• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Sunday, April 26, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home ದೇಶ

ಪ್ರಕರಣ ಮುಚ್ಚಿಹಾಕಲು ಹಣದ ಆಮಿಷ ನೀಡಿದ ಪೊಲೀಸರು : ಮತ್ತೊಂದು ಕಸ್ಟಡಿ ಸಾವು ಪ್ರಕರಣ ಪತ್ತೆ

ಪ್ರತಿಧ್ವನಿ by ಪ್ರತಿಧ್ವನಿ
April 30, 2022
in ದೇಶ
0
ಪ್ರಕರಣ ಮುಚ್ಚಿಹಾಕಲು ಹಣದ ಆಮಿಷ ನೀಡಿದ ಪೊಲೀಸರು : ಮತ್ತೊಂದು ಕಸ್ಟಡಿ ಸಾವು ಪ್ರಕರಣ ಪತ್ತೆ
Share on WhatsAppShare on FacebookShare on Telegram

ADVERTISEMENT

ತಮಿಳುನಾಡು ಪೊಲೀಸರ ದೌರ್ಜನ್ಯಕ್ಕೆ ಕಸ್ಟಡಿಯಲ್ಲಿ ಮತ್ತೋರ್ವ ವ್ಯಕ್ತಿ ಬಲಿಯಾಗಿರುವುದು ಬೆಳಕಿಗೆ ಬಂದಿದೆ. ಕಳೆದ ಲಾಕ್‌ಡೌನ್‌ ಸಂದರ್ಭದಲ್ಲಿ ತಂದೆ-ಮಗನನ್ನು ಮರ್ದಿಸಿ ಪೊಲೀಸರು ಕೊಂದಿದ್ದು ಅಂತರಾಷ್ಟ್ರೀಯ ಮಟ್ಟದಲ್ಲಿ ಚರ್ಚೆಯಾಗಿತ್ತು. ಅದಾಗಿ, ಇತ್ತೀಚೆಗೆ ಮತ್ತೋರ್ವ ಯುವಕ ಕಸ್ಟಡಿಯಲ್ಲಿ ಸಾವನ್ನಪ್ಪಿದ್ದ. ಅದರ ಬೆನ್ನಲ್ಲೇ, ಮಧ್ಯವಯಸ್ಕ ವ್ಯಕ್ತಿಯೊಬ್ಬ ಪೊಲಿಸ್‌ ದೌರ್ಜನ್ಯಕ್ಕೆ ಬಲಿಯಾದ ಬಗ್ಗೆ ವರದಿಗಳಾಗಿವೆ.

ಪೊಲೀಸರ ಮರ್ದನಕ್ಕೊಳಗಾಗಿ ಮೃತ ವ್ಯಕ್ತಿಯನ್ನು 48 ರ ಹರೆಯದ ತಂಗಮನಿ ಎಂದು ಗುರುತಿಸಲಾಗಿದೆ. ಮೃತ ತಂಗಮಣಿ ಅವರ ಕುಟುಂಬವು ಏಪ್ರಿಲ್ 27 ರಂದು ತಂಗಮಣಿ ಅವರ ಸಾವನ್ನು ಮುಚ್ಚಿಹಾಕಲು ಪೊಲೀಸರ ಗುಂಪು ಅವರೊಂದಿಗೆ ಮಾತುಕತೆ ನಡೆಸಿ ಹಣ ನೀಡಲು ಪ್ರಯತ್ನಿಸಿದೆ ಎಂದು ಆರೋಪಿಸಿದೆ.

ತಿರುವಣ್ಣಾಮಲೈನಲ್ಲಿ ನ್ಯಾಯಾಂಗ ಬಂಧನದಲ್ಲಿದ್ದಾಗ ತಂಗಮಣಿ ಸಾವನ್ನಪ್ಪಿದ್ದಾರೆ ಎಂದು ಕುಟುಂಬದವರು ಆರೋಪಿಸಿದ್ದಾರೆ. ಅವರನ್ನು ಅಕ್ರಮವಾಗಿ ಅರಕ್ ತಯಾರಿಸಿದ ಆರೋಪದ ಮೇಲೆ ಏಪ್ರಿಲ್ 26 ರಂದು ಬಂಧಿಸಲಾಗಿದ್ದು, ತಿರುವುಣ್ಣಾಮಲೈ ಉಪ-ಜೈಲಿಗೆ ಕಳುಹಿಸಲಾಗಿತ್ತು ಮತ್ತು ಮರುದಿನ ಅವರು ಸಾವನ್ನಪ್ಪಿದರು. ಅವರನ್ನು ಜೈಲಿನಲ್ಲಿ ಹೊಡೆದು ಸಾಯಿಸಲಾಗಿದೆ ಎಂದು ಅವರ ಕುಟುಂಬ ಆರೋಪಿಸಿದರೆ, ಪೊಲೀಸರು ಆರೋಪಗಳನ್ನು ನಿರಾಕರಿಸಿದ್ದಾರೆ ಮತ್ತು ಅವರು ಆರೋಗ್ಯ ಸಮಸ್ಯೆಗಳಿಂದ ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.

ಇಡೀ ರಾತ್ರಿ ಪೊಲೀಸರು ನಮ್ಮೊಂದಿಗೆ ಇತ್ಯರ್ಥಗೊಳಿಸುವ ಬಗ್ಗೆ ಮಾತುಕತೆ ನಡೆಸಿದ್ದಾರೆ. 6 ಲಕ್ಷ ರೂ.ವರೆಗೆ ನೀಡುವುದಾಗಿಯೂ, ಪ್ರತಿಯಾಗಿ ಈ ವಿಷಯದ ಬಗ್ಗೆ ಮೌನವಾಗಿರುವಂತೆ ಕೇಳಲಾಯಿತು ಎಂದು ತಂಗಮಣಿ ಅವರ ಹಿರಿಯ ಮಗ ತಿರುಮೂರ್ತಿ ದಿ ನ್ಯೂಸ್‌ ಮಿನಿಟ್‌ ಗೆ ತಿಳಿಸಿದರು.

“ನಮ್ಮ ತಂದೆ ಏಪ್ರಿಲ್ 27 ರಂದು ನಿಧನರಾದರು. ನಾವು ಇಡೀ ರಾತ್ರಿ ನಿದ್ರೆ ಮಾಡಲಿಲ್ಲ ಮತ್ತು ಎರಡನೇ ರಾತ್ರಿ (ಏಪ್ರಿಲ್ 28), ಸಂಧಾನಕ್ಕಾಗಿ ಪೊಲೀಸರ ತಂಡ ನಮ್ಮ ಮನೆಗೆ ಆಗಮಿಸಿತು. 2 ಲಕ್ಷದಿಂದ ಆರಂಭಿಸಿ 6 ಲಕ್ಷಕ್ಕೆ ಏರಿಸಿದರು. ನಾವು ಮಾತನಾಡುವಾಗ ನಮ್ಮ ತಂದೆಯ ದೇಹವು ಕೊಳೆಯುತ್ತಿದೆ ಎಂದು ಅವರು ಹೇಳಿದರು ಮತ್ತು ನಾವು ಹಣವನ್ನು ಸ್ವೀಕರಿಸಿ ಶವವನ್ನು ಪಡೆದುಕೊಳ್ಳಬೇಕೆಂದು ಅವರು ಬಯಸಿದ್ದರು, ”ಎಂದು ತಿರುಮೂರ್ತಿ ಹೇಳಿದ್ದಾರೆ.

ಮರಣೋತ್ತರ ಪರೀಕ್ಷೆಯ ನಂತರ ತಂಗಮಣಿಯ ಶವವನ್ನು ಪಡೆಯದಿರಲು ಕುಟುಂಬದವರು ನಿರ್ಧರಿಸಿದ್ದರಿಂದ ಪೊಲೀಸರು ಚೌಕಾಶಿಗೆ ಬಂದಿದ್ದಾರೆ ಎನ್ನಲಾಗಿದೆ. (ಆರಂಭಿಕ ಮರಣೋತ್ತರ ಪರೀಕ್ಷೆಯ ವರದಿಯ ಪ್ರತಿಯನ್ನು ಕುಟುಂಬಕ್ಕೆ ನೀಡಲಾಗಿಲ್ಲ ಎಂಬ ಆರೋಪವೂ ಇದೆ). ತಂಗಮಣಿಗೆ ಥಳಿಸಿದ ಪೊಲೀಸರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ ಕುಟುಂಬಸ್ಥರು ಮೃತದೇಹವನ್ನು ಪಡೆಯಲು ನಿರಾಕರಿಸಿದ್ದರು. ಏತನ್ಮಧ್ಯೆ, ಎರಡು ವೀಡಿಯೊಗಳು ಹೊರಬಂದಿದ್ದು, ಇದರಲ್ಲಿ ಕುಟುಂಬದೊಂದಿಗೆ ಮಾತುಕತೆ ನಡೆಸುವ ಪೊಲೀಸ್ ಅಧಿಕಾರಿಗಳ ಧ್ವನಿ ಕೇಳಿ ಬಂದಿದೆ. ರಾತ್ರಿಯಲ್ಲಿ ಚಿತ್ರೀಕರಿಸಲಾದ ವೀಡಿಯೊದಲ್ಲಿ ಪೊಲೀಸರು ಕುಟುಂಬದೊಂದಿಗೆ ನಡೆಸಿದ ಸಂಭಾಷಣೆಯನ್ನು ಸಹ ತೋರಿಸುತ್ತವೆ.

TNM ನೊಂದಿಗೆ ಮಾತನಾಡಿದ ತಿರುಮೂರ್ತಿ “ನಮ್ಮ ತಂದೆಯನ್ನು ಹೊಡೆದು ಕೊಂದವರು ಯಾರು ಎಂದು ನಮಗೆ ತಿಳಿಯಬೇಕು ಮತ್ತು ಪ್ರಕರಣವನ್ನು ದಾಖಲಿಸಲು ಸಾಧ್ಯವಾಗದಿದ್ದರೆ ಆ ವ್ಯಕ್ತಿಯನ್ನು ವಜಾಗೊಳಿಸಬೇಕೆಂದು ನಾವು ಬಯಸುತ್ತೇವೆ. ಈ ಬೇಡಿಕೆಗಳನ್ನು ಈಡೇರಿಸುವವರೆಗೆ ನಾವು ಅವರ ಪಾರ್ಥಿವ ಶರೀರವನ್ನು ಸ್ವೀಕರಿಸುವುದಿಲ್ಲ” ಎಂದು ಹೇಳಿದರು.

ಈ ವಿಷಯದ ಬಗ್ಗೆ ಮೌನವಾಗಿರಲು ಹಣ ನೀಡುವುದಾಗಿ ಆತನನ್ನು ಸಂಪರ್ಕಿಸಿದ ಪೊಲೀಸರು ಹೇಳಿದ್ದು, ತಂದೆಯ ದೇಹ ಕೊಳೆಯುತ್ತಿದೆ ಮತ್ತು ಅವರು ಇಷ್ಟು ಹಠ ಮಾಡಬಾರದು ಎಂದು ಒತ್ತಡ ಹೇರಲು ಪ್ರಯತ್ನಿಸಿರುವುದಾಗಿ ಆರೋಪಿಸಲಾಗಿದೆ. ತಮ್ಮ ಕುಟುಂಬವನ್ನು ಸಂಪರ್ಕಿಸಿದವರಲ್ಲಿ ಇಬ್ಬರು ಪೊಲೀಸರನ್ನುತಿರುಮೂರ್ತಿ ಹೆಸರಿಸಿದ್ದು, ಸಬ್ ಇನ್ಸ್ಪೆಕ್ಟರ್ ಮುತ್ತುರಾಮನ್ ಮತ್ತು ಡಿಎಸ್ಪಿ ಅಣ್ಣಾದೊರೈ ತಮ್ಮನ್ನು ಸಂಪರ್ಕಿಸಿದ ಅಧಿಕಾರಿಗಳು ಎಂದು ತಿಳಿಸಿದ್ದಾರೆ. ತಂಗಮಣಿ ಅವರ ಸಾವಿನ ಬಗ್ಗೆ ಯಾವುದೇ ವಿವರಗಳನ್ನು ನೀಡಲಾಗಿಲ್ಲ ಎಂದು ಅವರು ಹೇಳಿದ್ದಾರೆ.

“ಅವರು ನನ್ನ ತಂದೆಯನ್ನು ಹೊಡೆದು ಕೊಂದ ಹಣವನ್ನು ತೆಗೆದುಕೊಳ್ಳುವಂತೆ ಕೇಳುತ್ತಿದ್ದರು ಮತ್ತು ಈ ಬಗ್ಗೆ ಯಾರೊಂದಿಗೂ ಮಾತನಾಡಬೇಡಿ ಎಂದು ಕೇಳಿದರು. ಪೊಲೀಸರೊಂದಿಗೆ ದ್ವೇಷವನ್ನು ಸೃಷ್ಟಿಸಬೇಡಿ ಎಂದು ಅವರು ನಮ್ಮನ್ನು ಕೇಳಿಕೊಂಡರು, ಏಕೆಂದರೆ ಭವಿಷ್ಯದಲ್ಲಿ ಪೊಲೀಸರು ಖಂಡಿತವಾಗಿಯೂ ನಮಗೆ ಉಪಯೋಗಕ್ಕೆ ಬರುತ್ತಾರೆ ಎಂದು ಆಮಿಷ ಒಡ್ಡಿದರು” ಎಂದು ತಿರುಮೂರ್ತಿ ಹೇಳಿದರು.

“ಅಕ್ರಮ ಮದ್ಯ ತಯಾರಿಸಿದ್ದಕ್ಕಾಗಿ ನನ್ನ ತಂದೆಯನ್ನು ಬಂಧಿಸಲಾಗಿದೆ. ವಶಪಡಿಸಿಕೊಂಡ ಮದ್ಯ ಎಲ್ಲಿದೆ ಎಂದು ತಿಳಿಯಬೇಕಿದೆ. ಏನನ್ನೂ ವಶಪಡಿಸಿಕೊಂಡಿಲ್ಲ. ಈ ಹಿಂದೆ ಹಲವು ಬಾರಿ ಅವರನ್ನು ಬಂಧಿಸಲಾಗಿತ್ತು ಮತ್ತು ಇಲ್ಲಿ ಒಂದು ಬಾರಿಯೂ ಮದ್ಯ ಪತ್ತೆಯಾಗಿಲ್ಲ. ಹಿಂದಿನ ಸಂದರ್ಭಗಳಲ್ಲಿಯೂ ತನ್ನ ತಂದೆಯ ಮೇಲೆ ಹಲ್ಲೆ ನಡೆಸಲಾಗಿತ್ತು, ಆದರೆ ಈ ಬಾರಿ ಅವರನ್ನು “ಹೊಡೆದು ಸಾಯಿಸಲಾಗಿದೆ” ಎಂದು ತಿರುಮೂರ್ತಿ ಹೇಳಿದ್ದಾರೆ.

ವೆಲ್ಲೂರು ರೇಂಜ್ ಡಿಐಜಿ ಅನ್ನಿ ವಿಜಯಾ ಅವರನ್ನು ಸಂಪರ್ಕಿಸಿದಾಗ, ಅವರು ವೀಡಿಯೊಗಳ ಬಗ್ಗೆ ತಿಳಿದಿಲ್ಲ, ಆದರೆ ಅದರ ಬಗ್ಗೆ ತನಿಖೆ ನಡೆಸುವುದಾಗಿ ಹೇಳಿದರು. ಮರಣೋತ್ತರ ಪರೀಕ್ಷೆಯ ಫಲಿತಾಂಶ ಬಂದ ನಂತರ ವಿಸ್ತೃತ ತನಿಖೆ ನಡೆಸಲಾಗುವುದು ಎಂದು ತಮಿಳುನಾಡು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ವಿಧಾನಸಭೆಯಲ್ಲಿ ಮುಂಜಾನೆ ಹೇಳಿಕೆ ನೀಡಿದ್ದರು. ಈ ವಿಷಯವನ್ನು ಪ್ರತಿಪಕ್ಷದ ನಾಯಕ ಎಡಪ್ಪಾಡಿ ಕೆ ಪಳನಿಸ್ವಾಮಿ ಅವರು ವಿಧಾನಸಭೆಯಲ್ಲಿ ಪ್ರಸ್ತಾಪಿಸಿದರು.

ಕೆಲವೇ ದಿನಗಳ ಹಿಂದೆ ಚೆನ್ನೈನಲ್ಲಿ ಪೊಲೀಸ್ ಕಸ್ಟಡಿಯಲ್ಲಿ ಸಾವನ್ನಪ್ಪಿದ 25 ವರ್ಷದ ವಿಘ್ನೇಶ್ ಕುಟುಂಬಕ್ಕೆ 1 ಲಕ್ಷ ರೂಪಾಯಿ ನೀಡಲು ಪೊಲೀಸರು ಪ್ರಯತ್ನಿಸಿದ್ದು, ಅವರನ್ನು ಸಮಾಧಾನಪಡಿಸಲು ಮತ್ತು ಪ್ರಕರಣವನ್ನು ಇತ್ಯರ್ಥಗೊಳಿಸಲು ಪ್ರಯತ್ನಿಸಿರುವುದು ವರದಿಯಾಗಿತ್ತು.

Tags: BJPCongress PartyCovid 19Tamilnadu Policeನರೇಂದ್ರ ಮೋದಿಬಿಜೆಪಿ
Previous Post

ಇದು ಹಿಂದುಸ್ತಾನ್‌, ಇಲ್ಲಿ ಹಿಂದಿ ಇಷ್ಟವಿಲ್ಲದಿದ್ದರೆ ಬೇರೆ ದೇಶಕ್ಕೆ ಹೋಗಿ: ಯುಪಿ ಸಚಿವನ ವಿವಾದಾತ್ಮಕ ಹೇಳಿಕೆ

Next Post

ಕೇಜ್ರಿವಾಲ್‌ರನ್ನು ಭೇಟಿಯಾದ ದೀದಿ: ರಾಷ್ಟ್ರ ರಾಜಕಾರಣದಲ್ಲಿ ಮೂಡಿದ ಕುತೂಹಲ

Related Posts

ಬೆಸ್ಕಾಂನ ‘ಹೆಚ್‌ಟಿ ಮಿತ್ರ’  ಪೋರ್ಟಲ್‌ಗೆ ಚಾಲನೆ ನೀಡಿದ ಇಂಧನ ಸಚಿವ ಕೆ.ಜೆ. ಜಾರ್ಜ್
Top Story

ಬೆಸ್ಕಾಂನ ‘ಹೆಚ್‌ಟಿ ಮಿತ್ರ’ ಪೋರ್ಟಲ್‌ಗೆ ಚಾಲನೆ ನೀಡಿದ ಇಂಧನ ಸಚಿವ ಕೆ.ಜೆ. ಜಾರ್ಜ್

by ಪ್ರತಿಧ್ವನಿ
April 23, 2026
0

ಬೆಂಗಳೂರು: ಬೆಸ್ಕಾಂನ ಹೈ ಟೆನ್ಷನ್ ಗ್ರಾಹಕರಿಗಾಗಿ ಸಂಸ್ಥೆಯ ಇಂಜಿನಿಯರ್‌ಗಳು ಅಭಿವೃದ್ಧಿಪಡಿಸಿರುವ ಸೇವೆ ಕೋರಿಕೆ/ಕುಂದುಕೊರತೆ ಪರಿಹಾರ ಪೋರ್ಟಲ್ 'ಹೆಚ್‌ಟಿ ಮಿತ್ರ'ಗೆ ಇಂಧನ ಸಚಿವ ಕೆ.ಜೆ. ಜಾರ್ಜ್ ಅವರು ಗುರುವಾರ...

Read moreDetails
ಇನ್ನು ಮುಂದೆ ಬೆಂಗಳೂರು ಒನ್ ಕೇಂದ್ರಗಳಲ್ಲೂ ಇ-ಸ್ವತ್ತು ಅರ್ಜಿ ಸಲ್ಲಿಸಬಹುದು. ಸಚಿವ ಪ್ರಿಯಾಂಕ ಖರ್ಗೆ

ಇನ್ನು ಮುಂದೆ ಬೆಂಗಳೂರು ಒನ್ ಕೇಂದ್ರಗಳಲ್ಲೂ ಇ-ಸ್ವತ್ತು ಅರ್ಜಿ ಸಲ್ಲಿಸಬಹುದು. ಸಚಿವ ಪ್ರಿಯಾಂಕ ಖರ್ಗೆ

April 23, 2026
ಮಹಿಳಾ ಮೀಸಲಾತಿ ಡಿಎಂಕೆ ರಾಜಕೀಯ ಹುನ್ನಾರಕ್ಕೆ ರಾಜ್ಯದ ಹಿತ ಬಲಿ:ಬಸವರಾಜ ಬೊಮ್ಮಾಯಿ

ಮಹಿಳಾ ಮೀಸಲಾತಿ ಡಿಎಂಕೆ ರಾಜಕೀಯ ಹುನ್ನಾರಕ್ಕೆ ರಾಜ್ಯದ ಹಿತ ಬಲಿ:ಬಸವರಾಜ ಬೊಮ್ಮಾಯಿ

April 23, 2026
ಸಂವಿಧಾನದ ಅಶಯಗಳು -ಬಾಬು ಜಗಜೀವನ್‌ರಾಮ್‌-

ಸಂವಿಧಾನದ ಅಶಯಗಳು -ಬಾಬು ಜಗಜೀವನ್‌ರಾಮ್‌-

April 23, 2026
ರಾಜಕಾರಣಿಗಳಿಂದ ರಸ್ತೆ ತಡೆ ಮಾಡಿಸಿ ಪ್ರತಿಭಟನೆ : ಕೆರಳಿತು ಸಾರ್ವಜನಿಕರ ತಾಳ್ಮೆ..!

ರಾಜಕಾರಣಿಗಳಿಂದ ರಸ್ತೆ ತಡೆ ಮಾಡಿಸಿ ಪ್ರತಿಭಟನೆ : ಕೆರಳಿತು ಸಾರ್ವಜನಿಕರ ತಾಳ್ಮೆ..!

April 22, 2026
Next Post
ಕೇಜ್ರಿವಾಲ್‌ರನ್ನು ಭೇಟಿಯಾದ ದೀದಿ: ರಾಷ್ಟ್ರ ರಾಜಕಾರಣದಲ್ಲಿ ಮೂಡಿದ ಕುತೂಹಲ

ಕೇಜ್ರಿವಾಲ್‌ರನ್ನು ಭೇಟಿಯಾದ ದೀದಿ: ರಾಷ್ಟ್ರ ರಾಜಕಾರಣದಲ್ಲಿ ಮೂಡಿದ ಕುತೂಹಲ

Please login to join discussion
https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada