• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Wednesday, April 29, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home ಕರ್ನಾಟಕ

KSHDCL ಅಧ್ಯಕ್ಷ ಬೇಳೂರು ರಾಘವೇಂದ್ರ ಶೆಟ್ಟಿ- ಡಿ.ರೂಪಾ ನಡುವೆ ಪತ್ರ ಸಮರ!

ಪ್ರತಿಧ್ವನಿ by ಪ್ರತಿಧ್ವನಿ
June 2, 2022
in ಕರ್ನಾಟಕ
0
KSHDCL ಅಧ್ಯಕ್ಷ ಬೇಳೂರು ರಾಘವೇಂದ್ರ ಶೆಟ್ಟಿ- ಡಿ.ರೂಪಾ ನಡುವೆ ಪತ್ರ ಸಮರ!
Share on WhatsAppShare on FacebookShare on Telegram

ಕರ್ನಾಟಕ ರಾಜ್ಯ ಕರಕುಶಲ ಅಭಿವೃದ್ಧಿ ನಿಗಮದ (KSHDCL) ಅಧ್ಯಕ್ಷ ಬೇಳೂರು ರಾಘವೇಂದ್ರ ಶೆಟ್ಟಿ ಮತ್ತು ವ್ಯವಸ್ಥಾಪಕ ನಿರ್ದೇಶಕಿ ಡಿ.ರೂಪಾ ನಡುವಿನ ಪತ್ರ ಸಮರ ತಾರಕಕ್ಕೇರುತ್ತಿದೆ.

ADVERTISEMENT

“ವೈಯಕ್ತಿಕ ಹಿತಾಸಕ್ತಿಯಿಂದಾಗಿ” ಕೆಎಸ್ಎಚ್ಡಿಸಿಯ ಎಂಜಿ ರಸ್ತೆಯ ಪ್ರಧಾನ ಕಚೇರಿಯ ಸಿಸಿಟಿವಿ ದೃಶ್ಯಗಳನ್ನು ಶೆಟ್ಟಿ ಅಳಿಸಿದ್ದಾರೆ ಎಂದು ಆರೋಪಿಸಿ ನಿಗಮದ ವ್ಯವಸ್ಥಾಪಕ ನಿರ್ದೇಶಕಿ ಡಿ.ರೂಪಾ ಮೌದ್ಗಿಲ್ ಮೇ 27 ರಂದು ಮುಖ್ಯ ಕಾರ್ಯದರ್ಶಿಗೆ ಮನವಿ ಸಲ್ಲಿಸಿದಾಗಿನಿಂದ ಪ್ರಾರಂಭವಾದ ಈ ಪತ್ರ ಸಮರ ಈಗ ನಿಗಮದ ಅಧ್ಯಕ್ಷ ಬೇಳೂರು ರಾಘವೇಂದ್ರ ಶಿಟ್ಟಿ ನಿಗಮದಲ್ಲಿ ಎಸಗಿರುವ ಅವ್ಯವಹಾರ, ಅಧಿಕಾರ ದುರುಪಯೋಗ, ದುರ್ನಡತೆ ಬಗ್ಗೆ ಸಾಲು ಸಾಲು ಆರೋಪ ವರದಿಯನ್ನು ಸರ್ಕಾರದ ಮುಖ್ಯ ಕಾರ್ಯದರ್ಶಿಗಳಿಗೆ ಪತ್ರ ಬರೆದಿದ್ದಾರೆ.

ಕರ್ನಾಟಕ ರಾಜ್ಯ ಕರಕುಶಲ ಅಭಿವೃದ್ಧಿ ನಿಗಮದ ಅಧ್ಯಕ್ಷರು ಬೇಳೂರು ರಾಘವೇಂದ್ರ ಶೆಟ್ಟಿ ಕಚೇರಿಯಲ್ಲಿದ್ದ ಸಿಸಿಟಿವಿ ಮತ್ತು ಡಿವಿಆರ್ ಅನ್ನು ವಿರೂಪಗೊಳಿಸಿದ್ದಾರೆ ಎಂದು ನಿಗಮದ ವ್ಯವಸ್ಥಾಪಕ ನಿರ್ದೇಶಕಿ ಡಿ.ರೂಪಾ ಮೌದ್ಗಿಲ್ ಸರಕಾರಕ್ಕೆ ಬರೆದಿದ್ದಾರೆ.

ಶೆಟ್ಟಿ ಮೇ 31 ರಂದು ಮುಖ್ಯ ಕಾರ್ಯದರ್ಶಿಯ ಮುಂದೆ ಪ್ರತಿದೂರು ಸಲ್ಲಿಸಿ, ರೂಪಾ ಅವರು ಕೆಲಸದಲ್ಲಿ ಅನಿಯಮಿತರಾಗಿದ್ದಾರೆ ಮತ್ತು ಅವರ ಅನುಮೋದನೆಯನ್ನು ಪಡೆಯದೆ ಟೆಂಡರ್ ನೀಡಿದ್ದಾರೆ ಎಂದು ದೂರಿ ಅವರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳುವಂತೆ ಮುಖ್ಯ ಕಾರ್ಯದರ್ಶಿಗೆ ಮನವಿ ಮಾಡಿದ್ದಾರೆ.

ರೂಪಾ ಬುಧವಾರ ಎರಡನೇ ದೂರು ದಾಖಲಿಸಿದ್ದು, ಶೆಟ್ಟಿ ಅಕ್ರಮಗಳಲ್ಲಿ ತೊಡಗಿದ್ದಾರೆ ಮತ್ತು ಅಧಿಕಾರ ದುರುಪಯೋಗ ಮಾಡುತ್ತಿದ್ದಾರೆ ಎಂದು ಮುಖ್ಯ ಕಾರ್ಯದರ್ಶಿಗೆ ತಿಳಿಸಿದ್ದಾರೆ. ಅವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಮಾಧ್ಯಮದವರೊಂದಿಗೆ ಮಾತನಾಡಲು ಅನುಮತಿ ಕೋರಿದರು. ರೂಪಾ ಮುಖ್ಯ ಕಾರ್ಯದರ್ಶಿಗೆ ಸಲ್ಲಿಸಿರುವ ವರದಿಯ ಪ್ರತಿಯಲ್ಲಿ ಹೀಗೆ ಹೇಳಲಾಗಿದೆ: “ಕೆಎಸ್ಎಚ್ಡಿಸಿ ಅಧ್ಯಕ್ಷರ ಅಕ್ರಮಗಳು, ಅಧಿಕಾರ ದುರ್ಬಳಕೆ, ಭ್ರಷ್ಟಾಚಾರ ಮತ್ತು ಅವ್ಯವಹಾರದ ಬಗ್ಗೆ ನಾನು ಸರ್ಕಾರಕ್ಕೆ ಹಲವಾರು ಸಂವಹನಗಳನ್ನು ಮಾಡಿದ್ದೇನೆ. ಇಲ್ಲಿ ನಾನು ಮತ್ತೊಮ್ಮೆ ವಿವರವಾದ ವರದಿಯನ್ನು ಸಲ್ಲಿಸುತ್ತಿದ್ದೇನೆ ಎಂದು ತಿಳಿಸಿದ್ದಾರೆ.

ನಿಗಮದ ಅಧ್ಯಕ್ಷರ ವಿರುದ್ಧ ರೂಪಾ ಮಾಡಿರುವ ಆರೋಪಗಳು!

1. ಕರ್ನಾಟಕ ರಾಜ್ಯ ಕರಕುತಲ ಅಭಿವೃದ್ಧಿ ನಿಗಮವು 2021-22 ನೇ ಸಾಲಿನಲ್ಲಿ ಕಳೆದ ವರ್ಷಕ್ಕಿಂತ, ಶೇ.41 ಅಂದರೆ, 7.06  ಕೋಟಿ ರೂ.ಗಿಂತ ಹೆಚ್ಚಿನ ವಹಿವಾಟು

(ಟರ್ನೋವರ್) ಸಾಧಿಸಿರುತ್ತದೆ. 2020- 21ರಲ್ಲಿನಿಗಮದ ವಹಿವಾಟು ರೂ.16.88 ಕೋಟಿಗಳಿದ್ದು, 2021-22ರಲ್ಲಿ ರೂ.23.95 ಕೋಟಿಗಳಿಗೆ ಏರಿರುತ್ತದೆ. ಇದು ಒಂದು ರೆಕಾರ್ಡ್ ಸಾಧನೆಯಾಗಿದೆ. 2018 ರಲ್ಲಿ ರೂ.25.00 ಕೋಟಿಯಷ್ಟು ಫ್ರಾಡ್/ವಂಚನೆ ಪ್ರಕರಣ ಈ ಸಂಸ್ಥೆಯಲ್ಲಿ ನಡೆದಿದ್ದು, ಸಿಐಡಿ, ಸಿಬಿಐ ಕೇಸ್‌ಗಳು ತನಿಖೆಯಲ್ಲಿದ್ದು ಆ ನಂತರದಿಂದ ವಹಿವಾಟು ಪ್ರತಿ ವರ್ಷ ಕ್ಷೀಣಿಸುತ್ತಾ ಇತ್ತು. ಆದಾಗ್ಯೂ 2021-22 ನೇ ಸಾಲಿನಲ್ಲಿ ಕೋವಿಡ್ ಲಾಕ್‌ಡೌನ್ ಇದ್ದಾಗ್ಯೂ ಇದು ರೂ.7.06 ಕೋಟಿಯಷ್ಟು ಹೆಚ್ಚಾಗಿದೆ. ಈ ಯಶೋಗಾಥೆಯು ಆಡಳಿತದಲ್ಲಿ ನಾನು ತೆಗೆದುಕೊಂಡ ಅನೇಕ ಕ್ರಮಗಳಿಂದ ಹಾಗೂ ಅಧಿಕಾರಿ/ಸಿಬ್ಬಂದಿ ವರ್ಗದವರ ಪರಿಶ್ರಮದಿಂದ ಸಾಧ್ಯವಾಗಿರುತ್ತದೆ.

