ಕಳೆದ ತಿಂಗಳು ಟೆನ್ನಿಸ್ ಆಟಕ್ಕೆ ವಿದಾಯ ಘೋಷಿಸಿದ ಸೆರೆನಾ ವಿಲಿಯಮ್ಸ್ ಇದೀಗ ಹೊಸದೊಂದು ಹೇಳಿಕೆ ನೀಡುವ ಮೂಲಕ ಕ್ರೀಡಾಭಿಮಾನಿಗಳಲ್ಲಿ ಅಚ್ಚರಿ ಮೂಡಿಸಿದ್ದಾರೆ.
ಕಳೆದ ತಿಂಗಳು ನಡೆದ ಅಮೆರಿಕನ್ ಗ್ರ್ಯಾಂಡ್ ಸ್ಲಾಮ್ ಟೂರ್ನಿಯ ನಂತರ ಸೆರೆನಾ ಟೆನ್ನಿಸ್ ಆಟಕ್ಕೆ ವಿದಾಯ ಘೋಷಿಸಿದ್ದಾರೆ.
ಸೆರೆನಾ ನೂತನವಾಗಿ ಪ್ರಾರಂಭಿಸಿರುವ ಸೆರೆನಾ ವೆಂಚರ್ಸ್ ಪ್ರಚಾರದ ಕಾರ್ಯದ ವೇಳೆ ಸ್ಯಾನ್ ಫ್ರಾನ್ಸಿಸ್ಕೋದಲ್ಲಿ ಸಭೆಯನ್ನುದ್ದೇಶಿಸಿ ಮಾತನಾಡಿದ ಸೆರೆನಾ ನಾನು ಕ್ರೀಡಾ ಕ್ಷೇತ್ರದಿಂದ ಇನ್ನು ನಿವೃತ್ತಿಯಾಗಿಲ್ಲ.
ನಾನು ಟೆನ್ನಿಸ್ ಆಟಕ್ಕೆ ಹಿಂತಿರುಗುವ ಸಾಧ್ಯತೆ ಹೆಚ್ಚಿದೆ ಮತ್ತು ನೀವು ನನ್ನ ಮನೆಗೆ ಬಂದು ನೋಡಬಹುದು ಟೆನ್ನಿಸ್ ಕೋರ್ಟ್ ಇದೆ ಮತ್ತು ನಾನು ಇನ್ನು ನಿವೃತ್ತಿ ಬಗ್ಗೆ ನಿಜವಾಗಿಯೂ ಯೋಚಿಸಿಲ್ಲ ಎಂದು ಮಾರ್ಮಿಕವಾಗಿ ನುಡಿದಿದ್ದಾರೆ.
ಒಂದು ದಿನ ಅಭ್ಯಾಸ ಮಾಡಲೆಂದು ಕೋರ್ಟ್ಗೆ ಹೋಗಿದೆ ನಾನು ಆಡುತ್ತಿಲ್ಲ ಎಂಬುದು ನನ್ನ ಜೀವನದಲ್ಲಿ ಮೊದಲ ಭಾರಿ ಅನ್ನಿಸಿತ್ತು ಮತ್ತು ಅದು ನಿಜಕ್ಕೂ ವಿಚಿತ್ರವೆನ್ನಿಸಿತ್ತೂ ಎಂದು ಹೇಳಿದ್ದಾರೆ.