• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Saturday, April 25, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home ಕರ್ನಾಟಕ

ಜಯದೇವ ಆಸ್ಪತ್ರೆ ನಿರ್ದೇಶಕರಾಗಿ ಡಾ. ಮಂಜುನಾಥ್ ಮುಂದುವರೆಯಲಿ : ಸರ್ಕಾರಕ್ಕೆ ಒತ್ತಾಯ

ಪ್ರತಿಧ್ವನಿ by ಪ್ರತಿಧ್ವನಿ
July 16, 2022
in ಕರ್ನಾಟಕ
0
ಜಯದೇವ ಆಸ್ಪತ್ರೆ ನಿರ್ದೇಶಕರಾಗಿ ಡಾ. ಮಂಜುನಾಥ್ ಮುಂದುವರೆಯಲಿ : ಸರ್ಕಾರಕ್ಕೆ ಒತ್ತಾಯ
Share on WhatsAppShare on FacebookShare on Telegram

ADVERTISEMENT

ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಯ ಹಾಲಿ ನಿರ್ದೇಶಕ ಡಾ.ಸಿ.ಎನ್. ಮಂಜುನಾಥ್​ ರವರ​ ಅವಧಿ ಜುಲೈ 19ಕ್ಕೆ ಮುಕ್ತಾಯಗೊಳ್ಳಲಿದ್ದು, ಹೊಸ ನಿರ್ದೇಶಕರ ನೇಮಕ ಮಾಡಲು ರಾಜ್ಯ ಸರ್ಕಾರ ಆದೇಶ ಹೊಡಿಸಿದ ಬೆನ್ನಲ್ಲೇ ಡಾ.ಮಂಜುನಾಥ್​ರನ್ನೇ ಮುಂದುವರಿಸುವಂತೆ ಜಯದೇವ ಆಸ್ಪತ್ರೆ ಸಿಬ್ಬಂದಿಗಳು ಸಿಎಂ ಗೆ ಪತ್ರ ಬರೆದು ಮನವಿ ಮಾಡಿದ್ದಾರೆ. ಇತ್ತ ಸುಧಾಮೂರ್ತಿ ಸೇರಿದಂತೆ ಹಲವು ಗಣ್ಯರು ಮಂಜುನಾಥ್ ಅವರನ್ನೇ ಮುಂದುವರೆಸಲು ಸರ್ಕಾರದ ಮೇಲೆ ಒತ್ತಡ ಹಾಕುತ್ತಿದ್ದಾರೆ.

ಜಯದೇವ ಆಸ್ಪತ್ರೆ ನಿರ್ದೇಶಕರಾಗಿ ಕಾರ್ಯನಿರ್ವಾಹಿಸಿದ ಡಾ. ಮಂಜುನಾಥ್ ಅವರು ಇದೇ ಜುಲೈ 19 ರಂದು ನಿವೃತ್ತಿಯಾಗುತ್ತಿರುವುದು ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಯ ಸಿಬ್ಬಂದಿಗೆ ಅಪಾರವಾದ ನೋವನ್ನುಂಟು ಮಾಡಿದೆಯಂತೆ. ಅದಕ್ಕೆ ಸಿಬ್ಬಂದಿ ವರ್ಗವು ಸಿಎಂ ಬಸವರಾಜ ಬೊಮ್ಮಾಯಿ ಅವರಿಗೆ ಪತ್ರ ಬರೆದು, ಮಂಜುನಾಥ್ ಅವರನ್ನೇ ನಿರ್ದೇಶಕರನ್ನಾಗಿ ಮುಂದುವರಿಸುವಂತೆ ಮನವಿ ಮಾಡಿದ್ದಾರೆ.

ಪತ್ರದಲ್ಲಿ, “ಶ್ರೀ ಜಯದೇವ ಹೃದ್ರೋಗವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಯ ಸಿಬ್ಬಂದಿಯಾದ ನಾವುಗಳು ಈ ಮೂಲಕ ಕೋರುವುದೇನೆಂದರೆ, ಪ್ರಸ್ತುತ ಸಂಸ್ಥೆಯ ನಿರ್ದೇಶಕರಾಗಿರುವ ಡಾ.ಸಿ.ಎನ್. ಮಂಜುನಾಥ್ ರವರ ಸೇವೆಯು ದಿನಾಂಕ: 19-07-2022ಕ್ಕೆ ಅಂತಿಮಗೊಳ್ಳುತ್ತಿರುವುದು ನಮ್ಮೆಲ್ಲರಿಗೂ ಅಪಾರವಾದ ನೋವನ್ನುಂಟುಮಾಡಿದೆ. ನಮ್ಮ ನಿರ್ದೇಶಕರ ಕರುಣೆ, ಶಿಸ್ತು, ಆಪ್ಯಾಯತೆ, ಸೂಕ್ತ ನಿರ್ದೇಶನ, ಮಾರ್ಗದರ್ಶನ ಮುಂತಾದ ಉನ್ನತ ಗುಣಗಳನ್ನು ಮಾದರಿಯಾಗಿಟ್ಟುಕೊಂಡು ಮುನ್ನಡೆಯುತ್ತಿರುವ ಸಂಸ್ಥೆಯ ಸಿಬ್ಬಂದಿ ಹಾಗೂ ಲಕ್ಷಾಂತರ ಬಡ ಹೃದ್ರೋಗಿಗಳಿಗೆ ಈ ವಿಷಯವು ಅತ್ಯಂತ ಖೇದ್ಯವುಂಟುಮಾಡಿದೆ.

ಆದ್ದರಿಂದ ನ್ಯಾಷನಲ್ ಮೆಡಿಕಲ್ ಕೌನ್ಸಿಲ್ ಪ್ರಕಾರ ಯಾವುದೇ ಸಂಸ್ಥೆಯ ಮುಖ್ಯಸ್ಠರು 70 ವರ್ಷಗಳವರೆಗೆ ಸೇವೆಯನ್ನು ನಿರ್ವಹಿಸಬಹುದು. ಅದರಂತೆ ಪ್ರಸ್ತುತ ಡಾ. ಸಿ.ಎನ್. ಮಂಜುನಾಥ್ ರವರಿಗೆ 65 ವರ್ಷ ನಡೆಯುತ್ತಿದೆ. ಈ ಹಿನ್ನೆಲೆಯಲ್ಲಿ ಅವರಿಗೆ ಮತ್ತಷ್ಟು ವರ್ಷಗಳವರೆಗೆ ಆಡಳಿತ ನಿರ್ವಹಿಸುವ ನಾಯಕತ್ವ ಗುಣವಿರುವುದನ್ನು ತಮ್ಮ ಗಮನಕ್ಕೆ ತರಬಯಸುತ್ತೇವೆ. ಅಧೋಗತಿಯಲ್ಲಿ ಮುಳುಗುತ್ತಿದ್ದ ಜಯದೇವ ಆಸ್ಪತ್ರೆಯನ್ನು ಕೈಹಿಡಿದೆತ್ತಿದ್ದಾರೆ ಎಂದು ಬರೆದಿದ್ದಾರೆ.

ಡಾ. ಮಂಜುನಾಥ್ ನಿರ್ದೆಶಕ ಹುದ್ದೆಯಲ್ಲಿ ಮುಂದೆವರಿಕೆಗೆ ಅಡ್ಡಿ :

ಡಾ.ಮಂಜುನಾಥ್​ ಜಯದೇವ ಆಸ್ಪತ್ರೆ ನಿರ್ದೇಶಕರಾಗಿ ಮುಂದುವರಿಕೆಗೆ ಕೆಲ ಸಚಿವರ ಅಡ್ಡಿ ಮಾಡುತ್ತಿದ್ದಾರೆ ಎಂದು ಆರೋಪ ಕೇಳಿಬರುತ್ತಿದೆ.

ನಿರ್ದೇಶಕ ಸೇವೆಯಲ್ಲಿ ಮಂಜುನಾಥ್ ಅವರನ್ನು ಮುಂದುವರೆಸದಿದ್ದರೆ ಜಯದೇವ ಒಪಿಡಿ ಬಂದ್!:

ಡಾ.ಮಂಜುನಾಥ್​ರವರ ಸೇವೆಯನ್ನು ರಾಜ್ಯ ಸರ್ಕಾರ ಮೊಟಕುಗೊಳಿಸಿದರೆ, ಜಯದೇವ ಹೃದ್ರೋಗ ಆಸ್ಪತ್ರೆ ಸಿಬ್ಬಂದಿ ಒಪಿಡಿಯನ್ನು ಬಂದ್​ ಮಾಡುವ ಸಾಧ್ಯತೆ ಇದೆ.

ಜಾಲತಾಣದಲ್ಲಿ ಪೋಸ್ಟರ್ ಅಭಿಯಾನ

ಡಾ. ಮಂಜುನಾಥ್ ಅವರ ಕಿರು ನೋಟ

ಪ್ರಸ್ತುತ ಡಾ. ಸಿ.ಎನ್. ಮಂಜುನಾಥ್ ರವರಿಗೆ 65 ವರ್ಷ ನಡೆಯುತ್ತಿದೆ. ಅವರ ವೈದ್ಯಕೀಯ ಸೇವೆಯಲ್ಲಿ 5,27,437 ಹೊರ ರೋಗಿಗಳನ್ನು ನೋಡಿದ್ದಾರೆ. 53,806 ರಲ್ಲಿ – 30,000 ರೋಗಿಗಳಿಗೆ ಸಬ್ಸಿಡಿ ವೆಚ್ಚವಾಗಿ ಚಿಕಿತ್ಸೆ ನೀಡಲಾಗಿದೆ. 42,865 ಕ್ಯಾಥ್ ಲ್ಯಾಬ್ ಕಾರ್ಯವಿಧಾನ ಇದು ದೇಶದಲ್ಲೇ ಹೆಚ್ಚು. 15,000 ಆಂಜಿಯೋಪ್ಲ್ಯಾಸ್ಟಿಗಳು ಇದು ಕೂಡ ದೇಶದಲ್ಲಿಯೆ ಹೆಚ್ಚು. 3,00,054 ಎಕೋ – ಕಾರ್ಡಿಯೋಗ್ರಾಮ್‍ಗಳು. ಇದು ಜಗತ್ತಿನಲ್ಲಿ ಅತಿ ಹೆಚ್ಚು ಆಗಿದೆ. ಇವರ ನಿಸ್ವಾರ್ಥ ವೈದ್ಯಕೀಯ ಸೇವೆಗಾಗಿ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ದೊರೆತಿದೆ.

ಸರ್ಕಾರದ ಆದೇಶ ಪತ್ರ
Tags: BJPCongress PartyCovid 19ಎಚ್ ಡಿ ಕುಮಾರಸ್ವಾಮಿನರೇಂದ್ರ ಮೋದಿಬಿಜೆಪಿ
Previous Post

ವಿಪಕ್ಷ ಹಾಗೂ ಆಡಳಿತ ಪಕ್ಷಗಳ ನಡುವಿನ ಗೌರವ ಕಡಿಮೆಯಾಗುತ್ತಿದೆ : ಸಿಜೆಐ ರಮಣ

Next Post

ಮಾಯಾಭ್ರಾಂತಿಯ ಗೀತಜ್ಞ ಪ್ರವಚನಕಾರರು

Related Posts

ಆಯುಕ್ತರ ಹೆಸರಿನಲ್ಲಿ ವಾಟ್ಸ್‌ಆಪ್ ವಂಚನೆ ಯತ್ನ: ಬೆಂಗಳೂರು ಪಾಲಿಕೆಗಳಿಂದ ಸಾರ್ವಜನಿಕರಿಗೆ ಎಚ್ಚರಿಕೆ
ಕರ್ನಾಟಕ

ಆಯುಕ್ತರ ಹೆಸರಿನಲ್ಲಿ ವಾಟ್ಸ್‌ಆಪ್ ವಂಚನೆ ಯತ್ನ: ಬೆಂಗಳೂರು ಪಾಲಿಕೆಗಳಿಂದ ಸಾರ್ವಜನಿಕರಿಗೆ ಎಚ್ಚರಿಕೆ

by ಪ್ರತಿಧ್ವನಿ
April 24, 2026
0

ಬೆಂಗಳೂರು: ನಗರದ ಗ್ರೇಟರ್ ಬೆಂಗಳೂರು ಪ್ರಾಧಿಕಾರದ ವ್ಯಾಪ್ತಿಯ ಪಾಲಿಕೆಗಳ ಆಯುಕ್ತರ ಹೆಸರಿನಲ್ಲಿ ವಾಟ್ಸ್‌ಆಪ್ ಮತ್ತು ಸಾಮಾಜಿಕ ಜಾಲತಾಣಗಳ ಮೂಲಕ ವಂಚನೆ ಯತ್ನ ನಡೆಯುತ್ತಿರುವುದು ಬೆಳಕಿಗೆ ಬಂದಿದೆ. ಈ...

Read moreDetails
ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳಿಗೆ ಶಾಕ್: ಮೂರನೇ ಪರೀಕ್ಷೆ ರದ್ದು

ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳಿಗೆ ಶಾಕ್: ಮೂರನೇ ಪರೀಕ್ಷೆ ರದ್ದು

April 23, 2026
ಎಸ್‌ಎಸ್‌ಎಲ್‌ಸಿ ಫಲಿತಾಂಶದಲ್ಲಿ ದಾಖಲೆ ಸಾಧನೆ: ಈ 7 ಮಂದಿಗೆ ಪೂರ್ಣ ಅಂಕ!

ಎಸ್‌ಎಸ್‌ಎಲ್‌ಸಿ ಫಲಿತಾಂಶದಲ್ಲಿ ದಾಖಲೆ ಸಾಧನೆ: ಈ 7 ಮಂದಿಗೆ ಪೂರ್ಣ ಅಂಕ!

April 23, 2026
ಎಸ್‌ಎಸ್‌ಎಲ್‌ಸಿ ಫಲಿತಾಂಶ ಪ್ರಕಟ: ಜಿಲ್ಲಾವಾರು ವಿವರ ಇಲ್ಲಿದೆ

ಎಸ್‌ಎಸ್‌ಎಲ್‌ಸಿ ಫಲಿತಾಂಶ ಪ್ರಕಟ: ಜಿಲ್ಲಾವಾರು ವಿವರ ಇಲ್ಲಿದೆ

April 23, 2026
ಬೆಸ್ಕಾಂನ ‘ಹೆಚ್‌ಟಿ ಮಿತ್ರ’  ಪೋರ್ಟಲ್‌ಗೆ ಚಾಲನೆ ನೀಡಿದ ಇಂಧನ ಸಚಿವ ಕೆ.ಜೆ. ಜಾರ್ಜ್

ಬೆಸ್ಕಾಂನ ‘ಹೆಚ್‌ಟಿ ಮಿತ್ರ’ ಪೋರ್ಟಲ್‌ಗೆ ಚಾಲನೆ ನೀಡಿದ ಇಂಧನ ಸಚಿವ ಕೆ.ಜೆ. ಜಾರ್ಜ್

April 23, 2026
Next Post
ಮಾಯಾಭ್ರಾಂತಿಯ ಗೀತಜ್ಞ ಪ್ರವಚನಕಾರರು

ಮಾಯಾಭ್ರಾಂತಿಯ ಗೀತಜ್ಞ ಪ್ರವಚನಕಾರರು

Please login to join discussion
https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada