ಇತ್ತೀಚೆಗಷ್ಟೇ ಪ್ರಧಾನಿ ಮೋದಿಯವರು ನೂತನ ಸಂಸತ್ ಭವನದ ಮೇಲೆ ನೂತನ ರಾಷ್ಟ್ರಯ ಲಾಂಛನವನ್ನು ಅನಾವರಣ ಮಾಡಿದ್ದರು. ಅದರೆ ಕೇಂದ್ರ ಸರ್ಕಾರದ ಹೊಸ ಲಾಂಛನ ಈಗ ನಮ್ಮ ಸಿಲಿಕಾನ್ ಸಿಟಿಗೂ ಎಂಟ್ರಿ ಕೊಡೋದಕ್ಕೆ ಸಿದ್ಧವಾಗಿದೆ. ಅಶೋಕ ಪಿಲ್ಲರ್ ಮೇಲಿರುವ ನಾಲ್ಕು ಸಿಂಹಗಳ ಮುಖವನ್ನು ಒಳಗೊಂಡ ರಾಷ್ಟ್ರೀಯ ಲಾಂಛನದ ‘ಸ್ವರೂಪ’ ರಾಜಧಾನಿಯಲ್ಲಿ ಬದಲಾಗಲಿದೆ.
ರಾಜ್ಯದಲ್ಲೂ ರಾಷ್ಟ್ರ ಲಾಂಛನದಲ್ಲಿರುವ ಸಿಂಹಗಳ ಮುಖಛರ್ಯೆ ಬದಲು !
ಸಂಸತ್ ಭವನದ ಮೇಲೆ ರಾಷ್ಟ್ರ ಲಾಂಛನದಲ್ಲಿ ಕೇಂದ್ರ ಸರ್ಕಾರದ ಬದಲಾವಣೆ ವಿಚಾರ ಈಗ ಬೆಂಗಳೂರಿಗೂ ತಟ್ಟಿದೆ. ಈ ಮೊದಲು ರಾಷ್ಟ್ರ ಲಾಂಛನದಲ್ಲಿ ಸಿಂಹದ ಬಾಯಿ ಮುಚ್ಚಿದ ಮಾದರಿಯಲ್ಲಿತ್ತು. ಕೇಂದ್ರ ಸರ್ಕಾರ ಸಿಂಹ ಘರ್ಜಿಸುವ ರೀತಿಯಲ್ಲಿ ಬದಲಾಯಿಸಿ ಲೋಕಾರ್ಪಣೆ ಮಾಡಿದೆ. ಈ ಹಿನ್ನೆಲೆ ಬೆಂಗಳೂರಿನಲ್ಲಿ ಇರುವ ರಾಷ್ಟ್ರಲಾಂಛನದಲ್ಲಿರುವ ಸಿಂಹಗಳ ಮುಖಛರ್ಯೆ ಬದಲಾವಣೆಗೆ ಬಿಬಿಎಂಪಿ ಗುಪ್ತ್ ಗುಪ್ತ್ ಆಗಿ ಸಿದ್ದತೆ ಮಾಡಿಕೊಳ್ಳುತ್ತಿದೆ.
ಜಯನಗರದ ಅಶೋಕ ಪಿಲ್ಲರ್ ಲಾಂಛನ ಬದಲಾವಣೆಗೆ ಬಿಬಿಎಂಪಿ ಸಿದ್ಧತೆ !
ಬೆಂಗಳೂರಿನ ಜಯನಗರದ ಅಶೋಕ ಪಿಲ್ಲರ್ ನಲ್ಲಿರುವ ರಾಷ್ಟ್ರ ಲಾಂಛ ಮೈಸೂರು ಸಂಸ್ಥಾನದ ಮಹಾರಾಜ ಶ್ರೀಮಜ್ಜಯಚಾಮರಾಜ ಒಡೆಯರ್ ಬಹದ್ದೂರ್ ಸ್ಥಾಪಿಸಿದರು. 1948 ಆಗಸ್ಟ್ 20 ರಂದು ಅಶೋಕ ಪಿಲ್ಲರ್ ಮೇಲೆ ರಾಷ್ಟ್ರ ಲಾಂಛನದ ಮೇಲೆ ಲೋಕಾರ್ಪಣೆ ಮಾಡಲಾಗಿತ್ತು.ಸ್ವಾತಂತ್ರ್ಯ ಸಿಕ್ಕ ಮರುವರ್ಷವೇ ಮೈಸೂರು ಸಂಸ್ಥಾನದಿಂದ ಜಯನಗರದಲ್ಲಿ ಈ ಪಿಲ್ಲರ್ ಸ್ಥಾಪಿಸಿದ್ದು, ಇದೀಗ ಬರೋಬ್ಬರಿ 71 ವರ್ಷಗಳ ಬಳಿಕ ಅಶೋಕ ಸ್ಥಂಭದ ಮೇಲಿನ ರಾಷ್ಟ್ರ ಲಾಂಛನದಲ್ಲಿ ಬದಲಾವಣೆ ಮಾಡೋದಕ್ಕೆ ಬಿಬಿಎಂಪಿ ಒಳಗೊಳಗೇ ಸಿದ್ದತೆ ನಡೆಸುತ್ತಿದೆ. ಸದ್ಯ ಗಂಭೀರ ಮುಖಭಾವವಿದ್ದ ಅಶೋಕಸ್ತಂಭದ ಸಿಂಹಗಳ ಮುಖವನ್ನೂ ಬದಲಾಯಿಸಿ ಸಿಂಹಗಳು ಬಾಯ್ದೆರದು ಕೋರೆಹಲ್ಲುಗಳನ್ನು ಪ್ರದರ್ಶಿಸುವ ರಾಷ್ಟ್ರಲಾಂಛನ ನಿರ್ಮಾಣ ಮೊಡೋದಕ್ಕೆ ಮುಂದಾಗಿದೆ. ಈ ಬಗ್ಗೆ ಬಿಬಿಎಂಪಿ ಅಯುಕ್ತರು ಪ್ರತಿಕ್ರಿಯಿಸಿದ್ದು, ಇನ್ನೂ ಅಧಿಕೃತವಾಗಿ ನಮಗೆ ಅದೇಶ ಬಂದಿಲ್ಲ. ಅದೇಶ ಬಂದ ನಂತರ ಎಲ್ಲಾ ರಾಜ್ಯಗಳಲು ಬದಲಾಯಿಸಿದ ಹಾಗೆ ನಾವು ಕೂಡ ಬದಲಾಯಿಸ್ತಿವಿ ಅಂತ ತಿಳಿಸಿದರು.

ಕೇಂದ್ರ ಸರ್ಕಾರದ ಸೂಚನೆ ಮೇರೆಗೆ ನಗರದಲ್ಲಿನ ರಾಷ್ಟ್ರ ಲಾಂಛನ ಬದಲಿಸಲು ಮುಂದಾದ ಬಿಬಿಎಂಪಿ !
ಸಂಸತ್ ಭವನದ ಮೇಲೆ ರಾಷ್ಟ್ರ ಲಾಂಛನದಲ್ಲಿ ಕೇಂದ್ರ ಸರ್ಕಾರದ ಬದಲಾವಣೆ ವಿಚಾರವಾಗಿ ವಿಪಕ್ಷಗಳು ವಿರೋಧ ವ್ಯಕ್ತಪಡಿಸಿ, ಬಿಜೆಪಿ ಸರ್ಕಾರ ಹಿಟ್ಲರ್ ರೀತಿಯಲ್ಲಿ ಕಾನೂನು ತರ್ತಿದೆ. ಬಿಬಿಎಂಪಿ ಗುಪ್ತ್ ಗುಪ್ತ್ ಆಗಿ ಅಶೋಕ ಪಿಲ್ಲರ್ ಮೇಲಿರುವ ಲಾಂಛನದ ಸಿಂಹಗಳ ಮುಖಛರ್ಯೆ ಬದಲಿಸಲು ಪಾಲಿಕೆ ಹೊರಟಿದೆ. ಹಳೆ ಪಾರಂಪರಿಕ ಕಟ್ಟಡಗಳು. ಪಿಲ್ಲರ್ ಗಳನ್ನು ಕೆಡವಿ ತಮ್ಮಗೆ ಇಷ್ಟವಾದ ಬದಲಾವಣೆ ಮಾಡ್ತಿದೆ ಅಂತ ಬಿಬಿಎಂಪಿ ಕಾಂಗ್ರೆಸ್ ನಾಯಕ ಅಬ್ದುಲ್ ವಾಜೀದ್ ಅಕ್ರೋಶ ವ್ಯಕ್ತಪಡಿಸಿದರು. ಒಟ್ಟಾರೆ ಪ್ರಧಾನಿ ನರೇಂದ್ರ ಮೋದಿಯವರು ಇತ್ತೀಚೆಗೆ ಅನಾವರಣ ಮಾಡಿರುವ ಲಾಂಛನ ನಮ್ಮ ಬೆಂಗಳೂರಿಗೂ ಕಾಲಿಡಲಿದ್ದೂ, ಇದಕ್ಕೆ ಬಿಬಿಎಂಪಿ ಕೂಡ ಒಳಗೊಳಗೆ ಸಿದ್ದತೆ ನಡೆದಿದೆ. ಇತ್ತ ಪಾರಂಪರಿಕ ಕಟ್ಟಡ, ಗೋಪುರ, ಸ್ಥಂಭ ಅನ್ನೋ ಹೆಸರಿಗೆ ಅರ್ಥ ಇಲ್ಲದಂತೆ ಅಗೋದಂತೂ ಗ್ಯಾರಂಟಿ.






