ರಾಜ್ಯ ಬಿಜೆಪಿ ಸರ್ಕಾರದ ಕ್ರಿಮಿನಲ್ ಕನೆಕ್ಷನ್ ಬಳಿಕ ಮತ್ತೊಂದು ಹಗರಣ ಬಯಲಾಗಿದ್ದು ವೇಶ್ಯಾವಾಟಿಕೆಯ ಕಿಂಗ್‌ಪಿನ್ ಮಂಜುನಾಥ ಅಲಿಯಾಸ್ ಸ್ಯಾಂಟ್ರೋ ರವಿ ಜೊತೆ ಸಚಿವರ ಲಿಂಕ್ ಇರುವುದು ಬಟಾ ಬಯಲಾಗಿದೆ.
ಇನ್ನು ಈ ಕುರಿತು ಪ್ರತಿಕ್ರಿಯಿಸಿರುವ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ನಾನು ಸಿ.ಟಿ.ರವಿ ನನಗೆ ಸ್ಯಾಂಟ್ರೋ ರವಿ ಯಾರೆಂದು ತಿಳಿದಿಲ್ಲ ಸಾರ್ವಜನಿಕ ಜೀವನದಲ್ಲಿ ಯಾರ್‌ಯಾರೋ ನಮ್ಮ ಜೊತೆ ಫೋಟೋ ತೆಗೆಸಿಕೊಳ್ಳುತ್ತಾರೆ ಅವರೊಂದಿಗೆ ಸಂಬಂಧ ಕಲ್ಪಿಸಲು ಸಾಧ್ಯವೇ ಎಂದು ಕೇಳಿದ್ದಾರೆ.
ಹಾಗೇ ನೋಡಿದರೆ ಐಎಂಎ ಪ್ರಕರಣದ ಪ್ರಮುಖ ಆರೋಪಿ ಮನ್ಸೂರ್ ಅಲಿ ಖಾನ್ ಜೊತೆ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ತೆಗೆಸಿಕೊಂಡಿದ್ದಾರೆ ಹಾಗೆಂದ ಮಾತ್ರಕ್ಕೆ ಅವರನ್ನ ಪ್ರಕರಣದ ಎರಡನೇ ಕಿಂಗ್‌ಪಿನ್ ಎಂದು ಹೇಳಲು ಸಾಧ್ಯವೇ ಎಂದು ಪ್ರಶ್ನಿಸಿದ್ದಾರೆ.
