ದಕ್ಷಿಣ ಪದವೀಧರ ಕ್ಷೇತ್ರದ ಚುನಾವಣೆ ಕಳೆದ ಮೂರು ದಿನಗಳಿಂದೆ ನಡೆದಿದ್ದು ನಿನ್ನೆ ಅಂದರೆ ಬುಧವಾರ ಫಲಿತಾಂಶ ಹೊರಬಿದ್ದಿದೆ. ಮತ ಎಣಿಕೆ ವೇಳೆ ನಮಗೆ ಕೊಳವಿ ಬಾವಿ ತೊಡಿಸಿಕೊಡಿ ಅಂಥ ಮತ ಪೆಟ್ಟಿಗೆ ಯುವಕ ಪತ್ರ ಹಾಕಿರುವ ಘಟನೆಯೂ ನಡೆದಿದೆ.
ಪತ್ರದಲ್ಲಿ , ನಾನು ಎಂ.ಎ ಬಿ.ಎಡ್ ಮಾಡಿದ್ದೇನೆ.
ಆದ್ರೆ ನನಗೆ ಕೆಲಸ ಇಲ್ಲಾ. ನಮ್ಮಪ್ಪನ ಜಮೀನಿನಲ್ಲಿ ಕೆಲಸ ಮಾಡುತ್ತಿದ್ದೇನೆ. ಜಮೀನಿಗೆ ಕೊಳವೆ ಬಾವಿ
ಅವಶ್ಯಕತೆ ಇದೆ. ನನಗೆ ಸರ್ಕಾರಿ ಕೆಲಸ ಕೊಡಿ ಇಲ್ಲ ಅಂದ್ರೆ ಜಮೀನಿನಲ್ಲಿ ಕೊಳವೆಬಾವಿ ತೊಡಿಸಿಕೊಡಿ ಎಂದು ಪತ್ರ ಬರೆದು ಆಗ್ರಹಿಸಿದ್ದಾನೆ.
ಪೆಟ್ರೋಲ್ ಬೆಲೆ ಇಳಿಸಿ, ರಸಗೊಬ್ಬರ ಬೆಲೆ ಕಡಿಮೆ ಮಾಡಿ ಎಂದು ಪತ್ರ ಬರೆದು ಬ್ಯಾಲೆಟ್ ಪೇಪರೆ ಜೊತೆಗೆ ಹಾಕಿದ ಮತದಾರರ.
ಚಾಮರಾಜನಗರ ಜಿಲ್ಲೆಯ ಯಳಂದೂರು ತಾಲೂಕಿನ ಗಣಿಗನೂರು ಗ್ರಾಮದ ರಾಜೇಂದ್ರ ಎಂಬುವವರು ತಮ್ಮ ಕೋರಿಕೆಯನ್ನು ಮತ ಪೆಟ್ಟಿಯೊಳಗೆ ಪತ್ರಗಳನ್ನ ಹಾಕಿದ್ದಾರೆ.
ಇನ್ನು ಕೆಲವರು ಬ್ಯಾಲೇಟ್ ಪತ್ರ ಮೇಲೆಯೇ ಅಭ್ಯರ್ಥಿಗಳ ವಿರುದ್ಧ ಅವಾಚ್ಯ ಪದಗಳನ್ನ ಬರೆದು ಮತಚಲಾಯಿಸಿದ್ದಾರೆ. ಯಾವ ಅಭ್ಯರ್ಥಿಗಳು ಹಣ ಕೊಟ್ಟಿಲ್ಲಾ ಎಂದು ಬ್ಯಾಲೇಟ್ ಪೇಪರ್ ಮೇಲೆ ಬರೆದಿರುವ ಮತದಾರ.