ಅಫ್ಗಾನಿಸ್ತಾನ ದೇಶದ ಹಿಂದೂಕುಶ್ ಪ್ರದೇಶದಲ್ಲಿ ಶನಿವಾರ (ಆಗಸ್ಟ್ 5) ರಾತ್ರಿ 9.30 ರ ಸುಮಾರಿಗೆ 5.8 ರಷ್ಟು ತೀವ್ರತೆಯ ಭೂಕಂಪ ಸಂಭವಿಸಿದೆ. ಇದರಿಂದ ದೆಹಲಿ-ಎನ್‌ಸಿಆರ್ ಮತ್ತು ಹತ್ತಿರದ ಪ್ರದೇಶಗಳು, ಜಮ್ಮು ಮತ್ತು ಕಾಶ್ಮೀರ ಮತ್ತು ಪಾಕಿಸ್ತಾನದ ಗಡಿಗಳಲ್ಲಿ ಭೂಮಿ ನಡುಗಿದ ಅನುಭವವಾಗಿದೆ.
ಹಿಂದೂಕುಶ್ ಪ್ರದೇಶದಲ್ಲಿ ಎರಡು ಬಾರಿ ಭೂಮಿ ಕಂಪಿಸಿದ ಅನುಭವವಾಗಿದೆ. ಇದು ಜಮ್ಮು ಮತ್ತು ಕಾಶ್ಮೀರದ ಗುಲ್ಮಾರ್ಗ್ ಜಿಲ್ಲೆಯಿಂದ ವಾಯುವ್ಯಕ್ಕೆ 418 ಕಿ.ಮೀ ದೂರದಲ್ಲಿದೆ.
ಅಫ್ಗಾನಿಸ್ತಾನದ ಪರ್ವತ ಪ್ರದೇಶ ಹಿಂದೂಕುಶ್‌ನಲ್ಲಿ ಶನಿವಾರ 9.31 ರಾತ್ರಿ ಉಂಟಾಗಿದೆ. ಇದು 181 ಆಳದಲ್ಲಿ ಕೇಂದ್ರಿತವಾಗಿತ್ತು ಎಂದು ಭೂಕಂಪದ ರಾಷ್ಟ್ರೀಯ ಕೇಂದ್ರ (ಎನ್‌ಸಿಎಸ್) ತಿಳಿಸಿದೆ.
ಈ ಸುದ್ದಿ ಓದಿದ್ದೀರಾ? ದೆಹಲಿ | ರಾಹುಲ್ ಗಾಂಧಿ ಮತ್ತು ಲಾಲು ಪ್ರಸಾದ್ ಭೇಟಿ ; ಹಲವು ಮಹತ್ವದ ವಿಷಯಗಳ ಚರ್ಚೆ
ಭೂಕಂಪದ ಕೇಂದ್ರಬಿಂದು ಅಫ್ಗಾನಿಸ್ತಾನ ಹಿಂದೂಕುಶ್ ಪ್ರದೇಶದಲ್ಲಿ ಉತ್ತರಕ್ಕೆ ಅಕ್ಷಾಂಶ 36.38 ಡಿಗ್ರಿ ಮತ್ತು ಪ್ರದೇಶದಲ್ಲಿ ರೇಖಾಂಶದಲ್ಲಿ 70.77 ಡಿಗ್ರಿ ಪೂರ್ವದಲ್ಲಿದೆ ಎಂದು ಎನ್‌ಸಿಎಸ್ ಟ್ವೀಟ್ ಮೂಲಕ ಮಾಹಿತಿ ನೀಡಿದೆ.
ಅಫ್ಗಾನಿಸ್ತಾನ ದೇಶದಲ್ಲಿ ಉಂಟಾದ ಕಂಪನದಿಂದ ದೆಹಲಿ ಹಾಗೂ ಜಮ್ಮು ಮತ್ತು ಕಾಶ್ಮೀರ ಪ್ರದೇಶಗಳಲ್ಲಿಯೂ ಭೂಮಿ ನಡುಗಿದೆ. ಆದರೆ ಯಾವುದೇ ಹಾನಿಯ ಬಗ್ಗೆ ವರದಿಯಾಗಿಲ್ಲ.