• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Sunday, April 26, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home ಕರ್ನಾಟಕ

ಮುಸ್ಲಿಂ ಚಾಲಕ, ಮಾಲಿಕರ ಮೇಲೂ ಬ್ಯಾನ್ ಅಸ್ತ್ರ ಪ್ರಯೋಗ : ಒಗ್ಗಟ್ಟಾಗಿ ನಿಂತ ಟ್ರಾವೆಲ್ಸ್ ಮಾಲೀಕ & ಚಾಲಕರು!

ಪ್ರತಿಧ್ವನಿ by ಪ್ರತಿಧ್ವನಿ
April 9, 2022
in ಕರ್ನಾಟಕ
0
ಮುಸ್ಲಿಂ ಚಾಲಕ, ಮಾಲಿಕರ ಮೇಲೂ ಬ್ಯಾನ್ ಅಸ್ತ್ರ ಪ್ರಯೋಗ : ಒಗ್ಗಟ್ಟಾಗಿ ನಿಂತ ಟ್ರಾವೆಲ್ಸ್ ಮಾಲೀಕ & ಚಾಲಕರು!
Share on WhatsAppShare on FacebookShare on Telegram

ರಾಜ್ಯದಲ್ಲಿ ಪ್ರತಿ ದಿನ ಹೊಸ ಹೊಸ‌‌ ವಿವಾದಗಳು ಹುಟ್ಟು ಪಡೆದುಕೊಳ್ಳುತ್ತಿದೆ. ಹಲಾಲ್ ವರ್ಸಸ್ ಜಟ್ಕಾ ಕಟ್, ಮುಸ್ಲಿಂ ವ್ಯಾಪಾರಿಗಳಿಗೆ ನಿಷೇಧ, ಹಿಜಾಬ್ ಹೀಗೆ ಹಲವು ವಿವಾದಗಳು ಮುಂದುವರೆದು ಇದೀಗ ಟ್ರಾವೆಲ್ಸ್ ಕ್ಷೇತ್ರಗಳಲ್ಲೂ ಮುಸ್ಲಿಮರನ್ನು ಬ್ಯಾನ್ ಮಾಡಬೇಕು ಎಂದು ಹಿಂದೂ ಪರ ಸಂಘಟನೆಗಳು ಒತ್ತಾಯಿಸಿದೆ. ಆದರೆ ಟ್ರಾವೆಲ್ಸ್ ಕ್ಷೇತ್ರ ಒಗ್ಗಟ್ಟಾಗಿ ನಿಂತಿದೆ.

ADVERTISEMENT

ಮುಸ್ಲಿಮರ ವಾಹನ ಬಾಡಿಗೆಗೆ ಪಡೆಯದಂತೆ ಹಿಂದೂ ಸಂಘಟನೆಗಳ ಕರೆ !

ಪ್ರತಿ ದಿನ ಬೆಳಗಾಗುವುದರಲ್ಲಿ ಒಂದಲ್ಲಾ ಒಂದು‌ ವಿವಾದಗಳು ಸೃಷ್ಟಿಯಾಗ್ತಿವೆ. ಆರಂಭದಲ್ಲಿ ಉಡುಪಿಯಲ್ಲಿ ಶುರುವಾದ ಹಿಜಾಬ್ ವಿವಾದ ಕಾಡ್ಗಿಚ್ಚಿನಂತೆ ದೇಶವ್ಯಾಪಿ ಚರ್ಚೆಗೆ ಗ್ರಾಸವಾಯ್ತು. ಅದಾಗಿ ಹಿಜಾಬ್ ವಿಚಾರ ತಣ್ಣಗಾಗುತ್ತಿದ್ದಂತೆ ಜಾತ್ರೆಗಳಲ್ಲಿ ಮುಸಲ್ಮಾನ ವ್ಯಾಪಾರಿಗಳಿಗೆ ಆರ್ಥಿಕ ನಿರ್ಬಂಧ ಹೇರುವ ಅಭಿಯಾನ ಶುರುವಾಯಿತು. ಅಲ್ಲಿಂದ ಒಂದರ ಹಿಂದೆ ಮತ್ತೊಂದು ವಿವಾದಗಳು ಅಭಿಯಾನದ ರೂಪದಲ್ಲಿ ಹುಟ್ಟಿಕೊಳ್ಳಲಾರಂಭಿಸಿತು. ಅದರದ್ದೇ ಭಾಗವಾಗಿ ಈಗ ಮುಸ್ಲಿಮರು ಚಾಲಕರು ಅಥವಾ ಮಾಲೀಕರು ಆಗಿರುವ ವಾಹನಗಳನ್ನು ಬಾಡಿಗೆಗೆ ಪಡೆಯದಂತೆ ಹಿಂದೂ ಸಂಘಟನೆಗಳು ಹಿಂದೂಗಳಿಗೆ ಕರೆ ಕೊಟ್ಟಿದೆ.

ಭಾರತ ರಕ್ಷಣಾ ವೇದಿಕೆ ಮುಖಂಡನಿಂದ ಮುಸ್ಲಿಮರ ಬಹಿಷ್ಕಾರಕ್ಕೆ ಕರೆ !

ಕರಾವಳಿ ಭಾಗದ ಭಾರತ ರಕ್ಷಣಾ ವೇದಿಕೆ ಎಂಬ ಹಿಂದೂ ಸಂಘಟನೆಯ ಮುಖಂಡ ಪ್ರಶಾಂತ್ ಬಂಗೇರಾ ಎಂಬಾತ ಹಿಂದೂಗಳು, ಹಿಂದೂಗಳ ವಾಹನದಲ್ಲೇ ದೇವಾಲಯಕ್ಕೆ ಹೋಗಲಿ, ಮುಸ್ಲಿಮರ ವಾಹನ ಬಾಡಿಗೆಗೆ ಬಳಕೆ ಬೇಡ ಎಂದು ಹೊಸದೊಂದು‌ ವಿವಾದಕ್ಕೆ ನಾಂದಿ ಹಾಡಿದ್ದಾನೆ.‌ ಈ ಬಗ್ಗೆ ಒಂದು ವೀಡಿಯೋ ಮಾಡಿ ಹರಿ ಬಿಟ್ಟಿದ್ದು, ಈಗಾಗಲೇ ಹಿಂದೂ ಸಮಾಜ ಒಂದಾಗಿ ಸಾಕಷ್ಟು ಅಭಿಯಾನ ಮಾಡಿ ಯಶಸ್ವಿಯಾಗಿದೆ. ನಾವು ಮತ್ತೊಂದು ಹೊಸ ಅಭಿಯಾನ ಆರಂಭ ಮಾಡಬೇಕಿದೆ.‌ ಯಾರು ನಮ್ಮ ದೇವರನ್ನು ನಂಬುವುದಿಲ್ಲ, ನಮ್ಮ ಕಾನೂನಿಗೆ ಬೆಲೆ ಕೊಡುವುದಿಲ್ಲವೋ ಅವರ ವಾಹನದಲ್ಲಿ ಹೋಗಿ ಅಲ್ಲಿ ನಮ್ಮ ದೇವರಿಗೆ ಹರಕೆ ಪೂಜೆ ಸಲ್ಲಿಸುತ್ತಿದ್ದೆವೆ. ಆದರಿಂದ ಇಂದಿನಿಂದ ಹಿಂದೂ ಮಾಲೀಕರು ಮತ್ತು ಡ್ರೈವರ್ ಗಳ ಜೊತೆಯಲ್ಲೇ ನಮ್ಮ ಧಾರ್ಮಿಕ ಕ್ಷೇತ್ರಕ್ಕೆ ಹೋಗಬೇಕು. ಹಿಂದೂ ಚಾಲಕರಿಗೆ ನಾವು ಆರ್ಥಿಕವಾಗಿ ಬೆಂಬಲ ನೀಡಬೇಕು ಎಂದು ಹೊಸ ವಿವಾದದ ಕಿಡಿ‌ ಹಚ್ಚಿಸಿದ್ದಾನೆ.

ಹಿಂದೂ ಸಂಘಟನೆಗಳ ‘ಮುಸ್ಲಿಂ ನಿಷೇಧ’ದ ಕರೆಗೆ ಕೆಂಡಾಮಂಡಲವಾದ ಟ್ರಾವೆಲ್ಸ್ ಮಾಲೀಕರು !

ಹಿಂದೂ ಸಂಘಟನೆಗಳು ಟ್ರಾವೆಲ್ಸ್ ಕ್ಷೇತ್ರದಿಂದ ಮುಸ್ಲಿಮರ ಬಹಿಷ್ಕಾರಕ್ಕೆ ಕೊಟ್ಟ ಕರೆಗೆ ಇಡೀ ಟ್ರಾವೆಲ್ಸ್ ಕ್ಷೇತ್ರವು ಒಕ್ಕೊರಲಿನಿಂದ ಖಂಡಿಸಿದೆ. ರಾಜ್ಯ ಟ್ರಾವೆಲ್ಸ್ ಓನರ್ಸ್ ಅಸೋಸಿಯೇಷನ್ ಅಧ್ಯಕ್ಷ ರಾಧಾಕೃಷ್ಣ ಹೊಳ್ಳ, ಓಲಾ ಊಬರ್ ಅಸೋಸಿಯೇಷನ್ ಅಧ್ಯಕ್ಷ ತನ್ವೀರ್ ಪಾಷಾ ಸೇರಿದಂತೆ ಎಲ್ಲಾ ಸಂಘಟನೆಗಳ ಮುಖಂಡರು ಹಿಂದೂ ಸಂಘನಟೆಗಳ ಅಭಿಯಾನಕ್ಕೆ ಸೆಡ್ಡು ಹೊಡೆದಿದ್ದಾರೆ‌. ಅಲ್ಲದೆ ನಮಗೆ ವಾಹನವೇ ಮಸೀದಿ, ಮಂದಿರ, ಚರ್ಚ್ ಎಂದು ಹೇಳಿದೆ. ಹೀಗೆ ರಾಜ್ಯದಲ್ಲಿ ಮತ್ತೊಂದು ವಿವಾದ ಭುಗಿಲೆದ್ದಿದ್ದು ಮುಸ್ಲಿಮ್ ವಾಹನ ಚಾಲಕ ಮಾಲಕರ ವಿರುದ್ಧ ಅಭಿಯಾನ ಶುರುವಾಗಿದೆ. ಈಗಾಗಲೇ ಟ್ರಾವೆಲ್ಸ್ ಓನರ್ಸ್ ಅಸೋಸಿಯೇಷನ್‌ಗಳು ಈ ಬಗ್ಗೆ ಖಂಡನೆ ವ್ಯಕ್ತ ಪಡಿಸಿದ್ದು ಅಸಮಾಧಾನ ಹೊರಹಾಕಿದೆ.

Tags: BJPCongress PartyCovid 19ಎಚ್ ಡಿ ಕುಮಾರಸ್ವಾಮಿಚಾಲಕರುಟ್ರಾವೆಲ್ಸ್ ಮಾಲೀಕನರೇಂದ್ರ ಮೋದಿಬಿ ಎಸ್ ಯಡಿಯೂರಪ್ಪಬಿಜೆಪಿಬ್ಯಾನ್ ಅಸ್ತ್ರಮುಸ್ಲಿಂ ಚಾಲಕಸಿದ್ದರಾಮಯ್ಯ
Previous Post

ಬಾಲಿವುಡ್‌ ನಟಿ ಸೋನಂ ಕಪೂರ್‌ ಮನೆ ಕಳ್ಳತನ: 2.4 ಕೋಟಿ ಮೌಲ್ಯದ ಆಭರಣ ಕಳವು!

Next Post

ರಾವತ್-ಕೊಹ್ಲಿ ಮಿಂಚಿನಾಟ; ಆರ್ ಸಿಬಿ ಹ್ಯಾಟ್ರಿಕ್ ಜಯಭೇರಿ

Related Posts

ಬೆಂಗಳೂರು ಅಭಿವೃದ್ಧಿಗೆ ದೆಹಲಿಯಲ್ಲಿ ದೌಡಾಯಿಸಿದ ಡಿ.ಕೆ. ಶಿವಕುಮಾರ್; ಸಾವಿರಕ್ಕೂ ಹೆಚ್ಚು ಯೋಜನೆಗಳಿಗೆ ಕೇಂದ್ರದ ಗಮನ
ಕರ್ನಾಟಕ

ಬೆಂಗಳೂರು ಅಭಿವೃದ್ಧಿಗೆ ದೆಹಲಿಯಲ್ಲಿ ದೌಡಾಯಿಸಿದ ಡಿ.ಕೆ. ಶಿವಕುಮಾರ್; ಸಾವಿರಕ್ಕೂ ಹೆಚ್ಚು ಯೋಜನೆಗಳಿಗೆ ಕೇಂದ್ರದ ಗಮನ

by ಪ್ರತಿಧ್ವನಿ
April 26, 2026
0

ನವದೆಹಲಿ, ಏ. 26: ಎರಡು ದಿನಗಳ ದೆಹಲಿ ಪ್ರವಾಸದ ವೇಳೆ ಬೆಂಗಳೂರು ನಗರದ ಅಭಿವೃದ್ಧಿ, ಕೇಂದ್ರ ಸಚಿವರೊಂದಿಗೆ ಮಹತ್ವದ ಸಭೆಗಳು ಹಾಗೂ ವಿವಿಧ ರಾಜ್ಯಗಳ ಚುನಾವಣೆಗಳ ಕುರಿತು...

Read moreDetails
ಅನ್ನ-ನೀರಿಗೆ ಭವಿಷ್ಯದಲ್ಲಿ ಸಂಕಷ್ಟ ಎಚ್ಚರಿಕೆ: ಹವಾಮಾನ ಬದಲಾವಣೆಯ ಕುರಿತು ಕೋಡಿಮಠ ಶ್ರೀಗಳ ಭವಿಷ್ಯವಾಣಿ

ಅನ್ನ-ನೀರಿಗೆ ಭವಿಷ್ಯದಲ್ಲಿ ಸಂಕಷ್ಟ ಎಚ್ಚರಿಕೆ: ಹವಾಮಾನ ಬದಲಾವಣೆಯ ಕುರಿತು ಕೋಡಿಮಠ ಶ್ರೀಗಳ ಭವಿಷ್ಯವಾಣಿ

April 25, 2026
ಆಯುಕ್ತರ ಹೆಸರಿನಲ್ಲಿ ವಾಟ್ಸ್‌ಆಪ್ ವಂಚನೆ ಯತ್ನ: ಬೆಂಗಳೂರು ಪಾಲಿಕೆಗಳಿಂದ ಸಾರ್ವಜನಿಕರಿಗೆ ಎಚ್ಚರಿಕೆ

ಆಯುಕ್ತರ ಹೆಸರಿನಲ್ಲಿ ವಾಟ್ಸ್‌ಆಪ್ ವಂಚನೆ ಯತ್ನ: ಬೆಂಗಳೂರು ಪಾಲಿಕೆಗಳಿಂದ ಸಾರ್ವಜನಿಕರಿಗೆ ಎಚ್ಚರಿಕೆ

April 24, 2026
ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳಿಗೆ ಶಾಕ್: ಮೂರನೇ ಪರೀಕ್ಷೆ ರದ್ದು

ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳಿಗೆ ಶಾಕ್: ಮೂರನೇ ಪರೀಕ್ಷೆ ರದ್ದು

April 23, 2026
ಎಸ್‌ಎಸ್‌ಎಲ್‌ಸಿ ಫಲಿತಾಂಶದಲ್ಲಿ ದಾಖಲೆ ಸಾಧನೆ: ಈ 7 ಮಂದಿಗೆ ಪೂರ್ಣ ಅಂಕ!

ಎಸ್‌ಎಸ್‌ಎಲ್‌ಸಿ ಫಲಿತಾಂಶದಲ್ಲಿ ದಾಖಲೆ ಸಾಧನೆ: ಈ 7 ಮಂದಿಗೆ ಪೂರ್ಣ ಅಂಕ!

April 23, 2026
Next Post
ರಾವತ್-ಕೊಹ್ಲಿ ಮಿಂಚಿನಾಟ; ಆರ್ ಸಿಬಿ ಹ್ಯಾಟ್ರಿಕ್ ಜಯಭೇರಿ

ರಾವತ್-ಕೊಹ್ಲಿ ಮಿಂಚಿನಾಟ; ಆರ್ ಸಿಬಿ ಹ್ಯಾಟ್ರಿಕ್ ಜಯಭೇರಿ

Please login to join discussion
https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada