• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Friday, May 22, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home ಅಂಕಣ

ಆತನ ಹೆಜ್ಜೆ ಸ್ಪರ್ಶ ಕಂಡ ನೆಲದಲ್ಲೆಲ್ಲಾ ಪ್ರೀತಿಯ ನೆಲಮಲ್ಲಿಗೆಗಳು ಅರಳಿವೆ….

ಅಲ್ಮೆಡಾ ಗ್ಲಾಡ್ಸನ್ by ಅಲ್ಮೆಡಾ ಗ್ಲಾಡ್ಸನ್
December 27, 2022
in ಅಂಕಣ, ಅಭಿಮತ
0
ಆತನ ಹೆಜ್ಜೆ ಸ್ಪರ್ಶ ಕಂಡ ನೆಲದಲ್ಲೆಲ್ಲಾ ಪ್ರೀತಿಯ ನೆಲಮಲ್ಲಿಗೆಗಳು ಅರಳಿವೆ….
Share on WhatsAppShare on FacebookShare on Telegram

ನಾವು ಯಾರೋ ಒಬ್ಬರು ಶಾಂತಿ ಬಯಸಿ ಬೈಸಿಕಲ್‍ನಲ್ಲಿ ನೂರು ದಿನಗಳಲ್ಲಿ ಮೂರು ಸಾವಿರ ಕಿಲೋಮೀಟರ್ ಭಾರತ ಸುತ್ತಿದ್ದರ ಬಗ್ಗೆ ಹೆಮ್ಮೆ ಪಡುತ್ತೇವೆ. ಇನ್ಯಾರೋ ವಿದೇಶಿ ಪ್ರವಾಸಿಗ ಐಕ್ಯತೆ ಬಯಸಿ ವಿಶ್ವ ಪರ್ಯಟನೆ ಮಾಡಿದ್ದನ್ನು ನೋಡಿ ಹೌಹಾರುತ್ತೇವೆ. ಬೈಸಿಕಲ್‍ನಲ್ಲಿ ಅಥವಾ ಹೀಗೆ ನಡೆಯುತ್ತಾ ಹೋಗುವವರು ದಿನವೊಂದಕ್ಕೆ ಇಂತಿಷ್ಟು ಕಿಲೋಮೀಟರ್ ನಡೆದು, ದಾರಿಯಲ್ಲಿ ಯಾರೋ ಒಬ್ಬಿಬ್ಬರು ಅವರನ್ನು ಮಾತಾನಾಡಿಸಿದರೆ, ಅವರೊಡನೆ ಮಾತಾನಾಡಿ ಮುಂದಕ್ಕೋಗುತ್ತಾರೆ. ನಮಗೆ ಅವರ ಧ್ಯೇಯ, ಉದ್ದೇಶ, ಬದ್ಧತೆ, ಸ್ಥೈರ್ಯ ಎಲ್ಲವೂ ಇಷ್ಟವಾಗಿ ನಾವವರನ್ನು ಕೊಂಡಾಡುತ್ತೇವೆ.

ADVERTISEMENT

ಆದರೆ ನಮ್ಮಲ್ಲೊಬ್ಬ ಕಳೆದ ನೂರಕ್ಕಿಂತಾ ಹೆಚ್ಚು ದಿನಗಳಿಂದ, ದಿನವೊಂದಕ್ಕೆ 20-25 ಕಿಲೋಮೀಟರ್ ನಡೆಯುತ್ತಾ, ಎರಡ್ಮೂರು ಸಾರ್ವಜನಿಕ ಸಭೆಗಳನ್ನುದ್ದೇಶಿಸಿ ಭಾಷಣ ಮಾಡುತ್ತಾ, ತನ್ನನ್ನು ಭೇಟಿ ಮಾಡಲು ಕಾಯುತ್ತಿರುವ ನೂರಾರು ಜನರನ್ನೂ ನಿರಾಶೆಗೊಳಿಸದೇ, ಮಕ್ಕಳು, ಮಹಿಳೆಯರು, ಅಬಲರನ್ನು ಅಪ್ಪಿ, ಮುದ್ದಾಡಿ, ದಕ್ಷಿಣದ ವಿಪರೀತ್ ಸೆಖೆ-ಬಿಸಿಲು, ಉತ್ತರದ ಚಳಿ-ಮಂಜಿನಲ್ಲೂ ಮುಖದ ಮೇಲಿನ ನಗು ಒಂಚೂರೂ ಮಾಸಲು ಬಿಡದೆ ನಡೆದು ಈಗಾಗಲೇ ಮೂರು ಸಾವಿರಕ್ಕಿಂತಾ ಹೆಚ್ಚು ಕಿಲೋಮೀಟರ್ ದೂರವನ್ನು ಕ್ರಮಿಸಿದ್ದಾನೆ. ಅವನ ಮುಖದಲ್ಲಿ ದಣಿವಾಗಲಿ, ಕಣ್ಣಲ್ಲಿ ‘ಇನ್ನು ಸಾಕಪ್ಪ’ ಎನ್ನುವ ಭಾವನೆಯಾಗಲಿ, ದೇಹಲ್ಲಿ ಇನ್ನು ಆಗಲ್ಲ ಎನ್ನುವ ಮನೋಭಾವವಾಗಲಿ ಕಂಡುಬರುತ್ತಿಲ್ಲ. ಅವನೊಡನೆ ನಿತ್ಯವೂ ಹೆಜ್ಜೆ ಹಾಕಲು ಬಯಸುವವರು ಒಂದೆರಡು ದಿನ ನಡೆದು, ಸುಸ್ತಾಗಿ ವಾಪಾಸ್ಸಾದರೆ ಆತ ಮಾತ್ರ ಇನ್ನೂ ನಡೆಯುತ್ತಿದ್ದಾನೆ.

ಆತನ ಹೆಜ್ಜೆ ಸ್ಪರ್ಶ ಕಂಡ ನೆಲದಲ್ಲೆಲ್ಲಾ ಪ್ರೀತಿಯ ನೆಲಮಲ್ಲಿಗೆಗಳು ಅರಳಿವೆ, ಆತನ ಅಪ್ಪುಗೆಯ ಬಿಸಿ ಪಡೆದ ಜೀವಗಳಲ್ಲಿ ಹೊಸ ಉತ್ಸಾಹ ತುಂಬಿದೆ, ಆತನ ಕೈಸ್ಪರ್ಶದಿಂದ ಹಿಂಸೆಗೆ ಮುಂದಾಗುತ್ತಿದ್ದ ಕೈಗಳು, ಪ್ರೀತಿ ಹಂಚಲಾರಂಭಿಸಿವೆ. ಆತನ ಉದ್ದೇಶವೂ ಪ್ರೀತಿ ಹಂಚುವುದು, ಶಾಂತಿ ನೆಲೆಯೂರುವಂತೆ ಮಾಡುವುದು ಹಾಗೂ ಐಕ್ಯತೆಯನ್ನು ಚಿಗುರೊಡೆಸುವುದು.

ಅಷ್ಟಕ್ಕೂ ಅವ ಅಂತಿಂಥವನ್ನಲ್ಲ. ನಾಲ್ಕು ಬಾರಿಯ ಸಂಸದ, ನಾಡಿನ ರಾಷ್ಟ್ರೀಯ ಪಕ್ಷವೊಂದರ ಅಧ್ಯಕ್ಷನಾಗಿದ್ದವ, ಯಾರಿಗೆ ಇಷ್ಟವಿದೆಯೋ, ಕಷ್ಟವಿದೆಯೋ, ಆದರೆ ಭಾರತದ ಮುಂದಿನ ಪ್ರಧಾನಿಯೆಂದು ಬಿಂಬಿತನಾದವ, ಆಗರ್ಭ ಶ್ರೀಮಂತ ಬೇರೆ, ತನ್ನ ಕುಟುಂಬದಲ್ಲೇ ಮೂರು ಪ್ರಧಾನಿ, ಮೂರ್ನಾಲ್ಕು ಸಂಸದರು ಎಂದು ಸದಾಕಾಲ ಅಧಿಕಾರದ ಸುತ್ತಮುತ್ತಲೇ ಇದ್ದವ, ತನ್ನ ತಂದೆ, ಅಜ್ಜಿಯ ಕೊಲೆ, ಚಿಕ್ಕಪ್ಪನ ದುರಂತ ಸಾವಿನ ನಡುವೆ ಬೆಳೆದವ, ತಾಯಿ-ತಂಗಿಯ ಚಾರಿತ್ರ್ಯಹರಣ, ನಿಂದನೆ, ತೆಗಳುವಿಕೆ, ಅವರ ಬಗೆಗಿನ ದ್ವೇಷ ಎಲ್ಲವನ್ನೂ ಹತ್ತಿರದಿಂದ ನಿತ್ಯವೂ ನೋಡಿದವ. ಕುಟುಂಬದಲ್ಲಿ ನಡೆದ ದುರಂತಗಳಿಂದ ಸರಿಯಾದ ಬಾಲ್ಯವನ್ನೂ ಪಡೆಯದ, ಬೆಳೆಯುವಾಗ ಅಪಾಯದಿಂದ ತಪ್ಪಿಸಿಕೊಳ್ಳಲು ತನ್ನ ಅಸ್ಮಿತೆಯನ್ನೂ ಮುಚ್ಚಿ ಬೆಳೆದವ. ಕಳೆದ ಇಪ್ಪತ್ತು ವರುಷಗಳಿಂದ ಸ್ವತ ನಿಂದನೆ, ದ್ವೇಷವನ್ನು ಎದುರಿಸಿದವ. ತನ್ನ ಪಕ್ಷದ ಸೋಲನ್ನು ಏಕಾಂಗಿಯಾಗಿ ತನ್ನ ಹೆಗಲಮೇಲೆ ಹೊತ್ತು ನಡೆದವ.

ಊಹುಂ! ದುರಂತ, ಕೊಲೆ, ದ್ವೇಷ, ನಿಂದನೆ, ಚಾರಿತ್ರ್ಯಹರಣ, ಸೋಲು ಯಾವುದೂ ಆತನನ್ನು ಕಂಗೆಡಿಸಿಲ್ಲ. ಬದಲಾಗಿ ಇವೆಲ್ಲವೂ ಅತನನ್ನು ದಿನಗಳೆದಂತೆ ಗಟ್ಟಿ ಮಾಡುತ್ತಲೇ ಹೋಗಿವೆ. ಈ ಪರಿ ಬಿಡಿ, ಇದರ ಹತ್ತು ಪರ್ಸೆಂಟ್ ದುರಂತ, ದ್ವೇಷ, ನಿಂದನೆ, ಚಾರಿತ್ರ್ಯಹರಣ ಕಂಡವರು, ಸಾರ್ವಜನಿಕವಾಗಿ ಕಾಣಿಸಿಕೊಳ್ಳುವುದು ಬಿಡಿ, ಮನೆ ಹೊಸ್ತಿಲೂ ದಾಟಲು ಹೆದರಬಹುದು. ಆದರೆ ಈತ ಸಾವಿರಾರು ಜನರ ಮಧ್ಯೆ, ಯಾವುದೇ ಭದ್ರತೆ ಬಯಸದೇ, ಯಾವುದೇ ಹಮ್ಮು-ಬಿಮ್ಮುಗಳಿಲ್ಲದೆ ಬೆರೆಯುತ್ತಾನೆ. ಆತನ ಬಳಿ ಐವತ್ತಾರಿಂಚಿನ ಎದೆಯಿಲ್ಲ, ಆದರೆ ಅವನಿಗಿರುವ ಧೈರ್ಯ ಅಮಿತವಾದದ್ದು. ವಿಶ್ವ ಪರ್ಯಟನೆ, ಬೈಸಿಕಲ್‍ನಲ್ಲಿ ದೇಶ ಸುತ್ತುವುದು ಮುಂತಾದವುಗಳ ನಡುವೆ ಈತ ನಡೆಯುತ್ತಾ, ಪ್ರೀತಿ ಬಿತ್ತುತ್ತಾ, ನಗು ಹಂಚುತ್ತಾ, ಐಕ್ಯತೆ ಭೋಧಿಸುತ್ತಾ, ಶಾಂತಿ ಪ್ರಾರ್ಥಿಸುತ್ತಾ ಮೂರು ಸಾವಿರ ಕಿಲೋಮೀಟರ್ ನಡೆದಾಗಿದೆ. ಆತ ಸಾವಿರಾರು ಜನರನ್ನು ಜತೆಗೆ ತೆಗೆದುಕೊಂಡು ನಡೆದರೂ ಇದುವರೆಗೂ ಆತ ನಡೆದ ಯಾವುದೇ ಜಿಲ್ಲೆಯಲ್ಲಿ, ರಾಜ್ಯದಲ್ಲಿ ಒಂದೇ ಒಂದು ಗಲಾಟೆಯಾಗಿಲ್ಲ, ಗಲಭೆಯಾಗಿಲ್ಲ, ಜನರ ನೂಕು-ನುಗ್ಗಲಾಗಿಲ್ಲ, ಟ್ರಾಫಿಕ್ ಜಾಮ್ ಆಗಿಲ್ಲ. ಆತನೂ ಎಲ್ಲೂ ವಿಷ ಉಗುಳಿದ್ದಿಲ್ಲ, ತನ್ನ ಬೆಂಬಲಿಗರನ್ನು ಪ್ರಚೋದಿಸಿದ್ದೂ ಇಲ್ಲ.

