ಹಲವಾರು ಕ್ಷೇತ್ರಗಳಲ್ಲಿ ಲಿಂಗಾಯತ ಸಮುದಾಯ ಕರ್ನಾಟಕದ ಅಭಿವೃದ್ಧಿಗೆ ವಿವಿಧ ಬಗೆಯಲ್ಲಿ ತನ್ನ ಕೊಡುಗೆ ನೀಡಿದೆ. ಕರ್ನಾಟಕವು ಬಸವಣ್ಣ ˌ ಕನಕದಾಸˌ ಸರ್ವಜ್ಞ ˌ ಷರೀಫˌ ಕುವೆಂಪುರವರ ವಿಚಾರಧಾರೆಯ ನೆಲ. ಕನ್ನಡನಾಡು ಸೌಹಾರ್ದತೆˌ ಸಹಿಷ್ಣತೆ ಮತ್ತು ಸಹೋರತ್ವದ ನೆಲೆಬೀಡು. ಆದರೆ ಇತ್ತೀಚಿನ ದಿನಗಳಲ್ಲಿ ಫ್ಯಾಸಿಷ್ಟ್ ಶಕ್ತಿಗಳು ಕರ್ನಾಟಕದ ನೆಲದಲ್ಲಿರುವ ಬಹು ಸಂಸ್ಕೃತಿಯ ಮೂಲ ಆಶಗಳನ್ನು ನಾಶಪಡಿಸಲು ಪ್ರಯತ್ನಿಸುತ್ತಿವೆ. ಉತ್ತರದ ರಾಜ್ಯಗಳಿಗೆ ಹೋಲಿಸಿದರೆ ಕರ್ನಾಟಕವು ಫ್ಯಾಸಿಷ್ಟ್ ಶಕ್ತಿಗಳನ್ನು ಮೊದಲಿನಿಂದಲೂ ದೂರವಿಟ್ಟಿದೆ. ಸ್ವತಂತ್ರಪೂರ್ವಕಾಲದಿಂದಲೂ ಲಿಂಗಾಯತ ಸಮುದಾಯವು ಇಲ್ಲಿನ ಬ್ರಾಹ್ಮಣೇತರ ಸಮುದಾಯಗಳ ಹಿತ ಕಾಯ್ವ ಕಾರ್ಯ ಮಾಡುತ್ತ ಬಂದಿದೆ. ಆದರೆ ಇತ್ತೀಚಿಗೆ ರಾಜಕೀಯ ಕಾರಣಗಳಿಂದ ಲಿಂಗಾಯತ ಸಮುದಾಯ ತನ್ನ ಮೂಲ ಆಶಯಗಳನ್ನು ಮರೆತು ಕವಲು ಹಾದಿ ತುಳಿಯುತ್ತಿದೆ. ಇಲ್ಲಿ ನಾನು ರಾಜ್ಯ ಮತ್ತು ದೇಶಕ್ಕೆ ಲಿಂಗಾಯತ ಧರ್ಮದ ಕೊಡುಗೆಗಳ ಬಗ್ಗೆ ಚರ್ಚಿಸುತ್ತಾ ಇತಿಹಾಸ ಕಾಲದಿಂದ ಲಿಂಗಾಯತರ ಉದಾತ್ ಹಾಗು ಸಮಾಜಮುಖಿ ಕಾರ್ಯಗಳಿಗೆ ಅಡಚಣಿ ಮಾಡಿದ ಪುರೋಹಿತಶಾಹಿಗಳ ಹುನ್ನಾರಗಳ ಕುರಿತು ಕೂಡ ವಿವರಿಸಿದ್ದೇನೆ.
ಕನ್ನಡ ನೆಲದಲ್ಲಿ ಪುರೋಹಿತಶಾಹಿಗಳಿಗೆ ಪ್ರತಿಧ್ವಂದ್ವಿಯಾಗಿ ೧೨ ನೇ ಶತಮಾನದಲ್ಲಿ ಬಸವಣ್ಣನವರ ನೇತೃತ್ವದಲ್ಲಿ ನಡೆದದ್ದು ಕಲ್ಯಾಣದ ವಚನ ಚಳುವಳಿ. ಸಮಾಜದಲ್ಲಿ ಸರ್ವಾಂಗೀಣ ಸಮಾನತೆ ತರುವ ಸಲುವಾಗಿ ನಡೆದ ವಚನ ಚಳುವಳಿಯಲ್ಲಿ ಭಾಗಿಯಾದವರು ಶತಶತಮಾನಗಳಿಂದ ಅಕ್ಷರ ವಂಚಿತ ನೆಲಮೂಲದ ಶ್ರಮ ಸಂಸ್ಕೃತಿಯ ಉತ್ಪಾದನಾ ವರ್ಗದ ಶರಣರು. ಶರಣರು ಅನುಭವ ಮಂಟಪದ ಸಂವಾದಗಳ ಮೂಲಕ ಲಿಂಗ ಸಮಾನತೆˌ ಆರ್ಥಿಕ ಸಮಾನತೆˌ ಸಾಮಾಜಿಕ ಹಾಗು ಧಾರ್ಮಿಕ ಸಮಾನತೆಗಾಗಿ ವಚನ ಚಳುವಳಿಯನ್ನು ಹುಟ್ಟುಹಾಕಿದರು. ವಚನ ಚಳುವಳಿಯನ್ನು ರಕ್ತಪಾತದ ಮುಖೇನ ಹತ್ತಿಕ್ಕಿದ್ದು ನಾರಾಯಣ ಕೃಮಿತˌ ಕೃಷ್ಣ ಪೆದ್ದಿ ˌ ಗೋವಿಂದ ಭಟ್ಟ ˌ ವಿಷ್ಣು ಭಟ್ಟ ಮುಂತಾದ ಪುರೋಹಿತಶಾಹಿಗಳು. ಅಂದು ವೈದಿಕರು ಶರಣರ ಹತ್ಯೆಯ ಜೊತೆಜೊತೆಗೆ ವಚನ ಕಟ್ಟುಗಳು ನಾಶಪಡಿಸಿದರು. ಲಿಂಗಾಯತ ಶರಣರ ನಡುವೆ ನಡೆದ ರಕ್ತಸಂಬಂಧವನ್ನು ವರ್ಣಸಂಕರವೆಂದು ಬಿಂಬಿಸಿ ಬಸವಣ್ಣನವರನ್ನು ಕಲ್ಯಾಣದಿಂದ ಗಡಿಪಾರುಗೊಳಿಸಿ ಶರಣರನ್ನು ಎಳೆಹೂಟೆ ಶಿಕ್ಷೆಗೆ ಗುರಿಪಡಿಸಿದರು.
