• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Tuesday, April 14, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home ಕರ್ನಾಟಕ

ಕೇಂದ್ರ ಸಚಿವರ ತೋಟದಲ್ಲಿ 7 ದಿನಗಳ ವಾಯಿದೆ​.. ಕೇಲ್​ ಖತಂ..

ಕೃಷ್ಣ ಮಣಿ by ಕೃಷ್ಣ ಮಣಿ
March 20, 2025
in ಕರ್ನಾಟಕ, ರಾಜಕೀಯ
0
Share on WhatsAppShare on FacebookShare on Telegram

ರಾಮನಗರ ಜಿಲ್ಲೆ ಬಿಡದಿಯ ಕೇತಗಾನಹಳ್ಳಿಯಲ್ಲಿ ತೋಟದ ಮನೆ ಮಾಡಿಕೊಂಡು ಕೇಂದ್ರ ಸಚಿವ ಹೆಚ್​.ಡಿ ಕುಮಾರಸ್ವಾಮಿ ವಾಸವಾಗಿದ್ದಾರೆ. ಈ ತೋಟದ ಮನೆ ಇರುವ ತೋಟದ ಜೊತೆಗೆ ಒಂದಿಷ್ಟು ಸರ್ಕಾರಿ ಭೂಮಿಯನ್ನು ಒತ್ತುವರಿ ಮಾಡಿದ್ದಾರೆ ಅನ್ನೋ ಆರೋಪ ಎದುರಾಗಿತ್ತು. ಆ ಬಳಿಕ ಹೈಕೋರ್ಟ್​ ಕೂಡ ಒತ್ತುವರಿ ತೆರವಿಗೆ ಸೂಚನೆ ನೀಡಿತ್ತು. ಹೀಗಾಗಿ ಒತ್ತುವರಿ ತೆರವು ಕಾರ್ಯಾಚರಣೆ ಮಾಡಲಾಗ್ತೊದೆ. ಎರಡು ದಿನಗಳ ಕಾಲ ಒತ್ತುವರಿ ತೆರವು ಮಾಡಲು ಕಂದಾಯ ಇಲಾಖೆ ಸರ್ವೇ ಕಾರ್ಯ ಮಾಡಿದೆ. ಕೇತಗಾನಹಳ್ಳಿಯ ಹಲವು ಸರ್ವೇ ನಂಬರ್​ಗಳಲ್ಲಿ ಮಾರ್ಕಿಂಗ್ ಮಾಡಿದ್ದಾರೆ ಕಂದಾಯ ಅಧಿಕಾರಿಗಳು.

ADVERTISEMENT
Session: ಸಿಎಂ ಸಿದ್ದರಾಮಯ್ಯನ ಹಾಡಿ ಹೊಗಳಿದ ಜನಾರ್ದನ್‌ ರೆಡ್ಡಿ..!  #janardhanreddy #siddaramaiah

