• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Thursday, April 16, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home ಇದೀಗ

ಮಧ್ಯಪ್ರದೇಶ | ಶಿಕ್ಷಕಿ ಮೃತಪಟ್ಟು 10 ವರ್ಷಗಳ ನಂತರ 7 ಕೋಟಿ ರೂ. ತೆರಿಗೆ ನೋಟಿಸ್

ಪ್ರತಿಧ್ವನಿ by ಪ್ರತಿಧ್ವನಿ
August 2, 2023
in ಇದೀಗ, ದೇಶ
0
ಮಧ್ಯಪ್ರದೇಶ
Share on WhatsAppShare on FacebookShare on Telegram

ಮಧ್ಯಪ್ರದೇಶ ರಾಜ್ಯದಲ್ಲಿ ವಿಲಕ್ಷಣ ಘಟನೆಯೊಂದು ನಡೆದಿದೆ. ಶಿಕ್ಷಕಿಯೊಬ್ಬರು ಮೃತಪಟ್ಟು 10 ವರ್ಷಗಳ ನಂತರ ಅವರ ಹೆಸರಿಗೆ ಆದಾಯ ತೆರಿಗೆ ಇಲಾಖೆ 7.55 ಕೋಟಿ ರೂ. ಮೌಲ್ಯದ ತೆರಿಗೆ ನೋಟಿಸ್‌ ನೀಡಿದೆ.

ADVERTISEMENT

ಉಷಾ ಸೋನಿ ಹೆಸರಿನ ಸರ್ಕಾರಿ ಶಾಲೆಯ ಶಿಕ್ಷಕಿ 2013ರಲ್ಲಿ ನಿಧನರಾಗಿದ್ದರು. ಅವರಿಗೆ ನೀಡಿರುವ ನೋಟಿಸ್‌ 2017-18ನೇ ಸಾಲಿಗೆ ಸೇರಿದ್ದಾಗಿದ್ದು ಇತ್ತೀಚೆಗೆ ಬೆಳಕಿಗೆ ಬಂದಿದೆ ಎಂದು ಬುಧವಾರ (ಆಗಸ್ಟ್‌ 2) ಮಾಧ್ಯಮಗಳು ವರದಿ ಮಾಡಿವೆ.

ಮಧ್ಯಪ್ರದೇಶ ಮೃತ ಶಿಕ್ಷಕಿ ಹೆಸರಿನ ಪಾನ್‌ ಕಾರ್ಡ್‌ ವಿವರಗಳನ್ನು ಬಳಸಿಕೊಂಡು 4.54 ಕೋಟಿ ರೂ. ಗೂ ಹೆಚ್ಚು ಮೌಲ್ಯದ ವಸ್ತುಗಳನ್ನು ಖರೀದಿ ಮಾಡಲಾಗಿದೆ. ಅದಕ್ಕಾಗಿ ಮಧ್ಯಪ್ರದೇಶದ ಬೆತುಲ್‌ ಜಿಲ್ಲೆಯ ಆದಾಯ ತೆರಿಗೆ ಇಲಾಖೆ ಬಹಕೋಟಿ ಮೊತ್ತದ ತೆರಿಗೆ ವಿಧಿಸಿದೆ ಎನ್ನಲಾಗಿದೆ.

ಶಿಕ್ಷಕಿ ಕುಟುಂಬದವರು ಮಾತ್ರವಲ್ಲ, ಆದಿವಾಸಿಗಳ ಪ್ರಾಬಲ್ಯ ಹೆಚ್ಚಾಗಿರುವ ಮಧ್ಯಪ್ರದೇಶ ಬೇತುಲ್ ಜಿಲ್ಲೆಯ 44 ಮಂದಿಗೆ 1 ರಿಂದ 10 ಕೋಟಿ ರೂ.ಗಳವರೆಗೆ ತೆರಿಗೆ ನೋಟೀಸ್ ನೀಡಲಾಗಿದೆ ಎಂದು ಆದಾಯ ತೆರಿಗೆ ಇಲಾಖೆ ಮೂಲಗಳು ತಿಳಿಸಿವೆ ಎಂದು ವರದಿಯಾಗಿದೆ.

