
ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್ನಲ್ಲಿ ಅವ್ಯವಹಾರ ಆಗಿರೋದು ಮೇಲ್ನೋಟಕ್ಕೆ ಕಂಡು ಬಂದಿದೆ ಅಂತ ಸಚಿವರು ಒಪ್ಕೊಂಡಿದ್ದಾರೆ. ಅವ್ಯವಹಾರ ಆಗಿದ್ರೆ ನಬಾರ್ಡ್ಗೆ ರಿಪೋರ್ಟ್ ಮಾಡ್ಬೇಕು. ಮೂರು ಕೋಟಿ ಮೇಲೆ ಅವ್ಯವಹಾರ ಆಗಿದ್ರೆ ಸಿಬಿಐಗೆ ಕೊಡ್ಬೇಕು. ಸುಮಾರು ವರದಿ ಆಗಿರೋ ಪ್ರಕಾರ ಅವ್ಯವಹಾರ 40 ಕೋಟಿ ದಾಟಿದೆ. ಹೀಗಾಗಿ ಇದನ್ನ ಸಿಬಿಐ ತನಿಖೆ ಗೆ ಕೊಡೋದು ಸೂಕ್ತ ಎಂದಿದ್ದಾರೆ ಮಾಜಿ ಸಚಿವ ಸಿ.ಟಿ ರವಿ.
ಸಹಕಾರ ಸಚಿವ ಕೆ.ಎನ್ ರಾಜಣ್ಣ ಮಾತನಾಡಿ, ಅಡ್ಮಿನಿಸ್ಟ್ರೇಟರ್ ಬಂದ್ಮೇಲೆ ತಪಿತಸ್ಥರ ಮೇಲೆ ಪರಿಣಾಮಕಾರಿ ಕ್ರಮ ತೆಗೆದುಕೊಂಡಿದ್ದೇನೆ. ಆಡಳಿತ ಮಂಡಳಿ ಕೆಲವು ದೂರುಗಳ ಬಗ್ಗೆ ಕಠಿಣ ಕ್ರಮ ತೆಗೆದುಕೊಳ್ಳುತ್ತಿಲ್ಲ. ಏಳೆಂಟು ಅಧಿಕಾರಿಗಳು ಬ್ಯಾಂಕ್ ಹಣವನ್ನೆ ತಿಂದಿದ್ದಾರೆ. ಲೋಪ ಆಗಿರೋದನ್ನ ಮನಗಂಡು ಎಲ್ಲೆಲ್ಲಿ ಕ್ರಮ ತೆಗದುಕೊಳ್ಳಬೇಕೆಂದು ಹೇಳಿದ್ದೇನೆ ಎಂದು ಸದನಕ್ಕೆ ತಿಳಿಸಿದ್ದಾರೆ.

ಬಿಜೆಪಿ ಸದಸ್ಯ ಸಿ ಟಿ ರವಿ ಬಜೆಟ್ ಮೇಲಿನ ಚರ್ಚೆ ಮುಂದುವರಿಸಿ, ಚರ್ಚೆ ಮುಗಿಸೋ ವೇಳೆ ಸರ್ಕಾರಕ್ಕೆ ಕುಟುಕಿದ್ದಾರೆ ಸಿ ಟಿ ರವಿ. ಸಿ.ಟಿ ರವಿ ಮಾತಿನಿಂದ ಸದನದಲ್ಲಿ ಗದ್ದಲದ ವಾತಾವರಣ ನಿರ್ಮಾಣ ಆಗಿದೆ. ಸಿ ಟಿ ರವಿ ಈ ಮಟ್ಟಿಗೆ ಮಾತನಾಡುತ್ತಾರೆ ಅನ್ನೋದು ಗೊತ್ತಿರಲಿಲ್ಲ. ನಾನು ಅಲ್ಲಿದ್ದಾಗ ನೋಡಿದ್ವಿ ಆದ್ರೆ ಈ ಮಟ್ಟಿಗೆ ಅಂತ ಗೊತ್ತಿಲ್ಲ. ನಮ್ಮ ಸರ್ಕಾರ ಬರೀ ಅಲ್ಪ ಸಂಖ್ಯಾತರಿಗೆ ಯೋಜನೆ ಕೊಟ್ಟಿಲ್ಲ. ಮುಸ್ಲಿಮರನ್ನ ಬೈದರೆ ನಿಮಗೆ ಬೇರೆ ಸಮುದಾಯದ ಸಹಕಾರ ಸಿಗತ್ತೆ ಅನ್ನೋದು ನಿಮ್ಮ ಲೆಕ್ಕಾಚಾರ ಎಂದಿದ್ದಾರೆ ಸಚಿವ ಚಲುವರಾಯಸ್ವಾಮಿ.
ನಿಮ್ಮ ಆಡಳಿತ ಅವಧಿಯಲ್ಲಿ ನೀವು ಏನು ಮಾಡದೆ ಇರೋದ್ರಿಂದ ಅದನ್ನ ಹೇಳಿಕೊಳ್ಳಲಾರದೆ ನೀವು ಹೀಗೆ ಆಡ್ತಿದ್ದೀರಾ..? ನೀವು ಹೀಗೆಲ್ಲ ಮಾತಾಡಬಾರದು ಎಂದಿದ್ದಾರೆ ಸಚಿವ ಚಲುವರಾಯಸ್ವಾಮಿ. ತಮ್ಮ ಬಜೆಟ್ ಮೇಲಿನ ಭಾಷಣವನ್ನ ಹಲಾಲ್ ಬಜೆಟ್ ಎಂದು ಖಂಡಿಸಿದ್ದ ಸಿ ಟಿ ರವಿ ಮಾತಿಗೆ ಸಚಿವರು ಕೆರಳಿ ಕೆಂಡವಾಗಿದ್ದಾರೆ. ಮುಸ್ಲೀಂ ತುಷ್ಟಿಕರಣವೇ ಈ ಬಜೆಟ್ ಉದ್ದೇಶ ಎಂದಿದ್ದ ಸಿ ಟಿ ರವಿ ಮಾತಿಗೆ ವಿರೋಧ ವ್ಯಕ್ತಪಡಿಸಿದ್ದ ಆಡಳಿತ ಪಕ್ಷದ ಸದಸ್ಯರು, ಹತ್ತು ನಿಮಿಷಕ್ಕೂ ಹೆಚ್ಚು ಕಾಲ ಈ ವಿಚಾರದ ಮೇಲೆ ಪರ ವಿರೋಧವಾಗಿ ವಾಗ್ವಾದ ನಡೆಸಿದ್ದಾರೆ ಉಭಯ ಪಕ್ಷಗಳ ಸದಸ್ಯರು.
ಹಲಾಲ್ ಬಜೆಟ್ ಎಂದಿದ್ದು ಸದನದಲ್ಲಿ ಹಲ್ಚಲ್ ಎಬ್ಬಿಸಿದ್ದು, ಸದಸನದಲ್ಲಿ ಗದ್ದಲದ ವಾತಾವರಣ ಏರ್ಪಟ್ಟಿತ್ತು. ಬಳಿಕ ಸಭಾಪತಿಗಳ ಮಧ್ಯಪ್ರವೇಶ ವಾತಾವರಣ ತಿಳಿಗೊಳಿಸಿ ಬೇರೆ ಸದಸ್ಯರಿಗೆ ಮಾತನಾಡಲು ಅವಕಾಶ ಕೊಟ್ಟರು. ಸಭಾಪತಿ ಪೀಠದಲ್ಲಿದ್ದು ಕಲಾಪ ನಿರ್ವಹಿಸುತ್ತಿರುವ ಮಂಜುನಾಥ್ ಭಂಡಾರಿ ಎದುರಲ್ಲೇ ಆಕ್ರೋಶ ವ್ಯಕ್ತವಾಗಿದೆ. ಸಿ.ಟಿ ರವಿ ಮಾತಿನ ಬಾಣದಲ್ಲೇ ಎದುರಾಳೀಗಳನ್ನು ಕೆಣಕಿದ್ದಾರೆ.
