• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Sunday, April 26, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home ದೇಶ

ಉತ್ತರಾಖಂಡ; ರೈಲ್ವೆ ಜಮೀನಿನಲ್ಲಿರುವ ವಸತಿಗಳ ತೆರವಿಗೆ ಹೈಕೋರ್ಟ್ ಆದೇಶ, ಭಯದಲ್ಲಿ 4,365 ಕುಟುಂಬಗಳು

ಪ್ರತಿಧ್ವನಿ by ಪ್ರತಿಧ್ವನಿ
January 2, 2023
in ದೇಶ
0
ಉತ್ತರಾಖಂಡ; ರೈಲ್ವೆ ಜಮೀನಿನಲ್ಲಿರುವ ವಸತಿಗಳ ತೆರವಿಗೆ ಹೈಕೋರ್ಟ್ ಆದೇಶ, ಭಯದಲ್ಲಿ 4,365 ಕುಟುಂಬಗಳು
Share on WhatsAppShare on FacebookShare on Telegram

ಉತ್ತರಾಖಂಡ ರಾಜ್ಯದಲ್ಲಿ ಮುಸ್ಲಿಂ ಪ್ರಾಬಲ್ಯವಿರುವ ಗಫೂರ್ ಬಸ್ತಿಯ ಹಲ್ದ್ವಾನಿ ರೈಲ್ವೆ ನಿಲ್ದಾಣದ ಪಕ್ಕದ ರೈಲ್ವೆ ಜಮೀನಿನಲ್ಲಿರುವ ಅನಧಿಕೃತ ವಸತಿಗಳನ್ನು ತೆರವುಗೊಳಿಸಲು ಹೈಕೋರ್ಟ್‌ ಆದೇಶ ನೀಡಿದೆ. ತೆರವು ಪ್ರಕ್ರಿಯೆಯಿಂದ ನಿರಾಶ್ರಿತಗೊಳ್ಳಲಿರುವ ಆತಂಕದಲ್ಲಿರುವ ನೂರಾರು ಮುಸ್ಲಿಂ ಕುಟುಂಬಗಳು ಉತ್ತರಾಖಂಡ್ ಹೈಕೋರ್ಟ್‌ನ ಆದೇಶದ ವಿರುದ್ಧ ಪ್ರತಿಭಟನೆ ನಡೆಸುತ್ತಿವೆ.

ADVERTISEMENT

ಕಳೆದ ವಾರ ಹಲ್ದ್ವಾನಿಯ ಬನ್‌ಭೂಲ್‌ಪುರದಲ್ಲಿ ಅತಿಕ್ರಮಣಗೊಂಡಿರುವ ರೈಲ್ವೇ ಭೂಮಿ ಮೇಲಿನ ನಿರ್ಮಾಣಗಳನ್ನು ಕೆಡವಲು ಉತ್ತರಾಖಂಡ ಹೈಕೋರ್ಟ್ ಆದೇಶ ನೀಡಿತ್ತು. ನ್ಯಾಯಾಧೀಶರಾದ ಶರದ್ ಶರ್ಮಾ ಮತ್ತು ಆರ್‌ಸಿ ಖುಲ್ಬೆ ಅವರನ್ನೊಳಗೊಂಡ ವಿಭಾಗೀಯ ನ್ಯಾಯಪೀಠವು ಅಲ್ಲಿನ ನಿವಾಸಿಗಳಿಗೆ ಒಂದು ವಾರದ ನೋಟಿಸ್ ನೀಡಿ ನಂತರ ನಿರ್ಮಾಣಗಳನ್ನು ನೆಲಸಮಗೊಳಿಸಬೇಕು ಎಂದು ಸಂಬಂಧಪಟ್ಟ ಇಲಾಖೆಗೆ ನಿರ್ದೇಶನ ನೀಡಿದೆ.

ಬಂಭೂಲ್ಪುರದಲ್ಲಿ 29 ಎಕರೆ ರೈಲ್ವೆ ಭೂಮಿಯಲ್ಲಿ ಹರಡಿರುವ ಈ ಪ್ರದೇಶದಲ್ಲಿ ಮಸೀದಿಗಳು, ಶಾಲೆಗಳು, ವ್ಯಾಪಾರ ಸಂಸ್ಥೆಗಳು ಮತ್ತು ನಿವಾಸಗಳಿವೆ. ಹೈಕೋರ್ಟ್‌ನ ಈ ಆದೇಶವು ಬಹುತೇಕ 4,300 ಕ್ಕೂ ಅಧಿಕ ಮುಸ್ಲಿಂ ಕುಟುಂಬಗಳ ಮೇಲೆ ಪರಿಣಾಮ ಬೀರಲಿದೆ ಎಂದು ಹೇಳಲಾಗಿದೆ.

ಈ ನಡುವೆ, ಏಳು ದಶಕಗಳಿಗಿಂತಲೂ ನೆಲೆಸಿರುವ ಇಷ್ಟು ಕುಟುಂಬಗಳನ್ನು ಒಕ್ಕಲೆಬ್ಬಿಸುವ ಕುರಿತು ಮುಸ್ಲಿಂ ಸಂಘಟನೆಗಳು ತೀವ್ರ ಕಳವಳ ವ್ಯಕ್ತಪಡಿಸಿದೆ. ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ಜಮೀಯತ್ ಉಲಮಾ-ಎ-ಹಿಂದ್ ಮುಖಂಡರು ಕುಟುಂಬಗಳ ಬೆಂಬಲಕ್ಕೆ ನಿಂತಿದ್ದಾರೆ.

ಆಲ್ ಇಂಡಿಯಾ ಮಜ್ಲಿಸ್-ಎ-ಇತಿಹಾದ್ ಉಲ್ ಮುಸ್ಲಿಮೀನ್ (ಎಐಎಂಐಎಂ) ನ ಉತ್ತರಾಖಂಡದ ರಾಜ್ಯಾಧ್ಯಕ್ಷ ಡಾ.ನಯ್ಯರ್ ಕಜ್ಮಿ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಅವರಿಗೆ ಬರೆದ ಪತ್ರದಲ್ಲಿ, ಏಳು ದಶಕಗಳಿಗೂ ಹೆಚ್ಚು ಕಾಲ 4,500 ಕ್ಕೂ ಹೆಚ್ಚು ಕುಟುಂಬಗಳು ಇಲ್ಲಿ ವಾಸಿಸುತ್ತಿವೆ. ಮನೆ ತೆರಿಗೆಗಳನ್ನು ಕಟ್ಟಿಕೊಂಡು ಬಂದಿರುವ ಆ ಕುಟುಂಬಗಳಿಗೆ ವಿದ್ಯುತ್ ಸಂಪರ್ಕಗಳು, ಜಲ ಸಂಪರ್ಕಗಳು ಮತ್ತು ಇತರ ವಸತಿ ಸೌಕರ್ಯವನ್ನು ಹೊಂದಿವೆ. ಅವರನ್ನು ಅಲ್ಲಿಂದ ಬೇರೆ ವ್ಯವಸ್ಥೆ ಮಾಡಿಕೊಡದೆ ಒಕ್ಕಲೆಬ್ಬಿಸಬಾರದು ಎಂದು ಹೇಳಿದ್ದಾರೆ.

ವರದಿಗಳ ಪ್ರಕಾರ, 2016 ರಲ್ಲಿ ಆರ್‌ಎಸ್‌ಎಸ್ ಬೆಂಬಲಿಗ ರವಿಶಂಕರ್ ಜೋಶಿ ಅವರು ಈ ಮುಸ್ಲಿಂ ಕುಟುಂಬಗಳ ವಿರುದ್ಧ ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆಯನ್ನು ಸಲ್ಲಿಸಿದ್ದರು.

https://twitter.com/IAMCouncil/status/1609066929767219201
Tags: BJPCongress Partyನರೇಂದ್ರ ಮೋದಿಬಿಜೆಪಿ
Previous Post

Padavi Poorva Movie Review: ಪದವಿಪೂರ್ವ ಚಿತ್ರ ವೀಕ್ಷಿಸಿದ ಶಾಮನೂರು ಶಿವಶಂಕರಪ್ಪ ಕುಟುಂಬ | Pratidhvani

Next Post

Padavi Poorva Movie : ಪದವಿ ಪೂರ್ವ ಸಿನಿಮಾಗೆ ಅಂದು.. ಲೆಜೆಂಡ್ಸ್‌ ಭವಿಷ್ಯ ನುಡಿದಿದ್ರು… | Pratidhvani

Related Posts

ಬೆಸ್ಕಾಂನ ‘ಹೆಚ್‌ಟಿ ಮಿತ್ರ’  ಪೋರ್ಟಲ್‌ಗೆ ಚಾಲನೆ ನೀಡಿದ ಇಂಧನ ಸಚಿವ ಕೆ.ಜೆ. ಜಾರ್ಜ್
Top Story

ಬೆಸ್ಕಾಂನ ‘ಹೆಚ್‌ಟಿ ಮಿತ್ರ’ ಪೋರ್ಟಲ್‌ಗೆ ಚಾಲನೆ ನೀಡಿದ ಇಂಧನ ಸಚಿವ ಕೆ.ಜೆ. ಜಾರ್ಜ್

by ಪ್ರತಿಧ್ವನಿ
April 23, 2026
0

ಬೆಂಗಳೂರು: ಬೆಸ್ಕಾಂನ ಹೈ ಟೆನ್ಷನ್ ಗ್ರಾಹಕರಿಗಾಗಿ ಸಂಸ್ಥೆಯ ಇಂಜಿನಿಯರ್‌ಗಳು ಅಭಿವೃದ್ಧಿಪಡಿಸಿರುವ ಸೇವೆ ಕೋರಿಕೆ/ಕುಂದುಕೊರತೆ ಪರಿಹಾರ ಪೋರ್ಟಲ್ 'ಹೆಚ್‌ಟಿ ಮಿತ್ರ'ಗೆ ಇಂಧನ ಸಚಿವ ಕೆ.ಜೆ. ಜಾರ್ಜ್ ಅವರು ಗುರುವಾರ...

Read moreDetails
ಇನ್ನು ಮುಂದೆ ಬೆಂಗಳೂರು ಒನ್ ಕೇಂದ್ರಗಳಲ್ಲೂ ಇ-ಸ್ವತ್ತು ಅರ್ಜಿ ಸಲ್ಲಿಸಬಹುದು. ಸಚಿವ ಪ್ರಿಯಾಂಕ ಖರ್ಗೆ

ಇನ್ನು ಮುಂದೆ ಬೆಂಗಳೂರು ಒನ್ ಕೇಂದ್ರಗಳಲ್ಲೂ ಇ-ಸ್ವತ್ತು ಅರ್ಜಿ ಸಲ್ಲಿಸಬಹುದು. ಸಚಿವ ಪ್ರಿಯಾಂಕ ಖರ್ಗೆ

April 23, 2026
ಮಹಿಳಾ ಮೀಸಲಾತಿ ಡಿಎಂಕೆ ರಾಜಕೀಯ ಹುನ್ನಾರಕ್ಕೆ ರಾಜ್ಯದ ಹಿತ ಬಲಿ:ಬಸವರಾಜ ಬೊಮ್ಮಾಯಿ

ಮಹಿಳಾ ಮೀಸಲಾತಿ ಡಿಎಂಕೆ ರಾಜಕೀಯ ಹುನ್ನಾರಕ್ಕೆ ರಾಜ್ಯದ ಹಿತ ಬಲಿ:ಬಸವರಾಜ ಬೊಮ್ಮಾಯಿ

April 23, 2026
ಸಂವಿಧಾನದ ಅಶಯಗಳು -ಬಾಬು ಜಗಜೀವನ್‌ರಾಮ್‌-

ಸಂವಿಧಾನದ ಅಶಯಗಳು -ಬಾಬು ಜಗಜೀವನ್‌ರಾಮ್‌-

April 23, 2026
ರಾಜಕಾರಣಿಗಳಿಂದ ರಸ್ತೆ ತಡೆ ಮಾಡಿಸಿ ಪ್ರತಿಭಟನೆ : ಕೆರಳಿತು ಸಾರ್ವಜನಿಕರ ತಾಳ್ಮೆ..!

ರಾಜಕಾರಣಿಗಳಿಂದ ರಸ್ತೆ ತಡೆ ಮಾಡಿಸಿ ಪ್ರತಿಭಟನೆ : ಕೆರಳಿತು ಸಾರ್ವಜನಿಕರ ತಾಳ್ಮೆ..!

April 22, 2026
Next Post
Padavi Poorva Movie : ಪದವಿ ಪೂರ್ವ ಸಿನಿಮಾಗೆ ಅಂದು.. ಲೆಜೆಂಡ್ಸ್‌ ಭವಿಷ್ಯ ನುಡಿದಿದ್ರು… | Pratidhvani

Padavi Poorva Movie : ಪದವಿ ಪೂರ್ವ ಸಿನಿಮಾಗೆ ಅಂದು.. ಲೆಜೆಂಡ್ಸ್‌ ಭವಿಷ್ಯ ನುಡಿದಿದ್ರು... | Pratidhvani

Please login to join discussion
https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada