ಅತಿವೃಷ್ಟಿ, ಅನಾವೃಷ್ಟಿಯಿಂದ ಕಂಗಾಲಾಗಿದ್ದ ರೈತ ಸಾಲ ಮಾಡಿ ಬೆಳೆದ ಕಬ್ಬು ಇದೀಗ ವಿದ್ಯುತ ಶಾರ್ಟ್ ಸರ್ಕ್ಯೂಟ್ನಿಂದ ಸುಟ್ಟು ಭಸ್ಮವಾಗಿರುವ ಘಟನೆ ಬೀದರ್ ಜಿಲ್ಲೆಯ ಮೊಗದಾಳ ಗ್ರಾಮದಲ್ಲಿ ನಡೆದಿದೆ.
ಗ್ರಾಮದ ರೈತ ಚಂದ್ರಶೆಟ್ಟಿ ತಮ್ಮ ಜಮೀನಿನಲ್ಲಿ ಕಬ್ಬು ಬೆಳೆದಿದ್ದರು ಇನ್ನೇನು ಕೆಲವು ದಿನಗಳಲ್ಲಿ ಕಟ್ಟಾವು ಮಾಡಬೇಕಿತ್ತು ಆದರೆ ತಮ್ಮ ಜಮೀನಿನ ಪಕ್ಕ ಅಳವಡಿಸಿರುವ ಟ್ರಾನ್ಸ್ಫಾರ್ಮರ್ನಿಂದ ಹೊತ್ತಿಕೊಂಡ ಬೆಂಕಿ ಕಿಡಿಯಿಂದ ಜಮೀನಿನಲ್ಲಿ ಬೆಳೆದಿದ್ದ ಸಂಪೂರ್ಣ ಬೆಳೆ ಬೆಂಕಿಗಾಹುತಿಯಾಗಿದೆ.
ಘಟನೆ ಕುರಿತು ಬೇಮಳಖೇಡಾ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಗ್ರಾಮಸ್ಥರು ಬೆಸ್ಕಾಂ ಅಧಿಕಾರಿಗಳಿಗೆ ಹಿಡಿ ಹಿಡಿ ಶಾಪ ಹಾಕಿದ್ದಾರೆ ಮತ್ತು ಸರ್ಕಾರ ಈ ಕೂಡಲೇ ರೈತನ ಕಷ್ಟಕ್ಕೆ ಸ್ಪಂದಿಸಿ ರೈತನಮ ನೆರವಿಗೆ ಧಾವಿಸಬೇಕು ಎಂದು ಆಗ್ರಹಿಸಿದ್ದಾರೆ.







