ಕಾಂಗ್ರೆಸ್ ಪಕ್ಷದಿಂದ ಮುಂದೆ ಮುಖ್ಯಮಂತ್ರಿಯಾಗಲು ಯಾರಾದರು ಯೋಗ್ಯ ವ್ಯಕ್ತಿ ಇದ್ದರೆ ಅದು ವಿಧಾನ ಪರಿಷತ್ ಮಾಜಿ ಸದಸ್ಯ ಎಸ್.ಆರ್. ಪಾಟೀಲ್ ಮಾತ್ರ ಸಾಧ್ಯ ಎಂದು ಮಾಜಿ ಕೇಂದ್ರ ಸಚಿವ ವೀರಪ್ಪ ಮೊಯ್ಲಿ ಅಭಿಪ್ರಾಯಪಟ್ಟಿದ್ದಾರೆ.
ಬಾಗಲಕೋಟೆಯ ಬಾಡಗಂಡಿಯಲ್ಲಿ ಭಾನುವಾರ ನಡೆದ ಎಸ್.ಆರ್. ಪಾಟೀಲ್ 74ನೇ ಜನ್ಮ ದಿನಾಚರಣೆಯ ಪ್ರಯುಕ್ತ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಮತನಾಡಿದ ಮೊಯ್ಲಿ ಮುಂದಿನ ದಿನಗಳಲ್ಲಿ ಅವರೊಬ್ಬರು ಆದರ್ಶ ಮುಖ್ಯಮಂತ್ರಿಯಾಗಲಿದ್ದಾರೆ ಎಂಬುದು ನನ್ನ ಮನಸ್ಸು ಹೇಳುತ್ತಿದೆ ಎಂದಿದ್ದಾರೆ.
ಪಾಟೀಲ್ ಅವರ ಪ್ರಾಮಾಣಿಕ ಹಾಗೂ ಸರಳ ಸಜ್ಜನಿಕೆಯೂ ಸಾಕಾರರೂಪವಾಗಿದ್ದಾರೆ ಅವರಿಗೆ ಕೆಪಿಸಿಸಿ ಅಧ್ಯಕ್ಷ ಸ್ಥಾನ ನೀಡಬೇಕು ಎಂದು ನಾನು ಈ ಹಿಂದೆ ಶಿಫಾರಸ್ಸು ಮಾಡಿದೆ ಎಂದು ಮಾತನಾಡುವ ವೇಳೆ ನೆನಪಿಸಿಕೊಂಡರು.







