ಬಿಜೆಪಿ ಸುಸಂಸ್ಕೃತ ಪಕ್ಷವೋ ರೌಡಿಗಳ ಪಕ್ಷವೋ ಎಂದು ಜನರು ತೀರ್ಮಾನಿಸಿದ್ದಾರೆ ಎಂದು ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಹೇಳಿದ್ದಾರೆ.
ಬಿಜೆಪಿ ಸುಸಂಸ್ಕೃತ ಪಕ್ಷ ಎಂದು ಕೇಂದ್ರ ಹಾಗೂ ರಾಜ್ಯದಲ್ಲಿ ಅಧಿಕಾರ ಕೊಟ್ಟಿದ್ದಾರೆ ಜೊತೆಗೆ ಅನೇಕ ರಾಜ್ಯಗಳಲ್ಲೂ ಕೂಡ ಅಧಿಕಾರವನ್ನು ನೀಡಿದ್ದಾರೆ. ರೌಡಿಗಳ ಪಕ್ಷ ಎಂದು ಕಾಂಗ್ರೆಸ್ ಪಕ್ಷವನ್ನು ತಿರಸ್ಕರಿಸಿದ್ದಾರೆ ಎಂದು ಪರೋಕ್ಷವಗಾಇ ಕಾಂಗ್ರೆಸ್ಅನ್ನು ಕುಟುಕಿದ್ದಾರೆ.
ಉದಾಹರಣೆಗೆ ರಾಜ್ಯದ ಕೆಪಿಸಿಸಿ ಅಧ್ಯಕ್ಷ ಯಾರು ಮೊನ್ನೆ ತನಕ ತಿಹಾರ್ ಜೈಲ್ನಲ್ಲಿ ಇದ್ದು ಬೇಲ್ ಮೇಲೆ ಹೊರಗೆ ಬಂದವರು ಯಾವ ನಿಮಿಷಕ್ಕೆ ಮತ್ತೆ ಜೈಲಿಗೆ ಹೋಗ್ತಾರೋ ಗೊತ್ತಿಲ್ಲ ಜೈಲಿಗೆ ಹೋಗಿ ಬಂದ ಡಿಕೆ ಶಿವಕುಮಾರ್ ನೇತೃತ್ವದಲ್ಲಿ ರಾಜ್ಯ ಕಾಂಗ್ರೆಸ್ ಇದೆ ಎಂದು ಟೀಕಿಸಿದ್ದಾರೆ.

ರಾಜ್ಯ ಯುವ ಕಾಂಗ್ರೆಸ್ ಅಧ್ಯಕ್ಷ ನಲಪಾಡ್ ಸ್ಥಿತಿ ಕೂಡ ಅದೇ ಬಾರ್ನಲ್ಲಿ ಕುಡಿದು ಹೊಡೆದಾಡಿ ಪರಪ್ಪನ ಅಗ್ರಹಾರಕ್ಕೆ ಹೋಗಿ ಬಂದಿದ್ದಾನೆ ಆತನ ಅಧ್ಯಕ್ಷತೆಯಲ್ಲಿ ಯುವ ಕಾಂಗ್ರೆಸ್ ಇದೆ ರಾಜ್ಯದ ಜನ ತೀರ್ಮಾನ ಮಾಡ್ತಾರೆ ಯಾವುದು ರೌಡಿಗಳ ಪಕ್ಷ ಎಂದು ಬಿಜೆಪಿ ಸುಸಂಸ್ಕೃತ ಪಕ್ಷ ಎಂದು ತಿಳಿಸಿದ್ದಾರೆ.
ರಮೇಶ್ ಜಾರಕಿಹೊಳಿ ಜೆಡಿಎಸ್ ಸೇರ್ಪಡೆ ಕುರಿತು ಸಿಎಂ ಇಬ್ರಾಹಿಂ ಹೇಳಿಕೆಗೆ ಪ್ರತಿಕ್ರಿಯಿಸಿದ ಕೆಎಸ್ಈ ಇಬ್ರಾಹಿಂ ಗೆ ಬೇರೆ ಉದ್ಯೋಗವಿಲ್ಲ ರಸ್ತೆಯಲ್ಲಿ ಹೋಗೋ ನಾಯಿ ಕೂಡ ಜೆಡಿಎಸ್ಗೆ ಹೋಗಲ್ಲ ರಮೇಶ್ ಜಾರಕಿಹೊಳಿ ಸರ್ಕಾರ ತಂದವರು ಅವರು ಯಾಕೆ ಬಿಜೆಪಿ ಬಿಟ್ಟು ಹೋಗ್ತಾರೆ. ಬಿಜೆಪಿ ಬಿಟ್ಟು ಏನು ಇಲ್ದೇ ಇರೋ ಜೆಡಿಎಸ್ ಗೆ ಯಾಕೆ ಹೋಗ್ತಾರೆ ಯಾವ ಕಾರಣಕ್ಕೂ ಬಿಜೆಪಿ ಬಿಟ್ಟು ಹೋಗುವ ಪ್ರಶ್ನೆ ಉದ್ಭವವಾಗಲ್ಲ ಎಂದು ತಿರುಗೇಟು ನೀಡಿದ್ದಾರೆ.
ಇಬ್ರಾಹಿಂ ತಾನಂತೂ ಹೋಗಾಗಿದೆ ಹೀಗಾಗಿ ಏನಾರು ಮಾಡಬೇಕೆಂಬ ಕಾರಣಕ್ಕೆ ಹೇಳಿಕೆ ಕೊಡುತ್ತಾರೆ ಇದಕ್ಕಾಗಿ ಅವರು ಬರ್ತಾರೆ ಇವರು ಬರ್ತಾರೆ ಅಂತಿದ್ದಾರೆ ಹೆಚ್.ಡಿ. ದೇವೆಗೌಡ್ರು, ಶಿವಕುಮಾರ್ ಯಾರೋ ಹೇಳಿದ್ರೇ ನಾನು ಹೇಳ್ತಾ ಇರಲಿಲ್ಲ ಇಬ್ರಾಹಿಂ ಅರ್ಥವಿಲ್ಲದ ಮಾತನಾಡ್ತಿದ್ದಾರೆ. ಅವರಿಗೆ ಉತ್ತರ ಕೊಡ್ತಾ ಇದ್ದೇನೆ ಖಂಡನೆ ಮಾಡ್ತೇನೆ ಎಂದಿದ್ದಾರೆ.






