ಉತ್ತರ ಪ್ರದೇಶದ ಗೊಂಡಾ ಗ್ರಾಮವೊಂದರಿಂದ ಸ್ಥಳೀಯ ನಿವಾಸಿಗಳು ಮುಸ್ಲಿಂ ಸಮುದಾಯದ ಫಕೀರರಿಗೆ ಜೈ ಶ್ರೀರಾಮ್ ಎಂದು ಹೇಳಲು ಒತ್ತಾಯಿಸಿ ನಿಂದಿಸಿ ಮತ್ತು ಥಳಿಸುವ ವಿಡಿಯೋವೊಂದು ಸಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ ಎಂದು ಇಂಡಿಯಾ ಟುಡೆ ವರದಿ ಮಾಡಿದೆ.
ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ವೈರಲ್ ಆಗುತ್ತಿದೆ. ವಿಡಿಯೋದಲ್ಲಿ ಮೂವರು ಮುಸ್ಲಿಂ ಫಕೀರರನ್ನು ಸ್ಥಳೀಯ ನಿವಾಸಿಗಳು ಆಧಾರ್ ಕಾರ್ಡ್ ಕೇಳಿದ್ದು, ಪಂಡಿತರ ಗ್ರಾಮಕ್ಕೆ ಏಕೆ ಬಂದಿರಿ, ಇಂದೇ ಕೊನೆ ಮತ್ತೆ ಇಲ್ಲಿಗೆ ಬರುವುದಿಲ್ಲ ಎಂದು ಹೇಳಿ…” ಜೊತೆಗೆ ಜೈ ಶ್ರೀರಾಮ್ ಎಂಬ ಘೋಷಣೆಗಳನ್ನು ಕೂಗಲು ಗ್ರಾಮಸ್ಥರು ಮೂವರು ಫಕೀರರನ್ನು ಒತ್ತಾಯಿಸಿದ್ದಾರೆ.
ಧರ್ಮಕ್ಕೆ ಸಂಬಂಧಿ ಆ ಮುಸ್ಲಿಂ ಫಕೀರರನ್ನು ಹಳ್ಳಿಯ ಜನರು ನಿಂದಿಸುತ್ತಿದ್ದಾರೆ ಮತ್ತು ಅವರನ್ನು ‘ಜಿಹಾದಿಗಳು, ಭಯೋತ್ಪಾದಕರು…’ ಎಂದು ಕರೆದರೆ. ಇನ್ನೊಬ್ಬರು, “ಅವರು ಸಾಧುಗಳ ಬಟ್ಟೆಗಳನ್ನು ಧರಿಸುತ್ತಾರೆ, ಭಿಕ್ಷೆ ಬೇಡುತ್ತಾರೆ, ಆದರೆ ಅವರು ಈ ಹಣದಿಂದ ಬಿರಿಯಾನಿ ತಿನ್ನುತ್ತಾರೆ….” ಎಂದು ಹೇಳುವುದು ಕೇಳಿಬರುತ್ತದೆ. ನಂತರ ಯುವಕನೊಬ್ಬ ಅವರನ್ನು ಸುತ್ತುವರೆದು ಅವರ ಗುರುತು ಕಾರ್ಡ್‌ನ್ನು ಕೇಳುತ್ತಿದ್ದಾನೆ. ಏಕೆ ಆಧಾರ್ ಕಾರ್ಡ್ ತೆಗೆದುಕೊಂಡಿಲ್ಲ ಒತ್ತಾಯದಿಂದ ಕೇಳಿ “ನೀವೆಲ್ಲರೂ ಭಯೋತ್ಪಾದಕರು ಎಂದೇಳಿ ಕಿವಿ ಹಿಡಿದುಕೊಂಡು ಸಿಟ್ ಅಪ್ ಮಾಡಿ ಎಂದು ಒತ್ತಾಯಿಸಿ ಕಿರುಕುಳ ನೀಡುವುದನ್ನು ನೀವಿಲ್ಲಿ ಕಾಣಬಹುದು.

ಅಮಾನತುಗೊಂಡಿರುವ ಬಿಜೆಪಿ ವಕ್ತಾರೆ ನೂಪುರ್ ಶರ್ಮಾ ಅವರು ಪ್ರವಾದಿಯವರ ಹೇಳಿಕೆಗೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರೀ ವಿರೋಧ ವ್ಯಕ್ತವಾಗುತ್ತಿರುವ ಹಿನ್ನೆಲೆಯಲ್ಲಿ ಈ ವಿಡಿಯೋ ಈಗ ಸಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.






