ನೂತನ ಅಬಕಾರಿ ನೀತಿಯಲ್ಲಿನ ವ್ಯಾಪಕ ಭ್ರಷ್ಟಾಚಾರ ಸಂಬಂಧ ದೆಹಲಿ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಮನೆ ಮೇಲೆ ಸಿಬಿಐ ದಾಳಿ ನಂತರ 12 ಐಎಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ದೆಹಲಿ ಲೆಫ್ಟಿನೆಂಟ್ಗವರ್ನರ್ ವಿನಯ್ ಕುಮಾರ್ ಸಕ್ಸೇನಾ ಆದೇಶ ಹೊರಡಿಸಿದ್ದಾರೆ.
ಇಲ್ಲಿವೆ ಪ್ರಮುಖ ಅಂಶಗಳು
1) ನೂತನ ಅಬಕಾರಿ ನೀತಿಯಲ್ಲಿನ ಭ್ರಷ್ಟಾಚಾರದ ಆರೋಪದ ನಂತರ ಪ್ರಥಮ ಮಾಹಿತಿ ವರದಿ (FIR)ನಲ್ಲಿ ನೀತಿಯ ಉಲ್ಲಂಘನೆಗಳ ಕುರಿತು ಆರೋಪಿತರನ್ನು ಹೆಸರಿಸಿದ ಕೆಲವೇ ಘಂಟೆಗಳ ಒಳಗಾಗಿ ಅಧಿಕಾರಿಗಳನ್ನು ವರ್ಗಾವಣೆ ಮಾಡಲಾಗಿದೆ.
2) ಸದ್ಯ FIRನಲ್ಲಿ ಹೆಸರಿಸಲಾಗಿರುವ 15 ಮಂದಿ ಆರೋಪಿತರ ಪೈಕಿ ದೆಹಲಿ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾರನ್ನು ಮೊದಲಿಗರೆಂದು(A1) ಎಂದು ಹೆಸರಿಸಲಾಗಿದೆ. ಸದ್ಯ ಸಿಬಿಐ ಸಲ್ಲಿಸಿರುವ 11 ಪುಟಗಳ ಚಾರ್ಜ್ ಶೀಟ್ನಲ್ಲಿ ಭ್ರಷ್ಟಾಚಾರ ಸೇರಿದಂತೆ ಅನೇಕ ಪ್ರಕರಣಗಳನ್ನು ದಾಖಲಿಸಲಾಗಿದೆ.

3) ದೆಹಲಿಯಲ್ಲಿರುವ ಮನೀಶ್ ಸಿಸೋಡಿಯಾ ನಿವಾಸ ಸೇರಿದಂತೆ ದೇಶದ 31 ಕಡೆ ಅವರಿಗೆ ಸೇರಿದ ಆಸ್ತಿಗಳ ಮೇಲೆ ದಾಳಿ ಮಾಡಲಾಗಿತ್ತು. ಒಟ್ಟು 7 ಘಂಟೆಗಳ ಕಾರ್ಯಾಚರಣೆಯ ನಂತರ ಸಿಸೋಡಿಯಾಗೆ ಸೇರಿದ್ದ ಕಂಪ್ಯೂಟರ್ ಹಾಘು ಮೊಬೈಲ್ ಪೋನ್ ಅನ್ನು ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.
4) ನವೆಂಬರ್ನಲ್ಲಿ ಜಾರಿಗೆ ತಂದ ನೂತನ ಅಬಕಾರಿ ನೀತಿಯಲ್ಲಿ ಮಧ್ಯದಂಗಡಿಗಳ ಪರವಾನಗಿಯನ್ನು ಖಾಸಗಿಯವರಿಗೆ ಹಸ್ತಾಂತರಿಸಲಾಗಿತ್ತು ಎಂಬ ಆರೋಪ ಕೇಳಿ ಬಂದಿತ್ತು. ನೀತಿಯ ವಿರುದ್ದ ವ್ಯಾಪಕ ಆರೋಪ ಕೇಳಿ ಬಂದ ನಂತರ ಜುಕೈ 30ರಂದು ನೀತಿಯನ್ನು ದೆಹಲಿ ಸರ್ಕಾರ ಹಿಂಪಡೆಸಿತ್ತು.
5) ಸಿಬಿಐ ಪ್ರಕಾರ ದೆಹಲಿಯಲ್ಲಿ ನೂತನ ಅಬಕಾರಿ ನೀತಿಯ ಅಡಿಯಲ್ಲಿ ವ್ಯಕ್ತಿಯೊಬ್ಬ ಲೆಫ್ಟಿನೆಂಟ್ ಗವರ್ನರ್ ಅನುಮತಿಯಿಲ್ಲದೆ ಮಧ್ಯ ಮಾರಾಟ ಮಾಡಬಹುದು ಎಂದು ಸಿಬಿಐ ತನ್ನ ಪ್ರಾಥಮಿಕ ವರದಿಯಲ್ಲಿ ತಿಳಿಸಿದೆ.
6) ಸಿಬಿಐ ಸಲ್ಲಿಸಿರುವ FIRನಲ್ಲಿ ವ್ಯಕ್ತಿಯೋರ್ವ ಪರವಾನಗಿ ಪಡೆಯಲು ಮನೀಶ್ ಸಿಸೋಡಿಯಾ ಸೇರಿದ್ದ ಕಂಪನಿಗೆ 1 ಕೋಟಿ ಕೊಟ್ಟಿರುವುದಾಗಿ ಆರೋಪಿಸಿದ್ದರು. ಮಧ್ಯ ನೀತಿ ಜಾರಿ ನಂತರ ಕಂಪನಿಗಳು ಹಾಗೂ ಮಧ್ಯವರ್ತಿಗಳು ಸಕ್ರಿಯವಾಗಿ ತೊಡಗಿಸಿಕೊಂಡಿದ್ದರವು ಎಂದು ಸಿಬಿಐ ತನ್ನ ದೋಷಾರೋಪ ಪಟ್ಟಿಯಲ್ಲಿ ತಿಳಿಸಿದೆ.

7) ಮುಖ್ಯ ಕಾರ್ಯದರ್ಶಿ ನೀಡಿದ ವರದಿ ಆಧರಿಸಿ ದೆಹಲಿ ಲೆಫ್ಟಿನೆಂಟ್ ಗವರ್ನರ್ ವಿ.ಕೆ.ಸಕ್ಸೇನಾ ಸಿಬಿಐ ತನಿಖೆಗೆ ಆದೇಶಿಸಿದ್ದರು.
8) ದೆಹಲಿ ಲೆಫ್ಟಿನೆಂಟ್ ಗವರ್ನರ್ ವಿ.ಕೆ.ಸಕ್ಸೇನಾ ದೆಹಲಿ ಸರ್ಕಾರದ ನೂತನ ಅಬಕಾರಿ ನೀತಿಯನ್ನು ಏಕಪಕ್ಷೀಯ ನಿರ್ಧಾರ ಎಂದು ದೂಷಿಸಿದ್ದರು. ಇದು ಸರ್ಕಾರ ಹಾಗು ಜನರಿಗಿಂತ ಉನ್ನತ ಮಟ್ಟದ ವ್ಯಕ್ತಿಗಳಿಗೆ ಲಾಭದಾಯಕವಾಗಿ ಎಂದು ಆರೋಪಿಸಿದ್ದರು.
9) ಆರಂಭದಲ್ಲಿ ಆರೋಪಗಳನ್ನು ತಳ್ಳಿ ಹಾಕಿದ ಮನೀಶ್ ಸಿಸೋಡಿಯಾ ಕೇಂದ್ರ ಸರ್ಕಾರವು ತನಿಖಾ ಸಂಸ್ಥೆಗಳನ್ನು ದುರುಪಯೋಗ ಮಾಡಿಕೊಳ್ಳುತ್ತಿದ್ದಾರೆ ಎಂದು ಆರೋಪಿಸಿದ್ದರು. ಕಾಯ್ದೆ ಜಾರಿಯ ಬಗ್ಗೆ ಸಮರ್ಥಿಸಿಕೊಂಡಿದ್ದರು.
10) ಇತ್ತ ಎಎಪಿಯು ಕೇಂದ್ರ ಸರ್ಕಾರವು ದೆಹಲಿ ಸರ್ಕಾರದ ಜನಪ್ರಿಯ ಯೋಜನೆಗಳನ್ನು ಸಹಿಸಲಾರದೆ ಈ ರೀತಿ ಮಾಡುತ್ತಿದೆ ಎಂದು ಕಿಡಿಕಾರಿದೆ.