ಉಷಾ ಸೋನಿ ಶಿಕ್ಷಕಿ ಪಟಖೇಡ ಗ್ರಾಮದ ಸರ್ಕಾರಿ ಶಾಲೆಯೊಂದರಲ್ಲಿ ಶಿಕ್ಷಕಿಯಾಗಿದ್ದರು. ಕಳೆದ ಜುಲೈ 26 ರಂದು ಆಕೆಯ ಕುಟುಂಬಕ್ಕೆ ಆದಾಯ ತೆರಿಗೆ ಇಲಾಖೆಯಿಂದ ನೋಟಿಸ್ ಬಂದಿದ್ದು, 7.55 ಕೋಟಿ ರೂ. ತೆರಿಗೆ ಪಾವತಿಗೆ ಆದೇಶ ನೀಡಿತ್ತು. ನಂತರ ಅವರ ಮಗ ಪವನ್ ಸೋನಿ, “ನನ್ನ ತಾಯಿ 2013ರ ನವೆಂಬರ್ 16ರಂದೇ ದೀರ್ಘಕಾಲಿಕ ಅನಾರೋಗ್ಯದಿಂದ ನಿಧನರಾದರು. ಅಲ್ಲದೇ ಈ ನೋಟಿಸ್ 2017-18ನೇ ಸಾಲಿಗೆ ಸಂಬಂಧಿಸಿದ್ದಾಗಿದೆ. ದಾಖಲೆಯಲ್ಲಿ ನ್ಯಾಚುರಲ್ ಕಾಸ್ಟಿಂಗ್ ಕಂಪನಿ ಎಂದು ಉಲ್ಲೇಖಿಸಲಾಗಿದೆ. ಅದು ಇನ್ನೂ ಖರೀದಿ ಹಂತದಲ್ಲಿದೆ” ಎಂದು ತಿಳಿಸಿದ್ದಾರೆ.

“ಮಧ್ಯಪ್ರದೇಶ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ದೂರು ದಾಖಲಿಸಿದ್ದೇವೆ. ನನ್ನ ತಾಯಿಯ ಪ್ಯಾನ್ಕಾರ್ಡ್ ದುರುಪಯೋಗಪಡಿಸಿಕೊಳ್ಳಲಾಗಿದೆ. ಈ ನೋಟಿಸ್ ಬಗ್ಗೆ ನಮಗೇನು ತಿಳಿದಿಲ್ಲ” ಎಂದು ಹೇಳಿದ್ದಾರೆ.

ನಿತಿನ್‌ ಜೈನ್‌ ಅವರು ಕಬ್ಬಿಣದ ಅಂಗಡಿಯಲ್ಲಿ ಮಾಸಿಕ 5-7 ಸಾವಿರ ರೂ. ಸಂಪಾದಿಸುತ್ತಿದ್ದಾರೆ ಎಂದು ಹೇಳಲಾಗಿದೆ.

ಈ ಸುದ್ದಿ ಓದಿದ್ದೀರಾ? ಮಣಿಪುರ ವಿಚಾರವಾಗಿ ರಾಷ್ಟ್ರಪತಿ ಭೇಟಿಗೆ ಸಮಯ ಕೋರಿದ ಮಲ್ಲಿಕಾರ್ಜುನ ಖರ್ಗೆ

ಮಧ್ಯಪ್ರದೇಶ ನಿತಿನ್‌ ಜೈನ್‌ ಅವರು ಆದಾಯ ತೆರಿಗೆ ಖಾತೆ ತೆರೆಯಲು ಹೋದಾಗ, ತಮಿಳುನಾಡಿನ ಕುರ್ಟಾಲಂನಲ್ಲಿ ಅವರ ಹೆಸರಲ್ಲಿ ಖಾತೆ ಇರುವುದು ಕಂಡು ಬಂದಿದೆ. 2014-15ರಲ್ಲಿ ಅವರ ಹೆಸರಿನಲ್ಲಿ ಖಾತೆ ತೆರೆಯಲಾಗಿದ್ದು, ಇದೇ ಖಾತೆಯಲ್ಲಿ ದೊಡ್ಡ ಪ್ರಮಾಣದ ವಹಿವಾಟು ನಡೆದಿದೆ. ಈ ಕಾರಣಕ್ಕಾಗಿ ನೋಟಿಸ್ ಬಂದಿದೆ ಎಂದು ನಿತಿನ್‌ ದೂರಿನಲ್ಲಿ ಹೇಳಿದ್ದಾರೆ.

ಪ್ಯಾನ್ ವಿವರಗಳನ್ನು ದುರುಪಯೋಗಪಡಿಸಿಕೊಳ್ಳಲಾಗಿದೆ ಎಂದು ಆರೋಪಿಸಿ ಎರಡು ದೂರುಗಳನ್ನು ಸ್ವೀಕರಿಸಲಾಗಿದೆ. “ನಾವು ವಿವರವಾದ ತನಿಖೆಯನ್ನು ಪ್ರಾರಂಭಿಸಿದ್ದೇವೆ. ಆ ಎರಡು ವಿಷಯಗಳ ಬಗ್ಗೆ ಐಟಿ ಇಲಾಖೆಯಿಂದ ಹೆಚ್ಚಿನ ವಿವರಗಳನ್ನು ಪಡೆಯಲು ಪ್ರಯತ್ನಿಸುತ್ತಿದ್ದೇವೆ” ಎಂದು ಬೆತುಲ್ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿದ್ಧಾರ್ಥ್ ಚೌಧರಿ ಹೇಳಿದ್ದಾರೆ.

Tags: Income Tax DepartmentMadhya PradeshWoman teacherಆದಾಯ ತೆರಿಗೆ ಇಲಾಖೆಮಧ್ಯಪ್ರದೇಶ
Previous Post

ನಾಟಕ ವಿಮರ್ಶೆ | ಜೀವನದ ಸಂಕೀರ್ಣತೆಗಳಿಗೆ ರಾಗ-ರಂಗಸ್ಪರ್ಶ

Next Post

ಬಾಲಿವುಡ್‌ ಪ್ರಸಿದ್ಧ ಕಲಾ ನಿರ್ದೇಶಕ ನಿತಿನ್‌ ದೇಸಾಯಿ ಮೃತದೇಹ ಪತ್ತೆ ; ಆತ್ಮಹತ್ಯೆ ಶಂಕೆ

Related Posts

ಸಂಪೂರ್ಣವಾಗಿ ಸಮಾನತೆಯನ್ನು ಸಾಧಿಸಲಾಗಿಲ್ಲ ಎನ್ನುವುದು ನನ್ನ ನೋವಾಗಿದೆ : ಸಿಎಂ ಸಿದ್ದರಾಮಯ್ಯ ಬೇಸರ..!
Top Story

ಸಂಪೂರ್ಣವಾಗಿ ಸಮಾನತೆಯನ್ನು ಸಾಧಿಸಲಾಗಿಲ್ಲ ಎನ್ನುವುದು ನನ್ನ ನೋವಾಗಿದೆ : ಸಿಎಂ ಸಿದ್ದರಾಮಯ್ಯ ಬೇಸರ..!

by ಪ್ರತಿಧ್ವನಿ
April 14, 2026
0

ಬೆಂಗಳೂರು : ಬಾಬಾ ಸಾಹೇಬ್ ಅಂಬೇಡ್ಕರ್ ಅವರು ರಚಿಸಿದ ಸಂವಿಧಾನದಿಂದಲೇ ನಾನು ಈ ರಾಜ್ಯದ ಮುಖ್ಯಮಂತ್ರಿ ಆಗಿದ್ದೇನೆ ಎಂದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ. https://youtu.be/jc4uNwRML78?si=OFDsWjRgGzT4buqt ಇಂದು...

Read moreDetails
ಬಿಹಾರದಲ್ಲಿ ನಿತೀಶ್‌ ಯುಗಾಂತ್ಯ : ಸಿಎಂ ಸ್ಥಾನಕ್ಕೆ ಹಿರಿಯ ನಾಯಕನ ರಾಜೀನಾಮೆ..

ಬಿಹಾರದಲ್ಲಿ ನಿತೀಶ್‌ ಯುಗಾಂತ್ಯ : ಸಿಎಂ ಸ್ಥಾನಕ್ಕೆ ಹಿರಿಯ ನಾಯಕನ ರಾಜೀನಾಮೆ..

April 14, 2026
ದೀದಿ ರಾಜ್ಯದಲ್ಲಿ ಮೋದಿ “SIR” : ಎಷ್ಟು ಲಕ್ಷ ಮತದಾರರ ಭವಿಷ್ಯ ಅತಂತ್ರ ಗೊತ್ತಾ..?

ದೀದಿ ರಾಜ್ಯದಲ್ಲಿ ಮೋದಿ “SIR” : ಎಷ್ಟು ಲಕ್ಷ ಮತದಾರರ ಭವಿಷ್ಯ ಅತಂತ್ರ ಗೊತ್ತಾ..?

April 14, 2026
ಹರಿಹರ ಪೀಠದಿಂದ ವಚನಾನಂದ ಸ್ವಾಮೀಜಿ ಉಚ್ಚಾಟನೆ : ಯತ್ನಾಳ್‌ ಹೀಗ್ಯಾಕಂದ್ರು..?

ಹರಿಹರ ಪೀಠದಿಂದ ವಚನಾನಂದ ಸ್ವಾಮೀಜಿ ಉಚ್ಚಾಟನೆ : ಯತ್ನಾಳ್‌ ಹೀಗ್ಯಾಕಂದ್ರು..?

April 14, 2026
ಕೈ ಅಲ್ಪಸಂಖ್ಯಾತ ನಾಯಕರ ಬುಡ ಅಲ್ಲಾಡಿಸುತ್ತಿರುವ ದಾವಣಗೆರೆ ದಂಗಲ್‌ : ಜಬ್ಬಾರ್‌, ನಜೀರ್‌ ಆಯ್ತು ಮುಂದೆ ಜಮೀರ್..?

ಕೈ ಅಲ್ಪಸಂಖ್ಯಾತ ನಾಯಕರ ಬುಡ ಅಲ್ಲಾಡಿಸುತ್ತಿರುವ ದಾವಣಗೆರೆ ದಂಗಲ್‌ : ಜಬ್ಬಾರ್‌, ನಜೀರ್‌ ಆಯ್ತು ಮುಂದೆ ಜಮೀರ್..?

April 14, 2026
Next Post
ನಿತಿನ್‌ ದೇಸಾಯಿ

ಬಾಲಿವುಡ್‌ ಪ್ರಸಿದ್ಧ ಕಲಾ ನಿರ್ದೇಶಕ ನಿತಿನ್‌ ದೇಸಾಯಿ ಮೃತದೇಹ ಪತ್ತೆ ; ಆತ್ಮಹತ್ಯೆ ಶಂಕೆ

Please login to join discussion
https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada