ಜಿಂಬಾಬ್ವೆ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ 10 ವಿಕೆಟ್ಗಳ ಅಮೋಘ ಗೆಲುವು ಕಂಡಿದ್ದ ಟೀಮ್ ಇಂಡಿಯಾ ಇಂದು ಎರಡನೇ ಏಕದಿನ ಆಡಲಿದೆ.
ಭಾರತ ಕ್ರಿಕೆಟ್ ತಂಡ ಇದೀಗ ದ್ವಿತೀಯ ಪಂದ್ಯಕ್ಕೆ ಸಜ್ಜಾಗಿದ್ದು, ಇಂದು ಹರಾರೆ ಸ್ಪೋರ್ಟ್ಸ್ ಕ್ಲಬ್ನಲ್ಲಿ ಎರಡನೇ ಏಕದಿನ ಆಡಲಿದೆ . ಕೆಎಲ್ ರಾಹುಲ್ ಪಡೆ ಇಂದಿನ ಪಂದ್ಯಕೂಡ ಗೆದ್ದರೆ ಸರಣಿ ವಶಪಡಿಸಿಕೊಂಡ ಸಾಧನೆ ಮಾಡಲಿದೆ.
ಭಾರತದ ಬೌಲಿಂಗ್ ಬಲಿಷ್ಠವಾಗಿದೆ. ದೀರ್ಘ ಕಾಲದ ನಂತರ ಕಣಕ್ಕೆ ಮರಳಿರುವ ಬೌಲರ್ ದೀಪಕ್ ಚಹರ್ ಮೊದಲ ಪಂದ್ಯದಲ್ಲೇ ಮಾರಕ ದಾಳಿ ಸಂಘಟಿಸಿದರು.

ಜಿಂಬಾಬ್ವೆ ತಂಡವು ರಾಹುಲ್ ಬಳಗದ ಬ್ಯಾಟರ್‌ಗಳಿಗೆ ಹಾಗೂ ಬೌಲಿಂಗ್ ಪಡೆಯನ್ನು ಎಚ್ಚರಿಕೆಯಿಂದ ಎದುರಿಸಿದರೆ ಮಾತ್ರ ಗೆಲುವಿನ ಕನಸು ಕಾಣಬಹುದು.