ಸಾಂಪ್ರದಾಯಿಕ ಚೈನ್​ ವ್ಯವಸ್ಥೆಯನ್ನು ಕೈ ಬಿಟ್ಟಿರುವ ಕಂದಾಯ ಇಲಾಖೆ, ಹೊಸದಾಗಿ ರೋವರ್ ಯಂತ್ರದ ಮೂಲಕ ಸರ್ವೇ ಮಾಡಿ, ಒತ್ತುವರಿ ಆಗಿರುವ ಜಾದ ಗಡಿಗ ಗುರುತು ಮಾಡಿದ್ದಾರೆ. ಆದರೆ ಹೆಚ್​.ಡಿ ಕುಮಾರಸ್ವಾಮಿ ಅವರ ತೋಟಕ್ಕೆ ಕಂದಾಯ ಅಧಿಕಾರಿಗಳು ಎಂಟ್ರಿ ಆಗಲಿಲ್ಲ ಅನ್ನೋದು ವಿಶೇಷ. ಕೇಂದ್ರ ಸಚಿವ ಹೆಚ್.ಡಿ ಕುಮಾರಸ್ವಾಮಿ ಹಾಗೂ ಸಂಬಂಧಿ ಡಿ.ಸಿ ತಮ್ಮಣ್ಣ ವಿರುದ್ಧ ಭೂ ಒತ್ತುವರಿ ಆರೋಪ ಕೇಳಿ ಬಂದಿದ್ದ ಹಿನ್ನೆಲೆಯಲ್ಲಿ ಹೈಕೋರ್ಟ್ ಆದೇಶದ ಮೇಲೆ ತೆರವು ಕಾರ್ಯಾಚರಣೆ ಮಾಡಲಾಗ್ತಿದೆ. ಆದರೆ ಕಂದಾಯ ಇಲಾಖೆಯ ಎರಡನೇ ದಿನವೂ ತೆರವು ಕಾರ್ಯಾಚರಣೆ ಮಾರ್ಕಿಂಗ್​ ಮಾಡಿದ್ದಾರೆ.

ಬಿಡದಿಯ ಕೇತಗಾನಹಳ್ಳಿಯ ಸರ್ವೇ ನಂ.7, 8, 9, 10, 16, 17 ಹಾಗೂ 79 ರಲ್ಲಿ ಸರ್ಕಾರಿ ಜಾಗದ ಒತ್ತುವರಿ ಮಾರ್ಕಿಂಗ್ ಮಾಡಿದ್ದ ಕಂದಾಯ ಇಲಾಖೆ ಅಧಿಕಾರಿಗಳು ಎರಡನೇ ದಿನವೂ ಕೂಡ ಕುಮಾರಸ್ವಾಮಿ ಅವರ ತೋಟದ ಮನೆ ಹೊರತು ಪಡಿಸಿ ಇನ್ನುಳಿದ ಒತ್ತುವರಿ ಜಾಗಗಳಲ್ಲಿ ಮಾರ್ಕಿಂಗ್ ಕಾರ್ಯ ಮಾಡಿದ್ದಾರೆ. ಒತ್ತುವರಿಯಾದ ಸರ್ಕಾರಿ ಜಾಗದಲ್ಲಿ ಗೋಮಾಳ, ಸ್ಮಶಾನ, ನೀರಿನ ಮೂಲಗಳು ಸೇರಿ ಇತರ ಜಾಗಗಳಲ್ಲಿ ಸರ್ವೇ ನಡೆಸಿದ ಕಂದಾಯ ಇಲಾಖೆ ಅಧಿಕಾರಿಗಳು ರೆಡ್ ಫ್ಲಾಗ್ ಅಳವಡಿಕೆ ಮಾಡಿದ್ದಾರೆ. ಮಾರ್ಕಿಂಗ್ ಕಾರ್ಯ ಮುಗಿದ ಬಳಿಕ ಕುಮಾರಸ್ವಾಮಿ ಸೇರಿ ಇತರ ಒತ್ತುವರಿದಾರರಿಗೆ‌ ನೋಟಿಸ್​ ನೀಡಲು ಜಿಲ್ಲಾಡಳಿತ ಮುಂದಾಗಿದೆ.

ಸರ್ಕಾರಿ ಜಮೀನು ಒತ್ತುವರಿ ಮಾಡಿಕೊಂಡವರಿಗೆ ನೋಟೀಸ್ ನೀಡಿ 7 ದಿನಗಳ ಒಳಗೆ ಉತ್ತರ ನೀಡಲು ಜಿಲ್ಲಾಡಳಿತ ಅವಕಾಶ ಕಲ್ಪಿಸಿದೆ. ಕೇತಗಾನಹಳ್ಳಿ ಬಳಿ ಒಟ್ಟು 14 ಎಕರೆಗೂ ಅಧಿಕ ಸರ್ಕಾರಿ ಭೂಮಿ ಒತ್ತುವರಿ ಆಗಿದೆ ಎಂದು ಅಧಿಕಾರಿಗಳೇ ವರದಿ ನೀಡಿದ್ದಾರೆ. ಸರ್ವೇ ವೇಳೆ ಒತ್ತುವರಿ ಆಗಿರುವ ಅಂಶ ಬೆಳಕಿಗೆ ಬಂದಿದೆ. ಈಗಾಗಲೇ ಒತ್ತುವರಿ ಆಗಿರುವ ಜಾಗವನ್ನ ನಾವು ಮಾರ್ಕಿಂಗ್ ಮಾಡಿದ್ದೇವೆ. ಸದರಿ ಪ್ರಕರಣಕ್ಕೆ ಸಂಬಂಧಪಟ್ಟಂತೆ ನಿಮ್ಮ ಬಳಿ ಏನಾದರೂ ದಾಖಲೆಗಳು ಅಥವಾ ತಕರಾರು ಇದ್ದರೇ ಅಕ್ಷೇಪಣೆ ಸಲ್ಲಿಸುವಂತೆ ಜಿಲ್ಲಾಡಳಿತ ನೋಟಿಸ್ ಜಾರಿ ಮಾಡಲಿದೆ ಎನ್ನಲಾಗಿದೆ. ಒತ್ತುವರಿ ಜಾಗ ಬಿಟ್ಟುಕೊಡಲು ಒತ್ತುವರಿ ಮಾಡಿಕೊಂಡಿರುವವರಿಗೆ ಏಳು ದಿನಗಳ ಅವಕಾಶ ಕೊಡುವ ಜಿಲ್ಲಾಡಳಿತ, 7 ದಿನದ ಒಳಗೆ ಜಾಗ ಬಿಟ್ಟುಕೊಟ್ಟು, ನೋಟಿಸ್​ಗೆ ಉತ್ತರ ನೀಡದಿದ್ದರೆ ಜಿಲ್ಲಾಡಳಿತದಿಂದ ತೆರವು ಮಾಡಿ, ಕಾಂಪೌಂಡ್​ಗಳ ಡೆಮಾಲಿಷ್​ ಮಾಡಿ ಸರ್ಕಾರಿ ಜಮೀನನ್ನ ವಶಕ್ಕೆ ಪಡೆಯಲಿದ್ದಾರೆ.

Tags: BJPCongress Partyನರೇಂದ್ರ ಮೋದಿಬಿ ಎಸ್ ಯಡಿಯೂರಪ್ಪಬಿಜೆಪಿಸಿದ್ದರಾಮಯ್ಯ
Previous Post

ಕೇಂದ್ರ ಸರ್ಕಾರದ ವಕ್ಫ್​ ಕಾನೂನು ವಿರೋಧಿಸಿ ಕರ್ನಾಟಕ ನಿರ್ಣಯ

Next Post

ವಿಧಾನ ಪರಿಷತ್​ನಲ್ಲಿ ಬೆಂಕಿ ಹಚ್ಚಿದ ಸಿ.ಟಿ ರವಿ ಮಾತು.. ಏನದು..?

Related Posts

ಪ್ರಧಾನಿ ಮೋದಿ ಭೇಟಿ ಹಿನ್ನೆಲೆ ಆದಿಚುಂಚನಗಿರಿ ಕಟ್ಟು ನಿಟ್ಟಿನ ಭದ್ರತೆ: ಸಿದ್ಧತೆ-ಭದ್ರತೆ ಹೀಗಿದೆ!
ಕರ್ನಾಟಕ

ಪ್ರಧಾನಿ ಮೋದಿ ಭೇಟಿ ಹಿನ್ನೆಲೆ ಆದಿಚುಂಚನಗಿರಿ ಕಟ್ಟು ನಿಟ್ಟಿನ ಭದ್ರತೆ: ಸಿದ್ಧತೆ-ಭದ್ರತೆ ಹೀಗಿದೆ!

by ಪ್ರತಿಧ್ವನಿ
April 14, 2026
0

ಮಂಡ್ಯ: ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಏಪ್ರಿಲ್ 15ರಂದು ಆದಿಚುಂಚನಗಿರಿ ಕ್ಷೇತ್ರಕ್ಕೆ ಭೇಟಿ ನೀಡಲಿರುವ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಭದ್ರತೆಯನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಲಾಗಿದೆ. ಈ ಹಿನ್ನೆಲೆಯಲ್ಲಿ ಮಂಡ್ಯ ಜಿಲ್ಲಾಡಳಿತ...

Read moreDetails
ಮಂತ್ರಾಲಯ ರಾಯರ ಜಪದ ಕಟ್ಟೆ ಸಮೀಪ ಭೂ ವಿವಾದ ತೀವ್ರ; ಸರ್ವೆ ವೇಳೆ ಗಲಾಟೆ

ಮಂತ್ರಾಲಯ ರಾಯರ ಜಪದ ಕಟ್ಟೆ ಸಮೀಪ ಭೂ ವಿವಾದ ತೀವ್ರ; ಸರ್ವೆ ವೇಳೆ ಗಲಾಟೆ

April 14, 2026
ಟ್ರಂಪ್ ವಿರುದ್ಧ ಪೋಪ್ ಲಿಯೋ ಕಟು ಟೀಕೆ:ಯುದ್ಧೋನ್ಮಾದಕ್ಕೆ ‘ಹುಚ್ಚುತನ’ ಎಚ್ಚರಿಕೆ

ವಿನಯ್ ಕುಲಕರ್ಣಿ ವಿರುದ್ಧ ಅತ್ಯಾಚಾರ ಆರೋಪ: CID ‘ಬಿ ರಿಪೋರ್ಟ್’ ಸಲ್ಲಿಕೆ

April 13, 2026
ರಾಜ್ಯದ 15,032 ಜನರಿಗೆ ಉದ್ಯೋಗಾವಕಾಶದ ತೀರ್ಮಾನ : ಸಿಎಂ ಸಿದ್ದರಾಮಯ್ಯ ಬಿಗ್‌ ಅಪ್ಡೇಟ್..

ರಾಜ್ಯದ 15,032 ಜನರಿಗೆ ಉದ್ಯೋಗಾವಕಾಶದ ತೀರ್ಮಾನ : ಸಿಎಂ ಸಿದ್ದರಾಮಯ್ಯ ಬಿಗ್‌ ಅಪ್ಡೇಟ್..

April 13, 2026
ಇ-ಸ್ವತ್ತು 2.0 ತಂತ್ರಾಂಶದಲ್ಲಿ ಬಳಕೆದಾರರಿಗೆ ಸಚಿವ ಪ್ರಿಯಾಂಕ್‌ ಖರ್ಗೆ ಗುಡ್‌ನ್ಯೂಸ್‌ ಏನದು?

ಇ-ಸ್ವತ್ತು 2.0 ತಂತ್ರಾಂಶದಲ್ಲಿ ಬಳಕೆದಾರರಿಗೆ ಸಚಿವ ಪ್ರಿಯಾಂಕ್‌ ಖರ್ಗೆ ಗುಡ್‌ನ್ಯೂಸ್‌ ಏನದು?

April 13, 2026
Next Post
ವಿಧಾನ ಪರಿಷತ್​ನಲ್ಲಿ ಬೆಂಕಿ ಹಚ್ಚಿದ ಸಿ.ಟಿ ರವಿ ಮಾತು.. ಏನದು..?

ವಿಧಾನ ಪರಿಷತ್​ನಲ್ಲಿ ಬೆಂಕಿ ಹಚ್ಚಿದ ಸಿ.ಟಿ ರವಿ ಮಾತು.. ಏನದು..?

https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada