ಸುದೀರ್ಘ ಸಮಯದ ನಂತರ ಕಮಲ್ ಹಾಸನ್ ನಟಿಸಿರುವ ವಿಕ್ರಮ್ ಚಿತ್ರಕ್ಕೆ ಭರ್ಜರಿ ಓಪನಿಂಗ್ ದೊರೆತರೆ, ಅಕ್ಷಯ್ ಕುಮಾರ್ ನಟಿಸಿರುವ ಸಮರ್ಥ್ ಪೃಥ್ವಿರಾಜ್ ಚಿತ್ರ ಮೊದಲ ದಿನವೇ ಮುಗ್ಗರಿಸಿದೆ.
ಕಮಲ್ ಹಾಸನ್ ನಿರ್ಮೀಸಿ, ನಟಿಸಿರುವ ವಿಕ್ರಮ್ ಚಿತ್ರ ಬಿಡುಗಡೆ ಆದ ಮೊದಲ ದಿನವೇ 34ಕೋಟಿ ರೂ. ಬಾಚಿಕೊಂಡಿದೆ. ವಿಶೇಷ ಅಂದರೆ ತಮಿಳುನಾಡುವಿನಲ್ಲೇ ಸುಮಾರು 30 ಕೋಟಿ ರೂ. ಗಳಿಸಿ ದಾಖಲೆ ಬರೆದಿದೆ.
ವಿಕ್ರಮ್ ಚಿತ್ರದಲ್ಲಿ ವಿಜಯ್ ಸೇತುಪತಿ, ಫೈಜಲ್ ಸೇರಿದಂತೆ ಹಲವು ಸ್ಟಾರ್ ನಟರು ನಟಿಸಿದ್ದು, ಡ್ರಗ್ಸ್ ವಿರುದ್ಧದ ಕಥೆ ಹೊಂದಿದ್ದು ಅಭಿಮಾನಿಗಳನ್ನು ರಂಜಿಸುವ ಸಾಹಸ ಮುಂತಾದ ಹಲವು ಅಂಶಗಳು ಅಭಿಮಾನಿಗಳಿಗೆ ಥ್ರಿಲ್ ನೀಡಿದೆ.
ಇದೇ ವೇಳೆ ಅಕ್ಷಯ್ ಕುಮಾರ್ ಸಮರ್ಥ್ ಪೃಥ್ವಿರಾಜ್ ಚಿತ್ರಕ್ಕೆ ಉತ್ತರ ಪ್ರದೇಶದಲ್ಲಿ ತೆರಿಗೆ ವಿನಾಯಿತಿ ನೀಡಿದ ಹೊರತಾಗಿಯೂ ಗಳಿಕೆಯಲ್ಲಿ ಮುಗ್ಗರಿಸಿದೆ. ಚಿತ್ರದಲ್ಲಿ ಆಡಂಬರ ಹೊರತಾಗಿಯೂ ಕಥೆಯೇ ಇಲ್ಲ ಎಂಬ ಆರೋಪಗಳು ಕೇಳಿ ಬಂದಿವೆ. ಇದರ ಹೊರತಾಗಿಯೂ ಚಿತ್ರ ಮೊದಲ ದಿನ 11 ಕೋಟಿ ರೂ. ಮಾತ್ರ ಗಳಿಸಿದ್ದು ವೀಕೆಂಡ್ ನಲ್ಲಿ ಚಿತ್ರದ ಗಳಿಕೆ ಮೇಲೆ ಯಶಸ್ಸು ನಿಂತಿದೆ.