ದೇಶದಲ್ಲಿ ದಿನದಿಂದ ದಿನಕ್ಕೆ ಓಮಿಕ್ರಾನ್ ಉಪತಳಿ BF7 ಸೋಂಕಿನ ಪ್ರಕರಣಗಳಲ್ಲಿ ಏರಿಕೆ ಕಂಡು ಬಂದಿದ್ದು ಈ ಬಗ್ಗೆ ಕೇಂದ್ರ ಸರ್ಕಾರ ಕಠಿಣ ನಿಯಮಗಳನ್ನ ಜಾರಿಗೆ ತರಲು ಚಿಂತನೆ ನಡೆಸಿದೆ.
ಕೇಮದ್ರ ಸರ್ಕಾರದ ಜೊತೆಗಿನ ಸಭೆಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ಸುಧಾಕರ್ ಡಿಸೆಂಬರ್ 27ರಂದು ಆಸ್ಪತ್ರೆಗಳಲ್ಲಿ ಮಾಕ್ ಡ್ರಿಲ್ ಮಾಡಲು ಸೂಚನೆ ನೀಡಲಾಗಿದೆ ಆದ್ದರಿಂದ ಕೋವಿಡ್ ನಿಯಂತ್ರಣಕ್ಕೆ ಎಲ್ಲವೂ ಸರಿಯಾಗಿ ಇದೆಯಾ ಅಂತಾ ನೋಡಿಕೊಳ್ಳೋಕೆ ಮಾಕ್ ಡ್ರಿಲ್ ಮಾಡಲಾಗುವುದು ಎಂದು ತಿಳಿಸಿದ್ದಾರೆ.
ಜೆನೋಮಿಕ್ ಸೀಕ್ವೆನ್ಸ್, ಟೆಸ್ಟ್ ಹೆಚ್ಚಳ, ವಯಸ್ಸು ಆದವರಿಗೆ ಪ್ರಾಶಸ್ತ್ಯ ದಲ್ಲಿ ಬೂಸ್ಟರ್ ಡೋಸ್ ನೀಡುವಂತೆ ಸೂಚಿಸಿದ್ದಾರೆ. ವಿದೇಶಿ ಪ್ರಯಾಣಿಕರಿಗೆ RTPCR ನೆಗೆಟಿವ್ ರಿಪೋರ್ಟ್ ರೂಲ್ಸ್ ಜಾರಿಗೆ ನಾನು ಕೇಂದ್ರಕ್ಕೆ ಸಲಹೆ ನೀಡಿದ್ದೇನೆ.
BF 7 ಒಬ್ಬರಿಂದ 17 ಜನಕ್ಕೆ ಸ್ಪ್ರೆಡ್ ಆಗುವ ವೈರಸ್ ನಮ್ಮಲ್ಲಿ ಇನ್ಮು 10 ಲಕ್ಷ ಬೂಸ್ಟರ್ ಡೋಸ್ ಇದೆ ನೀಡುತ್ತೇವೆ. ಪ್ರತಿನಿತ್ಯ ವಿಶ್ವದಲ್ಲಿ 50 ಲಕ್ಷ ಕೇಸ್ ಬರ್ತಾ ಇವೆ 0.03% ಆಕ್ಟೀವ್ ಪ್ರಕರಣ ನಮ್ಮ ದೇಶದಲ್ಲಿ ಇದೆ ವಿದೇಶಗಳಿಗೆ ಹೊಲಿಕೆ ಮಾಡಿದ್ರೆ ನಮ್ಮಲ್ಲಿ ನಿಯಂತ್ರಣದಲ್ಲಿ ಇದೆ ಎಂದು ಹೇಳಿದ್ದಾರೆ.
ಅಮೆರಿಕಾ ಸಂಸ್ಥೆ ವರದಿ ಪ್ರಕಾರ 10 ಲಕ್ಷ ಜನ ಸಾವಾಗುವ ಸಾಧ್ಯತೆ ಅಂತಿದೆ ಅದಕ್ಕೆ ಕಾರಣ ಚೈನಾದಲ್ಲಿ ಇರುವ ಲಸಿಕೆ ಇರಬಹುದು ಲಸಿಕೆ ತೆಗೆದುಕೊಳ್ಳೋದ್ರಲ್ಲಿ ನಮ್ಮಷ್ಟು ಚೀನಾ ಯಶಸ್ಸು ಕಂಡಿಲ್ಲ ಎಂದು ಸಭೆಯ ಬಳಿಕೆ ಸಚಿವ ಸುಧಾಕರ್ ತಿಳಿಸಿದ್ದಾರೆ.