
ನಾಡ ಹಬ್ಬ ದಸರ 10 ದಿನಗಳ ಕಾಲ ನಡೆಯುವ ಪಾರಂಪರಿಕ, ಸಾಂಸ್ಕೃತಿ ಹಬ್ಬವು ವಿಜಯದಶಮಿದಿನದಂದು ನಡೆಯುವ ವಿಖ್ಯಾತ ಜಂಬೂ ಸವಾರಿ ಮೈಸೂರಿನ ಅರಮನೆಯಲ್ಲಿ ವಿಧ್ಯುಕ್ತವಾಗಿ ಚಾಲನೆಗೊಂಡಿತು.

416 ನೇ ಐತಿಹಾಸಿಕ ಜಂಬೂ ಸವಾರಿಗೆ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತರಿ ಹಾಗೂ ಕೆಪಸಿಸಿ ಅಧ್ಯಕ್ಷರಾದ ಡಿ.ಕೆ. ಶಿವಕುಮಾರ್ ರವರು ಸೇರಿದಂತೆ, ಸಚಿವರಾದ ಬೈರತಿ ಸುರೇಶ್, ಡಾ. ಹೆಚ್. ಸಿ. ಮಹಾದೇವಪ್ಪ, ಶಿವರಾಜ್ ತಂಗಡಗಿ, ಡಾ. ಸುಧಾಕರ್ ರವರು ಸೇರದಿಂತೆ ಶಾಸಕ ತನ್ವೀರ್ ಸೇಠ್ ಆಗಮಿಸಿದರು. ಈ ಬಾರೀ ಬಕರ್ ಪ್ರಶಸ್ತಿ ಪಡೆದ ಅಂತರರಾಷ್ಟ್ರೀಯ ಖ್ಯಾತಿಯ ಲೇಖಕಿಯಾದ ಭಾನು ಮುಷ್ತಾಕ್ ರವರು ಸಹ ಜಬೂ ಸವಾರಿಗೆ ಚಲಾನೆ ನೀಡಲು ಬಂದದ್ದು ವಿಶೇಷ. ಮುಖ್ಯಮಂತ್ರಿ ಸಿದ್ದರಾಮಯ್ಯ ರವರು 01.01 ರಿಂದ 1.18 ಗಂಟೆಗೆ ಸರಿಯಾಗಿ ಶುಭ ಧನುರ್ ಲಗ್ನದಲ್ಲಿ ನಂದಿ ನಂದಿಧ್ವಜಕ್ಕೆ ಪೂಜೆ ಸಲ್ಲಿಸಿದರು. ಇನ್ನೂ ಸರಿಯಾಗಿ 04.42 ರಿಂದ 5.16 ಗಂಟೆವರೆಗೆ ಕುಂಭ ಲಗ್ನದಲ್ಲಿ ಜಂಬೂ ಸವಾರಿ ಚಾಲನೆಗೊಂಡಿತು.
ಈ ಬಾರಿ ಜಂಬೂ ಸಾವರಿ ತಡವಾಗಿ ನಡೆಯುತ್ತಿದೆ ಕಾರಣ ಗುರವಾರ ಸಹಜವಾಗಿ 1.35 ರಿಂದ 3.05ರವರೆಗೂ ರಾಹು ಕಾಲವಿದ್ದು. ಈ ಹಿನ್ನಲೆಯಲ್ಲಿ ನಾಡ ದೇವತೆಯೆ ಜಂಬೂ ಸಾವರಿ ಸ್ವಲ್ಪ ತಡವಾಗಿಅಂದ್ರೆ 04.42 ರಂದು ಚಾಲನೆಗೊಂಡಿತು.

ನಾಡ ದೇವತೆ ತಾಯಿ ಚಾಮುಂಡೇಶ್ವರಿ ದೇವಿಯಯ ಅಂಬಾರಿಯನ್ನು 6 ನೇ ಬಾರಿಗೆ ಅಭಿಮನ್ಯು ಹೊರಲು ಸಂಪೂರ್ಣ ಸಿದ್ದಗೊಂಡು, ಅಲಂಕಾರಗಳಿಂದ ಅರಮನೆಗೆ ಗಾಂಭೀರ್ಯದಿಂದ ಬಂದು ಭಕ್ತಯಿಂದ ನಾಡ ದೇವತೆ ಹೊತ್ತಿದ್ದನು.

ಅಭಿಮನ್ಯು ಜೊತೆಗೆ ಸಾಥ್ ನೀಡಲು ಅಭಿಮನ್ಯ ಸಮಾನವಾಗಿ ಗಜಪಡೆ ಸಿದ್ದಗೊಂಡಿದೆ. ಜಂಬೂ ಸವಾರಿಯಲ್ಲಿ ರೂಪ, ಕಾವೇರಿ , ನಿಶಾನೆ, ಧನಂಜಯ, ನೋಪತ್ ಅನೆಗಳೋಂದಿಗೆ ಅಭಿಮನ್ಯು ಅಂಬಾರಿ ಹೊತ್ತು ಅರಮನೆಯಿಂದ ಬನ್ನಿಪಂಟಪದವೆಗೂ ಹೊತ್ತು ಸಾಗಲಿದ್ದಾನೆ.
ಇದೇ ಸಂದರ್ಭದಲ್ಲಿ 58 ಸ್ತಬ್ಧ ಚಿತ್ರಗಳು ಮರೆಣವಗಿಯಲ್ಲಿ ಸಾಗುತ್ತಿದ್ದು, ಇದರಲ್ಲಿ 31 ಜಿಲ್ಲೆಗಳ
ಸ್ತಬ್ಧ ಚಿತ್ರಗಳು ಸಾಗುತ್ತಿದ್ದು ಅದರ ಜೊತೆಗೆ 27 ಇಲಾಖೆಗಳ ಸ್ತಬ್ಧ ಚಿತ್ರಗಳು ಅರಮನೆಯಿಂದ ಹೊರಟ್ಟಿದ್ದು ಸಂಜೆ 7 ಗಂಟಿಗೆ ಬಿನ್ನಮಂಟ ತಲುಪಲಿದೆ.