ಕರ್ನಾಟಕದ ರಾಜ ಮನೆತನಗಳಲ್ಲಿ ಕಿತ್ತೂರು ಸಂಸ್ಥಾನಕ್ಕೆ ವಿಶೇಷ ಸ್ಥಾನವಿದೆ. ೧೭೬೫-೧೮೧೬ ರ ಸಂದರ್ಭದಲ್ಲಿ ಕಿತ್ತೂರು ಸಂಸ್ಥಾನ ಒಂದು ಪ್ರಬಲ ಸಾಮ್ರಾಜ್ಯವಾಗಿ ಹೊರಹೊಮ್ಮುತ್ತಿದ್ದ ಕಾಲ. ರಾಣಿ ಚೆನ್ನಮ್ಮನ ಆಡಳಿತ ಜಾತ್ಯಾತೀತ ನೆಲೆಗಟ್ಟಿನಲ್ಲಿ ಕಾರ್ಯ ಮಾಡುತ್ತಿತ್ತು. ಅದಕ್ಕೆ ಉದಾಹರಣೆ ಸಂಗೊಳ್ಳಿ ರಾಯಣ್ಣ ರಾಣಿಯ ಅತ್ಯಂತ ವಿಶ್ವಾಸನೀಯ ಭಂಟನಾಗಿದ್ದು. ಹೀಗೆ ಪ್ರಬಲವಾಗುತ್ತಿದ್ದ ಕಿತ್ತೂರು ಸಂಸ್ಥಾನ ಮುಂದೊಂದು ದಿನ ತಮಗೆ ಪ್ರತಿಸ್ಪರ್ಧಿಯಾಗಬಹುದೆಂದು ಕಿತ್ತೂರು ಸಂಸ್ಥಾನಕ್ಕೆ ದೊಡ್ಡ ಮಟ್ಟದ ತೊಂದರೆ ಕೊಟ್ಟವರು ಪುಣೆಯ ಚಿತ್ಪಾವನ ಪೇಶ್ವೆಯಾಗಿದ್ದ ಎರಡನೇ ಬಾಜಿರಾಯ. ಕಿತ್ತೂರು ಸಂಸ್ಥಾನಕ್ಕೆ ಬೇಕಾದ ಆಡಳಿತಾತ್ಮಕ ಸಹಕಾರ ನಿಡದೆˌ ಸಂಸ್ಥಾನದ ಅರಸರನ್ನು ಅಕ್ರಮವಾಗಿ ಬಂಧನಕ್ಕೊಳಪಡಿಸಿದ್ದು ಇದೇ ಪೇಶ್ವೆಗಳು. ಕಿತ್ತೂರಿನ ಗುಟ್ಟುಗಳನ್ನ ಮಲ್ಲಪ್ಪ ಶೆಟ್ಟಿಯ ಮೂಲಕ ಬ್ರಿಟೀಷರಿಗೆ ತಲುಪಿಸಿದ್ದು ಅಂದಿನ ಧಾರವಾಡದ ಡಿಸಿ ಕಚೇರಿಯಲ್ಲಿ ಹೆಡ್ ಗುಮಾಸ್ತನಾಗಿದ್ದ ವೆಂಕಟರಾವ್ ಹಾವೇರಿ ಎಂದ ವೈದಿಕ. ಮಲ್ಲಪ್ಪ ಶೆಟ್ಟಿಯನ್ನು ಬಳಸಿಕೊಂಡು ಕಿತ್ತೂರು ಸಂಸ್ಥಾನದ ಮೇಲೆ ಈ ವೆಂಕಟರಾವ್ ತನ್ನ ಹಿಡಿತ ಸಾದಿಸಿದ್ದ. ಕಿತ್ತೂರು ಸಂಸ್ಥಾನವನ್ನು ದುರ್ಬಲಗೊಳಿಸಲು ಅಂದು ಮೀರಜ ಮತ್ತು ಜಮಖಂಡಿಯ ಸಂಸ್ಥಾನಿಕರಾಗಿದ್ದ ಪಟವರ್ಧನಗಳು ಭಾರೀ ಪ್ರಯತ್ನವನ್ನು ಮಾಡಿದ್ದರು.
ದೇಶದೆಲ್ಲೆಡೆಯಂತೆ ಕರ್ನಾಟಕದಲ್ಲಿ ಕೂಡ ಶಿಕ್ಷಣವು ಕೇವಲ ಕೆಲವೇ ಕೆಲವು ಜನರ ಕಪಿಮುಷ್ಟಿಯಲ್ಲಿತ್ತು. ಆಗ ಲಿಂಗಾಯತ ಮಠಗಳು ಮತ್ತು ಶಿಕ್ಷಣ ಸಂಸ್ಥೆಗಳು ಶಿಕ್ಷಣವನ್ನು ಸಾರ್ವತ್ರೀಕರಣಗೊಳಿಸಿ ಬ್ರಾಹ್ಮಣೇತರರು ಶಿಕ್ಷಣ ಪಡೆಯು ವಾತಾವರಣ ನಿರ್ಮಿಸಿದವು. ಶಿಕ್ಷಣವನ್ನು ಸಾರ್ವತ್ರೀಕರಣಗೊಳಿಸಲು ಅಂದು ಲಿಂಗಾಯತರಿಗೆ ಅಡಚಣಿಪಡಿಸಿದ್ದು ಇದೇ ಪುರೋಹಿತಶಾಹಿಗಳು. ೧೯೩೦ ರ ದಶಕದಲ್ಲಿ ಬೆಳಗಾವಿಯ ಕೆ ಎಲ್ ಇ ಸಂಸ್ಥೆ ಲಿಂಗರಾಜ್ ಕಾಲೇಜು ಸ್ಥಾಪನೆಗೆ ಅಂದಿನ ಮುಂಬೈ ವಿವಿಗೆ ಅರ್ಜಿ ಹಾಕಿದಾಗ ಅದನ್ನು ಸಕಾರಣವಿಲ್ಲದೆ ಎರಡು ಬಾರಿ ನಿರಾಕರಿಸಿದ್ದು ಅಂದು ವಿವಿಯಲ್ಲಿ ಸೆನೆಟ್ ಸದಸ್ಯರಾಗಿದ್ದ ಪುಣೆಯ ಡೆಕ್ಕನ್ ಶಿಕ್ಷಣ ಸಂಸ್ಥೆಯ ಪದಾದಿಕಾರಿಗಳಾದ ಚಿತ್ಪಾವನ ಬ್ರಾಹ್ಮಣರು. ಅದಕ್ಕೆ ಕಾರಣ ಲಿಂಗಾಯತ ಶಿಕ್ಷಣ ಸಂಸ್ಥೆಗಳು ಬ್ರಾಹ್ಮಣೇತರರಿಗೆ ಶಿಕ್ಷಣ ನೀಡುವುದೇ ಆಗಿತ್ತು. ಅದಷ್ಟೇ ಆಗಿರದೆˌ ಬೆಳಗಾವಿಯಂತ ಗಡಿಭಾಗದಲ್ಲಿ ಕನ್ನಡದ ವಾತಾವರಣ ಸೃಷ್ಟಿಯಾಗಬಾರದು ಎನ್ನುವ ಹುನ್ನಾರವೂ ಅದರ ಹಿಂದೆ ಕೆಲಸ ಮಾಡಿತ್ತು. ಲಿಂಗರಾಜ್ ಕಾಲೇಜು ಸ್ಥಾಪನೆಯ ಸಮಸ್ಯೆಯನ್ನು ಅಂದಿನ ಮುಂಬೈ ಸರಕಾರದಲ್ಲಿ ಶಿಕ್ಷಣ ಸಚಿವರಾಗಿದ್ದ ಸರ್ ಸಿದ್ದಪ್ಪ ಕಂಬಳಿಯವರು ಬಹಳ ನೈಪುಣ್ಯತೆಯಿಂದ ಬಗೆಹರಿಸಿದರು.
ಧಾರವಾಡದಲ್ಲಿ ಕರ್ನಾಟಕ ಕಾಲೇಜು ಸ್ಥಾಪಿಸಲು ಅವಿರತ ಶ್ರಮಿಸಿದವರು ಅರಟಾಳ್ ರುದ್ರಗೌಡರು ಮತ್ತು ಸರ್ ಸಿದ್ದಪ್ಪ ಕಂಬಳಿಯವರು. ಆಗ ಅವರ ಈ ಕಾರ್ಯಕ್ಕೆ ಕಾಲ್ತೊಡಕಾಗಿದ್ದು ರೊದ್ದ ಶ್ರೀನಿವಾಸರಾಯನೆಂಬ ಇನ್ನೊಬ್ಬ ಪುರೋಹಿತ. ದೇಶದ ಸ್ವಾತಂತ್ರ ಸಂಗ್ರಾಮದಲ್ಲಿ ಭಾಗವಹಿಸಿ ತಮ್ಮ ಜೀನತೆತ್ತ ಅನೇಕ ಜನ ಲಿಂಗಾಯತ ಹೋರಾಟಗಾರರನ್ನು ಬ್ರಾಹ್ಮಣವಾದಿಗಳು ಬೇಕೆಂತಲೆ ಉಪೇಕ್ಷಿಸಿದ್ದಾರೆ. ಮೈಲಾರ ಮಹಾದೇವˌ ಚೆನ್ನಪ್ಪ ವಾಲಿಯಂತವರ ಹೆಸರು ಮುನ್ನೆಲೆಗೆ ಬರದಂತೆ ತಡೆದದ್ದು ಮತ್ತು ಅವರ ಹೆಸರು ಜನಪ್ರೀಯವಾಗದಂತೆ ನೋಡಿಕೊಂಡದ್ದು ಈ ಮಡಿವಂತರೆ. ಅಂದಿನ ಕಾಲದಲ್ಲಿ ಒಬ್ಬ ದಕ್ಷ ಜಿಲ್ಲಾಧಿಕಾರಿಯಾಗಿದ್ದ ಅರಟಾಳ್ ರುದ್ರಗೌಡರ ಬಗ್ಗೆ ಅಂದಿನ ಕೇಸರಿ ಮತ್ತು ಮರಾಠಿ ಪತ್ರಿಕೆಗಳಲ್ಲಿ ಸರಣಿ ಸುಳ್ಳು ಸುದ್ದಿಗಳು ಪ್ರಕಟಿಸಿ ಮುಖಭಂಗಕ್ಕೀಡಾಗಿದ್ದು ಪುಣೆಯ ಬಾಲಗಂಗಾಧರನಾಥ ಟಿಳಕ್ ಎಂಬ ಮತ್ತೊಬ್ಬ ಚಿತ್ಪಾವನ ಬ್ರಾಹ್ಮಣ. ಕರ್ನಾಟಕ ಏಕೀಕರಣಕ್ಕಾಗಿ ಧಾರವಾಡ ಜಿಲ್ಲೆಯ ಅದರಗುಂಚಿಯಲ್ಲಿ ೨೩ ದಿನ ಉಪವಾಸ ಸತ್ಯಾಗ್ರಹ ಮಾಡಿ ಆಳುವ ವರ್ಗದ ಗಮನ ಸೆಳೆದದ್ದು ಅದರಗುಂಚಿ ಶಂಕರಗೌಡರು. ಆದರೆ ಶಂಕರಗೌಡರ ಹೆಸರನ್ನು ಹಿನ್ನೆಲೆಗೆ ಸರಿಸಿ ಮತ್ತಿನ್ಯಾರೊ ಕನ್ನಡದ ಕುಲಪುರೋಹಿತರ ಪಟ್ಟ ಅಲಂಕರಿಸಿದರು.
೧೮೭೧ ರ ಜನಗಣತಿಯಲ್ಲಿ ಲಿಂಗಾಯತರು ಮೈಸೂರು ಸಂಸ್ಥಾನದಲ್ಲಿ ಸ್ವತಂತ್ರ ಧರ್ಮಿಯರಾಗಿದ್ದರು. ೧೮೮೧ ರ ಜನಗಣತಿಯಲ್ಲಿ ಲಿಂಗಾಯತರನ್ನು ಹಿಂದೂ ಧರ್ಮದ ಶೂದ್ರರ ಪಟ್ಟಿಗೆ ಸೇರಿಸದ್ದು ಸಂಸ್ಥಾನದಲ್ಲಿ ಪ್ರಾಬಲ್ಯ ಹೊಂದಿದ್ದ ಅಯ್ಯಂಗಾರಿ ದಿವಾನ ರಂಗಾಚಾರ್ಯಲು. ಅಂದಿನ ಮೈಸೂರು ಸಂಸ್ಥಾನದಲ್ಲಿ ರೈತ ವಿರೋಧಿ ಕೃಷಿ ತೆರಿಗೆ ಹಾಕುವ ಸಂಸ್ಥಾನದ ಅಯ್ಯಂಗಾರಿ ದಿವಾನ ವಿಶಾಲಾಕ್ಷ ಪಂಡಿತನ ನಿರ್ಧಾರವನ್ನು ವಿರೋಧಿಸಿದ್ದವರು ಆ ಭಾಗದ ಲಿಂಗಾಯತ ಜಂಗಮರು. ಮಾತುಕತೆಯ ನೆಪದಲ್ಲಿ ಜಂಗಮರನ್ನು ನಂಜನಗೂಡಿನ ಹಳ್ಳಿಯೊಂದಕ್ಕೆ ಕರೆಸಿ ಅಲ್ಲಿ ಅಸಂಖ್ಯಾತ ಜಂಗಮರ ಸಾಮೂಹಿಕ ಹತ್ಯೆ ಮಾಡಿಸಲಾಗಿತ್ತು. ಹತ್ಯೆ ಮಾಡಲಾದ ಜಂಗಮರ ತಲೆಗಳನ್ನು ಬಾವಿಯೊಂದರಲ್ಲಿ ಎಸೆಯಲಾಗಿತ್ತು. ಆದ್ದರಿಂದ ಆ ಹಳ್ಳಿಗೆ ಶಿರೋಬಾವಿ ಎಂದು ಹೆಸರು ಬಂದಿತು ಎನ್ನುವ ಸಂಗತಿ ನಮ್ಮಲ್ಲಿ ಅನೇಕರಿಗೆ ಗೊತ್ತಿಲ್ಲ.
ಹೈದ್ರಾಬಾದ್ ನಿಜಾಮ ಸ್ವತಂತ್ರ ಭಾರತದಲ್ಲಿ ವಿಲಿನಗೊಳ್ಳಲು ನಿರಾಕರಿಸಿ ರಜಾಕಾರ್ ಹಾವಳಿ ಆರಂಭಿಸಿದ್ದ. ಅದನ್ನು ಸಮರ್ಥವಾಗಿ ಹಿಮ್ಮೆಟ್ಟಿಸಿದವರು ಸರ್ದಾರ್ ಶರಣಗೌಡ ಇನಾಮದಾರ್ ಮುಂತಾದ ಲಿಂಗಾಯತ ನಾಯಕರು. ಆದರೆ ಎಲ್ಲಿಂದಲೊ ಬಂದ ಸ್ವಾಮಿ ರಮಾನಂದ ತೀರ್ಥರು ಹೈದ್ರಾಬಾದ್ ಕರ್ನಾಟಕ ವಿಮೋಚನಾ ಚಳುವಳಿಯ ನಾಯಕತ್ವ ಪಡೆದುಕೊಂಡರು. ನಾಯಕತ್ವ ಹಾಳಾಗಿ ಹೋಗಲಿˌ ಆದರೆ ಅದನ್ನೆ ನೆಪವಾಗಿಟ್ಟುಕೊಂಡು ಕಲ್ಯಾಣ ಕರ್ನಾಟಕ ಭಾಗದಲ್ಲಿ ಆರ್ಯ ಸಮಾಜದ ಬಲವರ್ಧನೆಗಾಗಿ ಲಿಂಗಾಯತ ಆಚರಣೆಗಳನ್ನು ಕೈಬಿಡಬೇಕೆಂದು ರಮಾನಂದ ತೀರ್ಥರು ಪ್ರಯತ್ನಿಸಿದ್ದರು. ಮುಸ್ಲಿಮರ ವಿರುದ್ಧ ಹಿಂದೂಗಳು ಸಂಘಟಿತರಾಗಲು ಅವರು ತಮ್ಮ ಮೂಲ ಆಚರಣೆಗಳು ಕೈಬಿಟ್ಟು ಆರ್ಯ ಸಮಾಜದ ಆಚರಣೆಗಳಿಗೆ ಶರಣಾಗಬೇಕು ಎನ್ನುವುದು ಅವರ ಹುನ್ನಾರವಾಗಿತ್ತು. ಆದರೆ ಲಿಂಗಾಯತ ಸಮಾಜದ ಹಿರಿಯರು ರಮಾನಂದರ ಈ ಹುನ್ನಾರವನ್ನು ವಿಫಲಗೊಳಿಸಿ ವಿಭೂತಿ ಧಾರಣೆ ಹಾಗು ಇಷ್ಟಲಿಂಗಧಾರಣೆಯನ್ನು ತೀವ್ರಗೊಳಿಸಿದರು. ಆದರೂ ರಮಾನಂದ ತೀರ್ಥರ ಹೆಸರನ್ನು ಮರಾಠವಾಡಾ ವಿವಿಯೊಂದಕ್ಕೆ ಇಡಲಾಯಿತು.
ನಾಡಿನಲ್ಲಿ ಕಲೆˌ ಸಾಹಿತ್ಯˌ ಸಂಸ್ಕೃತಿˌ ರಂಗಭೂಮಿˌ ಶಿಕ್ಷಣˌ ರಾಜಕೀಯˌ ವ್ಯವಹಾರˌ ವಾಣಿಜ್ಯ ˌ ಸಮಾಜಸೇವೆˌ ಹೀಗೆ ಅನೇಕ ಕ್ಷೇತ್ರಗಳಲ್ಲಿ ರಾಜ್ಯ ಮತ್ತು ದೇಶದ ಅಭಿವೃದ್ಧಿಗೆ ಶೃಮಿಸಿದ ಲಿಂಗಾಯತ ಸಮಾಜಕ್ಕೆ ಹೆಜ್ಜೆ ಹೆಜ್ಜೆಗೆ ಅಡಚಣಿ ಪಡಿಸಿದ್ದು ಪುರೋಹಿತಶಾಹಿ ವರ್ಗ. ಲಿಂಗಾಯತರ ದೇಶಭಕ್ತಿ ˌ ರಾಷ್ಟ್ರೀಯತೆಯನ್ನು ಮರೆಮಾಚಿ ಪುರೋಹಿತಶಾಹಿಗಳು ತಮ್ಮವರ ಹೆಸರುಗಳನ್ನು ಮಾತ್ರ ಮುನ್ನೆಲೆಗೆ ತರುವ ಕಾರ್ಯ ಮಾಡಿದರು. ಕರ್ನಾಟಕದಲ್ಲಿ ಬ್ರಿಟೀಷ್ ಆಡಳಿತ ಕಾಲದಲ್ಲಿ ಲಿಂಗಾಯತ ಮಠಗಳು ಹಾಗು ಶಿಕ್ಷಣ ಸಂಸ್ಥೆಗಳು ಸ್ಥಾಪನೆಯಾಗದೆ ಹೋಗಿದ್ದರೆ ಬ್ರಾಹ್ಮಣೇತರ ಸಮುದಾಯ ಶಿಕ್ಷಣದಿಂದ ವಂಚಿತಗೊಳ್ಳುತ್ತಿತ್ತು ಮತ್ತು ರಾಜ್ಯದ ಸ್ಥಿತಿ ಬಹುಶಃ ಉತ್ತರ ಭಾರತದ ಸ್ಥಿತಿಗಿಂತ ಭಿನ್ನವಾಗಿರುತ್ತಿರಲಿಲ್ಲ. ಉತ್ತರ ಭಾರತದಲ್ಲಿ ಬಹು ಸಂಖ್ಯಾತರಾಗಿರುವ ವೈದಿಕರು ಅಲ್ಲಿನ ಮುಗ್ಧ ಬಹುಜನ ಸಮುದಾಯವನ್ನು ಇಂದಿಗೂ ಅಂಧಕಾರದಲ್ಲಿಟ್ಟದ್ದು ನಾವು ನಮನಿಸಬೇಕಿದೆ.
ಸ್ವಾತಂತಾನಂತರ ಕರ್ನಾಟಕದ ರಾಜಕೀಯ ಕ್ಷೇತ್ರದ ಮೇಲೆ ಲಿಂಗಾಯತ ಮತ್ತು ವಕ್ಕಲಿಗ ಈ ಎರಡು ಸಮುದಾಯಗಳ ಹಿಡಿತ ಬಹಳಷ್ಟು ದಿನ ಮುಂದುವರೆದಿತ್ತು. ಅದರ ಜೊತೆಯಲ್ಲಿ ಹಿಂದುಳಿದ ವರ್ಗಗಳ ರಾಜಕೀಯ ನಾಯಕತ್ವ ಕೂಡ ಸದೃಢಗೊಂಡಿತು. ಆದರೆ ಜನತಾ ಪರಿವಾರ ಅಧಿಕಾರಕ್ಕೇರಿದ ಮೇಲೆ ರಾಮಕೃಷ್ಣ ಹೆಗಡೆ ಆಡಳಿತದಲ್ಲಿ ಫ್ಯಾಸಿಷ್ಟರು ಕರ್ನಾಟಕದಲ್ಲಿ ಭದ್ರವಾಗಿ ಬೇರೂರಿದರು. ಜನತಾ ಪರಿವಾರ ಛಿದ್ರಗೊಂಡ ನಂತರ ಲಿಂಗಾಯತ ಸಮುದಾಯದ ಸ್ವಾರ್ಥಿ ರಾಜಕಾರಣಿಗಳಿಗೆ ಫ್ಯಾಸಿಷ್ಟರು ಗಾಳ ಹಾಕಿದರು. ಲಿಂಗಾಯತ ಸಮುದಾಯದ ಸ್ವಾರ್ಥಿ ರಾಜಕಾರಣಿಗಳು ಮತ್ತು ತತ್ವಹೀನ ಮಠಾಧೀಶರ ಮುಖೇನ ಕರ್ನಾಟಕದಲ್ಲಿ ಫ್ಯಾಸಿಷ್ಟರು ಬಾಲ ಬಿಚ್ಚಲು ಆರಂಭಿಸಿದರು. ಆನಂತರ ಲಿಂಗಾಯತ ಸಮುದಾಯವನ್ನು ಅಧಿಕಾರ ರಾಜಕೀಯದ ಹನಿಟ್ರ್ಯಾಪ್ ಮೂಲಕ ತತ್ವಹೀನರನ್ನಾಗಿಸಲಾಯಿತು. ಕೇವಲ ರಾಜಕೀಯ ಹುದ್ದೆಗಳಲ್ಲಿ ಲಿಂಗಾಯತ ರಾಜಕಾರಣಿಗಳನ್ನು ಪ್ರತಿಷ್ಟಾಪಿಸಿ ನೀತಿ ನಿರೂಪಣೆಯನ್ನು ತಮ್ಮ ಕಪಿಮುಷ್ಟಿಯಲ್ಲಿಟ್ಟುಕೊಂಡ ಪುರೋಹಿತಶಾಹಿಗಳು ಲಿಂಗಾಯತ ಸಮುದಾಯದ ಮೇಲೆ ನೈಜವಾದ ಸೇಡನ್ನು ತೀರಿಸಿಕೊಳ್ಳಲಾರಂಭಿಸಿದರು.
ಈ ನಡುವೆ ಕನ್ನಡದ ಹೆಮ್ಮೆಯ ಸಂಸೋಧಕ ಡಾ. ಎಂ ಎಂ ಕಲಬುರಗಿ ಮತ್ತು ದಿಟ್ಟ ಪತ್ರಕರ್ತೆ ಹಾಗು ಸಮಾಜಿಕ ಕಾರ್ಯಕರ್ತೆ ಗೌರಿ ಲಂಕೇಶ್ ಅವರ ಬರ್ಬರ ಹತ್ಯೆಗಳು ಸಂಭವಿಸಿದವು. ಲಿಂಗಾಯತ ಧರ್ಮಕ್ಕೆ ಸಂವಿಧಾನ ಮಾನ್ಯತೆ ಹೋರಾಟ ಆರಂಭಗೊಂಡಾಗ ಅಕ್ಷರಶಃ ಕಂಗಾಲಾಗಿದ್ದು ಇದೇ ಪುರೋಹಿತಶಾಹಿಗಳು. ಡಾ. ಕಲಬುರಗಿಯವರು ಲಿಂಗಾಯತ ಧರ್ಮ ಮತ್ತು ವಚನ ಸಾಹಿತ್ಯದ ಕುರಿತು ಅಪಾರ ಪ್ರಮಾಣದ ಸತ್ಯಸೋಧನೆ ಜನರೆದುರಿಗೆ ತೆರೆದಿಟ್ಟಿದ್ದರು. ಸಾಹಿತಿ ಅನಂತಮೂರ್ತಿ ಬರೆದ ಕಥೆಯನ್ನು ಭಾಷಣವೊಂದರಲ್ಲಿ ಸಾಂದರ್ಭಿಕವಾಗಿ ಪ್ರಸ್ತಾಪಿಸಿದ್ದ ಡಾ. ಕಲಬುರಗಿಯವರನ್ನು ಹಿಂದೂ ವಿರೋಧಿ ಎಂದು ಬಿಂಬಿಸುವಲ್ಲಿ ಪುರೋಹಿತಶಾಹಿ ಮಾಧ್ಯಮಗಳು ಯಶಸ್ವಿಯಾದವು. ಮಾಧ್ಯಮಗಳ ಅತಿರಂಚಿತ ವರದಿಗಳೇ ಡಾ. ಕಲಬುರಗಿ ಮತ್ತು ಗೌರಿ ಕೊಲೆಗೆ ಪ್ರಚೋದನೆಯಾದವು. ಡಾ. ಕಲಬುರಗಿ ಮತ್ತು ಗೌರಿ ಇವರಿಬ್ಬರೂ ಲಿಂಗಾಯತ ಸಮುದಾಯಕ್ಕೆ ಸೇರಿದವರಾಗಿದ್ದರು ಮತ್ತು ಇವರ ಕೊಲೆಗಳು ಸೈದ್ಧಾಂತಿಕ ಭಿನ್ನಾಭಿಪ್ರಾಯದಿಂದ ಆಗಿದ್ದವು. ಇವರ ಕೊಲೆಗೆ ಪ್ರಚೋದನೆ ಮಾಡಿದ್ದ ಮಾಧ್ಯಮಗಳು ಕೊಲೆಯ ನಂತರ ತನಿಖೆಯ ದಿಕ್ಕು ತಪ್ಪಿಸಲು ಅನೇಕ ವಿಧದಲ್ಲಿ ಸುಳ್ಳು ಸುದ್ದಿಗಳನ್ನು ಬಿತ್ತರಗೊಳಿಸಿದವು. ಬಹುಶಃ ತಮ್ಮ ಪ್ರಗತಿಪರ ಹಾಗು ವೈದಿಕ ವಿರೋಧಿ ನಿಲುವುಗಳಿಂದ ತಮ್ಮ ಪ್ರಾಣವನ್ನು ಕಳೆದುಕೊಂಡದ್ದು ಕರ್ನಾಟಕದಲ್ಲಿ ಲಿಂಗಾಯತ ಸಮುದಾಯವರೆ ಹೊರತು ಮತ್ತಾವ ಸಮುದಾಯದವರೂ ಅಲ್ಲ ಎನ್ನುವ ಸತ್ಯ ಸಂಗತಿ ನಾವು ತಿಳಿದುಕೊಳ್ಳಬೇಕು.
ಕರ್ನಾಟಕˌ ಮಹಾರಾಷ್ಟ್ರ ˌ ತೆಲಂಗಾಣ ಮತ್ತು ಆಂಧ್ರಪ್ರದೇಶಗಳಲ್ಲಿ ೨೦೧೭ ರಲ್ಲಿ ಆರಂಭಗೊಂಡ ಲಿಂಗಾಯತ ಧರ್ಮಕ್ಕೆ ಸಂವಿಧಾನ ಮಾನ್ಯತೆ ಬೇಡಿಕೆಯ ಚಳುವಳಿಯನ್ನು ಆರಂಭದಲ್ಲೇ ಹತ್ತಿಕ್ಕಲು ಹವಣಿಸಿದ್ದು ಇದೇ ಪುರೋಹಿತಶಾಹಿಗಳು. ರಾಷ್ಟ್ರೀಯತೆ ಹೆಸರಿನ ಸಂಸ್ಥೆಯೊಂದು ತನ್ನ ಪ್ರಾಂತೀಯ ಪ್ರತಿನಿಧಿಗಳ ಮೂಲಕ ತಾನು ನಿಯಂತ್ರಿಸುವ ರಾಜಕೀಯ ಪಕ್ಷದ ಜೊತೆಗೆ ಗುರುತಿಸಿಕೊಂಡಿರುವ ಲಿಂಗಾಯತ ನಾಯಕರು/ಪ್ರಮುಖ ಕಾರ್ಯಕರ್ತರ ಗುಪ್ತ ಸಭೆಗಳನ್ನು ಕರೆದು ಲಿಂಗಾಯತ ಧರ್ಮ ಹೋರಾಟ ಬೆಂಬಲಿಸದಂತೆ ಆದೇಶಿಸಿತ್ತು. ಸಂಸ್ಥೆಯ ಮುಖ್ಯಸ್ಥರ ಆದೇಶವನ್ನು ಕಟ್ಟುನಿಟ್ಟಾಗಿ ಪಾಲಿಸಬೇಕೆಂದು ವ್ಯವಸ್ಥಿತವಾಗಿ ಹಾಗು ಒತ್ತಾಯಪೂರ್ವಕವಾಗಿ ಲಿಂಗಾಯತರನ್ನು ಹೋರಾಟದಿಂದ ದೂರವಿಡಲಾಯಿತು. ಲಿಂಗಾಯತಕ್ಕೆ ಅಲ್ಪಸಂಖ್ಯಾತ ಸ್ಥಾನಮಾನ ಸಿಕ್ಕರೆ ಸಮುದಾಯದ ಹಿಡಿತದಲ್ಲಿರುವ ಧಾರ್ಮಿಕ ಸಂಸ್ಥೆಗಳು(ಮಠ) ಮತ್ತು ಶಿಕ್ಷಣ ಸಂಸ್ಥೆಗಳು ಇನ್ನಷ್ಟು ಸಧೃಡಗೊಳ್ಳುತ್ತವೆ ಎನ್ನುವ ಮತ್ಸರ ಮತ್ತು ಆತಂಕ ಪುರೋಹಿತಶಾಹಿಗಳನ್ನು ಕಂಗಾಲಾಗಿಸಿತ್ತು. ಇದನ್ನು ಪ್ರಶ್ನಿಸಿದ ಕೆಲವು ಕಾರ್ಯಕರ್ತರನ್ನು ಪಕ್ಷ ಹಾಗು ಸಂಘಟನೆಯ ಚಟುವಟಿಕೆಗಳಿಂದ ದೂರವಿಡಲಾಯಿತು.
ಕರ್ನಾಟಕದಲ್ಲಿ ಲಿಂಗಾಯತರ ಶಿಕ್ಷಣ ಸಂಸ್ಥೆಗಳು ಹಾಗು ಮಠಗಳು ನಡೆಸುವ ಶಾಲಾ ಕಾಲೇಜುಗಳು ಬೆಂಗಳೂರನ್ನು ಸಾಫ್ಟವೇರ್ ತಂತ್ರಜ್ಞಾನದ ತವರು ಅಥವಾ ಸಿನಿಕಾನ್ ವ್ಯಾಲಿ ಎಂದು ಗುರುತಿಸಿಕೊಳ್ಳಲು ಕಾರಣೀಭೂತವಾಗಿದ್ದು ನಾವು ಅಲ್ಲಗಳೆಯಲಾಗದು. ಒಂದಿಲ್ಲ ಒಂದು ರೀತಿಯಲ್ಲಿ ಇದೇ ಲಿಂಗಾಯತರ ಶಿಕ್ಷಣ ಸಂಸ್ಥೆಗಳಲ್ಲಿ ಓದಿ ಟೆಕ್ಕಿಗಳಾಗಿರುವ ಈ ಪುರೋಹಿತಶಾಹಿಗಳು ದೇಶ ವಿದೇಶಗಳಿಗೆ ಹೋಗಿ ಬದುಕನ್ನು ಕಟ್ಟಿಕೊಂಡಿದ್ದಾರೆ. ಆದರೂ ಇವರಿಗೆ ಲಿಂಗಾಯತ ಸಮುದಾಯಕ್ಕೆ ಅಲ್ಪಸಂಖ್ಯಾತ ಸ್ಥಾನಮಾನ ಸಿಗುವುದು ಬೇಕಿಲ್ಲ. ಅನೇಕ ಜನ ಪುರೋಹಿತಶಾಹಿಗಳು ಇದೇ ಲಿಂಗಾಯತ ಶಿಕ್ಷಣ ಸಂಸ್ಥೆಗಳಲ್ಲಿ ಆಯಕಟ್ಟಿನ ಸ್ಥಾನಗಳನ್ನು ಅಲಂಕರಿಸಿಯೂ ಲಿಂಗಾಯತರನ್ನು ದ್ವೇಷಿಸುತ್ತಿರುವುದು ಲಿಂಗಾಯತರ ಮೂರ್ಖತನ ಎನ್ನಲೇಬೇಕು. ಲಿಂಗಾಯತ ಸಮುದಾಯವನ್ನು ನಖಶಿಖಾಂತ ದ್ವೇಷಿಸುವ ಈ ಪುರೋಹಿತಶಾಹಿಗಳು ನಡು ಬಗ್ಗಿಸಿˌ ಕೈಕಟ್ಟಿಕೊಂಡು ಗುಲಾಮರಂತೆ ನಿಲ್ಲುವ ತನ್ನ ಪರಂಪರಾಗತ ನರಿ ಬುದ್ದಿಯಿಂದ ಲಿಂಗಾಯತ ಶಿಕ್ಷಣ ಸಂಸ್ಥೆಯ ದಡ್ಡ ಆಡಳಿತ ಮಂಡಳಿಯವರನ್ನು ಮೆಚ್ಚಿಸಿ ಆಯಕಟ್ಟಿನ ಸ್ಥಾನಗಳು ಆಕ್ರಮಿಸಿ ಕುಂತಿದ್ದಷ್ಟೇ ಅಲ್ಲದೆ ಅಲ್ಲಿ ಇನ್ನೊಬ್ಬ ಪ್ರತಿಭಾವಂತ ಲಿಂಗಾಯತ ಅಭ್ಯರ್ಥಿ ಬರದಂತೆ ಕುಟಿಲ ಹುನ್ನಾರಗಳನ್ನು ಮಾಡುತ್ತಿದ್ದಾರೆ.
ಇಂದು ಕರ್ನಾಟಕದಲ್ಲಿ ಲಿಂಗಾಯತರು ನಡೆಸುವ ಬಹುತೇಕ ಶಿಕ್ಷಣ ಸಂಸ್ಥೆಗಳ ಅನುದಾನಿತ ಮತ್ತು ಅನುದಾನ ರಹಿತ ತಾಂತ್ರಿಕ ಮತ್ತು ವೃತ್ತಿಪರ ಕಾಲೇಜುಗಳ ಆಯಕಟ್ಟಿನ ಸ್ಥಾನಗಳಾದ ಮುಖ್ಯ ಆಡಳಿತಾಧಿಕಾರಿˌ ಪ್ರಾಚಾರ್ಯˌ ವಿಭಾಗ ಮುಖ್ಯಸ್ಥ ˌ ಅಕೌಂಟ್ ನಿಭಾಯಿಸುವ ಹುದ್ದೆಗಳಲ್ಲಿ ಪುರೋಹಿತಶಾಹಿಗಳೇ ತುಂಬಿದ್ದಾರೆ. ಲಿಂಗಾಯತ ಸಮುದಾಯವನ್ನು ಐತಿಹಾಸಿಕ ಕಾಲದಿಂದಲೂ ವಿರೋಧಿಸುತ್ತ ಹಾಗು ದ್ವೇಷಿಸುತ್ತ ಬಂದಿರುವ ಪುರೋಹಿತಶಾಹಿಗಳ ತಾಳಕ್ಕೆ ತಕ್ಕಂತೆ ಕುಣಿಯುತ್ತಿರುವ ಲಿಂಗಾಯತ ಸಮುದಾಯದ ಸ್ವಾರ್ಥಿ ರಾಜಕಾರಣಿಗಳು ಮತ್ತು ತತ್ವಹೀನ ಮಠಾಧೀಶರು ಲಿಂಗಾಯತ ಸಮುದಾಯಕ್ಕೆ ಬಹುದೊಡ್ಡ ಕಂಟಕವಾಗಿ ಪರಿಣಮಿಸಿದ್ದಾರೆ. ಸಮುದಾಯದ ಜನಸಾಮಾನ್ಯರು ಎಚ್ಚರಗೊಳ್ಳದಿದ್ದರೆ ಮುಂದೊಂದು ದಿನ ಲಿಂಗಾಯತ ಸಮುದಾಯದ ಉತ್ಕೃಷ್ಟ ಸಂಸ್ಕೃತಿˌ ಸೌಹಾರ್ದ ಪರಂಪರೆˌ ಜಾತ್ಯಾತೀತ ಹಣೆಪಟ್ಟಿ ಕಳೆದು ಹೋಗಿ ಲಿಂಗಾಯತ ಧರ್ಮ ಅವಸಾನಗೊಳ್ಳುವ ಕಾಲ ದೂರವಿಲ್ಲ.