ರಾಜಸ್ಥಾನದ ಉದಯ್ಪುರದಲ್ಲಿ ಮೇ 12ರಿಂದ 15 ರ ವರೆಗೆ ನಡೆಸಲು ಉದ್ದೇಶಿಸಿರುವ ಚಿಂತನ್ ಶಬಿರದ ನಂತರ ರಾಜಸ್ಥಾನದ ಬನ್ಸ್ವಾಡದಲ್ಲಿ ಬೃಹತ್ ಸಮಾವೇಶವನ್ನು ಹಮ್ಮಿಕೊಳ್ಳಲು ಉದ್ದೇಶಿಸಿದೆ ಎಂದು ತಿಳಿದು ಬಂದಿದೆ.
ಇನ್ನು ಈ ಬಗ್ಗೆ ಇಂದು ಸೋನಿಯಾ ಗಾಂಧಿ ಅಧ್ಯಕ್ಷತೆಯಲ್ಲಿ ಕಾಂಗ್ರೆಸ್ ವರ್ಕಿಂಗ್ ಕಮಿಟಿ(CWC) ಸಭೆ ಸೇರಿದ್ದು ಕಾರ್ಯಕ್ರಮದ ರೂಪುರೇಷೆ ಬಗ್ಗೆ ಚರ್ಚಿಸಲಾಗುತ್ತದೆ ಎಂದು ತಿಳಿದು ಬಂದಿದೆ.
ಇನ್ನು 2023ರ ವರ್ಷಾಂತ್ಯದಲ್ಲಿ ವಿಧಾನಸಭೆ ಚುನಾವಣೆ ನಡೆಯಲಿರುವ ರಾಜಸ್ಥಾನದ ಬನ್ಸ್ವಾಡದಲ್ಲಿ ಮೇ 16ರಂದು ಸಮಾವೇಶ ನಡೆಸಲು ಕಾಂಗ್ರೆಸ್ ಹೈಕಮಾಂಡ್ ಉದ್ದೇಶಿಸಿದೆ. ರ್ಯಾಲಿಯಲ್ಲಿ ಪಕ್ಷದ ಹಂಗಾಮಿ ಅಧ್ಯಕ್ಷೆ ಸೋನಿಯಾ ಗಾಂಧಿ ಹಾಗೂ ರಾಹುಲ್ ಗಾಂಧಿ ಪಾಲ್ಗೊಳಲಿದ್ದಾರೆ. ಬಹು ವರ್ಷಗಳ ನಂತರ ಸೋನಿಯಾ ಸಮಾವೇಶವನ್ನುದ್ದೇಶಿಸಿ ಮಾತನಾಡಲಿದ್ದಾರೆ ಎಂದು ತಿಳಿದು ಬಂದಿದೆ.
![](https://pratidhvani.com/wp-content/uploads/2022/05/WhatsApp-Image-2022-05-09-at-4.59.24-PM.jpeg)