ತೆಲಂಗಾಣ ರಾಷ್ಟ್ರ ಸಮಿತಿ ಪಕ್ಷ(TRS) ಜೂನ್ 2ಕ್ಕೆ ಅಧಿಕಾರ ವಹಿಸಿಕೊಂಡು ಎಂಟು ವರ್ಷಗಳು ಕಳೆಯುತ್ತವೆ. ಈ ಕುರಿತು ಟ್ವೀಟ್ ಮಾಡಿರುವ ಕಾಂಗ್ರೆಸ್ ನಾಯಕ ಗಾಂಧಿ ಟಿ ಆರ್ ಎಸ್ ಪಕ್ಷದ ವಿರುದ್ದ ಹರಿಹಾಯ್ದಿದ್ದಾರೆ.
ಟಿಆರ್ಎಸ್ ಪಕ್ಷದ ದುರಾಡಳಿತದಿಂದ ತೆಲಂಗಾಣ ತೀವ್ರ ಸಂಕಷ್ಟವನ್ನ ಎದುರಿಸುತ್ತಿದೆ. ತೆಲಂಗಾಣ ರಾಜ್ಯರಚನೆ ವಿಚಾರದಲ್ಲಿ ಕಾಂಗ್ರೆಸ್ ಪಕ್ಷ ತೋರಿದ ಬದ್ದತೆಯನ್ನ ರಾಹುಲ್ ಗಾಂಧಿ ಪ್ರತಿಪಾದಿಸಿದ್ದಾರೆ.
ತೆಲಂಗಾಣವನ್ನ ಮಾದರಿ ರಾಜ್ಯವನ್ನಾಗಿ ಮಾಡುವುದು ಬಡವರ, ರೈತ, ಕಾರ್ಮಿಕರು ಹಾಗು ಬಡ ವರ್ಗ ಸೇರಿದಂತೆ ಎಲ್ಲಾ ವರ್ಗದ ಜನರವನ್ನು ಕಾಂಗ್ರೆಸ್ ಸಮಾನವಾಗಿ ನಡೆಸಿಕೊಂಡು ಹೋಗಲು ಕಾಂಗ್ರೆಸ್ ಬದ್ದವಾಗಿರುವುದಾಗಿ ತಿಳಿಸಿದ್ದಾರೆ.
ರಾಜ್ಯವು ಉತ್ತಮ ಭವಿಷ್ದ ಆಕಾಂಕ್ಷೆಯಿಂದ ಹುಟ್ಟಿಕೊಂಡಿದೆ. ಕಾಂಗ್ರೆಸ್ ಹಾಗು ಸೋನಿಯಾ ಗಾಂಧಿ ತೆಲಂಗಾಣದ ಕನಸನ್ನು ನನಸಾಗಿಸಲು ನಿಸ್ವಾರ್ಥ ಸೇವೆ ಮಾಡಿರುವ ಬಗ್ಗೆ ನನ್ನಗೆ ಹೆಮಮೆಯಿದೆ ಎಂದು ಹೇಳಿದ್ದಾರೆ.