ಚೀನಾದ ಓಪ್ಪೊ ಮೊಬೈಲ್ ಕಂಪನಿ 4390 ಕೋಟಿ ರೂ. ಸುಂಕ ವಂಚಿಸಿರುವುದನ್ನು ರೆವಿನ್ಯೂ ಇಂಟಲಿಜೆನ್ಸ್ ಜಾರಿ ನಿರ್ದೇಶನಾಲಯ ಪತ್ತೆಹಚ್ಚಿದೆ.
ಚೀನಾದ ಸ್ಮಾರ್ಟ್ ಫೋನ್ ಉತ್ಪಾದಕ ಸಂಸ್ಥೆಯಾದ ಬಿಬಿಕೆ ಎಲೆಕ್ಟ್ರಾನಿಕ್ಸ್ ಕಂಪನಿ 4390 ಕೋಟಿ ರೂ.ವನ್ನು ವಂಚಿಸಿರುವುದು ಪತ್ತೆಯಾಗಿದೆ ಎಂದು ಕೇಂದ್ರ ಸರಕಾರ ಪ್ರಕಟಣೆಯಲ್ಲಿ ತಿಳಿಸಿದೆ.
ಭಾರತದ ಕಾನೂನು ಪ್ರಕಾರ ಆಮದು ಮಾಡಿಕೊಂಡ ಸಾಮಾಗ್ರಿಗಳಿಗೆ ಗೌರವ ನೀಡುವ ವಿಚಾರವನ್ನು ಮರೆಮಾಚಲಾಗಿದೆ. ಈ ಹಿನ್ನೆಲೆಯಲ್ಲಿ ಕಂಪನಿಗೆ ಶೋಕಾಸ್ ನೋಟಿಸ್ ಜಾರಿ ಮಾಡಲಾಗಿದೆ ಎಂದು ತಿಳಿದು ಬಂದಿದೆ.