ಸಂಘಟಿತ ಪ್ರದರ್ಶನ ನೀಡಿದ ಭಾರತ ತಂಡ 48 ರನ್ ಗಳ ಭಾರೀ ಅಂತರದಿಂದ ದಕ್ಷಿಣ ಆಫ್ರಿಕಾ ತಂಡವನ್ನು ಸೋಲಿಸುವ ಮೂಲಕ 5 ಪಂದ್ಯಗಳ ಟಿ-20 ಸರಣಿಯನ್ನು ಜೀವಂತವಾಗಿರಿಸಿಕೊಂಡಿತು.
ವಿಶಾಖಪಟ್ಟಣದಲ್ಲಿ ಮಂಗಳವಾರ ನಡೆದ ಮೂರನೇ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಭಾರತ ತಂಡ 20 ಓವರ್ ಗಳಲ್ಲಿ 5 ವಿಕೆಟ್ ಕಳೆದುಕೊಂಡು 179 ರನ್ ಗಳಿಸಿತು. ಕಠಿಣ ಗುರಿ ಬೆಂಬತ್ತಿದ ದಕ್ಷಿಣ ಆಫ್ರಿಕಾ ತಂಡ 19.1 ಓವರ್ ಗಳಲ್ಲಿ 131 ರನ್ ಗೆ ಆಲೌಟಾಯಿತು.
ಈ ಮೂಲಕ ಭಾರತ ಸರಣಿಯಲ್ಲಿ ಗೆಲುವಿನ ಖಾತೆ ತೆರೆಯುವ ಮೂಲಕ 1-2ರಿಂದ ಹಿನ್ನಡೆ ಅಂತರವನ್ನು ತಗ್ಗಿಸಿಕೊಂಡಿತು.
ಭಾರತದ ಪರ ಯಜುರ್ವೆಂದ್ರ ಚಾಹಲ್ 3 ಮತ್ತು ಹರ್ಷಲ್ ಪಟೇಲ್ 4 ವಿಕೆಟ್ ಪಡೆದು ದಕ್ಷಿಣ ಆಫ್ರಿಕಾದ ಬ್ಯಾಟ್ಸ್ ಮನ್ ಗಳನ್ನು ಕಟ್ಟಿಹಾಕಿದರು.ಭುವನೇಶ್ವರ್ ಕುಮಾರ್ ಮತ್ತು ಅಕ್ಸರ್ ಪಟೇಲ್ ತಲಾ 1 ವಿಕೆಟ್ ಗಳಿಸಿದರು.
ದಕ್ಷಿಣ ಆಫ್ರಿಕಾ ಪರ ಹೆನ್ರಿಕ್ಸ್ (23), ಡ್ವೈನ್ ಪ್ರಿಸ್ಟೊರಿಯಸ್ (20), ಹೆನ್ರಿಚ್ ಕ್ಲಾಸೆನ್ (29), ವೇಯ್ನ್ ಪಾರ್ನೆಲ್ (22) ಮತ್ತು ಕೇಶವ್ ಮಹರಾಜ್ (11) ತಕ್ಕಮಟ್ಟಿಗೆ ಹೋರಾಟ ನಡೆಸಿದರೂ ಅದು ಫಲ ನೀಡಲಿಲ್ಲ.