• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Thursday, April 23, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home ಕರ್ನಾಟಕ

ನಮ್ಮ ಮೆಟ್ರೋ ಮೇಲೆ ಕಲ್ಲು ತೂರಾಟ : ಮೆಟ್ರೋ ಅಪ್ ಅಂಡ್‌ ಡೌನ್ ರ್ಯಾಪ್ ಗೆ CCTV ಅಳವಡಿಸಿದ BMRCL!

ಪ್ರತಿಧ್ವನಿ by ಪ್ರತಿಧ್ವನಿ
March 24, 2022
in ಕರ್ನಾಟಕ
0
ವಿದೇಶಿ ಮಾದರಿಯಲ್ಲಿ ನಮ್ಮ ಮೆಟ್ರೋ ನಿಲ್ದಾಣದಲ್ಲಿ ಶಾಪಿಂಗ್ ಹಬ್ ಗಳ ಸ್ಥಾಪನೆ!
Share on WhatsAppShare on FacebookShare on Telegram

ನಮ್ಮ ಮೆಟ್ರೋ ಮೇಲೆನಮ್ಮ ಮೆಟ್ರೋ ಮೇಲೆ ಕಲ್ಲು ತೂರಾಟ : ಮೆಟ್ರೋ ಅಪ್ ಅಂಡ್‌ ಡೌನ್ ರ್ಯಾಪ್ ಗೆ CCTV ಅಳವಡಿಸಿದ BMRCL! ಕಲ್ಲು ತೂರಾಟ : ಮೆಟ್ರೋ ಅಪ್ ಅಂಡ್‌ ಡೌನ್ ರ್ಯಾಪ್ ಗೆ CCTV ಅಳವಡಿಸಿದ BMRCL!

ADVERTISEMENT

ದಿ‌ನಕಳೆದಂತೆ ಮೆಟ್ರೋ ಸಂಚಾರವನ್ನ ಇಷ್ಟ ಪಡುವವರ ಸಂಖ್ಯೆ ಹೆಚ್ಚಾಗುತ್ತಿದೆ. ದಿನದಿಂದ ದಿನಕ್ಕೆ ಹೆಚ್ಚಿನ ಪ್ರಯಾಣಿಕರನ್ನು ಹೊಂದುತ್ತಿರುವ ನಮ್ಮ‌ ಮೆಟ್ರೋಗೆ ಕೆಲ ಕಿಡಿಗೇಡಿಗಳು ಕಲ್ಲು ತೂರಾಟ ನಡೆಸುತ್ತಿದ್ದಾರೆ.‌ ಈ ಘಟನೆಯಿಂದ‌ ಎಚ್ಚೆತ್ತ ಮೆಟ್ರೋ ನಿಗಮ ಕಲ್ಲು ತೂರುವ ಕಿಡಿಗೇಡಿಗಳ ವಿರುದ್ಧ ದೂರು ದಾಖಲಿಸಿ, ಕಾನೂನು ಕ್ರಮಕ್ಕೆ ಮುಂದಾಗಿದೆ.

ಮೆಟ್ರೋ ರೈಲಿಗೆ ಕಲ್ಲು ತೂರಾಟ ಮಾಡುವ ಕಿಡಿಗೇಡಿಗಳ ವಿರುದ್ಧ ಕಾನೂನು ಕ್ರಮ

ಕಳೆದ‌‌‌ ಕೆಲ ದಿನಗಳಿಂದ ಮೆಟ್ರೋ ರೈಲು ಸಂಚಾರದ ವೇಳೆ ಕೆಲ ಕಿಡಿಗೇಡಿಗಳು ರೈಲಿಗೆ ಕಲ್ಲು ತೂರಾಟ ನಡೆಸುತ್ತಿದ್ದರು.‌ ಮಾಗಡಿ ರಸ್ತೆ ನಿಲ್ದಾಣದಿಂದ ಎಂಜಿ ರಸ್ತೆ ರೀಚ್ ನಲ್ಲಿ ಸುರಂಗ ಮಾರ್ಗವಿದ್ದು, ಮಾಗಡಿ ರಸ್ತೆಯಲ್ಲಿ ಡೌನ್ ರ್ಯಾಂಪ್ ಮೂಲಕ ಮೆಟ್ರೋ ರೈಲು ಸುರಂಗ ಮಾರ್ಗ ಪ್ರವೇಶಿಸುತ್ತದೆ.‌ ಈ ವೇಳೆ ರೈಲು ರಸ್ತೆಯ ಮೇಲ್ಮಟ್ಟಕ್ಕೆ ಸಂಚಾರ ಮಾಡುವಾಗ ಅಕ್ಕಪಕ್ಕದ ಕಟ್ಟಡದ ಮೇಲೆ ನಿಂತು‌ ಕೆಲ ಕಿಡಿಗೇಡಿಗಳು ರೈಲಿಗೆ ಕಲ್ಲು ತೂರಾಟ ಮಾಡುತ್ತಿದ್ದರು.‌ ಕೆಲ ವರ್ಷಗಳ ಹಿಂದೆ ಬೆಂಗಳೂರಲ್ಲಿ ಮೆಟ್ರೋ ಸುರಂಗ ಮಾರ್ಗ ಮೊದಲ ಬಾರಿಗೆ ಆರಂಭವಾದಗಲೂ ಈ ರೀತಿಯ ಘಟನೆ ಆಗಿತ್ತು. ಆದಾದ ಬಳಿಕ ಮತ್ತೆ ಈ ರೀತಿಯ ಸಮಾಜಘಾತುಕ ಹಾಗೂ ಸಾರ್ವಜನಿಕರ ಆಸ್ತಿಗಳನ್ನ ಹಾನಿ ಮಾಡುವಂತಹ ಕೆಲಸ ನಡೆಯುತ್ತಿದ್ದು ಸದ್ಯ BMRCL ಎಚ್ಚೆತ್ತುಕೊಂಡಿದೆ.‌ ಕಲ್ಲು ತೂರಾಟವಾಗುತ್ತಿದ್ದ ಸ್ಥಳಗಳಲ್ಲಿ 10 ಸಿಸಿಟಿವಿ ಕ್ಯಾಮರಾ ಅಳವಡಿಸಿ ಕೃತ್ಯ ನಡೆಸುವವರ ಮೇಲೆ‌‌ ನಿಗಾ ಇಟ್ಟಿದೆ.‌

ಎಲಿವೇಡೆಟ್ ಕನೆಕ್ಟಿಂಗ್ ಜಂಕ್ಷನ್ ಗಳಲ್ಲಿ ಹೈ ಸೆಕ್ಯೂರಿಟಿ !

ಕಲ್ಲು ತೂರಾಟವಾಗುತ್ತಿದ್ದ ಪ್ರದೇಶಗಳಿಗೆ ಮೆಟ್ರೋ ನಿಗಮ‌ ಸಿಸಿಟಿವಿ ಕ್ಯಾಮರಾ ಅಳವಡಿಸಿದ್ದು ದಿನದ 24 ಗಂಟೆಯೂ ಕ್ಯಾಮರಾಗಳು ನಿಗಾ ಇಡಲಿವೆ. ಇನ್ಮುಂದೆ ಯಾರಾದರೂ ಕಲ್ಲು ತೂರಾಟ ಮಾಡಿದರೆ ಸಿಸಿ‌ ಕ್ಯಾಮರಾ ಮೂಲಕ ಮಾಹಿತಿ ಕಲೆಹಾಕಿ ಪೋಲಿಸ್ ಠಾಣೆಗೆ ದೂರು ನೀಡಲು ಮೆಟ್ರೋ ನಿಗಮ‌ ನಿರ್ಧರಿಸಿದೆ.‌ ಮೆಟ್ರೋ ಸುರಕ್ಷತೆ ಸಂಬಂಧ ಅಧಿಕಾರಿಗಳ‌ ಜೊತೆ ಸಭೆ ನಡೆಸಲಾಗಿದ್ದು ಸುರಂಗ ಮಾರ್ಗ ಹಾಗೂ ಎಲಿವೇಡೆಟ್ ಕನೆಕ್ಟಿಂಗ್ ಜಂಕ್ಷನ್ ಗಳಲ್ಲಿ ಸೆಕ್ಯೂರಿಟಿ ಅಲರ್ಟ್ ಮಾಡಲಾಗಿದೆ. ಕ್ಯಾಮರಾ ಅಳವಡಿಸಿದ ನಂತರದಿಂದ‌ ಈ ರೀತಿಯ ಪ್ರಕರಣ ಕಂಡುಬಂದಿಲ್ಲ. ಒಂದು ವೇಳೆ ಕಲ್ಲು ತೂರಿದರೆ ಅಂಥವರ ವಿರುದ್ಧ ಕಠಿಣ ಕ್ರಮ‌ ಕೈಗೊಳ್ಳಲು BMRCL ನಿರ್ಧರಿಸಿದೆ.‌

ಅಂಡರ್ ರ್ಯಾಪ್ ತಡೆಗೋಡೆ ಎತ್ತರಿಸುವಿಕೆಗೆ ಚಿಂತನೆ !

ಈ ಘಟನೆ ಬಳಿಕ ಮೆಟ್ರೋ ನಿಗಮ‌‌ ಗೋಡೆಗಳನ್ನ ಎತ್ತರಿಸುವ ಬಗ್ಗೆ ಚರ್ಚೆ ನಡೆಸಲಾಗಿದೆ. ಆದರೆ ಗೋಡೆ ಎತ್ತರಿಸಿದರೆ ಮೆಟ್ರೋ ನಿಗಮಕ್ಕೆ ಹೆಚ್ಚಿನ‌ ಆರ್ಥಿಕ ಹೊರೆ ಬೀಳಲಿದೆ.‌ ಹೀಗಾಗಿ ಈ ಪ್ರಸ್ತಾವನೆ ಕೈಬಿಟ್ಟಿದ್ದು ಸದ್ಯ ಕ್ಯಾಮರಾ ಕಣ್ಗಾವಲು ಇಡಲಾಗಿದೆ. ಕಲ್ಲು ತೂರಾಟದಿಂದ ಮೆಟ್ರೋ ಬೋಗಿಗೆ ಯಾವುದೇ ಹಾನಿಯಾಗಿಲ್ಲ ಅಂತಾ ಮೆಟ್ರೋ ನಿಗಮ ಸ್ಪಷ್ಟಪಡಿಸಿದೆ.‌ ಒಟ್ಟಾರೆ ಸಾರ್ವಜನಿಕ ಆಸ್ತಿಯನ್ನು ಉಳಿಸಿಕೊಳ್ಳಬೇಕಾದವರೇ ಅದನ್ನ ಹಾಳು ಮಾಡಲು ಮುಂದಾಗಿರೋದು ವಿಪರ್ಯಾಸ. ಹೀಗಾಗಿ ಮೆಟ್ರೋ ನಿಗಮ ಅಂತಹವರ ವಿರುದ್ದ ಕ್ರಮ‌ ಕೈಗೊಳ್ಳುವುದು ಅವಶ್ಯಕವಾಗಿದೆ.‌

Tags: BJPCongress PartyCovid 19ನಮ್ಮ‌ಮೆಟ್ರೋಬಿಜೆಪಿ
Previous Post

ಕ್ಯಾಂಪಸ್‌ಗಳಲ್ಲಿ ಪಿಎಫ್‌ಐ ಪ್ರಭಾವ ಕುಗ್ಗಿಸಲು ಆರ್‌ಎಸ್‌ಎಸ್‌ ಯೋಜನೆ : ವರದಿ

Next Post

ರಷ್ಯಾ-ಉಕ್ರೇನ್ ನಡುವಿನ ಯುದ್ಧದಲ್ಲಿ 7,000 ರಿಂದ 15,000 ರಷ್ಯಾ ಸೈನಿಕರ ಹತ್ಯೆ : ನ್ಯಾಟೊ ಮಾಹಿತಿ

Related Posts

ಗಮನ ಸೆಳೆದ ಗದಗ ಜಿಲ್ಲಾಸ್ಪತ್ರೆ : ಬಿಸಿಲಿನ ಬೇಗೆಯಲ್ಲಿ ರೋಗಿಗಳಿ ಆಶಾಕಿರಣವಾದ ವೈದ್ಯರು, ಏನಿದು ವಿಶೇಷ..?
Top Story

ಗಮನ ಸೆಳೆದ ಗದಗ ಜಿಲ್ಲಾಸ್ಪತ್ರೆ : ಬಿಸಿಲಿನ ಬೇಗೆಯಲ್ಲಿ ರೋಗಿಗಳಿ ಆಶಾಕಿರಣವಾದ ವೈದ್ಯರು, ಏನಿದು ವಿಶೇಷ..?

by ಪ್ರತಿಧ್ವನಿ
April 22, 2026
0

ಗದಗ :  ಬೇಸಿಗೆ ಕಾಲ ಆರಂಭವಾಗಿದ್ದು, ಬಿರು ಬಿಸಿಲಿನ ಬೇಗೆಗೆ ಜನರು ತತ್ತರಿಸಿದ್ದಾರೆ. ಜಿಲ್ಲೆಯಲ್ಲಂತೂ ದಿನದಿಂದ ದಿನಕ್ಕೆ ಸೂರ್ಯ ಕಾವೇರುತ್ತಿದ್ದಾನೆ. ಬಿಸಿಲಿನ ಹೊಡೆತ ತಾಳಲಾರದೆ ಜನರು ಹೈರಾಣಾಗಿದ್ದಾರೆ. https://youtu.be/dMLKOlJu3kY?si=xK3Kdu_8RkdSidp9...

Read moreDetails
ಫಾರಿನ್‌ ಸ್ಟೈಲ್‌ ಲವ್‌ & ಮರ್ಡರ್‌ : ಕಿರಾತಕಿ ಪ್ರೇಮಾಳಿಂದ ಕೊಲೆ ಸ್ಫೋಟಕ ರಹಸ್ಯ ಬಯಲು..

ಫಾರಿನ್‌ ಸ್ಟೈಲ್‌ ಲವ್‌ & ಮರ್ಡರ್‌ : ಕಿರಾತಕಿ ಪ್ರೇಮಾಳಿಂದ ಕೊಲೆ ಸ್ಫೋಟಕ ರಹಸ್ಯ ಬಯಲು..

April 22, 2026
ಸಂವಿಧಾನದ ಅಶಯಗಳು -ಬಾಬು ಜಗಜೀವನ್ ರಾಮ್-

ಸಂವಿಧಾನದ ಅಶಯಗಳು -ಬಾಬು ಜಗಜೀವನ್ ರಾಮ್-

April 21, 2026
“ನನ್ನ ಚುನಾವಣೆಯ ವೇಳೆ ಮನೆ ಸುತ್ತ ಹಳದಿ ನೀರು, ಏನೇನೋ ಹಾಕಿ ಹೋಗ್ತಿದ್ರು, ಸಿಎಂಗೂ ಮಾಟ ಮಂತ್ರ ಮಾಡಿಸಿದ್ದಾರೆ ಅನ್ಸುತ್ತೆ”

“ನನ್ನ ಚುನಾವಣೆಯ ವೇಳೆ ಮನೆ ಸುತ್ತ ಹಳದಿ ನೀರು, ಏನೇನೋ ಹಾಕಿ ಹೋಗ್ತಿದ್ರು, ಸಿಎಂಗೂ ಮಾಟ ಮಂತ್ರ ಮಾಡಿಸಿದ್ದಾರೆ ಅನ್ಸುತ್ತೆ”

April 21, 2026
ರಾಜ್ಯ ಸರ್ಕಾರಕ್ಕೆ ಚಾಟಿ ಬೀಸಿದ ಹೈಕೋರ್ಟ್‌ : SSLC ಹಿಂದಿ ಗ್ರೇಡ್‌ ವಿವಾದಕ್ಕೆ ನ್ಯಾಯಾಲಯ ಹೇಳಿದ್ದೇನು..?

ರಾಜ್ಯ ಸರ್ಕಾರಕ್ಕೆ ಚಾಟಿ ಬೀಸಿದ ಹೈಕೋರ್ಟ್‌ : SSLC ಹಿಂದಿ ಗ್ರೇಡ್‌ ವಿವಾದಕ್ಕೆ ನ್ಯಾಯಾಲಯ ಹೇಳಿದ್ದೇನು..?

April 21, 2026
Next Post
ರಷ್ಯಾ-ಉಕ್ರೇನ್ ನಡುವಿನ ಯುದ್ಧದಲ್ಲಿ 7,000 ರಿಂದ 15,000 ರಷ್ಯಾ ಸೈನಿಕರ ಹತ್ಯೆ : ನ್ಯಾಟೊ ಮಾಹಿತಿ

ರಷ್ಯಾ-ಉಕ್ರೇನ್ ನಡುವಿನ ಯುದ್ಧದಲ್ಲಿ 7,000 ರಿಂದ 15,000 ರಷ್ಯಾ ಸೈನಿಕರ ಹತ್ಯೆ : ನ್ಯಾಟೊ ಮಾಹಿತಿ

Please login to join discussion
https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada