ಮುಂಬೈ: ಖ್ಯಾತ ಗಾಯಕ ಸೋನು ನಿಗಮ್ (Sonu Nigam) ಮತ್ತು ತಂಡದವರ ಮೇಲೆ ಹಲ್ಲೆ ಸೋಮವಾರ ರಾತ್ರಿ ಮುಂಬೈಯ (Mumbai) ಚೆಂಬೂರು (Chembur)ನಲ್ಲಿ ಸಂಗೀತ ಕಾರ್ಯಕ್ರಮವೊಂದರಲ್ಲಿ ಹಲ್ಲೆ ನಡೆದಿದೆ.
ವ್ಯಕ್ತಿಯೊಬ್ಬ ಸೋನು ನಿಗಮ್ ಮತ್ತು ತಂಡದವರ ಮೇಲೆ ಹಲ್ಲೆ ಮಾಡಿ ಅವರನ್ನು ವೇದಿಕೆಯಿಂದ ತಳ್ಳುತ್ತಿರುವ ವಿಡಿಯೋ ಸಾಮಾಜಿಕ ಮಾಧ್ಯಮ(Social Media)ಗಳಲ್ಲಿ ಹರಿದಾಡಿದೆ.
ಘಟನೆ ಸಂಬಂಧ ಮುಂಬೈಯ ಚೆಂಬೂರು ಪೊಲೀಸ್ ಠಾಣೆಯಲ್ಲಿ ಸೋನು ನಿಗಮ್ ಪ್ರಕರಣದ ದಾಖಲಿಸಿದ್ದಾರೆ. ಪೊಲೀಸರು ವ್ಯಕ್ತಿಯೊಬ್ಬನ ಮೇಲೆ ಸೋನು ನಿಗಮ್ ನೀಡಿದ ದೂರಿನ ಪ್ರಕಾರ ಐಪಿಸಿ ಸೆಕ್ಷನ್ 323 (ಸ್ವಯಂಪ್ರೇರಿತವಾಗಿ ನೋವುಂಟುಮಾಡುವ ಶಿಕ್ಷೆ), 341 (ತಪ್ಪು ಸಂಯಮ), ಮತ್ತು 337 (ಇತರರ ಜೀವ ಅಥವಾ ವೈಯಕ್ತಿಕ ಸುರಕ್ಷತೆಗೆ ಅಪಾಯವನ್ನುಂಟುಮಾಡುವ ಕೃತ್ಯದಿಂದ ನೋವುಂಟುಮಾಡುವುದು) ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

ಚೆಂಬೂರು ಉತ್ಸವದಲ್ಲಿ ಸೋನು ನಿಗಮ್ ಸಂಗೀತ ಕಾರ್ಯಕ್ರಮ ನಡೆಯುತ್ತಿತ್ತು. ಈ ವೇಳೆ ಅವರ ಜತೆ ಸೆಲ್ಫಿ ತೆಗೆಸಿಕೊಳ್ಳಲು ಅಭಿಮಾನಿಗಳು ಮುಗಿಬಿದ್ದಿದ್ದಾರೆ.
“ಸೋನು ನಿಗಮ್ ವೇದಿಕೆಯಿಂದ ಕೆಳಗಿಳಿಯುತ್ತಿದ್ದಾಗ ಕೆಲವರು ಸೆಲ್ಫಿ ತೆಗೆದುಕೊಳ್ಳಲು ಮುಂದಾದರು, ಆ ಸಮಯದಲ್ಲಿ ಅಂಗರಕ್ಷಕರು ಆ ಜನರನ್ನು ತಳ್ಳಲು ಪ್ರಯತ್ನಿಸಿದರು, ಈ ವೇಳೆ ಅಕಸ್ಮಾತಾಗಿ ಸೋನು ನಿಗಮ್ ತಂಡದ ಒಬ್ಬ ವ್ಯಕ್ತಿಯನ್ನು ತಳ್ಳಲಾಯಿತು, ಅಪಾಯವೇನೂ ಆಗಿಲ್ಲ” ಎಂದು ಶಿವಸೇನೆ ನಾಯಕ ಪ್ರಕಾಶ್ ಫಾಟರ್ ಪೇಕರ್ ಹೇಳಿದ್ದಾರೆ.
ಈತನ್ಮಧ್ಯೆ ಫಾಟರ್ ಪೇಕರ್ ಅವರ ಮಗ ತಮ್ಮ ಮ್ಯಾನೇಜರ್ ನೊಂದಿಗೆ ಅನುಚಿತವಾಗಿ ವರ್ತಿಸಿ, ವೇದಿಕೆಯಿಂದ ಹೊರಹೋಗುವಂತೆ ಹೇಳಿದರು ಎಂದು ಸೋನು ನಿಗಮ್ ಅವರ ತಂಡವು ಆರೋಪಿಸಿದೆ.
“ಸೋನು ನಿಗಮ್ ಕಾರ್ಯಕ್ರಮ ಮುಗಿಸಿ ವೇದಿಕೆಯಿಂದ ಕೆಳಗೆ ಬರುತ್ತಿದ್ದಾಗ ಶಾಸಕರ ಪುತ್ರ ಮೊದಲು ಸೋನು ನಿಗಮ್ ಅವರ ಅಂಗರಕ್ಷಕ ಹರಿಯನ್ನು ತಳ್ಳಿ ನಂತರ ಸೋನು ಅವರನ್ನು ತಳ್ಳಿದ್ದಾರೆ. ಈ ವೇಳೆ ರಬ್ಬಾನಿ ಖಾನ್ ಕೂಡ ಇದ್ದರು. ಗಲಾಟೆಯಲ್ಲಿ ಅವರು ವೇದಿಕೆಯಿಂದ ಕೆಳಗೆ ಬಿದ್ದಿದ್ದಾರೆ. ಹಲವು ಗಾಯಗಳಾಗಿದ್ದು, ತಕ್ಷಣವೇ ಅವರನ್ನು ಚೆಂಬೂರಿನ ಝೆನ್ ಆಸ್ಪತ್ರೆಗೆ ಕರೆದೊಯ್ಯಲಾಯಿತು” ಎಂದು ಅವರು ಹೇಳಿದರು.






