ಅಫ್ಗಾನಿಸ್ತಾನದ ಅಲ್ಪಸಂಖ್ಯಾತ ಸಮುದಾಯ ಎಂದೇ ಖ್ಯಾತಿ ಪಡೆದಿರುವ ಶಿಯಾ ಮುಸ್ಲಿಂರನ್ನು ಗುರಿಯಾಗಿಸಿ ಸರಣಿ ಬಾಂಬ್‌ಗಳ ದಾಳಿ ಮಾಡಲಾಗಿದೆ. ದಾಳಿಯ ಹೊಣೆಯನ್ನು ಇಸ್ಲಾಮಿಕ್ ಸ್ಟೇಟ್ ಖೊರಾಸನ್ (ISk) ಸಂಘಟನೆ ಹೊತ್ತುಕೊಂಡಿದೆ.
ಗುರುವಾರ ಅಫ್ಗಾನಿಸ್ತಾನದ ಶಿಯಾ ಮಸೀದಿಯಲ್ಲಿ ಮೂರು ಬಾಂಬ್ ಸ್ಫೋಟವಾಗಿದ್ದು 12 ಮಂದಿ ಸಾವನಪ್ಪಿದ್ದಾರೆ 40ಕ್ಕೂ ಹೆಚ್ಚು ಮಂದಿಗೆ ಗಂಭೀರ ಗಾಯಗಳಾಗಿವೆ ಎಮದು ತಿಳಿದು ಬಂದಿದೆ.