2. ನಿಗಮದ ಅಧ್ಯಕ್ಷರಾದ ಬೇಳೂರು ರಾಘವೇಂದ್ರ ಶೆಟ್ಟಿಯು, 2017-18ನೇ ಸಾಲಿನಲ್ಲಿ ನಿಗಮಕ್ಕೆ ರೂ. 25.00 ಕೋಟಿ ವಂಚಿಸಿ ಸೇವೆಯಿಂದ ವಜಾ ಆದ ಅಂದಿನ ಪ್ರಧಾನ ವ್ಯವಸ್ಥಾಪಕರು (ಹಣಕಾಸು) ಜಿ.ಕಿಶೋರ್ ಕುಮಾರ್ ಎಂಬುವವರನ್ನು ಮತ್ತೆ ಬೋರ್ಡ್ ನಿರ್ಧಾರದ ಮೂಲಕ ಸೇವೆಗೆ ವಾಪಸ್ಸು ತೆಗೆದುಕೊಳ್ಳಲು ಹೊರಟಿದ್ದರು. ವಂಚನೆ ಎಸಗಿದ ಅಂದಿನ ಪ್ರಧಾನ ವ್ಯವಸ್ಥಾಪಕರು (ಹಣಕಾಸು), ಜಿ.ಕಿಶೋರ್‌ ಕುಮಾರ್‌ ಅವರು ನನ್ನ ಬಳಿ ಬಂದು ನನ್ನನ್ನು  ವಾಪಸ್ಸು ಸೇವೆಯಲ್ಲಿ ತೆಗೆದುಕೊಳ್ಳುವ ಪ್ರಸ್ತಾವನೆಯನ್ನು ಬೋರ್ಡ್ ಮುಂದೆ ತನ್ನಿ, ಬೋರ್ಡ್‌ನಲ್ಲಿ ಮಾಡಿಕೊಡುತ್ತೇನೆ ಎಂದು ಅಧ್ಯಕ್ಷ ರಾಘವೇಂದ್ರ ಶೆಟ್ಟಿಯು ಭರವಸೆ ಕೊಟ್ಟಿದ್ದಾರೆ ಎಂದು ತಿಳಿಸಿರುತ್ತಾನೆ. ಈ ನಿಗಮಕ್ಕೆ ರೂ. 25.00 ಕೋಟಿ ವಂಚಿಸಿ ಸೇವೆಯಿಂದ ವಜಾ ಆದ ಕಿಶೋರ್ ಕುಮಾರ್ ನನ್ನು ಮತ್ತೆ ನಿಗಮಕ್ಕೆ ವಾಪಸ್ಸು ಸೇವೆಗೆ ತೆಗೆದುಕೊಳ್ಳುವ ಈ ವಿಷಯವನ್ನು ನಾನು ಬೋರ್ಡ್ ಮುಂದೆ ತರಲು ನಿರಾಕರಿಸಿರುತ್ತೇನೆ. ಆದಾಗ್ಯೂ ತಿಳಿದುಬಂದಿದ್ದು ಏನೆಂದರೆ ಈ ಕೆಲಸಕ್ಕಾಗಿ ಅಧ್ಯಕ್ಷ ರಾಘವೇಂದ್ರ ಶೆಟ್ಟಿ ಹಾಗೂ ಕಿಶೋರ್ ಕುಮಾರ್ ನಡುವೆ ಸುಮಾರು ರೂ. 4-5 ಕೋಟಿ ಹಣದ ವ್ಯವಹಾರದ ಮಾತುಕತೆ ಆಗಿರುತ್ತದೆ ಎಂಬುದು ತಿಳಿದುಬಂದಿರುತ್ತದೆ. ಅವರ ಈ ನಿಯಮಬಾಹಿರ ಕೆಲಸ ನಾನು ತಡೆದ ದಿನದಿಂದ ಹತಾಶರಾಗಿ ದುರ್ವತ್ರನೆಯಿಂದ ವರ್ತಿಸುತ್ತಿದ್ದು, ಇದು ಈಗ ಮಿತಿ ಮೀರಿರುತ್ತದೆ.

3. ಸರ್ಕಾರದ ಅಧಿಕೃತ ಜ್ಞಾಪನ ಸಂಖ್ಯೆ ಡಿಡಿಪಿಆರ್ 35 ಎಆರ್‌ಯು 2003, ದಿನಾಂಕ 07.05.2003 ದೈನಂದಿನ ಚಟುವಟಿಕೆಗಳಲ್ಲಿ ಅಧ್ಯಕ್ಷರು ಹಸ್ತಕ್ಷೇಪ ಮಾಡಬಾರದು ಎಂದು ಇದ್ದರೂ, ಪ್ರತಿ ದಿನವೂ ನಿಗಮದ ಕಚೇರಿ ಕ್ಲರ್ಕ್‌ಗಳನ್ನು ಕರೆದು ಆ ಫೈಲ್ ಕೊಡು, ಈ ಫೈಲ್ ಕೂಡು ಎಂದು ನಿಗಮದ ಅಧ್ಯಕ್ಷರಾದ ರಾಘವೇಂದ್ರ ಶೆಟ್ಟಿಯು ಒತ್ತಾಯ ಮಾಡುತ್ತಾ ಬಂದಿರುತ್ತಾರೆ. ಇದು ಸಿಬ್ಬಂದಿಗಳಿಗೆ ಮಾನಸಿಕ ಹಿಂಸೆಯಾಗಿದೆ. ಈ ಸರ್ಕಾರ ಅಧಿಕೃತ ಜ್ಞಾಪನ ಪ್ರಕಾರ ನಾನು ಚಾಚೂ ತಪ್ಪದೆ ಪಾಲಿಸಿರುತ್ತೇನೆ ಹಾಗೂ ದೈನಂದಿನ ಚಟುವಟಿಕೆಗಳಲ್ಲಿ ಅಧ್ಯಕ್ಷರು ಹಸ್ತಕ್ಷೇಪ ಆಗಲು ಬಿಟ್ಟಿರುವುದಿಲ್ಲ. ಇದು ಅವರ ಭ್ರಮನಿರಸನಕ್ಕೆ ಕಾರಣವಾಗಿದೆ.

4. ನಿಗಮದ ಅಧ್ಯಕ್ಷರಾದ ಬೇಳೂರು ರಾಘವೇಂದ್ರ ಶೆಟ್ಟಿಯು ವೈಯಕ್ತಿಕ ಚೆಕ್ ಬೌನ್ಸ್ ಕೇಸ್‌ನಲ್ಲಿ ಅಪರಾಧಿಯಾಗಿದ್ದು ದಿನಾಂಕ:26.05.2022 ರಂದು ಸಿರ್ಸಿ ಪೊಲೀಸ್‌ರು, ಇವರು ಕೈಗೆ ಸಿಗದೆ ತಪ್ಪಿಸಿಕೊಳ್ಳುತ್ತಿರುವ ಕಾರಣ ಸಮನ್ಸ್ ಅನ್ನು ನಿಗಮದ ಕಛೇರಿಯ ಅವರ ಕೋಣೆಯ ಬಾಗಿಲಿಗೆ ಅಂಟಿಸಿ ಮಹಜರ್ ಮಾಡಿ ಹೋಗಿರುತ್ತಾರೆ. ಇದು ಅನೇಕ ಪತ್ರಿಕೆಗಳಲ್ಲಿ ಬಂದು ನಿಗಮದ ಹೆಸರಿಗೆ ಚ್ಯುತಿ ಆಗಿರುತ್ತದೆ.

