ವಿವಾದಾತ್ಮಕ ಟ್ವೀಟ್ ಹಾಗೂ ಮಹಿಳಾ ಪೊಲೀಸ್ ಪೇದೆ ಮೇಲೆ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ಸುದ್ದಿಘೋಷ್ಠಿಯನ್ನುದ್ದೇಶಿಸಿ ಮಾತನಾಡಿದ ದಲಿತ ನಾಯಕ ಮತ್ತು ಶಾಸಕ ಜಿಗ್ನೇಶ್ ಮೇವಾನಿ ವರ್ಷಾಂತ್ಯದಲ್ಲಿ ನಡೆಯುವ ಗುಜರಾತ್ ವಿಧಾನಸಭೆ ಚುನಾವಣೆಗು ಮುನ್ನ ತನ್ನನ್ನು ರಾಜಕೀಯವಾಗಿ ತುಳಿಯುವ ಪ್ರಯತ್ನವನ್ನ ಪ್ರಧಾನಿ ಕಾರ್ಯಾಲಯದಿಂದ ರೂಪಿಸಲಾಗಿದೆ ಎಂದು ದೂಷಿಸಿದ್ದಾರೆ.
ನನ್ನ ಬಂಧನವು 56 ಇಂಚಿನ ಹೇಡಿತನದ ಕೃತ್ಯ ಮತ್ತು ಇದರಿಂದ ಗುಜರಾತ್ನ ಗೇಮ್ಮೆ ಸಹ ಹಾಳಾಗಿದೆ. 56 ಇಂಚು ಎಂದು ಹೇಳುವ ಮೂಲಕ ಪ್ರಧಾನಿ ನರೇಂದ್ರ ಮೋದಿ ವಿರುದ್ದ ವಾಗ್ದಾಳಿ ನಡೆಸಿದರು.

ಮುಂದುವರೆದು, 22 ಪ್ರಶ್ನೆ ಪತ್ರಿಕೆಗಳನ್ನು ಸೋರಿಕೆ ಮಾಡಿದವರನ್ನು ಬಂಧಿಸುವಂತೆ ಆಗ್ರಹಿಸಿ ಜೂನ್ 1ರಿಂದ ಗುಜರಾತ್ ಬಂದ್ ಮಾಡಲಾಗುವುದು. ಇತ್ತೀಚಿಗೆ ಮುದ್ರಾ ಬಂದರಿನಲ್ಲಿ 1.75ಲಕ್ಷ ಕೋಟಿ ಮೌಲ್ಯದ ಡ್ರಗ್ಸ್ ಪ್ರಕರಣ ಹಾಗೂ ಉನಾದಲ್ಲಿ ದಲಿತರ ವಿರುದ್ದ ದಾಖಲಾಗಿರುವ ಪ್ರಕರಣಗಳನ್ನು ಸರ್ಕಾರ ಈ ಕೂಡಲೇ ಹಿಂಪಡೆಯಬೇಕು ಎಂದು ಒತ್ತಾಯಿಸಿದ್ದಾರೆ.
ನನ್ನನ್ನು ಅಸ್ಸಾಂ ಪೊಲೀಸರು ಬಂಧಿಸಿದ್ದು ಒಂದು ಪೂರ್ವ ನಿಯೋಜಿತ ಕೃತ್ಯ ಇದು ಶಾಸಕರ ಬಂಧಿಸುವ ವೇಳೆ ಪ್ರೋಟೋಕಾಲ್ ಹಾಗೂ ನಿಯಮಗಳನ್ನು ನಿರ್ಲಕ್ಷಿಸಲಾಗಿದೆ ಎಂದು ಹೇಳಿದ್ದಾರೆ.