ಆತನ ಈ ಪರ್ಯಟನೆ ನಮಗೆ, ನಮ್ಮ ದೇಶಕ್ಕೆ ದೊಡ್ಡ ವಿಷಯವೇ ಅಲ್ಲ ಎನ್ನುವಂತೆ ನಾವು ಬಾಳುತ್ತಿದ್ದೇವೆ. ಇದೊಂದು ವಿಶೇಷ ಕಾರ್ಯಕ್ರಮ ಅಲ್ಲ ಬದಲಾಗಿ ಸಾಮಾನ್ಯ ಜೀವನ ಎನ್ನುವ ಮಟ್ಟಿಗೆ ಆತನ ಪರ್ಯಟನೆ ನಮ್ಮಲ್ಲಿ ಬೆಸೆದಿದೆ. ಇಂಥದೊಂದು ಕೌತುಕ, ಇಂಥದೊಂದು ಅಸಾಮಾನ್ಯ ಸಾಧನೆಯನ್ನು ಮಾಡುವುದು ಬಿಡಿ, ಅದನ್ನು ಸರಿಗಟ್ಟಲೂ ಸಮಕಾಲೀನ ಅಥವ ಗತ ಇತಿಹಾಸದಲ್ಲಿ ಯಾರಿಂದಲೂ ಸಾಧ್ಯವಾಗಲಿಕ್ಕಿಲ್ಲ. That’s ರಾಹುಲ್ ಗಾಂಧಿ!

ಓರ್ವ ವಿದೇಶಿ ರಾಜಕಾರಣಿ ಬಿಡುವು ಪಡೆದು ತನ್ನ ಕುಟುಂಬದೊಡನೆ ಸಮಯ ಕಳೆಯುವುದು, ತನ್ನ ಕುಟುಂಬಕ್ಕಾಗಿ ಅಡುಗೆ ಮಾಡುವುದು, ಜನರ ಮಧ್ಯೆ ಸಾಮಾನ್ಯನಂತೆ ಬೆರೆಯುವುದನ್ನು ಹೊಗಳುವ ನಾವು, ನಮ್ಮದೇ ನೆಲದ ರಾಹುಲ್ ಗಾಂಧಿ ಇದನ್ನೇ ಮಾಡಿದಾಗ ಆತನಿಗೆ ಜನರ ಬಗ್ಗೆ ಕಾಳಜಿಯಿಲ್ಲ, ಆತ ಪೂರ್ಣಾವಧಿ ರಾಜಕಾರಣಿಯಲ್ಲ, ಆತನಿಗೆ ಆತನ ತಾಯಿ ಹಾಗೂ ಕುಟುಂಬದಷ್ಟೇ ಚಿಂತೆ ಎಂದು ತೆಗಳುತ್ತೇವೆ, ಯಾಕೆಂದರೆ ಅವನಿಗಿಂತಾ ಮೊದಲು ಭಾರತೀಯ ರಾಜಕೀಯ ಇಷ್ಟೊಂದು ಸಾಮಾನ್ಯವಾಗಿ ಇರಬಲ್ಲದು, ರಾಜಕಾರಣಿಗಳೂ ಹೀಗೂ ಇರಬಹುದೆಂದು ತೋರಿಸಿಕೊಟ್ಟವರು ವಿರಳ. ಹಾಗಾಗಿಯೇ He’s a square peg in a round hole! ಆತ ರಾಜಕಾರಣಿಯಾಗಿ ಬಹುಶ ಭಾರತದ ಸಮಕಾಲೀನ ರಾಜಕೀಯದಲ್ಲಿ ಸಲ್ಲಲಿಕ್ಕಿಲ್ಲ. ಆದರೆ ಓರ್ವ ಮನುಷ್ಯನಾಗಿ ಆತನ ಸಮನಾಗಿ ನಿಲ್ಲಲು ಭಾರತದ ಪ್ರಸಕ್ತ ರಾಜಕಾರಣಿಗಳಲ್ಲಿ ಯಾರೂ ಸಲ್ಲಲಿಕ್ಕಿಲ್ಲ ಎನ್ನುವುದೂ ಅಷ್ಟೇ ದೊಡ್ಡ ಸತ್ಯ.

Tags: Congress Partyನರೇಂದ್ರ ಮೋದಿ
Previous Post

ಕರ್ನಾಟಕ ವಿಧಾನಸಭೆ ಅತಂತ್ರ; ಕರ್ನಾಟಕ ಟಿವಿ ಡಿಸೆಂಬರ್​ ಸರ್ವೇ ಟ್ರೆಂಡ್

Next Post

ಚರ್ಚ್‌ ಮೇಲೆ ದಾಳಿ: ಬಾಲ ಯೇಸುವಿನ ಮೂರ್ತಿ ಒಡೆದು ಹಾಕಿದ ದುಷ್ಕರ್ಮಿಗಳು

Related Posts

ಬಹುತ್ವ ಭಾರತ ಮತ್ತು ಮತಾಂಧ ರಾಜಕಾರಣ
ಅಂಕಣ

ಬಹುತ್ವ ಭಾರತ ಮತ್ತು ಮತಾಂಧ ರಾಜಕಾರಣ

by ಪ್ರತಿಧ್ವನಿ
May 21, 2026
0

(ದಿನಾಂಕ 15 ಮೇ 2026ರಂದು ಡಾ ಬಿ.ಆರ್.‌ ಅಂಬೇಡ್ಕರ್‌ ಜಯಂತಿಯ ಪ್ರಯುಕ್ತ ದಲಿತ ಸಂಘರ್ಷ ಸಮಿತಿ (ಸಂಯೋಜಕ) ಏರ್ಪಡಿಸಿದ್ದ ವಿಚಾರ ಸಂಕಿರಣದಲ್ಲಿ ಮಂಡಿಸಿದ ಉಪನ್ಯಾಸದ ಲೇಖನ ರೂಪ...

Read moreDetails
ಸಂತೆಮಾಳದಲ್ಲಿ ಯುವಜನರ ಭವಿಷ್ಯದ ಕನಸುಗಳು

ಸಂತೆಮಾಳದಲ್ಲಿ ಯುವಜನರ ಭವಿಷ್ಯದ ಕನಸುಗಳು

May 18, 2026
ಮರುಕಳಿಸಿದ ಪ್ರತ್ಯೇಕ ಮತದಾರರ ಪರಂಪರೆ

ಮರುಕಳಿಸಿದ ಪ್ರತ್ಯೇಕ ಮತದಾರರ ಪರಂಪರೆ

May 13, 2026
ಸಂದಿಗ್ಧ ಮತದಾರ ನಿರ್ದೇಶಿತ ಮತದಾನ

ಸಂದಿಗ್ಧ ಮತದಾರ ನಿರ್ದೇಶಿತ ಮತದಾನ

May 11, 2026
ಜನಮತ – ಆಯ್ಕೆ ಆದ್ಯತೆ ಮತ್ತು ಪರ್ಯಾಯ

ಜನಮತ – ಆಯ್ಕೆ ಆದ್ಯತೆ ಮತ್ತು ಪರ್ಯಾಯ

May 9, 2026
Next Post
ಚರ್ಚ್‌ ಮೇಲೆ ದಾಳಿ: ಬಾಲ ಯೇಸುವಿನ ಮೂರ್ತಿ ಒಡೆದು ಹಾಕಿದ ದುಷ್ಕರ್ಮಿಗಳು

ಚರ್ಚ್‌ ಮೇಲೆ ದಾಳಿ: ಬಾಲ ಯೇಸುವಿನ ಮೂರ್ತಿ ಒಡೆದು ಹಾಕಿದ ದುಷ್ಕರ್ಮಿಗಳು

Please login to join discussion
https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada