ಉತ್ತರಾಖಂಡದ ಚಂಪಾವತ್ ಉಪಚುನಾವಣೆಯಲ್ಲಿ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಭರ್ಜರಿ ಜಯ ಗಳಿಸಿದ್ದಾರೆ.
2022ರ ಪ್ರಾರಂಭದಲ್ಲಿ ನಡೆದ ರಾಜ್ಯ ವಿಧಾನಸಭೆ ಚುನಾವಣೆಯಲ್ಲಿ ಪುಷ್ಕರ್ ಖತಿಮಾ ಕ್ಷೇತ್ರದಿಂದ ಸ್ಪರ್ಧಿಸಿ ಸೋಲನ್ನುಭವಿಸಿದ್ದರು. ಆದರೆ, ಬಿಜೆಪಿಯನ್ನು ರಾಜ್ಯದಲ್ಲಿ ಮತ್ತೆ ಅಧಿಕಾರಕ್ಕೆ ತಂದ ಕಾರಣ ಅವರನ್ನು ಮುಖ್ಯಮಂತ್ರಿ ಸ್ತಾನದಲ್ಲಿ ಮುಂದುವರೆಸಲಾಗಿತ್ತು.
ಚಂಪಾವತ್ ವಿಧಾನಸಭೆಗೆ ನಡೆದ ಉಪಚುನಾವಣೆಯಲ್ಲಿ 55,000 ಸಾವಿರಕು ಹೆಚ್ಚು ಅಂತರದಿಂದ ಧಾಮಿ ಗೆಲುವು ಸಾಧಿಸಿದ್ದಾರೆ. ನಿಕಟಪೂರ್ವ ಶಾಸಕ ಕೈಲಾಶ್ ಗೆಹತೊರಿ ತಮ್ಮ ಸ್ತಾನಕ್ಕೆ ರಾಜೀನಾಮೆ ನೀಡಿದ ಬೆನ್ನಲ್ಲೇ ಉಪಚುನಾವಣೆ ನಡೆದಿದೆ.