5. ನಿಗಮದ ಅಧ್ಯಕ್ಷರಾದ ಬೇಳೂರು ರಾಘವೇಂದ್ರ ಶೆಟ್ಟಿಯು ಅನೇಕ ಬಾರಿ ಶೋರೂಂಗಳಿಂದ ಲಕ್ಷಗಟ್ಟಲೆ ಬೆಲೆಬಾಳುವ ಗಂಧದ ಹಾಗೂ ಇತರ ಸಾಮಾನುಗಳನ್ನು ಹೇಳದೆ ಕೇಳದೆ ಅನಾಮತ್ತಾಗಿ ತೆಗೆದುಕೊಂಡು ಹೋಗಿರುತ್ತಾರೆ. ಅದಕ್ಕೆ ಹಣ ಪಾವತಿಸಿರುವುದಿಲ್ಲ. ಇದರ ಬಗ್ಗೆ ಇವರಿಗೆ ಕೊಟ್ಟ ನೋಟಿಸ್‌ ಲಗತ್ತಿಸಿದೆ.

6. ಪ್ರತಿ ತಿಂಗಳು ನಿಗಮದ ಅಧ್ಯಕ್ಷ ರಾಘವೇಂದ್ರ ಶೆಟ್ಟಿಯವರ ಸಂಬಳ, ಮನೆ ಬಾಡಿಗೆ ಭತ್ಯೆ, 2 ಇನ್ನೋವ ಕ್ರಿಸ್ಟ ಗಾಡಿಗಳು, ಪೆಟ್ರೋಲ್, 4 ಜನ ಸಿಬ್ಬಂದಿ, ವಿಮಾನ ಪ್ರಯಾಣ ವೆಚ್ಚ, ಇತರೆ ವೆಚ್ಚಗಳು ಸೇರಿ ರೂ. 5.00 ಲಕ್ಷದಷ್ಟು ಖರ್ಚು ಪ್ರತಿ ತಿಂಗಳು ಬರುತ್ತದೆ. ಇವರು ಬಂದಾಗಿನಿಂದ ಸುಮಾರು ರೂ. 1.00 ಕೋಟಿಯಷ್ಟು ನಿಗಮಕ್ಕೆ ಖರ್ಚು ತಗಲಿರುತ್ತದೆ. ಆದರೆ ಇದಕ್ಕೆ ಸರಿಸಮವಾಗಿ ಸೇವೆ (ಇನ್‌ಪುಟ್‌) ಆಗಲೀ ಲಾಭವಾಗಲೀ ನಿಗಮಕ್ಕೆ ದೊರಕಿಲ್ಲ.

7. ನಿಗಮದ ಅಧ್ಯಕ್ಷರಾದ ಬೇಳೂರು ರಾಘವೇಂದ್ರ ಶೆಟ್ಟಿಯು ಪ್ರತಿ ತಿಂಗಳು 4 ಜನ ಸಿಬ್ಬಂದಿಗೆ ಸಂಬಳ ಮಾಡಿಸಿಕೊಳ್ಳುತ್ತಾರೆ. ಆದರೆ ಈ 4 ಜನರು ಎಂದೂ ಕೂಡ ಕಛೇರಿಯಲ್ಲಿ ಕೆಲಸ ಮಾಡಿರುವುದು ಕಂಡು ಬಂದಿಲ್ಲ. ಮಾಡದೆ ಇರುವ ಕೆಲಸಕ್ಕೆ ರಾಘವೇಂದ್ರ ಶೆಟ್ಟಿಯು ತಮ್ಮ ಸಹಿಯಲ್ಲಿಯೇ ಅವರುಗಳ ಸಂಬಳವನ್ನು ನಿಗಮದಿಂದ ಪಾವತಿ ಮಾಡಿಸಿಕೊಂಡಿರುತ್ತಾರೆ. ಇಷ್ಟಿದ್ದರೂ ಕೂಡ, ತಮ್ಮ ಕೆಲಸಗಳಿಗೆ ನಿಗಮದ ಸಿಬ್ಬಂದಿಯನ್ನೇ ಬಳಸಿಕೊಳ್ಳುತ್ತಾರೆ.

8. ನಿಗಮದ ಅಧ್ಯಕ್ಷರಾದ ಬೇಳೂರು ರಾಘವೇಂದ್ರ ಶೆಟ್ಟಿಯು ಒಬ್ಬ ಶ್ರೀಕಾಂತ್ ಚೌರಿ ಎಂಬುವವರನ್ನು ಕಳೆದ 10 ತಿಂಗಳಿಂದ ಪಿ.ಎ. ಎಂದು ಇರಿಸಿಕೊಂಡಿದ್ದು ಆತನಿಗೆ ನಿಗಮದಿಂದ ಸಂಬಳವನ್ನು ಮಾಡಲಾಗುತ್ತಿತ್ತು. ಆತನು ಮೊನ್ನೆ ಪಿ.ಎಸ್.ಐ. ರಿಕ್ರೂಟ್‌ಮೆಂಟ್ ಸ್ಕ್ಯಾಮ್‌ನಲ್ಲಿ

ಬಂಧನಕ್ಕೊಳಗಾಗಿ ಜೈಲು ಸೇರಿರುತ್ತಾನೆ. ಇದು ನಿಗಮದ ಹೆಸರಿಗೆ ಕಪ್ಪು ಚುಕ್ಕೆಯಾಗಿದೆ. ಈ ಹಗರಣದಲ್ಲಿ ರಾಘವೇಂದ್ರ ಶೆಟ್ಟಿಯ ಪಾತ್ರವನ್ನು ತನಿಖೆ ಮಾಡಲು ಈ ಮೂಲಕ ಕೋರುತ್ತೇನೆ.

9. ನಿಗಮದ ಅಧ್ಯಕ್ಷರಾದ ಬೇಳೂರು ರಾಘವೇಂದ್ರ ಶೆಟ್ಟಿ ಕಳೆದ ವರ್ಷ ಆಗಸ್ಟ್ ತಿಂಗಳಲ್ಲಿ ನಿಗಮದ ಹೊಚ್ಚ ಹೊಸ ಇನ್ನೋವ ಕ್ರಿಸ್ಟವನ್ನು (ವಾಹನ ಸಂಖ್ಯೆ ಕೆಎ 01 ಎಂವಿ 1711) ಸ್ವತಃ ಚಲಾಯಿಸಿ ರಾತ್ರಿ 8.30 9.00 ಗಂಟೆ ಹೊತ್ತಿಗೆ ರಾಷ್ಟ್ರೀಯ ಹೆದ್ದಾರಿ 4 ರಲ್ಲಿ ಹಿರಿಯೂರು ಬಳಿ ಆಕ್ಸಿಡೆಂಟ್ ಮಾಡಿರುತ್ತಾರೆ. ನಂತರ ಅದನ್ನು ಡ್ರೈವರ್ ಮಾಡಿದ್ದು ಎಂದು ತಿರುಚಿರುತ್ತಾರೆ. ಹಿರಿಯೂರು ಠಾಣೆಯಲ್ಲಿ ಕೇಸ್ ದಾಖಲಾಗಿರುತ್ತದೆ. ಈ ವಾಹನವನ್ನುಹೊಸದಾಗಿ ಡಿಸಂಬರ್ 2019 ರಲ್ಲಿ ಖರೀದಿಸಿದ್ದು ಇದಕ್ಕೆ ತಗುಲಿದ ಖರೀದಿ ವೆಚ್ಚ ಸುಮಾರು ರೂ.14.00 ಲಕ್ಷ, ಈಗ ರಿಪೇರಿಗೆ ತಗುಲಿದ ವೆಚ್ಚ ರೂ.10.84 ಲಕ್ಷಗಳು, ಈ ಹಣ ಈಗಾಗಲೇ ನಿಗಮದಿಂದ ಪಾವತಿಸಲಾಗಿದೆ. ನಿಗಮಕ್ಕೆ ರೂ.10.84 ಲಕ್ಷದಷ್ಟು ಇವರ ಬೇಜವಾಬ್ದಾರಿ ವರ್ತನೆಯಿಂದ ವೃಥಾ ಖರ್ಚು ತಗುಲಿರುತ್ತದೆ.

10. ನಿಗಮದ ಅಧ್ಯಕ್ಷ ರಾಘವೇಂದ್ರ ಶೆಟ್ಟಿಯು ದಿನಾಂಕ: 27.05.2022 ರಂದು ಅಪರಿಚಿತ ವ್ಯಕ್ತಿಯೊಬ್ಬನನ್ನು ಬೆಳಿಗ್ಗೆ 8.30 ಕ್ಕೆ ಕಛೇರಿಗೆ ಕರೆದುಕೊಂಡು ಬಂದು ಸಿಸಿಟಿವಿ ಮತ್ತು ಡಿವಿಆರ್‌ ಅನ್ನು ತಿದ್ದಿ ವಿರೂಪಗೊಳಿಸಿರುತ್ತಾರೆ. ಈಗಾಗಲೇ ಸರ್ಕಾರಕ್ಕೆ ಇದರ ಬಗ್ಗೆ ಅದೇ ದಿನದಂದು ವರದಿ ಸಲ್ಲಿಸಲಾಗಿದೆ. ಇದರಿಂದ ಏನೇನು ಅದರಲ್ಲಿ ಅಳಿಸಲಾಗಿದೆ ಎಂಬುದರ ಬಗ್ಗೆ ರಿಪೋರ್ಟ್ ಬರಬೇಕಿದೆ. ಇದು ಮಾಹಿತಿ ತಂತ್ರಜ್ಞಾನ ಕಾಯ್ದೆ ಪ್ರಕಾರ ಈ ರೀತಿ ತಿದ್ದುವುದು ಅಪರಾಧವಾಗುತ್ತದೆ. ಸರ್ಕಾರದಿಂದ ಪರವಾನಗಿ ಬಂದಲ್ಲಿ ಇದರ ಬಗ್ಗೆ ಠಾಣೆಯಲ್ಲಿ ದೂರು ಸಲ್ಲಿಸಲಾಗುವುದು.

11. ನಿಗಮದ ಅಧ್ಯಕ್ಷರಾದ ಬೇಳೂರು ರಾಘವೇಂದ್ರ ಶೆಟ್ಟಿಯು ನಾನು ವ್ಯವಸ್ಥಾಪಕ ನಿರ್ದೇಶಕರಾಗಿ ಬರುವುದಕ್ಕಿಂತ ಮುಂಚೆ ಹಾಗೂ ಬಂದ ಹೊಸದರಲ್ಲಿ ಕಛೇರಿಯ ಪಕ್ಕದಲ್ಲೇ ಇರುವ ನಾಗಾರ್ಜುನ ಹೋಟೆಲ್‌ನಿಂದ ದಿನ ಕನಿಷ್ಟ ಅಂದರೆ 15 ಊಟವನ್ನು ವೆಜ್ ಮತ್ತು ನಾನ್ ವಜ್ ಅನ್ನು ತಂದು ನಮ್ಮ ನಿಗಮದ ಪ್ರಧಾನ ವ್ಯವಸ್ಥಾಪಕರುಗಳಿಂದ ಅದನ್ನು ಪಾವತಿ ಮಾಡಿಸಿಕೊಳ್ಳುತ್ತಿದ್ದರು. ನಂತರ ಪ್ರಧಾನ ವ್ಯವಸ್ಥಾಪಕರುಗಳು ಈ ವಿಷಯವನ್ನು ನನಗೆ ತಿಳಿಸಿ `ಇದನ್ನು ಮರುಪಾವತಿ ಮಾಡಿಸಿ ಈ ಮೊತ್ತವನ್ನು ತಮಗೆ ಕೊಡಬೇಕೆಂದು ಹೇಳಿದಾಗ ನಾನು ಆ ರೀತಿ ಹಣ ಕೊಡಲು ಅವಕಾಶವಿರುವುದಿಲ್ಲ ಎಂದು ಇದನ್ನು ನಿಲ್ಲಿಸಿರುತ್ತೇನೆ. ತಮಗೆ ಪಿ.ಎ. ಬೇಕೆಂದು, ಪಿ.ಎ.

12. ನಾನು ಬಂದ ಹೊಸದರಲ್ಲಿ ನನಗೆ ಬಂದ ವರದಿಯ ಪ್ರಕಾರ ಅಧ್ಯಕ್ಷ ರಾಘವೇಂದ್ರ ಶೆಟ್ಟಿಯು ಸ್ತ್ರೀಯೇ ಬೇಕೆಂದು ಮಾನ್‌ಪವರ್ ಏಜೆನ್ಸಿಗೆ ಇವರು ಒತ್ತಾಯ ಮಾಡುತ್ತಿದ್ದರು. ನಂತರ ಈ ವಿಷಯ ನನಗೆ ತಿಳಿದಿದೆ ಎಂದು ರಾಘವೇಂದ್ರ ಶೆಟ್ಟಿಯವರಿಗೆ ಗೊತ್ತಾಗಿ ಕೇಳುವುದನ್ನು ನಿಲ್ಲಿಸಿರುತ್ತಾರೆ.

13. ಈಗಾಗಲೇ ಹಿರಿಯ ಅಧಿಕಾರಿಗಳಿಗೆ ಹಿಂದೆ ತಿಳಿಸಿರುವಂತೆ ಕಳೆದ ವರ್ಷ ಫೆಬ್ರವರಿ ತಿಂಗಳಲ್ಲಿ ಒಮ್ಮೆ ಸಾಯಂಕಾಲ 6.30 ಆದರೂ ಕೂಡ ಕಛೇರಿಯ ಎಲ್ಲಾ ಮಹಿಳಾ ಸಿಬ್ಬಂದಿಗಳನ್ನು ಮನೆಗೆ ಹೋಗದಂತೆ ಹಾಗೂ ಕಾಯುವಂತೆ ತಿಳಿಸಿರುತ್ತಾರೆ. ನಾನು ಎಲ್ಲಾ ಮಹಿಳಾ ಸಿಬ್ಬಂದಿಗಳು ಅಧ್ಯಕ್ಷರ ಕೊಠಡಿ ಬಳಿ ನಿಂತಿದ್ದು ಕಂಡು, ಯಾಕೆ ನಿಂತಿದ್ದೀರಿ ಎಂದು ವಿಚಾರಿಸಲು, ಅಧ್ಯಕ್ಷರು ತಿಳಿಸಿರುತ್ತಾರೆ ಎಂದು ತಿಳಿಸಿದರು. ಅದಕ್ಕೆ ನಾನು ಅಧ್ಯಕ್ಷರ ಚೇಂಬರ್‌ಗೆ ಹೋಗಿ ಕಾಯಲು ಕಾರಣ ಕೇಳಲು, ಅವರು ನಾನು ಹಾಗೆ ಹೇಳಲೇ ಇಲ್ಲ ಎಂದು ತಿರುಚಿದರು. ಸ್ತ್ರೀಯರ ಬಗ್ಗೆ ಅವರ ವರ್ತನ ಈ ರೀತಿ ಇರುತ್ತದೆ.

14. ಹೈದರಾಬಾದ್ ನಲ್ಲಿ ಶೋರೂಂ ಉದ್ಘಾಟನೆಯ ನಂತರ ಅದರ ಬಗ್ಗೆ ಪತ್ರಿಕೆಗಳಲ್ಲಿ ಸುದ್ದಿ ಬಂದಾಗ ಅಧ್ಯಕ್ಷ ರಾಘವೇಂದ್ರ ಶೆಟ್ಟಿಯು ತಮ್ಮ ಹೆಸರ ಮುಂದೆ ಡಾಕ್ಟರ್ ಎಂದು ಬರಲಿಲ್ಲ ಎಂದು ಹೇಳಿ ಅವಹೇಳನಕಾರಿ ವರ್ತನ ಮಾಡಿರುತ್ತೀರಿ ಎಂದು ನನಗೆ ಪತ್ರ ಬರೆದಿರುತ್ತಾರೆ. ಅಲ್ಲದೆ ಪಬ್ಲಿಸಿಟಿ ಕಾರ್ಯವನ್ನು ಕೊಟ್ಟ ಸರ್ಕಾರದ ನಿಗಮವಾದ MC & A ಗೆ ಫೋನಾಯಿಸಿ ಈ ಕೆಲಸವನ್ನು ಮಾಡಿದ ಶ್ರೀಮತಿ ದಿವ್ಯ ಆರ್. ಎಂಬುವವರ ನಂಬರ್ ತೆಗೆದುಕೊಂಡು ಅವರಿಗೆ ಫೋನು ಮಾಡಿ ಅಗೌರವಪೂರ್ವಕವಾಗಿ – ಏಕವಚನದಲ್ಲಿ ಕೆಟ್ಟ ರೀತಿಯಲ್ಲಿ ಬೈದಿರುತ್ತಾರೆ. ಸಾರ್ವಜನಿಕ ಸೇವೆಗೆ ಸ್ವಯಂ ಬರುವವರು ಈ ರೀತಿ ಡಾಕ್ಟರ್ ಎಂದು ತಮ್ಮ ಹೆಸರ ಮುಂದೆ ಬರಲಿಲ್ಲ ಎಂದು ಅವಾಚ್ಯ ಶಬ್ದಗಳಿಂದ ಇತರರಿಗೆ ಬೈದು ಸ್ವಾರ್ಥತೆ ಸಾಧಿಸುವ ಇವರ ವಿರುದ್ಧ ಹಾಗೂ ಇವರು ಯಾವ “ಡಾಕ್ಟರ್, ಎಲ್ಲಿಂದ ಪದವಿ ಪಡೆದಿರುತ್ತಾರೆ ಎಂಬುದನ್ನು ತನಿಖೆ ನಡೆಸಲು ಈ ಮೂಲಕ ಕೋರುತ್ತಿದ್ದೇನೆ.

15, ನಾನು ಬಂದ ಹೊಸದರಲ್ಲಿ ಕೆಲವು ಟೆಂಡರ್‌ಗಳಲ್ಲಿ ನಿಯಮಗಳನ್ನು ಮೀರಿ ತಮಗೆ ಗುರುತು ಪರಿಚಯ ಇರುವವರಿಗೆ ಕೊಡಲು ಹೇಳುತ್ತಿದ್ದರು. ಅದನ್ನು ನಾನು ಮಾಡಿರುವುದಿಲ್ಲ. ಒಮ್ಮ ಪ್ರಾರಂಭದಲ್ಲಿ ನನಗೆ, ತಾನು ದೊಡ್ಡಬಳ್ಳಾಪುರದ ಕ್ಷೇತ್ರದ MLA ಟಿಕೇಟ್ ಗಾಗಿ ತಯಾರಿ ನಡೆಸಿದ್ದೇನೆ’ ಎಂದು, ಅದಕ್ಕೆ ಹೆಚ್ಚು ಹಣ ಬೇಕಿರುವ ಕಾರಣ ನಿಗಮದ ಕೆಲಸದಲ್ಲಿ ಅಡ್ವ ಹೋಗಬೇಕೆಂದೂ ಕೋರಿರುತ್ತಾರೆ. ನಾನು ಒಪ್ಪದೇ ಇದ್ದದ್ದರಿಂದ

ಮಾಡಿಕೊಂಡು ಹತಾಶರಾಗಿರುತ್ತಾರೆ.

16. ಅಧ್ಯಕ್ಷ ರಾಘವೇಂದ್ರ ಶೆಟ್ಟಿಯವರು 302 ನೇ ಹಾಗೂ 303 ನೇ ಬೋರ್ಡ್ ಮೀಟಿಂಗ್‌ಗಳ ನಡೆದ ನಡವಳಿಗಳನ್ನು ವಿನಾಕಾರಣ ಸಹಿ ಮಾಡಿರುವುದಿಲ್ಲ. ಕಾರಣವಿಲ್ಲದೇ ಬೋರ್ಡ್ ಮೀಟಿಂಗ್ ಹಾಗೂ ವಾರ್ಷಿಕ ಸಾಮಾನ್ಯ ಸಭೆಗಳಲ್ಲಿ ಅಸಂಬದ್ಧ ವಿಷಯಗಳ ಬಗ್ಗೆ ಕೂಗಾಡಿ ಸಮಯ ವ್ಯರ್ಥ ಮಾಡುವುದು, ಮೇಲಿನ ಮೀಟಿಂಗ್‌ಗಳಲ್ಲಿ ಜೋರಾಗಿ ಕೂಗುತ್ತಾ ಅಶಾಂತ ವಾತಾವರಣ ಉಂಟು ಮಾಡಿ ಕೆಲಸಕ್ಕೆ ಧಕ್ಕೆ ಉಂಟು ಮಾಡಿರುವುದು ಇವುಗಳನ್ನು ಪದೇ ಪದೇ ಮಾಡುತ್ತಾ ಬಂದಿದ್ದಾರೆ. ದಿನಾಂಕ: 27.05.2022 ರಂದು ನಡೆದ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ಒಂದು ಗಂಟೆವರೆಗೆ ಸಭೆ ನಡೆಸಲು ಬಿಡದೆ, ಕೂಗಾಡುತ್ತಾ, ತಾನು ಖಿನ್ನತೆಗೊಳಗಾಗಿ ಆತ್ಮಹತ್ಯೆ ಮಾಡಿಕೊಂಡರೆ ರೂಪಾರವರು ಕಾರಣ ಎಂದು 5-6 ಬಾರಿ ಕೂಗಿ ಕೂಗಿ ಹೇಳಿ ಒತ್ತಡ ಹೇರುವ ಪ್ರಯತ್ನ ಮಾಡಿರುತ್ತಾರೆ. ಇವರ ಕಳೆದ 18 ತಿಂಗಳ ವರ್ತನ ಅತಿ ಉಗ್ರ ಹಾಗೂ ಆಕ್ರಮಣಕಾರಿ ವರ್ತನೆ ಇರುತ್ತದೆ. ಆದರೂ, ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ ಎಂದು ಹೇಳುವ ಮೂಲಕ ಬೆದರಿಕೆ ಹಾಗೂ ಒತ್ತಡ ಹೇರುವ ಕೆಲಸ ಮಾಡಿದ್ದಾರೆ. ಇದರ ಬಗ್ಗೆ ಆತ್ಮಹತ್ಯೆಯ ಯತ್ನದ ಬೆದರಿಕೆಯ ದೂರು ಠಾಣೆಯಲ್ಲಿ ದಾಖಲಿಸುವ ಸಂಬಂಧ ಪರವಾನಗಿ ಈ ಮೂಲಕ ಕೋರಲಾಗಿದೆ.

Tags: BJPCongress PartyCovid 19ಡಿ.ರೂಪಾನರೇಂದ್ರ ಮೋದಿಬಿಜೆಪಿಬೇಳೂರು ರಾಘವೇಂದ್ರ ಶೆಟ್ಟಿ
Previous Post

ಸಂತೂರ್ ವಾದಕ ಭಜನ್ ಸೊಪೋರಿ ವಿಧಿವಶ

Next Post

ದುರಾಡಳಿತದಿಂದ ತೆಲಂಗಾಣ ಸಂಕಷ್ಟ ಎದುರಿಸುತ್ತಿದೆ : ರಾಹುಲ್ ಗಾಂಧಿ ಟ್ವೀಟ್

Related Posts

ಇವರು ಪಂಚರೋ..? ನೀಚರೋ..? : ಸಚಿವೆ ಹೆಬ್ಬಾಳ್ಕರ್‌ ಕ್ಷೇತ್ರದಲ್ಲೇ ಕುರುಬ ಸಮುದಾಯದ ಕುಟುಂಬಕ್ಕೆ ಸಾಮಾಜಿಕ ಬಹಿಷ್ಕಾರ..!
Top Story

ಇವರು ಪಂಚರೋ..? ನೀಚರೋ..? : ಸಚಿವೆ ಹೆಬ್ಬಾಳ್ಕರ್‌ ಕ್ಷೇತ್ರದಲ್ಲೇ ಕುರುಬ ಸಮುದಾಯದ ಕುಟುಂಬಕ್ಕೆ ಸಾಮಾಜಿಕ ಬಹಿಷ್ಕಾರ..!

by ಪ್ರತಿಧ್ವನಿ
April 29, 2026
0

ಬೆಳಗಾವಿ : ಜನ ಸಮುದಾಯ ಎಷ್ಟೇ ಮುಂದುವರೆದರೂ, ತಂತ್ರಜ್ಷಾನ ದಿನದಿಂದ ದಿನಕ್ಕೆ ಬೆಳವಣಿಗೆ ಕಂಡರೂ ಅಲ್ಲದೆ ಕಾನೂನುಗಳು ಅದೆಷ್ಟೇ ಬಿಗಿಯಾದರೂ ಸಹ ಜನರ ಮನಸ್ಸುಗಳು, ಯೋಚನೆಗಳು ಮಾತ್ರ...

Read moreDetails
ಸಿಎಂ ಬದಲಾವಣೆ ಚರ್ಚೆಗೆ ತೆರೆ? ಜಿ. ಪರಮೇಶ್ವರ್ ಸ್ಪಷ್ಟನೆ ಏನು

ಸಿಎಂ ಬದಲಾವಣೆ ಚರ್ಚೆಗೆ ತೆರೆ? ಜಿ. ಪರಮೇಶ್ವರ್ ಸ್ಪಷ್ಟನೆ ಏನು

April 28, 2026
ಕಬ್ಬನ್ ಪಾರ್ಕ್ ನಿಗೂಢ ಸಾವು ಪ್ರಕರಣದ ಸತ್ಯ ಬಯಲು

ಕಬ್ಬನ್ ಪಾರ್ಕ್ ನಿಗೂಢ ಸಾವು ಪ್ರಕರಣದ ಸತ್ಯ ಬಯಲು

April 28, 2026
ರಾಜಸ್ಥಾನ ಕೃಷಿ ಕ್ರಾಂತಿಗೆ ಕೈಜೋಡಿಸಿ: ಕರ್ನಾಟಕಕ್ಕೆ ರಾಜಸ್ಥಾನ ಮುಖ್ಯಮಂತ್ರಿ ಆಹ್ವಾನ

ರಾಜಸ್ಥಾನ ಕೃಷಿ ಕ್ರಾಂತಿಗೆ ಕೈಜೋಡಿಸಿ: ಕರ್ನಾಟಕಕ್ಕೆ ರಾಜಸ್ಥಾನ ಮುಖ್ಯಮಂತ್ರಿ ಆಹ್ವಾನ

April 27, 2026
ಬೆಂಗಳೂರು ಅಭಿವೃದ್ಧಿಗೆ ದೆಹಲಿಯಲ್ಲಿ ದೌಡಾಯಿಸಿದ ಡಿ.ಕೆ. ಶಿವಕುಮಾರ್; ಸಾವಿರಕ್ಕೂ ಹೆಚ್ಚು ಯೋಜನೆಗಳಿಗೆ ಕೇಂದ್ರದ ಗಮನ

ಬೆಂಗಳೂರು ಅಭಿವೃದ್ಧಿಗೆ ದೆಹಲಿಯಲ್ಲಿ ದೌಡಾಯಿಸಿದ ಡಿ.ಕೆ. ಶಿವಕುಮಾರ್; ಸಾವಿರಕ್ಕೂ ಹೆಚ್ಚು ಯೋಜನೆಗಳಿಗೆ ಕೇಂದ್ರದ ಗಮನ

April 26, 2026
Next Post
ಕೋವಿಡ್‌ಗೆ ದೇಶದಲ್ಲಿ 40 ಲಕ್ಷ ಜನರು ಬಲಿ: ರಾಹುಲ್‌ ಗಾಂಧಿ

ದುರಾಡಳಿತದಿಂದ ತೆಲಂಗಾಣ ಸಂಕಷ್ಟ ಎದುರಿಸುತ್ತಿದೆ : ರಾಹುಲ್ ಗಾಂಧಿ ಟ್ವೀಟ್

Please login to join discussion
https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada