರಲ್ಲಿ, Grok ಎಂಬ ಚಾಟ್‌ಬಾಟ್ ಭಾರತದ ಪ್ರಧಾನಿ ಯಾರು ಆಗಬೇಕು ಎಂಬ ಪ್ರಶ್ನೆಗೆ ನೀಡಿದ ಉತ್ತರ ರಾಜಕೀಯ...

Read moreDetails
ಟ್ರಂಪ್ ಮೇಲೆ ಹತ್ಯೆ ಯತ್ನ: ಆರೋಪಿ ಬಂಧನ : ಯಾರಾತ ?  ಕೋಲೆ ಯತ್ನಕ್ಕೆ ಏನು ಕಾರಣ ?

ಟ್ರಂಪ್ ಮೇಲೆ ಹತ್ಯೆ ಯತ್ನ: ಆರೋಪಿ ಬಂಧನ : ಯಾರಾತ ?  ಕೋಲೆ ಯತ್ನಕ್ಕೆ ಏನು ಕಾರಣ ?

April 26, 2026
150 ವರ್ಷ ಆಯುಷ್ಯದ ಕನಸು: ಪುಟಿನ್ ಅಮರತ್ವ ಯೋಜನೆಗೆ ರಷ್ಯಾದ ‘RAGE’ ಜೀನ್ ಚಿಕಿತ್ಸೆ ಸಂಶೋಧನೆ!

150 ವರ್ಷ ಆಯುಷ್ಯದ ಕನಸು: ಪುಟಿನ್ ಅಮರತ್ವ ಯೋಜನೆಗೆ ರಷ್ಯಾದ ‘RAGE’ ಜೀನ್ ಚಿಕಿತ್ಸೆ ಸಂಶೋಧನೆ!

April 26, 2026
ಡೊನಾಲ್ಡ್ ಟ್ರಂಪ್ ಮೇಲೆ ಗುಂಡಿನ ದಾಳಿ: ಅಮೆರಿಕ ರಾಜಕೀಯದಲ್ಲಿ ಆತಂಕ

ಡೊನಾಲ್ಡ್ ಟ್ರಂಪ್ ಮೇಲೆ ಗುಂಡಿನ ದಾಳಿ: ಅಮೆರಿಕ ರಾಜಕೀಯದಲ್ಲಿ ಆತಂಕ

April 26, 2026
ಡಾ. ರಾಜ್‌ಕುಮಾರ್ ಜಯಂತಿ ಸಂಭ್ರಮದ ನಡುವೆ ಚೇತನ್ ಅಹಿಂಸ ಹೇಳಿಕೆಗೆ ವಿವಾದ

ಲಕ್ಷ್ಮಣ ಸವದಿ ಎದುರೇ ಅವರ ಆಪ್ತನ ಅಕಾಲಿಕ ನಿಧನ

April 24, 2026
Next Post
ಬಿಜೆಪಿ ವಿಷಕಾರಿ ಸರ್ಪ, ಕಾರ್ಯಕರ್ತರನ್ನೇ ಕೊಲ್ಲುತ್ತೆ: ಸುರ್ಜೇವಾಲ

ಬಿಜೆಪಿ ವಿಷಕಾರಿ ಸರ್ಪ, ಕಾರ್ಯಕರ್ತರನ್ನೇ ಕೊಲ್ಲುತ್ತೆ: ಸುರ್ಜೇವಾಲ

Please login to join discussion
https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada